ವಕ್ಫ್​ ತಿದ್ದುಪಡಿ ಮಸೂದೆ ಐಪಿಎಲ್​ ಸುನಿತಾ ವಿಲಿಯಮ್ಸ್​ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Vishwavani Editorial: ಬಾಂಗ್ಲಾ ವರ್ತನೆ ಆಘಾತಕಾರಿ

ಮೊಹಮದ್ ಯೂನುಸ್ ನೇತೃತ್ವದಲ್ಲಿ ರಚನೆಯಾದ ಮಧ್ಯಂತರ ಸರ್ಕಾರ ಭಾರತದ ಜೊತೆಗೆ ಸೌಹಾರ್ದತೆಗಿಂತಲೂ ಸಂಘರ್ಷಕ್ಕೆ ಹೆಚ್ಚು ಒತ್ತು ನೀಡಿದೆ. ಇದೀಗ ಚೀನಾದ ನೆಲದಲ್ಲಿ ನಿಂತು ಯೂನುಸ್ ಭಾರತದ ಈಶಾನ್ಯ ರಾಜ್ಯಗಳ ಬಗ್ಗೆ ಮಾತನಾಡಿರುವುದು ಚೀನಾ, ಬಾಂಗ್ಲಾದೇಶ ಮತ್ತು ಪಾಕಿಸ್ತಾನ ಸೇರಿ ಮೂರು ದುಷ್ಟಕೂಟಗಳು ಭಾರತದ ವಿರುದ್ಧ ಸಂಚು ರೂಪಿಸುತ್ತಿವೆಯೇ ಎಂಬ ಅನುಮಾನಗಳಿಗೆ ಕಾರಣವಾಗಿದೆ.

ಬಾಂಗ್ಲಾ ವರ್ತನೆ ಆಘಾತಕಾರಿ

ಮೊಹಮದ್ ಯೂನುಸ್

Profile Ashok Nayak Apr 10, 2025 4:57 AM

ಬಾಂಗ್ಲಾದೇಶದಲ್ಲಿ ಶೇಕ್ ಹಸೀನಾ ಅವರ ಸರಕಾರ ಪತನವಾದ ಬಳಿಕ, ಮೊಹಮದ್ ಯೂನುಸ್ ನೇತೃತ್ವದಲ್ಲಿ ರಚನೆಯಾದ ಮಧ್ಯಂತರ ಸರ್ಕಾರ ಭಾರತದ ಜೊತೆಗೆ ಸೌಹಾರ್ದತೆಗಿಂತಲೂ ಸಂಘರ್ಷಕ್ಕೆ ಹೆಚ್ಚು ಒತ್ತು ನೀಡಿದೆ. ಇದೀಗ ಚೀನಾದ ನೆಲದಲ್ಲಿ ನಿಂತು ಯೂನುಸ್ ಭಾರತದ ಈಶಾನ್ಯ ರಾಜ್ಯಗಳ ಬಗ್ಗೆ ಮಾತನಾಡಿರುವುದು ಚೀನಾ, ಬಾಂಗ್ಲಾದೇಶ ಮತ್ತು ಪಾಕಿಸ್ತಾನ ಸೇರಿ ಮೂರು ದುಷ್ಟಕೂಟಗಳು ಭಾರತದ ವಿರುದ್ಧ ಸಂಚು ರೂಪಿಸುತ್ತಿವೆಯೇ ಎಂಬ ಅನುಮಾನಗಳಿಗೆ ಕಾರಣವಾಗಿದೆ.

ಬಾಂಗ್ಲಾದೇಶದ ‘ಚಿಕನ್ ನೆಕ್’ ಪ್ರದೇಶದಲ್ಲಿ ಚೀನಾ ವಾಯುನೆಲೆ ನಿರ್ಮಾಣಕ್ಕೆ ಮುಂದಾಗಿರು ವುದು ಮತ್ತು ಪಾಕ್ ತಜ್ಞರ ಹೇಳಿಕೆಗಳು ಈ ಅನುಮಾನಕ್ಕೆ ಪುಷ್ಟಿ ನೀಡುತ್ತಿವೆ. ಮೊಹಮ್ಮದ್ ಯೂನಸ್ ಚೀನಾಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ, ಚಿಕನ್ ನೆಕ್ ಪ್ರದೇಶ ಎಂದು ಕರೆಸಿಕೊಳ್ಳುವ ಪಶ್ಚಿಮಬಂಗಾಳದ ಸಿಲಿಗುರಿ ಪ್ರದೇಶಕ್ಕೆ ಸಮೀಪ ಚೀನಾ ಒಂದು ವಾಯುನೆಲೆಯನ್ನು ನಿರ್ಮಿಸುವ ವಿಷಯದ ಬಗ್ಗೆ ಚರ್ಚೆ ನಡೆದಿತ್ತು ಹೇಳಲಾಗಿದೆ.

ಈ ಚಟುವಟಿಕೆಗಳ ಬೆನ್ನಿಗೇ ಭಾರತ ತನ್ನ ಪ್ರದೇಶದ ಮೂಲಕ ಬಾಂಗ್ಲಾದೇಶದ ರಫ್ತಿಗೆ ಪ್ರಮುಖ ಸಾರಿಗೆ ಸೌಲಭ್ಯವನ್ನು ರದ್ದುಗೊಳಿಸಿದೆ. 2020ರಲ್ಲಿ ಭಾರತ ಬಾಂಗ್ಲಾದೇಶದ ರಫ್ತು ಸರಕುಗಳನ್ನು ಭಾರತೀಯ ಭೂ ಕಸ್ಟಮ್ಸ ಸ್ಟೇಷನ್‌ಗಳು, ಬಂದರು ಮತ್ತು ವಿಮಾನ ನಿಲ್ದಾಣಗಳ ಮೂಲಕ ಮೂರನೇ ದೇಶಗಳಿಗೆ ಸಾಗಿಸಲು ಅವಕಾಶ ಮಾಡಿಕೊಟ್ಟಿತ್ತು.

ಇದನ್ನೂ ಓದಿ: Vishwavani Editorial: ಇದು ದುರ್ಭರ, ದುಬಾರಿ ದುನಿಯಾ

ಇದು ಬಾಂಗ್ಲಾದೇಶದ ಸರಕುಗಳ ರಫ್ತಿಗೆ ಸುಗಮ ಮಾರ್ಗವನ್ನು ಒದಗಿಸಿತ್ತು. ಈ ಪ್ರದೇಶದಲ್ಲಿ ಭಾರತವು ದೊಡ್ಡ ಸಂಖ್ಯೆಯಲ್ಲಿ ಸೈನಿಕರನ್ನು ನಿಯೋಜಿಸಿದೆ ಮತ್ತು ಚೀನಾದ ಸಂಭಾವ್ಯ ಬೆದರಿಕೆ ಯನ್ನು ಎದುರಿಸಲು ರಹಸ್ಯ ಜಲಾಂತರ್ಗಾಮಿ ನೌಕೆಗಳನ್ನು ತಯಾರಿಸುವ ಕಾರ್ಯದಲ್ಲಿದೆ ಎಂದು ಹೇಳಲಾಗಿದೆ.

ಭಾರತದ ಈ ಪ್ರತಿಕ್ರಿಯೆಯನ್ನು ನೋಡಿದರೆ ಎರಡೂ ದೇಶಗಳ ನಡುವಿನ ಸಂಬಂಧ ಹಿಂದೆಂದಿ ಗಿಂತಲೂ ಹಳಸಿದೆ. ಪಾಕಿಸ್ತಾನದ ದೌರ್ಜನ್ಯದಿಂದ ಬಾಂಗ್ಲಾದೇಶವನ್ನು ಪಾರು ಮಾಡಿದ ಎಳ್ಳಷ್ಟೂ ಕೃತಜ್ಞತೆಯನ್ನು ಆ ರಾಷ್ಟ್ರ ಹೊಂದಿಲ್ಲ. ಇದು ಹಲವು ಬಾರಿ ಸಾಬೀತಾಗಿದೆ. ಈಗ ಚೀನಾದ ಕಡೆ ವಾಲುತ್ತಿರುವ ನೆರೆ ರಾಷ್ಟ್ರಗಳನ್ನು ಸಂಭಾಳಿಸುವುದು ಭಾರತದ ಮುಂದಿರುವ ದೊಡ್ಡ ಸವಾಲಾ ಗಲಿದೆ.