ಕರ್ನಾಟಕ ಬಜೆಟ್​ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹೋಳಿ ಹಬ್ಬ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Vishwavani Editorial: ಬಿಸಿಲಿನ ಧಗೆ; ಇರಲಿ ಎಚ್ಚರ

ಬಿಸಿಲಿನ ಪ್ರಖರತೆಯಿಂದಾಗಿ ಸಾರ್ವಜನಿಕರ ಆರೋಗ್ಯದ ಮೇಲೂ ಗಂಭೀರ ಪರಿಣಾಮ ಬೀರು ತ್ತಿದೆ. ಆದ್ದರಿಂದ ಬಿಸಿಲಿನ ಧಗೆ ಹೆಚ್ಚಾಗಿರುವ ಸಮಯದಲ್ಲಿ ಹೊರಾಂಗಣ ಕೆಲಸಗಳನ್ನು ಮಾಡಬಾರದು. ದೇಹದ ತಾಪಮಾನ ಕಡಿಮೆ ಮಾಡಲು ಪ್ರತಿ ದಿನ ಕನಿಷ್ಠ ನಾಲ್ಕು ಲೀಟರ್ ನೀರು ಕುಡಿಯಬೇಕು

ಬಿಸಿಲಿನ ಧಗೆ; ಇರಲಿ ಎಚ್ಚರ

Profile Ashok Nayak Mar 11, 2025 6:48 AM

ರಾಜ್ಯದ ಎಲ್ಲೆಡೆ ದಿನದಿಂದ ದಿನಕ್ಕೆ ಬಿಸಿಲಿನ ತಾಪಮಾನ ಹೆಚ್ಚಾಗುತ್ತಿದೆ. ಸೋಮವಾರ 6 ಜಿಲ್ಲೆಗಳಲ್ಲಿ ತಾಪಮಾನದ ತೀವ್ರತೆ 40 ಡಿಗ್ರಿ ಸೆಲ್ಸಿಯಸ್ ಗಡಿ ದಾಟಿದೆ. ಕರ್ನಾಟಕದ ಬಿಸಿಲುನಾಡು ಎಂದೇ ಹೆಸರಾಗಿರುವ ರಾಯಚೂರಿನಲ್ಲಿ 41.1 ಡಿಗ್ರಿ ಸೆಲ್ಸಿಯಸ್ ತಾಪ ಮಾನ ದಾಖಲಾಗಿದ್ದು, ಅಲ್ಲಿನ ಜನ ಕಂಗಾಲಾಗಿದ್ದಾರೆ. ಕೊಪ್ಪಳದಲ್ಲೂ 40.7 ಡಿಗ್ರಿ, ಉತ್ತರ ಕನ್ನಡ ಮತ್ತು ಧಾರವಾಡದಲ್ಲಿ 40.5 ಡಿಗ್ರಿ, ಕಲಬುರ ಗಿಯಲ್ಲಿ 40.4 ಡಿಗ್ರಿ ಹಾಗೂ ಬಾಗಲ ಕೋಟೆಯಲ್ಲಿ 40.1 ಡಿಗ್ರಿ ತಾಪಮಾನ ದಾಖಲಾಗಿದೆ. ಕಿತ್ತೂರು ಮತ್ತು ಕಲ್ಯಾಣ ಕರ್ನಾಟಕ ಬಹುತೇಕ ಎಲ್ಲ ಜಿಲ್ಲೆಗಳಲ್ಲೂ ಇದೇ ಪರಿಸ್ಥಿತಿ ಇದೆ. ಬಿಸಿಲಿನ ಹೊಡೆತಕ್ಕೆ ಮಧ್ಯಾಹ್ನ ವೇಳೆ ಜನರು ಬೀದಿಗಿಳಿಯಲು ಭಯಪಡುತ್ತಿದ್ದಾರೆ.

ಬಿರು ಬಿಸಿಲಿಗೆ ಜಲಮೂಲಗಳು ಬತ್ತುತ್ತಿವೆ, ನದಿ, ಕೆರೆಗಳ ಒಡಲಲ್ಲಿ ಭೂಮಿ ಬಾಯ್ದೆರೆದಿದೆ. ಹೀಗಾಗಿ ಬಿಸಿಲಿನ ಜತೆಗೆ ನೀರಿನ ಅಭಾವವೂ ಉಂಟಾಗಿದೆ. ಒಂದೆಡೆ ಬಿಸಿಲಿನ ತಾಪ ಇನ್ನೊಂದೆಡೆ ನೀರಿನ ಅಭಾವದಿಂದಾಗಿ ಪ್ರಾಣಿ ಪಕ್ಷಿಗಳ ಸಂಕುಲ ಬಳಲುತ್ತಿವೆ. ಪ್ರಾಣಿ, ಪಕ್ಷಿಗಳು ಮೇವು ಹುಡುಕುವ ಬದಲು ನೆರಳು ಹುಡುಕಿಕೊಳ್ಳುವಂತಾಗಿದೆ.

ಇದನ್ನೂ ಓದಿ: Vishwavani Editorial: ನಕಲಿ ಅಂಕಪಟ್ಟಿಗಳಿಗೆ ಕಡಿವಾಣ ಬೀಳಲಿ

ಹಕ್ಕಿಗಳು ಮನೆಗಳ ಮುಂದೆ, ಚರಂಡಿಗಳಲ್ಲಿ, ನಳಗಳ ಹತ್ತಿರ ನೀರಿಗಾಗಿ ಬರುತ್ತಿವೆ. ಇದು ನಾಡಿನ ಸಮಸ್ಯೆಯಾದರೆ ಕಾಡುಗಳು ಕಾಡ್ಗಿಚ್ಚಿನ ಸಮಸ್ಯೆ ಎದುರಿಸುತ್ತಿವೆ. ಈಗಾಗಲೇ ಹಲವೆಡೆ ಕಾಡ್ಗಿಚ್ಚಿನ ಕಾರಣಕ್ಕೆ ಅರಣ್ಯ ನಾಶವಾಗಿದೆ. ಬಿಸಿಲಿನ ಹಾಹಾಕಾರದ ಈ ದಿನ ಗಳಲ್ಲಿ ಸಾರ್ವಜನಿಕರು ತಮ್ಮ ಮನೆಯ ಬಳಿ ಪ್ರಾಣಿ ಪಕ್ಷಿಗಳಿಗೆ ನೀರು, ಆಹಾರ ಒದಗಿ ಸುವ ಕಾರ್ಯ ಮಾಡಬೇಕು.

ಬಿಸಿಲಿನ ಪ್ರಖರತೆಯಿಂದಾಗಿ ಸಾರ್ವಜನಿಕರ ಆರೋಗ್ಯದ ಮೇಲೂ ಗಂಭೀರ ಪರಿಣಾಮ ಬೀರುತ್ತಿದೆ. ಆದ್ದರಿಂದ ಬಿಸಿಲಿನ ಧಗೆ ಹೆಚ್ಚಾಗಿರುವ ಸಮಯದಲ್ಲಿ ಹೊರಾಂಗಣ ಕೆಲಸ ಗಳನ್ನು ಮಾಡಬಾರದು. ದೇಹದ ತಾಪಮಾನ ಕಡಿಮೆ ಮಾಡಲು ಪ್ರತಿ ದಿನ ಕನಿಷ್ಠ ನಾಲ್ಕು ಲೀಟರ್ ನೀರು ಕುಡಿಯಬೇಕು. ಬಿಸಿಲಿನ ಝಳದಿಂದ ಯಾರಾದರೂ ಬಳಲಿದರೆ ಕೂಡಲೇ ಅವರಿಗೆ ತುರ್ತು ಚಿಕಿತ್ಸೆ ಕೊಡಿಸಬೇಕು.

ವರ್ಷದಿಂದ ವರ್ಷಕ್ಕೆ ಬಿಸಿಲು, ಮಳೆ ಮತ್ತು ಚಳಿಯ ಪ್ರಮಾಣ ಹೆಚ್ಚಾಗಲು ಪರಿಸರದ ವ್ಯತ್ಯಯಗಳು ಪ್ರಮುಖ ಕಾರಣ. ಮುಂದಿನ ಪೀಳಿಗೆಯ ಹಿತದೃಷ್ಟಿಯಿಂದ ವನ ಸಂಪತ್ತು ಹೆಚ್ಚಾಗಬೇಕಿದೆ. ಪರಿಸರ ಮಾಲಿನ್ಯವನ್ನು ತಡೆಗಟ್ಟುವ ನಿಟ್ಟಿನಲ್ಲಿ ಎಲ್ಲರೂ ಒಗ್ಗೂಡಿ ಕೆಲಸ ಮಾಡಬೇಕಿದೆ.