ಬಲಿಷ್ಠ ಪ್ರಧಾನಿ ಮೋದಿ
ನಮ್ಮ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು 76 ವರ್ಷ ಪೂರೈಸಿ 77 ಕಾಲಿಟ್ಟಿದ್ದಾರೆ. ದೇಶ ಕಂಡ ಅತಿ ವಿಶಿಷ್ಟ ಪ್ರಧಾನಿ ಮೋದಿಯವರು. ಸತತ ಮೂರು ಬಾರಿ ದೇಶದ ಪ್ರಧಾನ ಮಂತ್ರಿಯಾಗಿ ಆಯ್ಕೆ ಯಾಗಿರುವುದು ಮೋದಿ ಅವರ ಜನಪ್ರಿಯತೆಯನ್ನು ಹಾಗೂ ದೇಶದ ಜನತೆ ಅವರ ಮೇಲಿಟ್ಟಿರುವ ನಂಬಿಕೆಯನ್ನು ಸೂಚಿಸುತ್ತದೆ
-
ನಮ್ಮ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು 76 ವರ್ಷ ಪೂರೈಸಿ 77 ಕಾಲಿಟ್ಟಿದ್ದಾರೆ. ದೇಶ ಕಂಡ ಅತಿ ವಿಶಿಷ್ಟ ಪ್ರಧಾನಿ ಮೋದಿಯವರು. ಸತತ ಮೂರು ಬಾರಿ ದೇಶದ ಪ್ರಧಾನ ಮಂತ್ರಿಯಾಗಿ ಆಯ್ಕೆಯಾಗಿರುವುದು ಮೋದಿ ಅವರ ಜನಪ್ರಿಯತೆಯನ್ನು ಹಾಗೂ ದೇಶದ ಜನತೆ ಅವರ ಮೇಲಿಟ್ಟಿ ರುವ ನಂಬಿಕೆಯನ್ನು ಸೂಚಿಸುತ್ತದೆ. ಸಾಮಾಜಿಕ ಜಾಲತಾಣಗಳಲ್ಲೂ ಜಾಗತಿಕ ನಾಯಕರಲ್ಲೆಲ್ಲ ಅತಿ ಹೆಚ್ಚಿನ ಹಿಂಬಾಲಕರನ್ನು ಅವರು ಹೊಂದಿದ್ದಾರೆ.
ಟೆಕ್ನಾಲಜಿಗೆ ಬಹಳ ಬೇಗ ಹೊಂದಿಕೊಂಡವರೂ ಅವರೇ. ದೇಶದ ರಾಜಕಾರಣಿಗಳು, ರಾಜಕೀಯ ವನ್ನು ಹೊಸ ಸ್ವರೂಪದಲ್ಲಿ ನೋಡುವಂತೆ ಅವರು ಮಾಡಿದರು. ದೇಶಕ್ಕೆ ಮೊದಲ ಬಿಜೆಪಿ ಸರಕಾರ ತಂದವರು ವಾಜಪೇಯಿ ಅವರಾದರೆ, ಅದನ್ನು ಇನ್ನಷ್ಟು ದಿಟ್ಟ, ಸ್ಪಷ್ಟ ರೀತಿಯಲ್ಲಿ ಪ್ರತಿಷ್ಠಾಪಿಸಿದವರು ಮೋದಿ. ಜಾಗತಿಕ ವೇದಿಕೆಯಲ್ಲಿ ಭಾರತದ ಅಲಿಪ್ತ ನೀತಿಯನ್ನು ಮುಂದು ವರಿಸಿದರಾದರೂ, ಭಯೋತ್ಪಾದನೆಯ ವಿರುದ್ಧದ ಶೂನ್ಯ ಸಹನೆಯ ನೀತಿಯನ್ನೂ ಅಷ್ಟೇ ಕಠಿಣ ಧ್ವನಿಯಲ್ಲಿ ಪ್ರತಿಪಾದಿಸಿದರು.
ಇದನ್ನೂ ಓದಿ: Modi-Putin: ಮೋದಿ- ಪುಟಿನ್ ಮಧ್ಯೆ ದ್ವಿಪಕ್ಷಿಯ ಒಪ್ಪಂದ; ವಿಷನ್ 2030 ಒಪ್ಪಂದಕ್ಕೆ ಸಹಿ
ದೇಶದ ವಿರುದ್ಧದ ಒಳಸಂಚನ್ನು ಕಠಿಣವಾಗಿ ಎದುರಿಸಲಾಗುತ್ತದೆ ಎಂಬುದನ್ನು ಆಪರೇಶನ್ ಸಿಂದೂರ ಮೊದಲಾದ ಕಾರ್ಯಾಚರಣೆಗಳ ಮೂಲಕ ತೋರಿಸಿದರು. ಅಯೋಧ್ಯೆಯ ರಾಮ ಜನ್ಮಭೂಮಿ ಮೊದಲಾದ ಧಾರ್ಮಿಕ, ಶ್ರದ್ಧೆಯ ವಿಚಾರಗಳಲ್ಲಿ ಹಿಂದಿನ ಯಾವ ಪ್ರಧಾನಿಗಳೂ ತೆಗೆದುಕೊಂಡಿರದ ದಿಟ್ಟ ನಿರ್ಧಾರವನ್ನು ಅವರು ತೆಗೆದುಕೊಂಡರಲ್ಲದೆ, ಧಾರ್ಮಿಕ ನಂಬಿಕೆ ಆಚರಣೆಗಳ ವಿಷಯದಲ್ಲಿ ಯಾವುದೇ ಹಿಂಜರಿಕೆಯಿಲ್ಲದ ಹಿಂದೂ ಸನಾತನ ನೆಲೆಯನ್ನು ಅಪ್ಪಿಕೊಂಡು, ಹಾಗೇ ನಡೆದು ತೋರಿಸಿದರು. ಆದರೂ ಅವರು ಮುಸ್ಲಿಮರೇ ಬಹುಸಂಖ್ಯಾತ ರಾಗಿರುವ ಮಧ್ಯಪ್ರಾಚ್ಯ ದೇಶಗಳಿಗೆ ಕೂಡ ಪ್ರಿಯರಾಗಿದ್ದು, ಆ ದೇಶಗಳು ತನ್ನ ಅತ್ಯುನ್ನತ ಪ್ರಶಸ್ತಿಗಳನ್ನು ಇವರಿಗೆ ನೀಡಿವೆ.
ಆಗ್ನೇಯ ಏಷ್ಯಾದ ದೇಶಗಳೊಂದಿಗೆ ಸೌಹಾರ್ದ ಸಂಬಂಧವನ್ನು ಬೆಸೆಯುವ ‘ಆಕ್ಟ್ ಈಸ್ಟ್ ಪಾಲಿಸಿ’ ಯನ್ನು ಅವರು ಪ್ರತಿಪಾದಿಸಿದ್ದಾರೆ. ಇತ್ತೀಚೆಗೆ ತಾನೆ ಬ್ರಿಕ್ಸ್ ದೇಶಗಳ ಶೃಂಗಸಭೆಯನ್ನು ಭಾರತದ ಅಧ್ಯಕ್ಷತೆ ಯನ್ನು ದೆಹಲಿಯಲ್ಲಿ ಯಶಸ್ವಿಯಾಗಿ ನಡೆಸಲಾಗಿದೆ. ಬ್ರೆಜಿಲ್, ರಷ್ಯಾ, ಭಾರತ, ಚೀನಾ ಹಾಗೂ ದಕ್ಷಿಣ ಆಫ್ರಿಕಾದಿಂದ ಶುರುವಾದ ಈ ಒಕ್ಕೂಟ 11 ಸದಸ್ಯ ರಾಷ್ಟ್ರಗಳ ಒಕ್ಕೂಟವಾಗಿ ವಿಸ್ತರಿಸಿದೆ. ಭಾರತವನ್ನು ವಿಶ್ವಗುರು ಆಗಿಸಬೇಕು ಎಂಬ ಕನಸಿನ ಹಾದಿಯಲ್ಲಿರುವ ಮೋದಿ ಯವರು ಹಲವಾರು ವಿನೂತನ ಉಪಕ್ರಮಗಳೊಂದಿಗೆ ಹೆಜ್ಜೆ ಹಾಕಿದ್ದಾರೆ.