ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

Vishwavani Editorial: ಬೆಳಕಿನ ಹಬ್ಬದ ಸಂದೇಶ

ಹಾಲು ಬೆಲೆ ಏರಿಕೆ, ಪ್ರಯಾಣದ ದರ ಏರಿಕೆ, ಹೂವು-ಹಣ್ಣು-ತರಕಾರಿ ದರ ಏರಿಕೆಗಳ ನಡುವೆಯೂ ಜನಸಾಮಾನ್ಯರ ಹಬ್ಬದ ಹಂಬಲ ಕುಗ್ಗಿಲ್ಲ. ಹಬ್ಬ ಎಲ್ಲರಿಗೂ ಸಂಭ್ರಮ, ಸಂತೃಪ್ತಿ, ನೆಮ್ಮದಿ ತರಲಿ ಎಂದು ಹಾರೈಸುತ್ತಲೇ ಕೆಲವು ಅವಶ್ಯಕ ಸಂಗತಿಗಳನ್ನು ಹೇಳಬಹುದು. ಸುಪ್ರೀಂ ಕೋರ್ಟ್ ಬಹಳ ಹಿಂದೆಯೇ ಹಸಿರು ಪಟಾಕಿಗಳನ್ನು ಸಿಡಿಸಲು ಮಾತ್ರ ಅವಕಾಶ ನೀಡುವಂತೆ ಹಾಗೂ ಸಮಯ ನಿಗದಿಪಡಿಸುವಂತೆ ನಿರ್ದೇಶಿಸಿದೆ.

Vishwavani Editorial: ಬೆಳಕಿನ ಹಬ್ಬದ ಸಂದೇಶ

-

Profile
Ashok Nayak Nov 9, 2026 10:37 AM

ಇದೀಗ ಜಾಗತಿಕ ಹಬ್ಬವೇ ಆಗಿರುವ, ಸನಾತನ ಸಂಸ್ಕೃತಿಯ ಮೌಲ್ಯಗಳನ್ನೂ ವೈಭವವನ್ನೂ ಬಿಂಬಿಸುವ ದೀಪಾವಳಿ ಹಬ್ಬವನ್ನು ಎಲ್ಲೆಡೆ ಆಚರಿಸಲಾಗುತ್ತಿದೆ. ಕೆಡುಕಿನ ಮೇಲೆ ಒಳಿತಿನ ವಿಜಯ, ಅಂಧಕಾರದ ಮೇಲೆ ಬೆಳಕಿನ ಗೆಲುವು, ಸಹಬಾಳ್ವೆಗಳ ಪ್ರತೀಕವಾಗಿರುವ ಈ ದೀಪ ಪರ್ವವನ್ನು ಎಲ್ಲರೂ ಆಚರಿಸುತ್ತಿದ್ದಾರೆ.

ಹಾಲು ಬೆಲೆ ಏರಿಕೆ, ಪ್ರಯಾಣದ ದರ ಏರಿಕೆ, ಹೂವು-ಹಣ್ಣು-ತರಕಾರಿ ದರ ಏರಿಕೆಗಳ ನಡುವೆಯೂ ಜನಸಾಮಾನ್ಯರ ಹಬ್ಬದ ಹಂಬಲ ಕುಗ್ಗಿಲ್ಲ. ಹಬ್ಬ ಎಲ್ಲರಿಗೂ ಸಂಭ್ರಮ, ಸಂತೃಪ್ತಿ, ನೆಮ್ಮದಿ ತರಲಿ ಎಂದು ಹಾರೈಸುತ್ತಲೇ ಕೆಲವು ಅವಶ್ಯಕ ಸಂಗತಿಗಳನ್ನು ಹೇಳಬಹುದು. ಸುಪ್ರೀಂ ಕೋರ್ಟ್ ಬಹಳ ಹಿಂದೆಯೇ ಹಸಿರು ಪಟಾಕಿಗಳನ್ನು ಸಿಡಿಸಲು ಮಾತ್ರ ಅವಕಾಶ ನೀಡುವಂತೆ ಹಾಗೂ ಸಮಯ ನಿಗದಿಪಡಿಸುವಂತೆ ನಿರ್ದೇಶಿಸಿದೆ.

ಇದನ್ನೂ ಓದಿ: Deepavali 2026: ಬೆಳಕಿನ ಹಬ್ಬ ದೀಪಾವಳಿ ತರದಿರಲಿ ನಿಮ್ಮ ಬಾಳಿಗೆ ಅಂಧಕಾರ!

ಅದರಂತೆ ರಾತ್ರಿ 8 ಗಂಟೆಯಿಂದ 10ರವರೆಗೆ ಮಾತ್ರ ಪಟಾಕಿ ಸಿಡಿಸಲು ಅವಕಾಶ ನೀಡಿ ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಕೂಡ ಸುತ್ತೋಲೆ ಹೊರಡಿಸಿದೆ. ಇನ್ನು, ಇದ್ದುದರಲ್ಲಿ ಕಡಿಮೆ ವಾಯುಮಾಲಿನ್ಯ ಮಾಡುವ ಹಸಿರು ಪಟಾಕಿಗಳನ್ನು ಸಿಡಿಸುವಂತೆ ಸೂಚನೆ ನೀಡಿದೆ. ಈ ಸೂಚನೆಗಳು ಕಟ್ಟುನಿಟ್ಟಾಗಿ ಎಲ್ಲೂ ಪಾಲನೆ ಆಗುತ್ತಿಲ್ಲ. ಹಬ್ಬದ ಸಂಭ್ರಮದ ನಡುವೆ ದೆಹಲಿ ನಗರದ ವಾಯು ಮಾಲಿನ್ಯ ಮಟ್ಟ ಮತ್ತಷ್ಟು ಅಪಾಯಕಾರಿ ಹಂತಕ್ಕೆ ಮುಟ್ಟಿರುವ ವರದಿ ಬಂದಿದೆ.

ಭಾನುವಾರ ಬೆಳಗ್ಗೆ ದೆಹಲಿಯ ಸರಾಸರಿ ವಾಯು ಗುಣಮಟ್ಟ ಸೂಚ್ಯಂಕ 483ಕ್ಕೆ ಕುಸಿದಿದೆ. ಬೆಂಗಳೂರು ಕೂಡ ಈ ದೆಹಲಿಗಿಂತ ಬಹಳ ದೂರವೇನೂ ಇಲ್ಲ. ನಮ್ಮ ನಿಮ್ಮೆಲ್ಲರ ಆರೋಗ್ಯದ ದೃಷ್ಟಿಯಿಂದ ಕೋರ್ಟ್ ಸೂಚನೆಗಳ ಪಾಲನೆ ಬಹಳ ಮುಖ್ಯ. ಪಟಾಕಿಗಳ ಶಬ್ದದಿಂದ ಸಾಕುಪ್ರಾಣಿ ಗಳು ತೀವ್ರ ಸಂಕಟಪಟ್ಟರೆ, ಹೊಗೆಯಿಂದ ಮಕ್ಕಳು, ವೃದ್ಧರು, ಅಸ್ತಮಾ ರೋಗಿಗಳು ಸಂಕಷ್ಟ ಪಡುತ್ತಾರೆ. ಸಾಂಕೇತಿಕ ಪಟಾಕಿ ಸುಡುವಿಕೆ ತಪ್ಪಲ್ಲ. ಹಾಗಂತ ಪಟಾಕಿ ಕಡಿಮೆ ಸುಡಿ ಎಂದರೆ ಹಬ್ಬವನ್ನು ವಿರೋಧಿಸುವುದು ಎಂದೂ ಅರ್ಥವಿಸಬೇಕಿಲ್ಲ.

ಜನರ ಆರೋಗ್ಯ ಎಲ್ಲಕ್ಕಿಂತ ಮುಖ್ಯ. ಹಾಗೆಯೇ ಪಟಾಕಿ ಸುಡುವಾಗ ಮಕ್ಕಳು ಕಣ್ಣಿನ ಸುರಕ್ಷತೆಯ ಬಗ್ಗೆ ಯೂ ಗಮನ ಹರಿಸಬೇಕು. ಅಸುರಕ್ಷಿತ ವಿಧಾನಗಳ ಮೂಲಕ ಪಟಾಕಿಗೆ ಬೆಂಕಿ ಹಚ್ಚಲು ಹೋಗಿ, ಮೈಕೈ ಕಣ್ಣು ಸುಟ್ಟುಕೊಂಡು ಆಸ್ಪತ್ರೆಗೆ ಧಾವಿಸುವವರ ಸಂಖ್ಯೆ ದೀಪಾವಳಿಯ ಮರುದಿನ ಸುದ್ದಿಯಾಗುತ್ತದೆ. ಸುರಕ್ಷತೆ, ಆರೊ ಗ್ಯ, ಸಾಂಪ್ರದಾಯಿಕ ಸಂಭ್ರಮಗಳೊಂದಿಗೆ ಬೆಳಕಿನ ಹಬ್ಬ ಮೇಳೈಸಲಿ.