ಫೋಟೋ ಗ್ಯಾಲರಿ ಬಿಗ್​ಬಾಸ್ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Vishwavani Editorial: ವಿಶ್ವಗುರುವಾಗಲಿ ಭಾರತ

ಬರೋಬ್ಬರಿ 6500 ಕೆ.ಜಿ. ತೂಕದ, ಅಮೆರಿಕದ ‘ಬ್ಲೂಬರ್ಡ್-6’ ಉಪಗ್ರಹವನ್ನು ನಿಗದಿತ ಭೂಕಕ್ಷೆಗೆ ಯಶಸ್ವಿಯಾಗಿ ಸೇರಿಸಿರುವುದೇ ಈ ಸಾಧನೆ. ಇದಕ್ಕೆ ಬಳಕೆಯಾಗಿದ್ದು, ಅತಿಭಾರದ ಉಪಗ್ರಹಗಳನ್ನು ಭೂಕಕ್ಷೆಗೆ ನಿರಾಯಾಸವಾಗಿ ತೂರಿಬಿಡಬಲ್ಲ ‘ಬಾಹುಬಲಿ’ ವಾಹಕ. ವಿಶ್ವದ ಪ್ರಬಲ ಆರ್ಥಿಕ ಶಕ್ತಿಗಳ ಪಟ್ಟಿಯಲ್ಲಿನ ತನ್ನ ಸ್ಥಾನವನ್ನು ಹಂತಹಂತ ವಾಗಿ ಮೇಲೇರಿಸಿಕೊಳ್ಳು ತ್ತಿರುವ ಭಾರತವು, ವಿಜ್ಞಾನ ಮತ್ತು ತಂತ್ರಜ್ಞಾನ ಕ್ಷೇತ್ರಗಳಲ್ಲೂ ಹೀಗೆ ಪಾರಮ್ಯವನ್ನು ಮೆರೆಯುತ್ತಿರುವುದು ಹೆಮ್ಮೆಯ ಸಂಗತಿ.

Vishwavani Editorial: ವಿಶ್ವಗುರುವಾಗಲಿ ಭಾರತ

-

Ashok Nayak
Ashok Nayak Dec 26, 2025 12:51 PM

ಏಕಕಾಲಕ್ಕೆ ನೂರಕ್ಕೂ ಹೆಚ್ಚು ಉಪಗ್ರಹಗಳ ಉಡಾವಣೆ, ಮಂಗಳ ಕಕ್ಷಾ ಗಾಮಿ ಮತ್ತು ಚಂದ್ರಯಾನ ಯೋಜನೆಗಳು ಹೀಗೆ ಒಂದೊಂದೇ ಸಾಧನೆಯ ಗರಿಗಳನ್ನು ತನ್ನ ಕಿರೀಟಕ್ಕೆ ಸೇರಿಸಿಕೊಳ್ಳುತ್ತಾ ಸಾಗಿದ ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ) ಇದೀಗ ಈ ನಿಟ್ಟಿನಲ್ಲಿ ಮತ್ತೊಂದು ಮೈಲಿಗಲ್ಲನ್ನು ದಾಟಿದೆ.

ಬರೋಬ್ಬರಿ 6500 ಕೆ.ಜಿ. ತೂಕದ, ಅಮೆರಿಕದ ‘ಬ್ಲೂಬರ್ಡ್-6’ ಉಪಗ್ರಹವನ್ನು ನಿಗದಿತ ಭೂಕಕ್ಷೆಗೆ ಯಶಸ್ವಿಯಾಗಿ ಸೇರಿಸಿರುವುದೇ ಈ ಸಾಧನೆ. ಇದಕ್ಕೆ ಬಳಕೆಯಾಗಿದ್ದು, ಅತಿಭಾರದ ಉಪಗ್ರಹಗಳನ್ನು ಭೂಕಕ್ಷೆಗೆ ನಿರಾಯಾಸವಾಗಿ ತೂರಿಬಿಡಬಲ್ಲ ‘ಬಾಹುಬಲಿ’ ವಾಹಕ. ವಿಶ್ವದ ಪ್ರಬಲ ಆರ್ಥಿಕ ಶಕ್ತಿಗಳ ಪಟ್ಟಿಯಲ್ಲಿನ ತನ್ನ ಸ್ಥಾನವನ್ನು ಹಂತಹಂತ ವಾಗಿ ಮೇಲೇರಿಸಿಕೊಳ್ಳುತ್ತಿರುವ ಭಾರತವು, ವಿಜ್ಞಾನ ಮತ್ತು ತಂತ್ರಜ್ಞಾನ ಕ್ಷೇತ್ರಗಳಲ್ಲೂ ಹೀಗೆ ಪಾರಮ್ಯವನ್ನು ಮೆರೆಯು ತ್ತಿರುವುದು ಹೆಮ್ಮೆಯ ಸಂಗತಿ.

ಇದನ್ನೂ ಓದಿ: Vishwavani Editorial: ಹೆತ್ತಪ್ಪನೇ ಹಂತಕನಾದರೆ...

ಈ ಕ್ಷೇತ್ರಗಳಲ್ಲಿ ಸಾಕಷ್ಟು ಗಟ್ಟಿಗ ಎನಿಸಿಕೊಂಡಿರುವ ಅಮೆರಿಕ ದೇಶವೇ ಭಾರತಕ್ಕೆ ಈ ಕಾರ್ಯಭಾರವನ್ನು ವಹಿಸಿತ್ತು ಎಂದರೆ, ಭಾರತವು ವಿವಿಧ ವಲಯಗಳಲ್ಲಿ ದಾಪುಗಾಲಿಟ್ಟು ಸಾಗುತ್ತಿರುವ ಪರಿಯನ್ನು ಯಾರು ಬೇಕಿದ್ದರೂ ಊಹಿಸಿಕೊಳ್ಳಬಹುದು. ಒಂದು ಕಾಲಕ್ಕೆ, ಉಡಾವಣಾ ನೆಲೆಗೆ ಉಪಗ್ರಹವನ್ನು ಹೊತ್ತೊಯ್ಯಬಲ್ಲ, ಮರದ ತಳಹ ದಿಯ ವಿಶಿಷ್ಟ ಸಾಧನ-ಸಲಕರಣೆ ಅಲಭ್ಯವಾಗಿದ್ದ ಕಾರಣಕ್ಕೆ ಎತ್ತಿನ ಗಾಡಿಯ ಮೇಲೆ ಅದನ್ನಿಟ್ಟು ಕೊಂಡು ಕಾರ್ಯವನ್ನು ನೆರವೇರಿಸಿದ್ದ ಇಸ್ರೋ, ಈಗ ಈ ಎತ್ತರಕ್ಕೆ ಬೆಳೆದಿರುವುದನ್ನು ನೋಡಿದರೆ, ಆ ಸಂಸ್ಥೆಯಲ್ಲಿ ಕಾರ್ಯನಿರ್ವ ಹಿಸುತ್ತಿರುವ ವಿಜ್ಞಾನಿಗಳು ಮತ್ತು ವಿವಿಧ ಸ್ತರದ ಸಿಬ್ಬಂದಿಯ ಕಾರ್ಯ ದಕ್ಷತೆ, ಪ್ರಾಮಾಣಿಕತೆ, ಬದ್ಧತೆ ಇತ್ಯಾದಿಗಳು ಅರಿವಾಗುತ್ತವೆ.

ದೇಶದ ಮಿಕ್ಕ ಕಾರ್ಯಕ್ಷೇತ್ರಗಳಲ್ಲೂ ಇದೇ ವೈಶಿಷ್ಟ್ಯಗಳು ಅನುರಣಿಸಿದರೆ, ಭಾರತವು ಕೆಲವೇ ವರ್ಷಗಳಲ್ಲಿ ‘ವಿಶ್ವಗುರು’ ಎನಿಸಿಕೊಳ್ಳಬಲ್ಲದು. ಆ ದಿನಗಳು ಆದಷ್ಟು ಬೇಗ ಬರಲಿ...