ವಕ್ಫ್​ ತಿದ್ದುಪಡಿ ಮಸೂದೆ ಐಪಿಎಲ್​ ಸುನಿತಾ ವಿಲಿಯಮ್ಸ್​ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Vishwavani Editorial: ಆಗ ಯುವರಾಜ, ಈಗ ಎ.ರಾಜಾ!

ಎ.ರಾಜಾ ಅವರು ಪಕ್ಷದ ಕಾರ್ಯಕರ್ತರನ್ನು ಉದ್ದೇಶಿಸಿ ಮೊನ್ನೆ ಮಾತನಾಡುತ್ತಾ, “ಹಿಂದೂ ಧರ್ಮದ ಸಂಕೇತಗಳು, ಚಿಹ್ನೆಗಳನ್ನು ಧರಿಸಬೇಡಿ. ತಿಲಕ-ಕೇಸರಿಗಳನ್ನು ತ್ಯಜಿಸಿ, ಸಂಗಳಿಗಿಂತ ಭಿನ್ನವಾಗಿರಿ" ಎಂದು ಕರೆ ನೀಡಿದ್ದಾರೆ. ಪಕ್ಷದ ನಾಯಕರು ಭಾಗವಹಿಸುವ ಯಾವುದೇ ಕಾರ್ಯಕ್ರಮದಲ್ಲೂ ಕಾರ್ಯ ಕರ್ತರು ಹೀಗೇ ನಡೆದು ಕೊಳ್ಳಬೇಕು ಎಂಬುದು ರಾಜಾ ಅವರು ಹೊರಡಿಸಿರುವ ಫರ್ಮಾನು!

ಆಗ ಯುವರಾಜ, ಈಗ ಎ.ರಾಜಾ!

ಹಾಲಿ ಸಂಸದ ಮತ್ತು ಡಿಎಂಕೆ ಪಕ್ಷದ ಪ್ರಧಾನ ಕಾರ್ಯದರ್ಶಿ ಎ.ರಾಜಾ

Profile Ashok Nayak Apr 4, 2025 4:48 AM

ಸನಾತನಿಗಳನ್ನು ಮತ್ತು ಸನಾತನ ಧರ್ಮವನ್ನು ಕಾಲಾನುಕಾಲಕ್ಕೆ ಹೀಗಳೆಯದಿದ್ದರೆ ಕೆಲವರಿಗೆ ತಿಂದ ಅನ್ನ ಅರಗುವುದಿಲ್ಲ, ಕಣ್ಣಿಗೆ ನಿದ್ರೆ ಹತ್ತುವುದಿಲ್ಲ ಎನಿಸುತ್ತದೆ. ಈ ಮಾತಿಗೆ ಇತ್ತೀಚಿನ ಎರಡು ಉದಾಹರಣೆಗಳು- ತಮಿಳುನಾಡಿನ ಉಪಮುಖ್ಯಮಂತ್ರಿ ಉದಯನಿಧಿ ಸ್ಟಾಲಿನ್ ಮತ್ತು ಕೇಂದ್ರದ ಮಾಜಿ ಸಚಿವ, ಹಾಲಿ ಸಂಸದ ಮತ್ತು ಡಿಎಂಕೆ ಪಕ್ಷದ ಪ್ರಧಾನ ಕಾರ್ಯದರ್ಶಿ ಎ.ರಾಜಾ. ತಮಿಳು ನಾಡಿನ ‘ಯುವರಾಜ’ರೆಂದೇ ಅವರಿವರಿಂದ ಕರೆಸಿಕೊಳ್ಳುವ ಉದಯನಿಧಿಯವರು 2023ರ ಸೆಪ್ಟೆಂ ಬರ್ ನಲ್ಲಿ ಸಮಾವೇಶವೊಂದರಲ್ಲಿ ಮಾತನಾಡುತ್ತಾ, “ಸನಾತನ ಧರ್ಮವು ಸಾಮಾಜಿಕ ನ್ಯಾಯ ಮತ್ತು ಸಮಾನತೆಗೆ ವಿರುದ್ಧವಾಗಿದ್ದು, ಅದನ್ನು ನಿರ್ಮೂಲನೆ ಮಾಡಬೇಕು" ಎಂಬ ಆಣಿಮುತ್ತನ್ನು ಉದುರಿಸಿದ್ದರ ಜತೆಗೆ ಸನಾತನ ಧರ್ಮವನ್ನು ಕರೋನಾ, ಮಲೇರಿಯಾ ಮತ್ತು ಡೆಂಘೀ ಕಾಯಿಲೆ ಗಳಿಗೂ ಹೋಲಿಸಿದ್ದರು.

ಇದನ್ನೂ ಓದಿ: Vishwavani Editorial: ಭಿನ್ನ ಮಕ್ಕಳ ಬಗ್ಗೆ ಕಾಳಜಿ ಇರಲಿ

ಈ ಮಾತಿನ ಮುಂದುವರಿದ ಭಾಗವೋ ಎಂಬಂತೆ ಎ.ರಾಜಾ ಅವರು ಪಕ್ಷದ ಕಾರ್ಯಕರ್ತರನ್ನು ಉದ್ದೇಶಿಸಿ ಮೊನ್ನೆ ಮಾತನಾಡುತ್ತಾ, “ಹಿಂದೂ ಧರ್ಮದ ಸಂಕೇತಗಳು, ಚಿಹ್ನೆಗಳನ್ನು ಧರಿಸಬೇಡಿ. ತಿಲಕ-ಕೇಸರಿಗಳನ್ನು ತ್ಯಜಿಸಿ, ಸಂಗಳಿಗಿಂತ ಭಿನ್ನವಾಗಿರಿ" ಎಂದು ಕರೆ ನೀಡಿದ್ದಾರೆ. ಪಕ್ಷದ ನಾಯಕರು ಭಾಗವಹಿಸುವ ಯಾವುದೇ ಕಾರ್ಯಕ್ರಮದಲ್ಲೂ ಕಾರ್ಯಕರ್ತರು ಹೀಗೇ ನಡೆದು ಕೊಳ್ಳಬೇಕು ಎಂಬುದು ರಾಜಾ ಅವರು ಹೊರಡಿಸಿರುವ ಫರ್ಮಾನು!

ಈ ಯುವರಾಜರು ಮತ್ತು ರಾಜರ ಮಾತುಗಳನ್ನು ಕೇಳುತ್ತಿದ್ದರೆ, ಇದು ಅಸಹಿಷ್ಣುತೆಯ ಪರಮಾ ವಧಿಯೋ ಅಥವಾ ಅವಿವೇಕದ ಬಹಿರಂಗ ಪ್ರದರ್ಶನವೋ? ಎಂಬ ಪ್ರಶ್ನೆ ಮೂಡುವುದರಲ್ಲಿ ಅಚ್ಚರಿಯಿಲ್ಲ. ಕಾರಣ, ಒಂದು ವಯೋಮಾನವನ್ನು ದಾಟಿದ ನಂತರ ವ್ಯಕ್ತಿಗಳು, ಅದರಲ್ಲೂ ನಿರ್ದಿಷ್ಟವಾಗಿ ಸಾರ್ವಜನಿಕ ಜೀವನದಲ್ಲಿ ಇರುವಂಥವರು/ಆಯಕಟ್ಟಿನ ಜಾಗಗಳನ್ನು ಅಲಂಕರಿ ಸಿರುವವರು ತಮ್ಮ ಮಾತು ಹಾಗೂ ಕೃತಿಗಳಲ್ಲಿ ಪ್ರಬುದ್ಧರಾಗುತ್ತಾ ಹೋಗಬೇಕಾಗುತ್ತದೆ. ಆದರೆ ಮೇಲಿನ ಎರಡು ನಿದರ್ಶನಗಳಲ್ಲಿ ಕಾಣಬರುವುದು ವ್ಯತಿರಿಕ್ತ ಬೆಳವಣಿಗೆ. ಸನಾತನ ಧರ್ಮವು ಜನಿಸಿದ ಭೂಮಿಯಲ್ಲೇ ಅದರ ಕುರಿತು ಹೀಗೆ ವಿಷ ಕಾರುವ ವರ್ತನೆಯನ್ನು ‘ಸಮಾಜದ ಸ್ವಾಸ್ಥ್ಯವನ್ನು ಕೆಡಿಸುವ’ ಯತ್ನ ಎನ್ನದೆ ವಿಧಿಯಿಲ್ಲ...