ವಕ್ಫ್​ ತಿದ್ದುಪಡಿ ಮಸೂದೆ ಐಪಿಎಲ್​ ಸುನಿತಾ ವಿಲಿಯಮ್ಸ್​ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Vishwavani Editorial: ಇದು ದುರ್ಭರ, ದುಬಾರಿ ದುನಿಯಾ

ಜನರು ಪ್ರಸ್ತುತ ಇಂಥದೇ ಪರಿಸ್ಥಿತಿಯ ಲಾನುಭವಿಗಳಾಗಿದ್ದಾರೆ. ನಿರುದ್ಯೋಗ ಸಮಸ್ಯೆಗೆ ಮದ್ದು ಅರೆಯುವಂಥ ಉಪಕ್ರಮಗಳು ಹೇಳಿಕೊಳ್ಳುವಷ್ಟು ಜಾರಿಗೆ ಬರದ ಕಾರಣ, ‘ದುಡಿಯುವ ಕೈ ಒಂದು, ಆದರೆ ತಿನ್ನುವ ಬಾಯಿ ಹನ್ನೊಂದು’ ಎನ್ನುವಂಥ ಪರಿಸ್ಥಿತಿ ಇನ್ನೂ ಅನೇಕ ಕುಟುಂಬಗಳಲ್ಲಿದೆ.

ಇದು ದುರ್ಭರ, ದುಬಾರಿ ದುನಿಯಾ

Profile Ashok Nayak Apr 9, 2025 5:51 AM

ಬಸ್ ಪ್ರಯಾಣ ದರ, ಹಾಲಿನ ದರ, ವಿದ್ಯುತ್ ದರ ಸೇರಿದಂತೆ ಹಲವು ಬಾಬತ್ತುಗಳಲ್ಲಿ ಶ್ರೀಸಾಮಾ ನ್ಯರು ಬರೆ ಹಾಕಿಸಿಕೊಂಡಿದ್ದು ಆಯಿತು. ಇಷ್ಟು ಸಾಲದೆಂಬಂತೆ, ಕೇಂದ್ರ ಸರಕಾರವು 14.2 ಕೆ.ಜಿ. ಅಡುಗೆ ಅನಿಲದ ಸಿಲಿಂಡರ್ ಬೆಲೆಯನ್ನು ಒಮ್ಮೆಲೇ 50 ರುಪಾಯಿಯಷ್ಟು ಹಾಗೂ ಪೆಟ್ರೋಲ್-ಡೀಸೆಲ್ ಮೇಲಿನ ಅಬಕಾರಿ ಸುಂಕವನ್ನು 2 ರುಪಾಯಿಯಷ್ಟು ಹೆಚ್ಚಿಸಿದೆ. ಒಟ್ಟಿನಲ್ಲಿ, ನಮ್ಮ ಜನರು ಏಕಕಾಲಕ್ಕೆ ಬಿರುಬೇಸಗೆಯ ಧಗೆಯನ್ನೂ, ಬೆಲೆಯೇರಿಕೆಯ ಆಘಾತವನ್ನೂ ಅನುಭವಿಸ ಬೇಕು, ಹಲ್ಲು ಕಚ್ಚಿಕೊಂಡು ಬದುಕು ಸಾಗಿಸಬೇಕು. ಯಾವುದೇ ಆರ್ಥಿಕತೆಯಲ್ಲಿ ಬೆಲೆ ಏರಿಕೆ ಎಂಬುದು ಒಂದು ಅನಿವಾರ್ಯ ಪ್ರಕ್ರಿಯೆ ಎಂಬುದನ್ನು ಒಪ್ಪಿಕೊಳ್ಳೋಣ. ನಿರ್ದಿಷ್ಟ ಸರಕು ಅಥವಾ ಸೇವೆಗಳ ಬೇಡಿಕೆ ಮತ್ತು ಪೂರೈಕೆಗಳ ನಡುವಿನ ಅಂತರ ಹೆಚ್ಚಾದಾಗ ಅವುಗಳ ಬೆಲೆ ಯಲ್ಲೂ ಹೆಚ್ಚಳವಾಗುವುದು ಮಾರುಕಟ್ಟೆಯಲ್ಲಿ ಕಾಣಬರುವ ಸಹಜ ಬೆಳವಣಿಗೆ.

ಇದನ್ನೂ ಓದಿ: Vishwavani Editorial: ಜಾರಿಯಾಗದ ಆಶಯ ಲೊಳಲೊಟೆ !

ಆದರೆ ಇಂಥ ಯಾವುದೇ ಹೆಚ್ಚಳದ ನೇಪಥ್ಯದಲ್ಲೂ ಒಂದು ‘ತರ್ಕ’ವಿದ್ದರೆ ಅಥವಾ ಅದಕ್ಕೆ ಪೂರಕವಾಗಿ ತಮ್ಮ ಆದಾಯದಲ್ಲೂ ಹೆಚ್ಚಳವಾದರೆ ಜನರು ಹೆಚ್ಚೇನೂ ಆಕ್ಷೇಪಿಸಲು ಹೋಗುವು ದಿಲ್ಲ. ಆದರೆ, ವೆಚ್ಚಗಳು ಮಾತ್ರ ಹೆಚ್ಚುತ್ತಲೇ ಹೋಗಿ, ಆದಾಯದಲ್ಲಿ ಕುಸಿತವಾಗುತ್ತಾ ಹೋದರೆ ಅಥವಾ ಆದಾಯ ಗಳಿಕೆಯ ಅವಕಾಶಗಳಿಗೇ ಸಂಚಕಾರ ಒದಗತೊಡಗಿದರೆ, ಅದು ಭವಿಷ್ಯದಲ್ಲಿ ರೂಪುಗೊಳ್ಳಬಹುದಾದ ಆತಂಕದ ಪರಿಸ್ಥಿತಿಗೆ ಮುನ್ನುಡಿಯಾಗುತ್ತದೆ.

ಜನರು ಪ್ರಸ್ತುತ ಇಂಥದೇ ಪರಿಸ್ಥಿತಿಯ ಲಾನುಭವಿಗಳಾಗಿದ್ದಾರೆ. ನಿರುದ್ಯೋಗ ಸಮಸ್ಯೆಗೆ ಮದ್ದು ಅರೆಯುವಂಥ ಉಪಕ್ರಮಗಳು ಹೇಳಿಕೊಳ್ಳುವಷ್ಟು ಜಾರಿಗೆ ಬರದ ಕಾರಣ, ‘ದುಡಿಯುವ ಕೈ ಒಂದು, ಆದರೆ ತಿನ್ನುವ ಬಾಯಿ ಹನ್ನೊಂದು’ ಎನ್ನುವಂಥ ಪರಿಸ್ಥಿತಿ ಇನ್ನೂ ಅನೇಕ ಕುಟುಂಬಗ ಳಲ್ಲಿದೆ.

ಇಂಥ ದುರ್ಭರ ಪರಿಸ್ಥಿತಿಯಲ್ಲಿ ಜನರು ಅದಿನ್ನಾವ ರೀತಿಯಲ್ಲಿ ಜೀವನ ಸಾಗಿಸಿಯಾರು? ಎಂಬುದು ಉತ್ತರವೇ ದೊರಕದ ಪ್ರಶ್ನೆಯಾಗುತ್ತದೆ. ಹೀಗಾಗಿ, ಸುಮಾರು 3-4 ದಶಕಗಳ ಹಿಂದೆ, ಸೌಲಭ್ಯಗಳು ಅಷ್ಟಾಗಿ ಇರದ ಕಾಲದಲ್ಲೂ ಜನರ ಮುಖದಲ್ಲಿ ಕಾಣುತ್ತಿದ್ದ ‘ಸಂತೃಪ್ತ ಭಾವ’ಕ್ಕೆ ಈಗ ಸಂಚಕಾರ ಒದಗಿದೆ. ಇದಕ್ಕೆ ಕೊನೆಯೇ ಇಲ್ಲವೇ?