ಫೋಟೋ ಗ್ಯಾಲರಿ ಆಪರೇಷನ್​ ಸಿಂಧೂರ ಐಪಿಎಲ್​ ಅಕ್ಷಯ ತೃತೀಯ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Vastu Tips: ಮನೆಯಲ್ಲಿ ಸ್ನಾನಗೃಹದ ಬಾಗಿಲು ಯಾವ ದಿಕ್ಕಿನಲ್ಲಿದ್ದರೆ ಒಳ್ಳೆಯದು?

ಮನೆಯ ಪ್ರತಿಯೊಂದು ಕೋಣೆ, ವಸ್ತುಗಳು ಕೂಡ ಮನೆ ಮಂದಿಯ ಮೇಲೆ ಪರಿಣಾಮ ಬೀರುತ್ತದೆ. ಹೀಗಾಗಿ ಪ್ರತಿ ಮನೆಯಲ್ಲೂ ವಾಸ್ತು ನಿಯಮಗಳನ್ನು ಅನುಸರಿಸಬೇಕು ಎನ್ನುತ್ತಾರೆ ವಾಸ್ತು ತಜ್ಞರು. ಅದರಲ್ಲೂ ಮುಖ್ಯವಾಗಿ ಮನೆಯ ಸ್ನಾನ ಗೃಹದ (vastu for bathroom) ಬಗ್ಗೆ ಹಲವಾರು ನಿಯಮಗಳನ್ನು ಹೇಳಲಾಗಿದೆ. ಇದನ್ನು ಪಾಲಿಸುವುದರಿಂದ ಮನೆಯಲ್ಲಿ ಸುಖ ಶಾಂತಿ, ಸಮೃದ್ಧಿ ನೆಲೆಯಾಗಲು ಸಾಧ್ಯವಿದೆ.

ಸ್ನಾನಗೃಹದ ಬಾಗಿಲು ಯಾವ ದಿಕ್ಕಿನಲ್ಲಿರಬೇಕು?

ಆಧುನಿಕ ಮನೆಗಳಲ್ಲಿ ಸಾಮಾನ್ಯವಾಗಿ ಸ್ನಾನ ಗೃಹ (Vastu for bathroom) ಮತ್ತು ಶೌಚಾಲಯ ಎರಡೂ ಮನೆಯ ಒಳಗೆ ಇರುತ್ತದೆ. ಪ್ರತಿ ಬೆಡ್ ರೂಮ್ ಗೆ ಒಂದು ಮತ್ತು ಪ್ರತ್ಯೇಕವಾಗಿ ಒಂದೆರಡು ಸ್ನಾನಗೃಹವನ್ನು (vastu for bathroom door) ಪ್ರತಿ ಮನೆಯು ಹೊಂದಿರುತ್ತದೆ. ಮನೆಯ ಸ್ನಾನಗೃಹವು ಅತೀ ಹೆಚ್ಚು ನಕಾರಾತ್ಮಕ ಶಕ್ತಿಯನ್ನು ಉಂಟು ಮಾಡುವ ಸ್ಥಳವೆಂದು ವಾಸ್ತು ಶಾಸ್ತ್ರದಲ್ಲಿ (Vastu Shastra) ಪರಿಗಣಿಸಲಾಗಿದೆ. ಹೀಗಾಗಿ ಇದು ಮನೆಯ ಸುಖ ಶಾಂತಿ, ಸಮೃದ್ಧಿಯ ಮೇಲೆ ನಕಾರಾತ್ಮಕ ಪರಿಣಾಮ ಉಂಟು ಮಾಡುತ್ತದೆ. ಆದ್ದರಿಂದ ಮನೆಯಲ್ಲಿ ಸ್ನಾನಗೃಹವನ್ನು ನಿರ್ಮಿಸುವಾಗ ಕೆಲವೊಂದು ಅಂಶಗಳನ್ನು ಪರಿಗಣಿಸುವುದು ಬಹಳ ಮುಖ್ಯ ಎನ್ನುತ್ತಾರೆ ವಾಸ್ತು ತಜ್ಞರು.

ಮನೆಯ ಸ್ನಾನಗೃಹ ಅಥವಾ ಶೌಚಾಲಯವು ಗರಿಷ್ಠ ಶಕ್ತಿಯನ್ನು ಹರಡುವ ಸ್ಥಳವಾಗಿದೆ. ಈ ಶಕ್ತಿಯು ಧನಾತ್ಮಕ ಮತ್ತು ಋಣಾತ್ಮಕ ಎರಡೂ ರೂಪಗಳಲ್ಲಿರಬಹುದು. ಆದರೆ ಇದನ್ನು ನಮಗೆ ನೋಡಲು ಸಾಧ್ಯವಿಲ್ಲ. ಹೀಗಾಗಿ ಕೆಲವೊಂದು ನಿಯಮ ಪಾಲನೆಯಿಂದ ಋಣಾತ್ಮಕ ಶಕ್ತಿಯನ್ನು ದೂರ ಮಾಡಿ ಸಕಾರಾತ್ಮಕ ಶಕ್ತಿಯನ್ನು ಉಳಿಸಿಕೊಳ್ಳಬಹುದು. ಅದಕ್ಕಾಗಿಯೇ ಮನೆಯ ಸ್ನಾನಗೃಹ ಮತ್ತು ಶೌಚಾಲಯದಲ್ಲಿ ವಾಸ್ತು ಶಾಸ್ತ್ರ ಪರಿಪಾಲನೆ ಬಹಳ ಮುಖ್ಯವೆಂದು ಪರಿಗಣಿಸಲಾಗಿದೆ.

ಮನೆಯ ಸ್ನಾನಗೃಹ ಅಥವಾ ಶೌಚಾಲಯಕ್ಕೆ ಸಂಬಂಧಿಸಿ ಪಾಲಿಸಬೇಕಾದ ವಾಸ್ತು ಅಂಶದಲ್ಲಿ ಅದರ ಬಾಗಿಲಿನ ಪಾತ್ರ ಬಹಳ ಪ್ರಮುಖವಾಗಿದೆ. ಈ ಕುರಿತು ವಾಸ್ತು ತಜ್ಞರಾದ ರಾಧಾಕಾಂತ್ ವತ್ಸ್ ಹೇಳುವುದು ಹೀಗೆ..

ಮನೆಯ ಸ್ನಾನ ಗೃಹ ಅಥವಾ ಶೌಚಾಲಯದ ಬಾಗಿಲಿನ ದಿಕ್ಕು ಕೂಡ ಸರಿಯಾಗಿರಬೇಕು. ಇಲ್ಲದಿದ್ದರೆ ಮನೆಯಲ್ಲಿ ನಕಾರಾತ್ಮಕತೆಯ ಜೊತೆಗೆ ವಾಸ್ತು ದೋಷಗಳು ಸಹ ಹೆಚ್ಚಾಗುತ್ತವೆ ಎನ್ನುತ್ತಾರೆ ವಾಸ್ತು ತಜ್ಞರಾದ ರಾಧಾಕಾಂತ್ ವತ್ಸ್ .

bathroom1

ಯಾವ ದಿಕ್ಕಿನಲ್ಲಿರಬೇಕು?

ಮನೆಯ ಸ್ನಾನಗೃಹವನ್ನು ಯಾವಾಗಲೂ ಉತ್ತರ ಅಥವಾ ವಾಯುವ್ಯ ದಿಕ್ಕಿನಲ್ಲಿ ನಿರ್ಮಿಸಬೇಕು. ಈ ದಿಕ್ಕಿನಲ್ಲಿ ಸ್ನಾನಗೃಹವನ್ನು ನಿರ್ಮಿಸುವುದರಿಂದ ನಕಾರಾತ್ಮಕ ಶಕ್ತಿಯ ಹರಿವು ಕಡಿಮೆಯಾಗುತ್ತದೆ ಮತ್ತು ಸಕಾರಾತ್ಮಕತೆ ಹೆಚ್ಚಾಗುತ್ತದೆ. ಸ್ನಾನಗೃಹವು ಉತ್ತರ ದಿಕ್ಕಿನಲ್ಲಿದ್ದರೆ ಸ್ನಾನಗೃಹವನ್ನು ಒಳಗಿನಿಂದ ತೆರೆದಾಗ ಮುಂಭಾಗವು ಅಂದರೆ ನಿಮ್ಮ ಮುಖದ ಮುಂಭಾಗವು ಪಶ್ಚಿಮಕ್ಕೆ ಇರುವ ಸ್ಥಳದಲ್ಲಿ ಅದರ ಬಾಗಿಲನ್ನು ನಿರ್ಮಿಸಿ.

ಇದನ್ನೂ ಓದಿ: Vastu Tips: ಚಾವಣಿ ಮೇಲಿನ ನೆಲಕ್ಕೆ ಬಳಸಬಹುದಾದ ಬಣ್ಣ ಯಾವುದು ಗೊತ್ತೇ?

ಅದೇ ಸ್ನಾನಗೃಹವನ್ನು ಎಂದಿಗೂ ದಕ್ಷಿಣ, ನೈಋತ್ಯ ಅಥವಾ ಆಗ್ನೇಯ ದಿಕ್ಕಿನಲ್ಲಿ ನಿರ್ಮಿಸಬಾರದು. ಸ್ನಾನಗೃಹವು ವಾಯುವ್ಯ ದಿಕ್ಕಿನಲ್ಲಿದ್ದರೆ ಮತ್ತು ಸ್ನಾನಗೃಹದ ಬಾಗಿಲು ಒಳಗಿನಿಂದ ತೆರೆದಾಗ ಆಗ್ನೇಯ ದಿಕ್ಕು ಮುಂಭಾಗದಲ್ಲಿದ್ದರೆ ಅದನ್ನು ಶುಭವೆಂದು ಪರಿಗಣಿಸಲಾಗುತ್ತದೆ. ಇದು ಮನೆಯಲ್ಲಿರುವ ಯಾವುದೇ ವಾಸ್ತು ದೋಷಗಳನ್ನು ದೂರ ಮಾಡುತ್ತದೆ.

ಸ್ನಾನಗೃಹದ ಬಾಗಿಲು ಉತ್ತರ ಅಥವಾ ಪೂರ್ವ ದಿಕ್ಕಿನಲ್ಲಿ ತೆರೆದರೆ ಅದು ಮನೆಯ ಮೇಲೆ ಯಾವುದೇ ಕೆಟ್ಟ ಪರಿಣಾಮ ಬೀರುವುದಿಲ್ಲ ಅಥವಾ ಯಾವುದೇ ವಾಸ್ತು ದೋಷವನ್ನು ಉಂಟು ಮಾಡುವುದಿಲ್ಲ. ಹೀಗಾಗಿ ಈ ದಿಕ್ಕು ಸ್ನಾನಗೃಹಕ್ಕೆ ಶುಭವೆಂದು ಪರಿಗಣಿಸಲಾಗಿದೆ. ಗಮನಿಸಬೇಕಾದ ಇನ್ನೊಂದು ಪ್ರಮುಖ ಸಂಗತಿಯೆಂದರೆ ಸ್ನಾನಗೃಹದ ಬಾಗಿಲು ಮುರಿಯಬಾರದು. ಇದನ್ನು ಅಶುಭವೆಂದು ಪರಿಗಣಿಸಲಾಗುತ್ತದೆ. ಹೀಗಾಗಿ ಸ್ನಾನಗೃಹದ ಬಾಗಿಲು ಮುರಿದಿದ್ದರೆ ಕೂಡಲೇ ಅದನ್ನು ದುರಸ್ತಿ ಮಾಡಿಸಿಕೊಳ್ಳಿ. .