ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

Vishwavani Editorial: ಡಿಕೆಶಿ ಮುಂದಿವೆ ಸವಾಲುಗಳು

ಸಾಫ್ಟ್ ಹಿಂದುತ್ವದ ಬೆನ್ನೇರಿರುವ ಡಿಕೆಶಿ ಅವರಿಗೆ ಅಹಿಂದ ಮತಗಳನ್ನು ಉಳಿಸಿಕೊಳ್ಳುವ ಸವಾಲು ಇದೆ. ರಾಜ್ಯ ರಾಜಕಾರಣದಲ್ಲೇ ಸಕ್ರಿಯವಾಗಿ ಇರುತ್ತೇನೆ ಎಂದು ಸಾರಿರುವ ಸಿದ್ದರಾಮಯ್ಯ ಅವರ ಬೆಂಬಲವನ್ನೂ ಇದಕ್ಕಾಗಿ ಸಕ್ರಿಯವಾಗಿ ಬಳಸಿಕೊಳ್ಳಬೇಕಿದೆ. ಬೆಂಗಳೂರಿನ ಅಭಿವೃದ್ಧಿಗಾಗಿ ನಾನಾ ಯೋಜನೆಗಳು ಸಿಎಂ ತಲೆಯಲ್ಲಿವೆ.

Vishwavani Editorial: ಡಿಕೆಶಿ ಮುಂದಿವೆ ಸವಾಲುಗಳು

-

Profile
Ashok Nayak Jun 4, 2026 10:40 AM

ರಾಜ್ಯದ ೨೫ನೇ ಮುಖ್ಯಮಂತ್ರಿಯಾಗಿ ಕಾಂಗ್ರೆಸ್‌ನ ಕಟ್ಟಾಳು ಡಿ.ಕೆ.ಶಿವಕುಮಾರ್ ಪ್ರಮಾಣ ವಚನ ಸ್ವೀಕರಿಸಿದ್ದಾರೆ. ಅವರೊಂದಿಗೆ ಪರಮೇಶ್ವರ್ ಅವರು ಉಪ ಮುಖ್ಯಮಂತ್ರಿಯಾಗಿ, 13 ಶಾಸಕರು ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದ್ದಾರೆ. ಖಾತೆ ಹಂಚಿಕೆ ಬಾಕಿ ಇದೆ. ಆಡಳಿತದಲ್ಲಿ ನಿಕಟಪೂರ್ವ ಸಿಎಂ ಸಿದ್ದರಾಮಯ್ಯ ಅವರ ಮೇಲ್ಪಂಕ್ತಿಯನ್ನು ಮುಂದುವರಿಸುವ ಹೊಣೆ ಡಿಕೆಶಿ ಅವರ ಮೇಲಿದೆ.

ಡಿಕೆಶಿ ಅವರು ಅನನುಭವಿಯಲ್ಲ. ಮಂತ್ರಿಯಾಗಿ, ಡಿಸಿಎಂ ಆಗಿ ಸಾಕಷ್ಟು ಅನುಭವ ಗಳಿಸಿಕೊಂಡಿ ದ್ದಾರೆ. ಸಂಕಷ್ಟದ ಸ್ಥಿತಿಯಲ್ಲಿ ಪಕ್ಷವನ್ನು ಮುನ್ನಡೆಸಿದ, ಟ್ರಬಲ್ ಶೂಟರ್ ಆದ ಅನುಭವವೂ ಬೆನ್ನಿಗಿದೆ. ಆದರೆ ಸವಾಲುಗಳೂ ಸಾಕಷ್ಟಿವೆ. ಮೊದಲಾಗಿ, ಹೆಚ್ಚಿನವರು ಹಿರಿಯ ಅನುಭವಿ ಶಾಸಕರೇ ಆಗಿದ್ದು, ಸಂಪುಟದ ಆಕಾಂಕ್ಷಿಗಳು ಸಾಕಷ್ಟಿದ್ದಾರೆ.

ಇದನ್ನೂ ಓದಿ:DK Shivakumar CM Oath Ceremony: ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸುವ ಮುನ್ನ ತಾಯಿ ಆಶೀರ್ವಾದ ಪಡೆದ ಡಿ.ಕೆ. ಶಿವಕುಮಾರ್‌

ಜಾತಿ- ಧರ್ಮ- ಲಿಂಗ ಪ್ರಾತಿನಿಧ್ಯವನ್ನು ಗಮನಿಸಬೇಕಿದೆ. ಸಿದ್ದರಾಮಯ್ಯ ಬಣವನ್ನೂ ಸಮಾ ಧಾನಿಸಬೇಕಿದೆ. ಸರಕಾರದ ಐದು ಗ್ಯಾರಂಟಿ ಯೋಜನೆಗಳಾದ ಗೃಹಲಕ್ಷ್ಮಿ, ಶಕ್ತಿ, ಅನ್ನ ಭಾಗ್ಯ, ಯುವ ನಿಧಿ, ಗೃಹ ಜ್ಯೋತಿ ಯೋಜನೆಗಳು ಪ್ರತಿ ವರ್ಷ 51,000 ಕೋಟಿ ರೂ.ಗಳಷ್ಟನ್ನು ಬಳಸಿ ಕೊಳ್ಳುತ್ತಿವೆ.

ಇವುಗಳನ್ನು ನಿಲ್ಲಿಸದೆ, ಹೊಸ ಕಾರ್ಯಕ್ರಮಗಳಿಗೂ ಹಣಕಾಸು ಹೊಂಚಿಕೊಳ್ಳಬೇಕಿದೆ. ರಾಜ್ಯದ ಖಜಾ ನೆಯ ಮೇಲಿರುವ ಸಾಲದ ಹೊರೆ ಮಿತಿ ಮೀರದಂತೆ ನೋಡಿಕೊಳ್ಳಬೇಕು. ಮೇಕೆದಾಟು ಯೋಜನೆಯನ್ನು ಜಾರಿತೆ ತರುವ ಶಪಥ ಮಾಡಿದ್ದ ಡಿಕೆ, ಅದಕ್ಕಾಗಿ ಪಾದಯಾತ್ರೆಯನ್ನೂ ಹಮ್ಮಿಕೊಂಡಿದ್ದರು. ಈಗ ತಮಿಳುನಾಡಿನ ವಿರೋಧವಿದ್ದರೆ ಅದನ್ನೂ ಎದುರಿಸಿ ಯೋಜನೆ ಯನ್ನು ಕಾರ್ಯರೂಪಕ್ಕೆ ತರುವ ಸವಾಲು ಇದೆ.

ಕಾವೇರಿ ನೀರು ಹಂಚಿಕೆಯ ವಿಚಾರದಲ್ಲಿ ತಮಿಳುನಾಡಿನ ಮನವೊಲಿಸುವ ಕಷ್ಟ ಇದೆ. ಎಲ್ಲದ ಕ್ಕಿಂತ ಕಷ್ಟವೆಂದರೆ, ಉತ್ತಮ ಆಡಳಿತವನ್ನೂ ನೀಡಿಕೊಂಡು, ಇನ್ನೆರಡು ವರ್ಷದಲ್ಲಿ ಬರಲಿರುವ ರಾಜ್ಯ ಚುನಾವಣೆಗೂ ಪಕ್ಷವನ್ನು ಬಲಿಷ್ಠವಾಗಿ, ಒಗ್ಗಟ್ಟಾಗಿ ಉಳಿಸಿಕೊಳ್ಳುವ ಸವಾಲು. ‌

ಸಾಫ್ಟ್ ಹಿಂದುತ್ವದ ಬೆನ್ನೇರಿರುವ ಡಿಕೆಶಿ ಅವರಿಗೆ ಅಹಿಂದ ಮತಗಳನ್ನು ಉಳಿಸಿಕೊಳ್ಳುವ ಸವಾಲು ಇದೆ. ರಾಜ್ಯ ರಾಜಕಾರಣದಲ್ಲೇ ಸಕ್ರಿಯವಾಗಿ ಇರುತ್ತೇನೆ ಎಂದು ಸಾರಿರುವ ಸಿದ್ದರಾಮಯ್ಯ ಅವರ ಬೆಂಬಲವನ್ನೂ ಇದಕ್ಕಾಗಿ ಸಕ್ರಿಯವಾಗಿ ಬಳಸಿಕೊಳ್ಳಬೇಕಿದೆ. ಬೆಂಗಳೂರಿನ ಅಭಿವೃದ್ಧಿಗಾಗಿ ನಾನಾ ಯೋಜನೆಗಳು ಸಿಎಂ ತಲೆಯಲ್ಲಿವೆ.

ಇವುಗಳೊಂದಿಗೇ ಅಭಿವೃದ್ಧಿಯಾಗಬೇಕಿರುವ ಕನ್ನಡ ನಾಡಿನ ಇತರ ಕಡೆಗಳತ್ತಲೂ ಕಣ್ಣು ಹಾಯಿಸಬೇಕು. ಮುಖ್ಯವಾಗಿ ಉತ್ತರ ಕರ್ನಾಟಕ. ರಸ್ತೆ, ಕುಡಿಯುವ ನೀರು ಮೊದಲಾದ ಮೂಲ ಸೌಕರ್ಯಗಳು ಗರಿಷ್ಠ ಪ್ರಯತ್ನ ಕೇಳುತ್ತವೆ. ಎಲ್ಲವನ್ನೂ ನೂತನ ಸಿಎಂ ಹೊಣೆಯರಿತು ನಿಭಾಯಿಸಲಿ ಎಂದು ಆಶಿಸೋಣ.