Vishwavani Editorial: ಡಿಜಿಟಲ್ ಗುಮ್ಮನ ಕಾಟ
ದೆಹಲಿಯ ವಯೋವೃದ್ಧ ವೈದ್ಯ ದಂಪತಿ ಇದಕ್ಕೆ ಬಲಿಪಶುವಾಗಿರುವುದು ‘ವರದಿಯಾಗಿರುವ’ ಇತ್ತೀಚಿನ ನಿದರ್ಶನ; ವರದಿಯಾಗದೇ ಇರುವುದು ಇನ್ನೆಷ್ಟೋ? ಇವರಿಬ್ಬರೂ ವಿಶ್ವಸಂಸ್ಥೆಗಾಗಿ ಅಮೆರಿಕದಲ್ಲಿ 48 ವರ್ಷಗಳ ಕಾಲ ವೈದ್ಯಕೀಯ ಸೇವೆಯಲ್ಲಿದ್ದು ನಿವೃತ್ತಿ ಬಳಿಕ ದೆಹಲಿಯಲ್ಲಿ ನೆಲೆಗೊಂಡು ಸಮಾಜಸೇವೆಯಲ್ಲಿ ತೊಡಗಿದ್ದವರು ಎನ್ನುತ್ತದೆ ಸುದ್ದಿ.
-
ದೇಶದ ಉದ್ದಗಲಕ್ಕೂ ಸಾಕಷ್ಟು ಅರಿವು ಮೂಡಿಸಿದ್ದರ ಹೊರತಾಗಿಯೂ ‘ಡಿಜಿಟಲ್ ಅರೆಸ್ಟ್’ಗೆ ಒಳಗಾಗುವವರ ಸಂಖ್ಯೆ ಹೆಚ್ಚುತ್ತಲೇ ಇದೆ. ದೆಹಲಿಯ ವಯೋವೃದ್ಧ ವೈದ್ಯ ದಂಪತಿ ಇದಕ್ಕೆ ಬಲಿಪಶುವಾಗಿರುವುದು ‘ವರದಿಯಾಗಿರುವ’ ಇತ್ತೀಚಿನ ನಿದರ್ಶನ; ವರದಿ ಯಾಗದೇ ಇರುವುದು ಇನ್ನೆಷ್ಟೋ? ಇವರಿಬ್ಬರೂ ವಿಶ್ವಸಂಸ್ಥೆಗಾಗಿ ಅಮೆರಿಕದಲ್ಲಿ 48 ವರ್ಷಗಳ ಕಾಲ ವೈದ್ಯಕೀಯ ಸೇವೆಯಲ್ಲಿದ್ದು ನಿವೃತ್ತಿ ಬಳಿಕ ದೆಹಲಿಯಲ್ಲಿ ನೆಲೆಗೊಂಡು ಸಮಾಜಸೇವೆಯಲ್ಲಿ ತೊಡಗಿದ್ದವರು ಎನ್ನುತ್ತದೆ ಸುದ್ದಿ.
ಇಂಥವರಿಗೆ ಕರೆ ಮಾಡಿ ‘ಅಕ್ರಮ ಹಣ ವರ್ಗಾವಣೆ ಮಾಡಿದ್ದರ ಪ್ರಯುಕ್ತ ನಿಮ್ಮಿಂದ ರಾಷ್ಟ್ರೀಯ ಭದ್ರತಾ ನಿಯಮಗಳ ಉಲ್ಲಂಘನೆಯಾಗಿದೆ’ ಎಂದು ಬೆದರಿಸಿ ಬರೋಬ್ಬರಿ 2 ವಾರಗಳ ಕಾಲ ಡಿಜಿಟಲ್ ಅರೆಸ್ಟ್‌ಗೆ ಒಳಪಡಿಸಿದ್ದಾರೆ ದುರುಳರು. ಈ ಅವಧಿಯಲ್ಲಿ ಸದರಿ ವೃದ್ಧದಂಪತಿಯು ಹಂತಹಂತವಾಗಿ ಕಳೆದುಕೊಂಡಿರುವ ಹಣದ ಪ್ರಮಾಣ 15 ಕೋಟಿ ರುಪಾಯಿ!
ಇದನ್ನೂ ಓದಿ: Vishwavani Editorial: ಸಂತನ ಆತ್ಮ ರೋದಿಸುತ್ತಿದೆ...
ಪ್ರಾಯಶಃ ಇದು ಆ ದಂಪತಿಯ ಒಂದಿಡೀ ಜೀವಮಾನದ ಗಳಿಕೆ ಆಗಿದ್ದಿರಲಿಕ್ಕೂ ಸಾಕು. ಅಷ್ಟೂ ಮೊತ್ತವು ಇಡುಗಂಟಾಗಿ ಪರರ ದೋಚುವಿಕೆಗೆ ಒಳಗಾಯಿತು ಎಂದರೆ, ಜೀವನದ ಸಂಧ್ಯಾಕಾಲದಲ್ಲಿ ಆ ದಂಪತಿಗೆ ಅದಿನ್ನೆಂಥಾ ಆಘಾತವಾಗಿರಬೇಕು!
ಇಂಥ ವೃದ್ಧರು ಹಾಗೂ ಅಮಾಯಕರನ್ನೇ ತಮ್ಮ ವಂಚನೆಗೆ ಬಲಿಪಶುಗಳನ್ನಾಗಿಸಿ ಕೊಳ್ಳುವ ದುರುಳರ ಹೆಡೆಮುರಿ ಕಟ್ಟುವಂಥ ನಿಷ್ಠುರ ಕ್ರಮಗಳು ಇನ್ನೂ ಕಾರ್ಯರೂಪಕ್ಕೆ ಬರದಿರುವುದು ಇಂಥವರನ್ನು ರಕ್ತಬೀಜಾಸುರನ ಸಂತತಿಯನ್ನಾಗಿಸಿದೆ ಎನ್ನಲಡ್ಡಿಯಿಲ್ಲ.
ಎಲ್ಲಕ್ಕಿಂತ ಮಿಗಿಲಾಗಿ, ಸಾಕಷ್ಟು ವಿದ್ಯಾವಂತರು ಹಾಗೂ ವ್ಯಾವಹಾರಿಕ ಜ್ಞಾನವಿರು ವವರೇ ದುರುಳರ ಇಂಥ ಸಂಚಿಗೆ ಬಲಿಯಾದರೆ, ಮಿಕ್ಕ ಸಾಮಾನ್ಯರ ಪಾಡೇನು? ಎಂಬು ದಿಲ್ಲಿ ಪ್ರಶ್ನೆ. ಆಳುಗರು ಇನ್ನಾದರೂ ನಿಷ್ಠುರ ಕ್ರಮಕ್ಕೆ ಮುಂದಾಗಲಿ...