Vishwavani Editorial: ನಕಲಿ ಅಂಕಪಟ್ಟಿಗಳಿಗೆ ಕಡಿವಾಣ ಬೀಳಲಿ
ಕಳೆದ ವಾರವಷ್ಟೇ ಬೆಂಗಳೂರು ಸಿಸಿಬಿ ಪೊಲೀಸರು ಸರಕಾರದಿಂದ ಯಾವುದೇ ಮಾನ್ಯತೆ ಪಡೆಯದೆ ಕರ್ನಾಟಕ ಇನ್‌ಸ್ಟಿಟ್ಯೂಟ್ ಆಫ್ ಓಪನ್ ಸ್ಕೂಲಿಂಗ್ ಎಂಬ ಸಂಸ್ಥೆ ತೆರೆದು ಎಸ್‌ಎಸ್‌ಎಲ್‌ಸಿ ಮತ್ತು ಪಿಯುಸಿ ತತ್ಸಮಾನ ಎಂದು ನಮೂದಿಸಿ ನಕಲಿ ಅಂಕಪಟ್ಟಿಗಳನ್ನು ವಿತರಣೆ ಮಾಡುತ್ತಿದ್ದ ಜಾಲವೊಂದನ್ನು ಭೇದಿಸಿ ಮೂವರನ್ನು ಬಂಧಿಸಿದ್ದರು


ದೇಶದ ನಾನಾ ವಿಶ್ವವಿದ್ಯಾಲಯಗಳ ನಕಲಿ ಅಂಕಪಟ್ಟಿ ತಯಾರಿಸಿ ನಿರುದ್ಯೋಗಿ ಯುವಕ ರಿಗೆ ಮಾರಾಟ ಮಾಡುತ್ತಿದ್ದ ದೆಹಲಿ ಮೂಲದ ಆರೋಪಿಯನ್ನು ಕಲಬುರ್ಗಿ ಪೊಲೀಸರು ಬಂಧಿಸಿದ್ದಾರೆ. ದಂಧೆಯ ರೂವಾರಿ ಎನ್ನಲಾದ ರಾಜೀವ ಸಿಂಗ್ ಅರೋರಾನನ್ನು ದೆಹಲಿ ಯ ಆತನ ಅಪಾರ್ಟ್‌ಮೆಂಟ್‌ನಲ್ಲಿ ಬಂಧಿಸಲಾಗಿದೆ. ಕಳೆದ ಐದು ವರ್ಷಗಳಿಂದ ಈ ದಂಧೆ ಯಲ್ಲಿ ತೊಡಗಿದ್ದ ಅರೋರಾ ಬೆಂಗಳೂರು, ಮೈಸೂರು, ಕರ್ನಾಟಕ ಮುಕ್ತ ವಿಶ್ವವಿದ್ಯಾ ಲಯ ಸೇರಿದಂತೆ ರಾಜ್ಯದ ನಾನಾ ವಿವಿಗಳ ಹೆಸರಲ್ಲಿ ನಕಲಿ ಅಂಕಪಟ್ಟಿ ತಯಾರಿ ಮಾಡು ತ್ತಿದ್ದ ಎಂದು ಪೊಲೀಸರು ತಿಳಿಸಿದ್ದಾರೆ. ಆರೋಪಿ ಸುಮಾರು 85 ಬ್ಯಾಂಕ್ ಅಕೌಂಟ್ ಗಳನ್ನು ಹೊಂದಿದ್ದು, ಈತನ ಬಳಿ ಬರೋ ಬ್ಬರಿ 522 ನಕಲಿ ಅಂಕಪಟ್ಟಿಗಳು, 1626 ಖಾಲಿ ಅಂಕಪಟ್ಟಿಗಳು, 36 ಮೊಬೈಲ್, ವಿವಿಧ ವಿವಿಗಳ 122 ನಕಲಿ ಸೀಲ್ ಗಳು ಸಿಕ್ಕಿರುವುದು ಈ ಕರಾಳ ದಂಧೆಯ ವಿಸ್ತಾರವನ್ನು ಸೂಚಿಸುತ್ತದೆ.
ಇದನ್ನೂ ಓದಿ: Vishwavani Editorial: ಬಡಿದಾಡಲು ಜನರು ಚುನಾಯಿಸಿಲ್ಲ
ಕಳೆದ ವಾರವಷ್ಟೇ ಬೆಂಗಳೂರು ಸಿಸಿಬಿ ಪೊಲೀಸರು ಸರಕಾರದಿಂದ ಯಾವುದೇ ಮಾನ್ಯತೆ ಪಡೆಯದೆ ಕರ್ನಾಟಕ ಇನ್‌ಸ್ಟಿಟ್ಯೂಟ್ ಆಫ್ ಓಪನ್ ಸ್ಕೂಲಿಂಗ್ ಎಂಬ ಸಂಸ್ಥೆ ತೆರೆದು ಎಸ್‌ಎಸ್‌ಎಲ್‌ಸಿ ಮತ್ತು ಪಿಯುಸಿ ತತ್ಸಮಾನ ಎಂದು ನಮೂದಿಸಿ ನಕಲಿ ಅಂಕಪಟ್ಟಿ ಗಳನ್ನು ವಿತರಣೆ ಮಾಡುತ್ತಿದ್ದ ಜಾಲವೊಂದನ್ನು ಭೇದಿಸಿ ಮೂವರನ್ನು ಬಂಧಿಸಿದ್ದರು.
ಆರೋಪಿಗಳು ವೈಟಿಟಿ ಇನ್ ಸ್ಟಿಟ್ಯೂಟ್, ಇಗ್ನೈಟ್ ಗ್ರೂಪ್ ಆಫ್ ಇನ್‌ಸ್ಟಿಟ್ಯೂಟ್‌ನ ಹೆಸರಿ ನಲ್ಲಿ ಅನಧಿಕೃತ ಶಿಕ್ಷಣ ಸಂಸ್ಥೆಗಳನ್ನು ನಡೆಸುತ್ತಿದ್ದರು. ನಕಲಿ ಅಂಕಪಟ್ಟಿ, ನಕಲಿ ಶಿಕ್ಷಣ ಸಂಸ್ಥೆಗಳು, ನಕಲಿ ವಿವಿಗಳು, ನಕಲಿ ಡಾಕ್ಟರೇಟ್‌ಗಳ ಹಾವಳಿಯಿಂದ ನಮ್ಮ ಒಟ್ಟಾರೆ ಶಿಕ್ಷಣ ವ್ಯವಸ್ಥೆ ಕಲುಷಿತಗೊಂಡಿದೆ.
ಇಂತಹ ಸುದ್ದಿಗಳಿಂದ ನಮ್ಮ ವಿದ್ಯಾರ್ಥಿಗಳು ಮತ್ತು ಉದ್ಯೋಗಾಕಾಂಕ್ಷಿ ಯುವಕರು ವಿಚಲಿತರಾದರೆ ಅದು ಸಹಜ. ಒಂದೆಡೆ ವ್ಯಾಪಾರೀಕರಣಗೊಂಡ ದುಬಾರಿ ಶಿಕ್ಷಣ ವ್ಯವಸ್ಥೆ, ಇನ್ನೊಂದೆಡೆ ಸರಕಾರಿ ನೇಮಕಾತಿಯಲ್ಲಿನ ಭ್ರಷ್ಟಾಚಾರದಿಂದ ಯುವ ಜನತೆ ನಮ್ಮ ವ್ಯವಸ್ಥೆಯ ಮೇಲೆ ನಂಬಿಕೆ ಕಳೆದುಕೊಳ್ಳುತ್ತಿದ್ದಾರೆ. ಭ್ರಷ್ಟ ವ್ಯವಸ್ಥೆಯಿಂದ ರೋಸಿ ಹೋದ ಯುವ ಜನತೆ ದಾರಿ ತಪ್ಪುವ ಮುನ್ನ, ಶಿಕ್ಷಣ ಕ್ಷೇತ್ರದ ಈ ಅಪಸವ್ಯಗಳಿಗೆ ಕೊನೆ ಹಾಡಬೇಕು.
ಬಾಹ್ಯಾಕಾಶ ಕ್ಷೇತ್ರದಲ್ಲಿ ಇಡೀ ವಿಶ್ವ ಮೆಚ್ಚುವ ಸಾಧನೆಗೈದ ನಮಗೆ ಸುಧಾರಿತ ತಂತ್ರ ಜ್ಞಾನವಿರುವ ಈ ಯುಗದಲ್ಲಿ ನಕಲು ಮಾಡಲಾಗದ ಅಂಕಪಟ್ಟಿ ನೀಡುವುದು ಅಸಾಧ್ಯ ವೇನೂ ಅಲ್ಲ.