ದಿನ ಭವಿಷ್ಯ, ಅಕ್ಟೋಬರ್ 3, 2026: ಇಂದು ವ್ಯವಹಾರಕ್ಕೆ ಸಂಬಂಧಿಸಿದ ನಿರ್ಧಾರ ತೆಗೆದುಕೊಳ್ಳಬೇಡಿ
Horoscope Today October 3rd: ಪರಾಭವ ಸಂವತ್ಸರ, ದಕ್ಷಿಣಾಯಣ, ವರ್ಷ ಋತು, ಭಾದ್ರಪದ ಮಾಸ, ಶುಕ್ಲ ಪಕ್ಷದ, ಸಪ್ತಮಿ ತಿಥಿ, ಆರಿದ್ರಾ ನಕ್ಷತ್ರದ ಅಕ್ಟೋಬರ್ 3ನೇ ತಾರೀಕಿನ ಈ ದಿನದ ಭವಿಷ್ಯದ ಬಗ್ಗೆ ಖ್ಯಾತ ಜ್ಯೋತಿಷಿ ಮಾತಾ ಪ್ರವ್ರಾಜಿತಾ ಜ್ಯೋತಿಷ್ಮತೀ ಅವರು ತಿಳಿಸಿದ್ದಾರೆ.
ಸಾಂದರ್ಭಿಕ ಚಿತ್ರ -
ಬೆಂಗಳೂರು: ಪರಾಭವ ಸಂವತ್ಸರ, ದಕ್ಷಿಣಾಯಣ, ಗ್ರೀಷ್ಮ ಋತು, ಭಾದ್ರಪದ ಮಾಸ, ಶುಕ್ಲ ಪಕ್ಷದ, ಆರಿದ್ರಾ ನಕ್ಷತ್ರದ ಈ ದಿನ ಮೇಷ, ವೃಷಭ, ಮಿಥುನ, ಕರ್ಕ, ಸಿಂಹ, ಕನ್ಯಾ, ತುಲಾ, ವೃಶ್ಚಿಕ, ಧನು, ಮಕರ, ಕುಂಭ ಮತ್ತು ಮೀನ ರಾಶಿಯವರ ಭವಿಷ್ಯ ಹೇಗಿರಲಿದೆ ಎನ್ನುವ ಬಗ್ಗೆ ಮಾಹಿತಿ ಇಲ್ಲಿದೆ.
ಮೇಷ ರಾಶಿ: ಈ ರಾಶಿಯವರಿಗೆ ಇಂದು ಕಷ್ಟದ ದಿನವಾಗಲಿದ್ದು, ಸಂಸಾರದಲ್ಲಿ ತೊಂದರೆ ಎದುರಾಗಬಹುದು. ಅದೇ ರೀತಿ ಸ್ತ್ರೀಯರ ವಿಚಾರದಲ್ಲಿ ಎಚ್ಚರಿಕೆಯಿಂದ ಇರಬೇಕಾಗುತ್ತದೆ.
ವೃಷಭ ರಾಶಿ: ಈ ರಾಶಿಯವರಿಗೆ ಇಂದು ಕಷ್ಟದ ದಿನವಾಗಲಿದೆ. ಸ್ನೇಹಿತರು ಹಾಗೂ ಸ್ತ್ರೀಯರಿಂದ ತೊಂದರೆ ಎದುರಾಗಲಿದೆ. ಹಣಕಾಸಿನ ವಿಚಾರದಲ್ಲೂ ಸಮಸ್ಯೆ ಉಂಟಾಗಬಹುದು.
ಮಿಥುನ ರಾಶಿ: ಇಂದು ಉತ್ತಮ ದಿನವಾಗಲಿದೆ. ಮುಖ್ಯ ನಿರ್ಧಾರವನ್ನು ಕೈಗೊಳ್ಳಬಹುದು. ಕಾರ್ಯಕ್ಷೇತ್ರದಲ್ಲಿ ಜಯ ಸಿಗುತ್ತದೆ. ಹಿಂದಿನ ದಿನದಲ್ಲಿದ್ದ ಕಷ್ಟ ನಿವಾರಣೆಯಾಗುತ್ತದೆ.
ಕಟಕ ರಾಶಿ: ಇಂದು ಉತ್ತಮವಾದ ದಿನವಾಗಲಿದೆ. ಮನಸ್ಸಿಗೆ ಅತೀ ಹೆಚ್ಚಿನ ನೆಮ್ಮದಿ ಪ್ರಾಪ್ತಿಯಾಗುತ್ತದೆ. ಸ್ನೇಹಿತರ ಜತೆ ಹೆಚ್ಚಿನ ಸಮಯ ಕಳೆಯಲಿದ್ದೀರಿ.
ಸಿಂಹ ರಾಶಿ: ಇಂದು ಉತ್ತಮ ದಿನವಾಗಲಿದೆ. ಕಾರ್ಯ ಕ್ಷೇತ್ರದಲ್ಲಿ ಹೆಚ್ಚಿನ ಜವಾಬ್ದಾರಿ ಕೈಗೊಳ್ಳುವ ದಿನವಾಗಲಿದೆ. ಅದೇ ರೀತಿ ಮನೆಯ ಬಗ್ಗೆಯೂ ಹೆಚ್ಚಿನ ಜವಾಬ್ದಾರಿ ತೆಗೆದುಕೊಳ್ಳಬೇಕಾಗುತ್ತದೆ.
ಮನೆಗೆ ಸುಖ, ಸಮೃದ್ಧಿ ತರಲು ಪಾಲಿಸಬೇಕಾದ ಪ್ರಮುಖ ನಿಯಮಗಳು
ಕನ್ಯಾ ರಾಶಿ: ಇಂದು ವೈಯಕ್ತಿಕವಾಗಿ ನಿಮ್ಮ ವಿಚಾರವಾಗಿಯೇ ಹೆಚ್ಚು ಚಿಂತಿತರಾಗುತ್ತೀರಿ. ಕುಟುಂಬದ ಸಮಸ್ಯೆ ಬಗ್ಗೆ ಯೋಚಿಸದೇ ನಿಮ್ಮ ಪಾಡಿಗೆ ಸಮಯ ಕಳೆಯುತ್ತೀರಿ.
ತುಲಾ ರಾಶಿ: ಇಂದು ಕಷ್ಟದ ದಿನವಾಗಲಿದೆ. ಕೆಲಸ ಕಾರ್ಯದಲ್ಲಿ ಅಡಚಣೆ ಉಂಟಾಗಬಹುದು. ಸ್ನೇಹಿತರು ನಿಮ್ಮಿಂದ ದೂರವಾಗುವ ಸಾಧ್ಯತೆ ಇದೆ.
ವೃಶ್ಚಿಕ ರಾಶಿ: ಇಂದು ಉತ್ತಮ ದಿನವಾಗಲಿದೆ. ಸಾಮಾಜಿಕ ಚಟುವಟಿಕೆಯಲ್ಲಿ ಯಶಸ್ಸು ಸಿಗುತ್ತದೆ. ಧನ ಲಾಭದ ಸೂಚನೆ ಇದೆ.
ಧನು ರಾಶಿ: ಇಂದು ಕಷ್ಟದ ದಿನವಾಗಲಿದೆ. ಸ್ನೇಹಿತರ ಜತೆ ಜಗಳ ಉಂಟಾಗಬಹುದು. ವ್ಯವಹಾರದ ಬಗ್ಗೆ ಯಾವುದೇ ನಿರ್ಧಾರ ತೆಗೆದುಕೊಳ್ಳುವುದು ಬೇಡ.
ಮಕರ ರಾಶಿ: ಇಂದು ಉತ್ತಮ ದಿನವಾಗಲಿದೆ. ಕೆಲಸ ಕಾರ್ಯದಲ್ಲಿ ಹೆಚ್ಚಿನ ಯಶಸ್ಸು ಸಿಗಬಹುದು. ಹಿಂದಿನ ಸಮಸ್ಯೆ ನಿವಾರಣೆ ಆಗಬಹುದು.
ಕುಂಭ ರಾಶಿ: ಇಂದು ಉತ್ತಮ ದಿನವಾಗಲಿದೆ. ಸಂಸಾರದಲ್ಲಿ ನೆಮ್ಮದಿ ಹೆಚ್ಚಾಗುತ್ತದೆ. ಖುಷಿಯಾದ ವಾತಾವರಣದಲ್ಲಿ ಇಂದು ಇರುತ್ತೀರಿ.
ಮೀನ ರಾಶಿ: ಇಂದು ಉತ್ತಮ ದಿನವಾಗಲಿದೆ. ಆದರೆ ಹೆಂಗಸರ ಮೂಲದಿಂದ ತೊಂದರೆ ಎದುರಾಗಬಹುದು. ಮಾತನಾಡುವಾಗ ಎಚ್ಚರಿಕೆ ವಹಿಸಬೇಕಾಗುತ್ತದೆ.