ಫೋಟೋ ಗ್ಯಾಲರಿ ಬಿಗ್​ಬಾಸ್ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Vishwavani Editorial: ಬದಲಾವಣೆ ಜಗದ ನಿಯಮ

ಪ್ರಸ್ತುತ ಚಾಲ್ತಿಯಲ್ಲಿರುವ ‘ಕೃತಕ ಬುದ್ಧಿಮತ್ತೆ’ (ಎಐ) ಮತ್ತು ಅದರ ಅನ್ವಯಿಕ ಕ್ಷೇತ್ರಗಳಿಗೂ ಇದು ಒಪ್ಪುವಂಥ ಮಾತು. ‘ಎಐ’ ಎಂಬ ಸಾಧ್ಯತೆ ಹತ್ತು ಹಲವು ಕ್ಷೇತ್ರಗಳಿಗೆ ದಾಳಿಯಿಡುತ್ತಿರುವುದರಿಂದ, ಉದ್ಯೋಗ ಕ್ಷೇತ್ರದಲ್ಲಿ ಇನ್ನು ಮುಂದೆ ಮಾನವ ಸಂಪನ್ಮೂಲದ ಅಗತ್ಯವೇ ಇರುವುದಿಲ್ಲ ಎಂಬುದು ಸುಮಾರು ಒಂದು ವರ್ಷದ ಹಿಂದೆ ಕೇಳಿಬರುತ್ತಿದ್ದ ಮಾತಾಗಿತ್ತು.

Vishwavani Editorial: ಬದಲಾವಣೆ ಜಗದ ನಿಯಮ

-

Ashok Nayak
Ashok Nayak Dec 12, 2025 8:15 AM

ಒಂದು ಕಾಲದಲ್ಲಿ ಸಂಗೀತ ಕ್ಷೇತ್ರವನ್ನು ‘ಗ್ರಾಮಾಫೋನ್ ತಟ್ಟೆಗಳು’ ಆಳುತ್ತಿದ್ದವು; ‘ಕ್ಯಾಸೆಟ್ ರೆಕಾರ್ಡರ್’ಗಳು ಮಾರುಕಟ್ಟೆಗೆ ದಾಂಗುಡಿ ಇಡುತ್ತಿದ್ದಂತೆ ಗ್ರಾಮಾಫೋನುಗಳು ಕ್ರಮೇಣ ಮೂಲೆ ಗುಂಪಾದವು. ನಂತರ ಬಂದ ಸಿಡಿ/ಡಿವಿಡಿಗಳಿಂದಾಗಿ ಕ್ಯಾಸೆಟ್ ವಲಯವೂ ತನ್ನ ಬಿರುಸನ್ನು ಕಳೆದುಕೊಳ್ಳಬೇಕಾಯಿತು. ಕಂಪ್ಯೂಟರ್‌ನ ‘ಕ್ಯಾಥೋಡ್ ರೇ’ ಮಾನಿಟರ್‌ಗಳನ್ನು ‘ಫ್ಲ್ಯಾಟ್‌ ಸ್ಕ್ರೀನ್’ ಗಳು ಪಲ್ಲಟಗೊಳಿಸಿದವು,

ಗಜಗಾತ್ರದ ಟಿವಿಗಳಿಗೂ ಇದೇ ಗತಿಯಾಯಿತು. ಅಲ್ಲಿಗೆ, ಯಾವುದೇ ಕ್ಷೇತ್ರದಲ್ಲಾಗುವ ಬದಲಾವಣೆ ಯಿಂದಾಗಿ ಆ ಕ್ಷಣಕ್ಕೆ ಒಂದಷ್ಟು ಕದಲಿಕೆಗಳು ಕಂಡುಬಂದರೂ, ಬದಲಾವಣೆಗೆ ಮನಸ್ಸನ್ನು ಮುಕ್ತವಾಗಿರಿಸಿಕೊಂಡರೆ ಹರಿವಿನೊಂದಿಗೆ ಸಾಗಬಹುದು, ಅಸ್ತಿತ್ವವನ್ನೂ ಉಳಿಸಿಕೊಳ್ಳಬಹುದು ಎಂದಾಯಿತು.

ಇದನ್ನೂ ಓದಿ: Vishwavani Editorial: ಹಣ ಮಾಡುವ ದಂಧೆಯಾಗದಿರಲಿ

ಪ್ರಸ್ತುತ ಚಾಲ್ತಿಯಲ್ಲಿರುವ ‘ಕೃತಕ ಬುದ್ಧಿಮತ್ತೆ’ (ಎಐ) ಮತ್ತು ಅದರ ಅನ್ವಯಿಕ ಕ್ಷೇತ್ರಗಳಿಗೂ ಇದು ಒಪ್ಪುವಂಥ ಮಾತು. ‘ಎಐ’ ಎಂಬ ಸಾಧ್ಯತೆ ಹತ್ತು ಹಲವು ಕ್ಷೇತ್ರಗಳಿಗೆ ದಾಳಿಯಿಡುತ್ತಿರುವುದರಿಂದ, ಉದ್ಯೋಗ ಕ್ಷೇತ್ರದಲ್ಲಿ ಇನ್ನು ಮುಂದೆ ಮಾನವ ಸಂಪನ್ಮೂಲದ ಅಗತ್ಯವೇ ಇರುವುದಿಲ್ಲ ಎಂಬು ದು ಸುಮಾರು ಒಂದು ವರ್ಷದ ಹಿಂದೆ ಕೇಳಿಬರುತ್ತಿದ್ದ ಮಾತಾಗಿತ್ತು. ಆದರೆ ಈಗ ಆ ತಲ್ಲಣಕ್ಕೆ ಕಾರಣವಿಲ್ಲ ಎಂಬುದು ಮನವರಿಕೆಯಾಗುತ್ತಿದೆ.

ಭಾರತದ ‘ಎಐ’ ಕ್ಷೇತ್ರದತ್ತ ಗೂಗಲ್, ಮೈಕ್ರೋಸಾಫ್ಟ್, ಅಮೆಜಾನ್‌ನಂಥ ದಿಗ್ಗಜ ತಂತ್ರಜ್ಞಾನ ಕಂಪನಿಗಳು ಆಸಕ್ತಿ ತೋರುತ್ತಿರುವುದು, ಒಟ್ಟಾರೆಯಾಗಿ ಇವುಗಳಿಂದ ೬ ಲಕ್ಷ ಕೋಟಿ ರುಪಾಯಿಗೂ ಹೆಚ್ಚು ಹೂಡಿಕೆಯಾಗುತ್ತಿರುವುದು ಒಳ್ಳೆಯ ಬೆಳವಣಿಗೆ. ಇದರಿಂದಾಗಿ ಲಕ್ಷಾಂತರ ಉದ್ಯೋಗಗಳು ಸೃಷ್ಟಿಯಾಗಲಿವೆ ಎಂಬುದು ಸಂತಸದ ಸಂಗತಿ. ‌

ಇದೇ ರೀತಿಯಲ್ಲಿ, ಕೃಷಿ, ಮೂಲ ಸೌಕರ್ಯ ಮುಂತಾದ ಕ್ಷೇತ್ರಗಳಲ್ಲೂ ನವೋತ್ಸಾಹಿಗಳಿಗೆ ಮತ್ತು ನವೀನ ಚಿಂತನೆಗಳಿಗೆ ಆಸ್ಪದ ನೀಡಿದಲ್ಲಿ, ಅದು ಮತ್ತೊಂದು ತೆರನಾದ ಕ್ರಾಂತಿಯನ್ನೇ ಮಾಡೀತು. ನಿರುದ್ಯೋಗ ಸಮಸ್ಯೆಯು ತಾರಕಕ್ಕೆ ಏರಿರುವ ಈ ಸಂದರ್ಭದಲ್ಲಿ ಕೇಂದ್ರ ಸರಕಾರ ಮತ್ತು ಎಲ್ಲಾ ರಾಜ್ಯ ಸರಕಾರಗಳು ಈ ನಿಟ್ಟಿನಲ್ಲಿ ಗಂಭೀರ ಚಿಂತನೆ ನಡೆಸುವಂತಾಗಲಿ...