ಕರ್ನಾಟಕ ಬಜೆಟ್​ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹೋಳಿ ಹಬ್ಬ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Vishwavani Editorial: ಸ್ಮಗ್ಲಿಂಗ್: ಕಡಿವಾಣ ಅಗತ್ಯ

ಪ್ರತಿ ಕೆ.ಜಿ. ಚಿನ್ನದಿಂದ ಅವರು ಗರಿಷ್ಠ 4 ಲಕ್ಷದವರೆಗೆ ಲಾಭ ಮಾಡಿಕೊಳ್ಳುತ್ತಿದ್ದರು ಎಂದು ತನಿಖಾ ಮೂಲಗಳು ತಿಳಿಸಿವೆ. ವಿಮಾನ ನಿಲ್ದಾಣದ ಹೊರಗೆ ಮತ್ತು ಒಳಗೆ ಅಧಿಕಾರಿಗಳ ಬೆಂಬಲವಿಲ್ಲದೆ ಈ ನಟಿ ನಿರಂತರ ಒಂದು ವರ್ಷದಿಂದ ಈ ದಂಧೆ ಮುಂದುವರಿಸಿಕೊಂಡು ಬರಲು ಸಾಧ್ಯವಿಲ್ಲ ಎನ್ನು ವುದು ಯಾರೂ ಊಹಿಸಬಹುದಾದ ಸಂಗತಿ. ರನ್ಯಾ ಅವರು ಹಿರಿಯ ಪೊಲೀಸ್ ಅಧಿಕಾರಿ ಕೆ. ರಾಮ ಚಂದ್ರ ರಾವ್ ಅವರ ಮಲಮಗಳು

ಸ್ಮಗ್ಲಿಂಗ್: ಕಡಿವಾಣ ಅಗತ್ಯ

Profile Ashok Nayak Mar 13, 2025 6:20 AM

ರಾಜ್ಯದಲ್ಲಿ ಚಿನ್ನ ಕಳ್ಳ ಸಾಗಣೆ ಪ್ರಕರಣಗಳು ಇತ್ತೀಚೆಗೆ ಹೆಚ್ಚಾಗುತ್ತಿವೆ. ಸದ್ಯ ಕನ್ನಡ ಚಲನಚಿತ್ರ ನಟಿ ರನ್ಯಾ ರಾವ್ ಅವರನ್ನು ಕಂದಾಯ ಗುಪ್ತಚರ ನಿರ್ದೇಶನಾಲಯವು (ಡಿಆರ್‌ಐ) ಬಂಧಿಸಿರು ವುದು ದೇಶದಲ್ಲಿ ನಡೆಯುತ್ತಿರುವ ಚಿನ್ನದ ಕಳ್ಳಸಾಗಣೆಯ ಬಗ್ಗೆ ಎಚ್ಚರಿಕೆಯ ಕರೆ ಗಂಟೆಯಂತೆ ಇದೆ. ರನ್ಯಾ ಅವರು ಚಿನ್ನವನ್ನು ಕಳ್ಳಸಾಗಣೆ ಮಾಡುತ್ತಿದ್ದ ಬಗೆಯ ಕುರಿತ ವರದಿಗಳು ಉನ್ನತ ಅಧಿಕಾರ ಸ್ಥಾನಗಳಲ್ಲಿ ಇರುವವರು ತೋರಿರಬಹುದಾದ ಪ್ರಭಾವ ಮತ್ತು ಇಂತಹ ಅಪರಾಧ ಗಳನ್ನು ತಡೆಯುವಲ್ಲಿ ವ್ಯವಸ್ಥೆಯು ಸೋತಿರುವುದನ್ನು ಹೇಳುತ್ತಿವೆ. ಕಳೆದ ಒಂದು ವರ್ಷದ ಅವಧಿಯಲ್ಲಿ ರನ್ಯಾ ಅವರು ದುಬೈಗೆ 28 ಬಾರಿ ತೆರಳಿದ್ದರು, ಪ್ರತಿ ಬಾರಿಯೂ ಅವರು ಚಿನ್ನವನ್ನು ಅಕ್ರಮವಾಗಿ ದೇಶ ದೊಳಕ್ಕೆ ತರುತ್ತಿದ್ದರು.

ಇದನ್ನೂ ಓದಿ: Vishwavani Editorial: ತನಿಖೆ ನಿಷ್ಪಕ್ಷಪಾತವಾಗಿ ನಡೆಯಲಿ

ಪ್ರತಿ ಕೆ.ಜಿ. ಚಿನ್ನದಿಂದ ಅವರು ಗರಿಷ್ಠ 4 ಲಕ್ಷದವರೆಗೆ ಲಾಭ ಮಾಡಿಕೊಳ್ಳುತ್ತಿದ್ದರು ಎಂದು ತನಿಖಾ ಮೂಲಗಳು ತಿಳಿಸಿವೆ. ವಿಮಾನ ನಿಲ್ದಾಣದ ಹೊರಗೆ ಮತ್ತು ಒಳಗೆ ಅಧಿಕಾರಿಗಳ ಬೆಂಬಲವಿಲ್ಲದೆ ಈ ನಟಿ ನಿರಂತರ ಒಂದು ವರ್ಷದಿಂದ ಈ ದಂಧೆ ಮುಂದುವರಿಸಿಕೊಂಡು ಬರಲು ಸಾಧ್ಯವಿಲ್ಲ ಎನ್ನುವುದು ಯಾರೂ ಊಹಿಸಬಹುದಾದ ಸಂಗತಿ. ರನ್ಯಾ ಅವರು ಹಿರಿಯ ಪೊಲೀಸ್ ಅಧಿಕಾರಿ ಕೆ. ರಾಮಚಂದ್ರ ರಾವ್ ಅವರ ಮಲಮಗಳು.

ಈ ಕಾರಣಕ್ಕೆ ಅವರು ತಮ್ಮ ಕುಟುಂಬದ ಪ್ರಭಾವವನ್ನು ಬಳಸಿಕೊಂಡು ಭದ್ರತಾ ತಪಾಸಣೆ ಗಳಿಂದ ವಿನಾಯಿತಿ ಪಡೆದುಕೊಳ್ಳುತ್ತಿದ್ದರು ಎನ್ನಲಾಗಿದೆ. ಇದು ನಿಜವೇ ಆಗಿದ್ದರೆ ವಿಐಪಿ ಸಂಸ್ಕೃತಿ ದೇಶದ ಸುರಕ್ಷತೆಗೂ ಅಪಾಯ ತಂದೊಡ್ಡಬಹುದು. ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ನಿಯಮಗಳ ಪಾಲನೆಯಲ್ಲಿ ಗಂಭೀರ ಲೋಪ ಆಗಿರುವ ಸಾಧ್ಯತೆಯನ್ನು ಇದು ಸೂಚಿಸುತ್ತಿದೆ.

ರನ್ಯಾ ಚಟುವಟಿಕೆ ಕುರಿತು ಡಿಆರ್‌ಐಗೆ ಸುಳಿವು ಸಿಗುವ ತನಕವೂ ಬೆಂಗಳೂರಿನಲ್ಲಿರುವ ಕೇಂದ್ರೀ ಯ ಏಜೆನ್ಸಿಗಳ ಅಧಿಕಾರಿಗಳಿಗೆ ಈ ಬಗ್ಗೆ ಮಾಹಿತಿ ಇರಲಿಲ್ಲ ಎಂದರೆ ನಂಬುವುದು ಕಷ್ಟ. ಈ ಪ್ರಕರಣದಲ್ಲಿ ಸಚಿವರು, ಅಧಿಕಾರಿಗಳು, ಉದ್ಯಮಿಗಳು ಸೇರಿದಂತೆ ದೊಡ್ಡ ಜಾಲ ಇರುವುದು ಮೇಲ್ನೋಟಕ್ಕೆ ಕಂಡು ಬರುತ್ತಿದೆ. ಸಿಬಿಐ ಈ ಪ್ರಕರಣದಲ್ಲಿ ತಪ್ಪು ಮಾಡಿದವರು ಎಷ್ಟೇ ದೊಡ್ಡವ ರಾಗಿದ್ದರೂ ಅವರು ಶಿಕ್ಷೆಗೆ ಗುರಿಯಾಗುವಂತೆ ನೋಡಿಕೊಳ್ಳಬೇಕು. ಇಂತಹ ಅಕ್ರಮ ದಂಧೆಗಳಿಗೆ ಕಡಿವಾಣ ಬೀಳಲೇಬೇಕು.