BBK 12: ಬಿಗ್ ಬಾಸ್ ಮೊದಲ ಫಿನಾಲೆಯಲ್ಲಿ ಎಲಿಮಿನೇಟ್ ಆಗೋದು ಎಷ್ಟು ಮಂದಿ: ಇಲ್ಲಿದೆ ಮಾಹಿತಿ
ಇದೇ ಶನಿವಾರ ಹಾಗೂ ಭಾನುವಾರ ಅಕ್ಟೋಬರ್ 18 ಮತ್ತು 19 ರಂದು ರಾತ್ರಿ 8 ರಿಂದ 11 ಗಂಟೆಗಳವರೆಗೆ ಮಿಡ್ ಸೀಸನ್ ಫಿನಾಲೆ ಪ್ರಸಾರ ಕಾಣಲಿದೆ. ಈ ಸಂದರ್ಭದಲ್ಲಿ ಒಂದಲ್ಲ, ಎರಡಲ್ಲ ಬರೋಬ್ಬರಿ 7 ಮಂದಿ ಎಲಿಮಿನೇಟ್ ಆಗುವ ಸಾಧ್ಯತೆ ಇದೆ ಎಂದು ಹೇಳಲಾಗಿದೆ.

BBK 12 1st Final -

ಬಿಗ್ ಬಾಸ್ ಕನ್ನಡ ಸೀಸನ್ 12 ರಲ್ಲಿ (Bigg Boss kannada 12) ಮೊದಲ ಫಿನಾಲೆಗೆ ಕ್ಷಣಗಣನೆ ಶುರುವಾಗಿದೆ. ಇದೇ ಶನಿವಾರ ಹಾಗೂ ಭಾನುವಾರ ಈ ಸೀಸನ್ನ ಮೊದಲ ಫಿನಾಲೆ ನಡೆಯಲಿದೆ. ಈಗಾಗಲೇ ಕಾಕ್ರೋಚ್ ಸುಧಿ, ಅಶ್ವಿನಿ ಗೌಡ, ಸ್ಪಂದನಾ ಸೋಮಣ್ಣ ಹಾಗೂ ಮಾಲು ಫೈನಲಿಸ್ಟ್ ಆಗಿದ್ದಾರೆ. ಈ ನಾಲ್ವರನ್ನು ಬಿಟ್ಟು ಮನೆಯೊಳಗಿರುವ ಎಲ್ಲ 13 ಕಂಟೆಸ್ಟೆಂಟ್ಸ್ ನಾಮಿನೇಟ್ ಆಗಿದ್ದಾರೆ. ಇವರಲ್ಲಿ ಯಾರು ಉಳಿಯುತ್ತಾರೆ ಎಂಬುದು ಕುತೂಹಲ ಮೂಡಿಸಿದೆ. ಯಾಕೆಂದರೆ ಮಿಡ್ ಸೀಸನ್ ಫಿನಾಲೆಯಲ್ಲಿ ಮಾಸ್ ಎಲಿಮಿನೇಷನ್ ನಡೆಯಲಿದೆ.
ಅಕ್ಟೋಬರ್ 18 ಮತ್ತು 19 ರಂದು ರಾತ್ರಿ 8 ರಿಂದ 11 ಗಂಟೆಗಳವರೆಗೆ ಮಿಡ್ ಸೀಸನ್ ಫಿನಾಲೆ ಪ್ರಸಾರ ಕಾಣಲಿದೆ. ಈ ಸಂದರ್ಭದಲ್ಲಿ ಒಂದಲ್ಲ, ಎರಡಲ್ಲ ಬರೋಬ್ಬರಿ 7 ಮಂದಿ ಎಲಿಮಿನೇಟ್ ಆಗುವ ಸಾಧ್ಯತೆ ಇದೆ ಎಂದು ಹೇಳಲಾಗಿದೆ. ಇದು ಅನೇಕರಿಗೆ ಶಾಕಿಂಗ್ ಎನಿಸಿದೆ. ಸದ್ಯ ಬಿಗ್ ಬಾಸ್ ಮನೆಯಲ್ಲಿ 17 ಮಂದಿ ಇದ್ದಾರೆ. ಅದರಲ್ಲಿ ಏಳು ಮಂದಿ ಎಲಿಮಿನೇಟ್ ಆದರೆ ಉಳಿಯುವುದು ಕೇವಲ 10 ಮಂದಿ ಮಾತ್ರ.
7 ಮಂದಿ ಎಲಿಮಿನೇಟ್ ಆದ ಕೂಡಲೇ ಅಷ್ಟೇ ಮಂದಿ ವೈಲ್ಡ್ ಕಾರ್ಡ್ ಮೂಲಕ ಮನೆಯೊಳಗೆ ಎಂಟ್ರಿ ಕೊಡಲಿದ್ದಾರೆ ಎಂದು ಹೇಳಲಾಗಿದೆ. ಆದರೆ, ಯಾರೆಲ್ಲ ಎಂಬುದು ರಿವೀಲ್ ಆಗಿಲ್ಲ. ಸೋಷಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿರುವ ಮಾಹಿತಿಯ ಪ್ರಕಾರ, ವಿಜಯ್ ಸೂರ್ಯ, ಶ್ವೇತಾ ಪ್ರಸಾದ್, ದೇವಿಕಾ ಭಟ್ ವೈಲ್ಡ್ ಕಾರ್ಡ್ ಮೂಲಕ ಮನೆಯೊಳಗೆ ಹೋಗಲಿದ್ದಾರಂತೆ. ಇನ್ನು ಫಿನಾಲೆಯಲ್ಲಿ ಗೆಸ್ಟ್ ಆಗಿ ಅರವಿಂದ್ ಕೆಪಿ ಹಾಗೂ ದಿವ್ಯಾ ಉರುಡುಗ ಆಗಮಿಸಲಿದ್ದಾರೆ ಎಂದು ಹೇಳಲಾಗಿದೆ.
ಬಿಗ್ ಬಾಸ್ ಕನ್ನಡ 12 ಮೊದಲ ಫಿನಾಲೆ ಪ್ರೋಮೋ:
ಇಂದು ಮಿಡ್ ವೀಕೆ ಎಲಿಮಿನೇಷನ್?:
ಈ ವಾರದ ಮಾಸ್ ಎವಿಕ್ಷನ್ನ ಮೊದಲ ಭಾಗವಾಗಿ ಬಿಗ್ ಬಾಸ್ ಮನೆಯಲ್ಲಿ ಮಿಡ್ ವೀಕ್ ಎಲಿಮಿನೇಷನ್ ನಡೆದಿದೆಯಂತೆ. ಇದರಲ್ಲಿ ಒಬ್ಬರಲ್ಲ ಇಬ್ಬರು ಸ್ಪರ್ಧಿಗಳು ದೊಡ್ಮನೆಯಿಂದ ಔಟ್ ಆಗಿದ್ದಾರೆ ಎಂಬ ಮಾಹಿತಿ ಹರಿದಾಡುತ್ತಿದೆ. ಡಾಗ್ ಸತೀಶ್ ಹಾಗೂ ಮಂಜು ಭಾಷಿಣಿ ಮಿಡ್ ವೀಕ್ ಎಲಿಮಿನೇಷನ್ನಲ್ಲಿ ಮನೆಯಿಂದ ಹೊರಬಂದಿದ್ದಾರೆ. ಈ ಎಲಿಮಿನೇಷನ್ ಪ್ರಕ್ರಿಯೆಯ ಎಪಿಸೋಡ್ ಇಂದು ಪ್ರಸಾರ ಕಾಣಲಿದೆ.
BBK 12: ನಡುರಾತ್ರಿ ಬೆಚ್ಚಿಬಿದ್ದ ಬಿಗ್ ಬಾಸ್ ಸ್ಪರ್ಧಿಗಳು: ಕೇಳಿಸಿದ ಆ ಸದ್ದು ಏನು?