Roopa Gururaj Column: ಚಮತ್ಕಾರ ಮತ್ತು ಆಧ್ಯಾತ್ಮಿಕತೆ

ರಾಮಕೃಷ್ಣರು, ದಕ್ಷಿಣೇಶ್ವರದ ಗಂಗಾನದಿಯ ತಟದಲ್ಲಿ ಕುಳಿತು ಸೃಷ್ಟಿಯ ಸೊಬಗನ್ನು ನೋಡಿ ಆನಂದಿಸುತ್ತಿದ್ದರು. ಪರಮಹಂಸರ ಧಾರ್ಮಿಕತೆ, ತನ್ನ ಚಮತ್ಕಾರದ ಮುಂದೆ ಏನೂ ಲೆಕ್ಕಕ್ಕಿಲ್ಲ ವೆಂದು ತಿಳಿದು ನೀರಿನಲ್ಲಿ ನೆಡೆಯುವ ತನ್ನ ಚಮತ್ಕಾರವನ್ನು ಅವರಲ್ಲಿ ಪ್ರದರ್ಶಿಸಬೇಕೆಂಬ ಆಸೆ ಈ ಮನುಷ್ಯನಿಗೆ. ಆತ ಬಲು ಗರ್ವದಿಂದ ಪರಮಹಂಸರನ್ನು ಕೇಳಿ

ramakrishnaParamahamsa
Profile Ashok Nayak January 15, 2025

Source : Vishwavani Daily News Paper

ಒಂದೊಳ್ಳೆ ಮಾತು

ರೂಪಾ ಗುರುರಾಜ್

ಅತ್ಯಂತ ಸರಳ ವ್ಯಕ್ತಿಯಾದ ರಾಮಕೃಷ್ಣ ಪರಮಹಂಸರ ಬಳಿಗೆ, ಒಂದು ಸಲ ಸ್ವಲ್ಪ ಚಮತ್ಕಾರ ಗಳನ್ನೆಲ್ಲ ಬಲ್ಲ ವ್ಯಕ್ತಿಯೊಬ್ಬ ಬಂದ. ಅವನಿಗೆ ಪರಮಹಂಸರ ಎದಿರು ತಾನು ಕಲಿತ ಚಮತ್ಕಾ ರದ ಪ್ರದರ್ಶನ ಮಾಡಿ, ಅವರಿಗಿಂತ ತಾನೇನು ಯಾವುದರಲ್ಲೂ ಕಡಿಮೆ ಇಲ್ಲ ಎಂದು ತೋರಿಸಿ ಕೊಳ್ಳುವ ಆಸೆ.

ರಾಮಕೃಷ್ಣರು, ದಕ್ಷಿಣೇಶ್ವರದ ಗಂಗಾನದಿಯ ತಟದಲ್ಲಿ ಕುಳಿತು ಸೃಷ್ಟಿಯ ಸೊಬಗನ್ನು ನೋಡಿ ಆನಂದಿಸುತ್ತಿದ್ದರು. ಪರಮಹಂಸರ ಧಾರ್ಮಿಕತೆ, ತನ್ನ ಚಮತ್ಕಾರದ ಮುಂದೆ ಏನೂ ಲೆಕ್ಕಕ್ಕಿಲ್ಲ ವೆಂದು ತಿಳಿದು ನೀರಿನಲ್ಲಿ ನೆಡೆಯುವ ತನ್ನ ಚಮತ್ಕಾರವನ್ನು ಅವರಲ್ಲಿ ಪ್ರದರ್ಶಿಸಬೇಕೆಂಬ ಆಸೆ ಈ ಮನುಷ್ಯನಿಗೆ. ಆತ ಬಲು ಗರ್ವದಿಂದ ಪರಮಹಂಸರನ್ನು ಕೇಳಿದ.

‘ಆಗಿನಿಂದ ಈ ಮರದ ಕೆಳಗೆ ಕುಳಿತು ನೀವೇನು ಮಾಡುತ್ತಿರುವಿರಿ? ಗಂಗಾ ನದಿಯ ನೀರಿನಲ್ಲಿ ಇಬ್ಬರೂ ನಡೆದಾಡುತ್ತಾ ಆಚೆ ದಡಕ್ಕೆ ಹೋಗೋಣ ಬನ್ನಿ’ ಎಂದು ಕರೆದ. ‘ಆಗ ಪರಮಹಂಸರು ನೀವು ಬಹಳ ದೂರದಿಂದ ಬಂದಿರುವಿರಿ ಸ್ವಲ್ಪ ಸಮಯ ಸುಧಾರಿಸಿಕೊಳ್ಳಿ ನಂತರ ಗಂಗಾ ನದಿಯ ಮೇಲೆ ಓಡಾಡುವುದು ಇದ್ದೇ ಇದೆ’ ಎಂದು ಹೇಳಿದರು.

ಆಗ ಆ ವ್ಯಕ್ತಿ ವಿಧಿ ಇಲ್ಲದೆ ಅ ಕುಳಿತ. ಸ್ವಲ್ಪ ಸಮಯದ ನಂತರ ಪರಮಹಂಸರು ‘ನಿಮಗೆ ಈ ನೀರಿನ ಮೇಲೆ ನಡೆದಾಡುವ ಚಮತ್ಕಾರದ ಕಲೆಯನ್ನು ಕಲಿಯಲು ಸುಮಾರು ಎಷ್ಟು ಸಮಯ ಹಿಡಿಯಿತು?’ ಎಂದು ಕೇಳಿದರು. ‘ಗುರುಗಳೇ, ಸುಮಾರು ಮೂವತ್ತಾರು ವರ್ಷ ಕಷ್ಟಪಟ್ಟಿದ್ದೇನೆ!’ ಎಂದು ಗರ್ವದಿಂದ ಹೇಳಿದ ಆ ವ್ಯಕ್ತಿ.

ಆಗ ಪರಮಹಂಸರು ನಗುತ್ತಾ ‘ಈ ಗಂಗಾ ನದಿಯ ಆಚೆಯ ದಡಕ್ಕೆ ಹೋಗಲು ಎರಡು ಪೈಸೆ

ಇದ್ದರಾಯಿತು ಆರಾಮವಾಗಿ ಹೋಗಿಬಿಡಬಹುದು. ಆದರೆ ಆ ಎರಡು ಪೈಸೆಯನ್ನು ಕೂಡಾ ಈ ದೋಣಿ ಹಾಯಿಸುವವ ನನ್ನಿಂದ ಕೇಳುವುದಿಲ್ಲ. ನಾನೊಬ್ಬ ಬಡವನೆಂದು ಅವನಿಗೆ ಗೊತ್ತಿದೆ. ನೀವು ಮೂವತ್ತಾರು ವರ್ಷ ಕಷ್ಟಪಟ್ಟು ಕಲಿತ ಈ ನದಿ ದಾಟುವ ಚಮತ್ಕಾರದ ವಿದ್ಯೆಗೆ ಇಲ್ಲಿ ಎರಡು ಪೈಸೆಯ ಬೆಲೆಯೂ ಇಲ್ಲವಲ್ಲ’ ಎಂದು ಹೇಳಿದರು.

ನಿಮಗೆ ಕೇವಲ ನದಿಯ ನೀರಿನ ಮೇಲೆ ನಡೆದಾಡುವ ಚಮತ್ಕಾರದ ಕಲೆ ಗೊತ್ತಿದೆ ಎಂದ ಮಾತ್ರಕ್ಕೆ ಒಬ್ಬ ಮಹಾ ಅಧ್ಯಾತ್ಮಿಕ ವ್ಯಕ್ತಿ ಎಂದೇನೂ ಭಾವಿಸಬೇಡಿ. ನಿಮ್ಮ ಚಮತ್ಕಾರದ ಕಲೆಯಲ್ಲಿ ದಿವ್ಯತೆ ಯ ಹೊಳಪಾಗಲಿ ಧಾರ್ಮಿಕತೆಯ ಇಣುಕು ನೋಟವಾಗಲಿ ಇರುವುದಿಲ್ಲ. ಈ ನಿಮ್ಮ ಚಮತ್ಕಾರ ದ ಕಲೆ ನಿಮ್ಮ ಅಹಂಕಾರಕ್ಕೆ ಇನ್ನಷ್ಟು ಪುಷ್ಟಿಯನ್ನು ಕೊಡುಬಹುದಷ್ಟೇ. ಅದರಿಂದ ಬೇರೆ ಯಾವ ಉಪಯೋಗವೋ ಇಲ್ಲ. ಬೇರೆ ಯಾರೂ ಮಾಡದಿರುವ ಚಮತ್ಕಾರವನ್ನು ನೀವು ಮಾಡುತ್ತಿರುವಿರಿ ಎಂಬ ಗರ್ವ ನಿಮ್ಮ ಮನದಲ್ಲಿ ನೆಲೆಯೂರಿ ಬಿಟ್ಟಿದೆ.

ಪರಮಾತ್ಮನ ಬಳಿಗೆ ಸಾಗುವ ವಿಷಯವಂತೂ ಇನ್ನು ನಿಮಗೆ ಬಲು ದೂರದ ಮಾತಾಯಿತು ಎಂದರು. ತಾನು ಮಹಾ ಚಮತ್ಕಾರಿ ವಿದ್ಯೆಯನ್ನು ಕಲಿತ ಮನುಷ್ಯನೆಂದು ಅಹಂಕಾರ ಪಡುತ್ತಿದ್ದ ಆ ವ್ಯಕ್ತಿಗೆ, ಪರಮಹಂಸರ ಮಾತಿನಿಂದ ಅಹಂಕಾರಕ್ಕೆ ಪೆಟ್ಟು ಬಿದ್ದು ತಲೆತಗ್ಗಿಸುವಂತಾಯಿತು.

ನಿಜವಾದ ಆಧ್ಯಾತ್ಮಿಕ ಗುರುಗಳ್ಯಾರೂ, ಚಮತ್ಕಾರ ಮಾಡಿ ತಮ್ಮ ಶಕ್ತಿ ಪ್ರದರ್ಶನ ಮಾಡಲು ಹೋಗುವುದಿಲ್ಲ. ಹಾಗೇನಾದರೂ ಅವರಿಗೆ ಚಮತ್ಕಾರ ಗೊತ್ತಿದ್ದರೂ ಅವರು ಅದನ್ನು ಎಲ್ಲರೆ ದುರು ರುಜುವಾತು ಪಡಿಸಲು ಹೋಗುವುದಿಲ್ಲ. ಇಂಥ ಸೂಕ್ಷ್ಮ ವಿಷಯಗಳನ್ನ ತಿಳಿದು ಕೊಂಡಾಗ ನಾವು ನಮ್ಮ ಆಧ್ಯಾತ್ಮ ಗುರುಗಳನ್ನ ಆರಿಸುವುದರಲ್ಲಿ ಹೆಚ್ಚು ಎಚ್ಚರವಹಿಸುತ್ತೇವೆ. ಯಾವುದೇ ಗುರುಗಳು ಜೀವನದಲ್ಲಿ ನಮಗೆ ಭಗವಂತನನ್ನು ತಲುಪಲು ಅವನ ಕೃಪೆಯನ್ನು ಪಡೆಯಲು ಸರಿಯಾದ ಮಾರ್ಗವನ್ನು ಸೂಚಿಸುತ್ತಾರೆ.

ಸುಖ ಶಾಂತಿ, ನೆಮ್ಮದಿ ಸಂತೃಪ್ತಿಯಿಂದ ಬದುಕುವ ದಾರಿಯನ್ನು ಆಧ್ಯಾತ್ಮದಡೆಗೆ ನಮಗೆ ಸಿಗಬಹು ದಾದ ದಾರಿಯನ್ನು ತೋರಿಸಿ ನಮ್ಮನ್ನು ಆ ದಿಕ್ಕಿನಲ್ಲಿ ನಡೆಯಲು ಪ್ರೇರೇಪಿಸುತ್ತಾರೆ. ವಿಶೇಷವಾಗಿ ಭಾರತದಲ್ಲಿ ಆಧ್ಯಾತ್ಮದ ಗುರುಗಳು ಎಂದು ಜನರನ್ನು ಮರಳು ಮಾಡುವ ಮಂದಿಯೇ ಹೆಚ್ಚಿರು ವಾಗ, ಇಂತಹ ಗುರುಗಳನ್ನ ಆರಿಸುವಾಗ ಎಚ್ಚರವಿರಲಿ.

Three labourers brutally assaulted by brick kiln owner
1:53 PM January 20, 2025

Assault case: ಮೂವರು ಕಾರ್ಮಿಕರ ಮೇಲೆ ಇಟ್ಟಿಗೆ ಭಟ್ಟಿ ಮಾಲೀಕ ಮಾರಣಾಂತಿಕ ಹಲ್ಲೆ; ಕೆಲಸಕ್ಕೆ ಬರುವುದು ವಿಳಂಬವಾಗಿದ್ದಕ್ಕೆ ರಾಕ್ಷಸಿ ಕೃತ್ಯ!

Saif Ali Khan, Ibrahim
2:50 PM January 16, 2025

Saif Ali Khan: 1,200 ಕೋಟಿ ರೂ. ಆಸ್ತಿಗಳ ಒಡೆಯ ಸೈಫ್‌ ಆಲಿ ಖಾನ್‌ನನ್ನು‌ ಆಟೋದಲ್ಲಿ ಆಸ್ಪತ್ರೆಗೆ ಕರೆದೊಯ್ದ ಪುತ್ರ ಇಬ್ರಾಹಿಂ; ಕಾರಣವೇನು?

Student dies 1
8:51 PM January 18, 2025

Heart Attack: ಕಾಲೇಜು ಮುಗಿಸಿ ಹೋಗುವಾಗ ಹೃದಯಾಘಾತವಾಗಿ ವಿದ್ಯಾರ್ಥಿನಿ ಸಾವು

robbery case shooting
1:49 PM January 16, 2025

Murder Case: ಸೆಕ್ಯೂರಿಟಿ ಸಿಬ್ಬಂದಿಯ ಗುಂಡಿಕ್ಕಿ ಹತ್ಯೆ ಮಾಡಿ 93 ಲಕ್ಷ ರೂ. ದರೋಡೆ

BBK 11 Mid week Elimination (1)
9:12 PM January 15, 2025

BBK 11: ಇಂದೇ ನಡೆಯಲಿದೆ ಮಿಡ್ ವೀಕ್ ಎಲಿಮಿನೇಷನ್: ಔಟ್ ಆದ ಸ್ಪರ್ಧಿ ಇವರೇ ನೋಡಿ

Saif ali Khan (1)
9:38 AM January 18, 2025

Saif Ali Khan: ರಕ್ತಸಿಕ್ತವಾದ ಬಟ್ಟೆ, ಸಂಪೂರ್ಣ ಅಸ್ವಸ್ಥರಾಗಿದ್ದ ಸೈಫ್‌! ಆ ರಾತ್ರಿ ನಡೆದಿದ್ದಾದರೂ ಏನು? ಆಟೋ ಡ್ರೈವರ್‌ ಹೇಳಿದ್ದೇನು?

Naga Sadhus
11:15 PM January 18, 2025

Maha Kumbh Mela: ಕುಂಭಮೇಳದ ವೇಳೆ ನಾಗ ಸಾಧುಗಳು ಬರುವುದೆಲ್ಲಿಂದ? ಬಳಿಕ ಅಪ್ರತ್ಯಕ್ಷರಾಗುವುದೇಕೆ? ಅವರ ನಿಗೂಢ ಪ್ರಪಂಚ ಹೇಗಿದೆ? ಇಲ್ಲಿದೆ ಸಮಗ್ರ ವಿವರ

Chaithra Kundapura remuneration (1)
7:13 AM January 16, 2025

BBK 11: ಬಿಗ್ ಬಾಸ್​ನಿಂದ ಹೊರಬಂದ ಚೈತ್ರಾ ಕುಂದಾಪುರಗೆ ಸಿಕ್ಕ ಹಣ ಎಷ್ಟು ಗೊತ್ತೇ?

Honnamaradi jatre
5:53 PM January 15, 2025

Honnamaradi Jatre: ವೈಭವದಿಂದ ನಡೆದ ಹೊನ್ನಮರಡಿ ಜಾತ್ರೆ; ಶ್ರೀ ರಂಗನಾಥಸ್ವಾಮಿ ದರ್ಶನ ಪಡೆದ ಸಾವಿರಾರು ಭಕ್ತರು

Eshwara Khandre
6:54 PM January 16, 2025

Bidar ATM Robbery: ಬೀದರ್ ಎಟಿಎಂ ದರೋಡೆ ಪ್ರಕರಣ; ದುಷ್ಕರ್ಮಿಗಳ ವಿರುದ್ಧ ಕಠಿಣ ಕ್ರಮಕ್ಕೆ ಸಚಿವ ಖಂಡ್ರೆ ಸೂಚನೆ