Editorial: ಕಾಲ್ತುಳಿತ: ವಾಸ್ತವ ಸ್ಥಿತಿ ತಿಳಿಸಿ
ಘಟನೆ ನಡೆದ 24 ಗಂಟೆಗಳ ನಂತರ ಉತ್ತರ ಪ್ರದೇಶ ಸರಕಾರವು 30 ಜನರು ಮೃತಪಟ್ಟಿದ್ದಾರೆ ಎಂದು ಹೇಳಿಕೆ ನೀಡಿತ್ತು. ಆದರೆ ಇದೀಗ ಸಾವಿನ ಸಂಖ್ಯೆ ಸಾವಿರ ದಾಟಿದೆ ಎಂಬ ಮಾತು ಹರಿ ದಾಡುತ್ತಿವೆ. ಇಂತಹ ದುರ್ಘಟನೆ ನಡೆದಾಗ ಸಾವಿನ ಸಂಖ್ಯೆಯ ಬಗ್ಗೆ ಸಾರ್ವಜನಿಕರಿಗೆ ಸರಿಯಾಗಿ ಮಾಹಿತಿ ಒದಗಿ ಸದೇ ಇರುವುದು ವದಂತಿಗಳು ಹರಡುವುದಕ್ಕೆ ನೇರ ಕಾರಣವಾಗುತ್ತದೆ


ಉತ್ತರ ಪ್ರದೇಶದ ಪ್ರಯಾಗರಾಜ್‌ನಲ್ಲಿ ನಡೆಯುತ್ತಿರುವ ಮಹಾಕುಂಭಮೇಳದಲ್ಲಿ ಮೌನಿ ಅಮಾ ವಾಸ್ಯೆಯಂದು ಘಟಿಸಿದ ಕಾಲ್ತುಳಿತ ಪ್ರಕರಣದ ಕುರಿತು ಒಬ್ಬೊಬ್ಬರು ಒಂದೊಂದು ಮಾಹಿತಿ ನೀಡುತ್ತಿದ್ದಾರೆ.
ಘಟನೆ ನಡೆದ 24 ಗಂಟೆಗಳ ನಂತರ ಉತ್ತರ ಪ್ರದೇಶ ಸರಕಾರವು 30 ಜನರು ಮೃತಪಟ್ಟಿದ್ದಾರೆ ಎಂದು ಹೇಳಿಕೆ ನೀಡಿತ್ತು. ಆದರೆ ಇದೀಗ ಸಾವಿನ ಸಂಖ್ಯೆ ಸಾವಿರ ದಾಟಿದೆ ಎಂಬ ಮಾತು ಹರಿ ದಾಡುತ್ತಿವೆ. ಇಂತಹ ದುರ್ಘಟನೆ ನಡೆದಾಗ ಸಾವಿನ ಸಂಖ್ಯೆಯ ಬಗ್ಗೆ ಸಾರ್ವಜನಿಕರಿಗೆ ಸರಿಯಾಗಿ ಮಾಹಿತಿ ಒದಗಿಸದೇ ಇರುವುದು ವದಂತಿಗಳು ಹರಡುವುದಕ್ಕೆ ನೇರ ಕಾರಣವಾಗುತ್ತದೆ.
ಇದನ್ನೂ ಓದಿ: Vishwavani Editorial: ಇಸ್ರೊ ಸಾಧನೆ ದೇಶದ ಹೆಮ್ಮೆ
ಮೇಳದಲ್ಲಿ ಆಗಿರುವುದು ಏನು ಎಂಬುದರ ಬಗ್ಗೆ ಅಲ್ಲಿರುವ ಭಕ್ತರಿಗೆ ಹಾಗೂ ಇತರೆಡೆಗಳಲ್ಲಿರುವ ಅವರ ಸಂಬಂಧಿಕರಿಗೆ ಮಾಹಿತಿ ಸಿಗಬೇಕಿತ್ತು. ಆದರೆ ಆ ಮಾಹಿತಿ ಸಕಾಲದಲ್ಲಿ ಸಿಗಲಿಲ್ಲ. ಆರಂಭ ದಲ್ಲಿ ಸರಕಾರ ಮತ್ತು ಪೊಲೀಸರು ದುರ್ಘಟನೆ ನಡೆದೇ ಇಲ್ಲ ಎಂಬಂತೆ ವರ್ತಿಸಿದರು.
ಕಾಲ್ತುಳಿತ ಎಂಬ ಪದವನ್ನೂ ಬಳಸಿರಲಿಲ್ಲ. ದುರ್ಘಟನೆಯು ದೊಡ್ಡಮಟ್ಟದ್ದಲ್ಲ ಎಂದು ಬಿಂಬಿ ಸಲು ಸರ್ವ ರೀತಿಯ ಪ್ರಯತ್ನ ನಡೆಸಲಾಯಿತು. ಈಗಲೂ ಬಿಜೆಪಿ ಸಂಸದೆ, ನಟಿ ಹೇಮಾಮಾಲಿನಿ ಸೇರಿದಂತೆ ಅನೇಕರು ಅದೊಂದು ದೊಡ್ಡ ಘಟನೆ ಅಲ್ಲವೇ ಅಲ್ಲ ಹೇಳಿದ್ದಾರೆ. ಸಾವಿನಲ್ಲೂ ರಾಜ ಕೀಯ ಬೆರೆಸಲು ಸ್ವತಃ ಉತ್ತರ ಪ್ರದೇಶ ಸರಕಾರವೇ ದಾರಿ ಮಾಡಿಕೊಡುತ್ತಿದೆ. ಇಂತಹ ಸಂದರ್ಭ ಗಳಲ್ಲಿ ನಡೆದಿರುವುದು ಏನು ಎಂಬುದನ್ನು ಪಾರದರ್ಶಕವಾಗಿ ತಿಳಿಸುವುದು ಬಹಳ ಮುಖ್ಯ. ಕಾಲ್ತುಳಿತಕ್ಕೆ ಕಾರಣ ಏನು ಎಂಬುದನ್ನು ಗುರುತಿಸಲು ಉತ್ತರಪ್ರದೇಶ ಸರಕಾರವು ನ್ಯಾಯಾಂಗ ತನಿಖೆಗೆ ಆದೇಶಿಸಿದೆ. ಪರಿಣಾಮಕಾರಿಯಾಗಿ ನಡೆಸಿದರೆ ಪೊಲೀಸ್ ತನಿಖೆಯೂ ಇದಕ್ಕೆ ಕಾರಣ ವನ್ನು ಗುರುತಿಸಬಲ್ಲದು.
ಕಾಲ್ತುಳಿತಕ್ಕೆ ಕಾರಣರಾದವರನ್ನು ಉತ್ತರದಾಯಿ ಆಗಿಸಬೇಕು. ಮಹಾಕುಂಭಮೇಳದ ಆಯೋಜ ನೆಯ ಹೊಣೆಯನ್ನು ಹೊತ್ತುಕೊಂಡಿರುವ ಉತ್ತರಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಅವರು ಈಗ ಆಗಿರುವುದರ ಹೊಣೆಯಿಂದ ತಪ್ಪಿಸಿಕೊಳ್ಳಬಾರದು.