ಸಿಎಸ್‌ಕೆ ತಂಡದಲ್ಲಿ ಧೋನಿಗಿಂತ ಹೆಚ್ಚು ಸಂಭಾವನೆ ಪಡೆಯುವ ಆಟಗಾರರಿವರು!
IPL 2026: ಈ ಬಾರಿಯ ಹರಾಜಿನಲ್ಲಿ ಅನ್‌ಕ್ಯಾಪ್ಡ್ ಆಟಗಾರರಾದ ಪ್ರಶಾಂತ್ ವೀರ್ ಮತ್ತು ಕಾರ್ತಿಕ್ ಶರ್ಮಾ ಅವರಿಗೆ ಸಿಎಸ್‌ಕೆ ತಂಡ ತಲಾ 14.20 ಕೋಟಿ ರು. ಕೊಟ್ಟು ಖರೀದಿಸಿದೆ. ಧೋನಿ ಅವರಿಗಿಂತಲೂ ಈ ಇಬ್ಬರ ಆಟಗಾರರ ಸಂಭಾವನೆ 10.20 ರು. ಹೆಚ್ಚಿದೆ.
ms dhoni -
ಚೆನ್ನೈ, ಡಿ.18: ಚೆನ್ನೈ ಸೂಪರ್ ಕಿಂಗ್ಸ್(CSK) ತಂಡದ ತಾರಾ ಆಟಗಾರ ಮಹೇಂದ್ರ ಸಿಂಗ್ ಧೋನಿ(MS Dhoni) ಅವರು 2026(IPL 2026)ರಲ್ಲಿ ಇಂಡಿಯನ್ ಪ್ರೀಮಿಯರ್ ಲೀಗ್‌ನಲ್ಲಿ(ಐಪಿಎಲ್) ಸಿಎಸ್‌ಕೆ ತಂಡದಲ್ಲಿ ಆಡವುದು ಈಗಾಗಲೇ ಖಚಿತವಾಗಿದೆ. ಐಪಿಎಲ್ ಮುಂದಿನ ಆವೃತ್ತಿಗೆ ಧೋನಿ ಅವರು ಲಭ್ಯವಿರುವುದಾಗಿ ಸಿಎಸ್‌ಕೆ ತಂಡದ ಸಿಇಒ ಕಾಶಿ ವಿಶ್ವನಾಥ ಸ್ಪಷ್ಟಪಡಿಸಿದ್ದಾರೆ.
2008ರಿಂದಲೂ ಸಿಎಸ್‌ಕೆ ಭಾಗವಾಗಿರುವ ಧೋನಿ, ತಂಡದ ಪರವಾಗಿ 248 ಪಂದ್ಯಗಳನ್ನು ಆಡಿದ್ದಾರೆ. ನಾಯಕರಾಗಿ ಐದು ಬಾರಿ ಪ್ರಶಸ್ತಿಗೆ ಮುತ್ತಿಟ್ಟಿದ್ದಾರೆ. ಒಂದು ಕಾಲದಲ್ಲಿ ಸಿಎಸ್‌ಕೆ ತಂಡದಲ್ಲಿ ಅತಿ ಹೆಚ್ಚು ಸಂಭಾವನೆ ಪಡೆಯುತ್ತಿದ್ದ ಧೋನಿ ಪ್ರಸ್ತುತ ಐಪಿಎಲ್‌ನಲ್ಲಿ 4 ಕೋಟಿ ರು. ಸಂಭಾವನೆ ಪಡೆಯುತ್ತಿದ್ದಾರೆ. ಈ ಬಾರಿಯ ಐಪಿಎಲ್‌ನಲ್ಲಿ ಸಂಜು ಸ್ಯಾಮ್ಸನ್ ಮತ್ತು ಋತುರಾಜ್ ಗಾಯಕ್ವಾಡ್ ಸೇರಿದಂತೆ 8 ಮಂದಿ ಆಟಗಾರರು ತಂಡದಲ್ಲಿ ಧೋನಿ ಅವರಿಗಿಂತಲೂ ಹೆಚ್ಚು ಹಣ ಪಡೆಯಲಿದ್ದಾರೆ. ಈ ಆಟಗಾರರು ಯಾರು ಎಂಬ ವರದಿ ಇಲ್ಲಿದೆ.
ಐಪಿಎಲ್ 2026ರಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡದ ಪರ ಸಂಜು ಸ್ಯಾಮ್ಸನ್ ಮತ್ತು ಋತುರಾಜ್ ಗಾಯಕ್ವಾಡ್ ತಲಾ 18 ಕೋಟಿ ರು. ಪಡೆಯುವ ಮೂಲಕ ಅತಿ ಹೆಚ್ಚು ಆದಾಯ ಗಳಿಸುವ ಆಟಗಾರರಾಗಿದ್ದಾರೆ. ಋತುರಾಜ್ ಗಾಯಕ್ವಾಡ್ 2019ರಿಂದ ಸಿಎಸ್‌ಕೆ ತಂಡದಲ್ಲಿದ್ದು, 2024ರ ಆವೃತ್ತಿಯಲ್ಲಿ ಅವರು ತಂಡದ ನಾಯಕತ್ವದ ಜವಬ್ದಾರಿ ವಹಿಸಿಕೊಂಡಿದ್ದರು. ಐಪಿಎಲ್ 2025ರ ಮೆಗಾ ಹರಾಜಿಗೂ ಮುನ್ನ ಸಿಎಸ್‌ಕೆ ಫ್ರಾಂಚೈಸಿ ಅವರನ್ನು ಉಳಿಸಿಕೊಂಡಿತು.
ಇದನ್ನೂ ಓದಿ ಹರಾಜಿನ ಬೆನ್ನಲ್ಲೇ ಕೆಕೆಆರ್ ತಂಡಕ್ಕೆ ಬಾಂಗ್ಲಾ ಸ್ಟಾರ್ ವೇಗಿ ಅಲಭ್ಯ!
2025ರ ಮೆಗಾ ಹರಾಜಿಗೂ ಮುನ್ನ ಶಿವಂ ದುಬೆ ಅವರನ್ನು ಸಿಎಸ್‌ಕೆ ತಂಡ 12 ಕೋಟಿ ರು.ಗಳಿಗೆ ಉಳಿಸಿಕೊಂಡಿತ್ತು. ಅದೇ ಮೆಗಾ ಹರಾಜಿನಲ್ಲಿ ಖಲೀಲ್ ಅಹ್ಮದ್ ಅವರನ್ನು 4.80 ಕೋಟಿ, ನೂರ್ ಅಹ್ಮದ್ 10 ಕೋಟಿ ರು.ಗಳಿಗೆ ಸಿಎಸ್‌ಕೆ ತಂಡ ಸೇರಿಕೊಂಡಿದ್ದರು. ಇನ್ನು ಈ ಬಾರಿಯ ಹರಾಜಿನಲ್ಲಿ ಅನ್‌ಕ್ಯಾಪ್ಡ್ ಆಟಗಾರರಾದ ಪ್ರಶಾಂತ್ ವೀರ್ ಮತ್ತು ಕಾರ್ತಿಕ್ ಶರ್ಮಾ ಅವರಿಗೆ ಸಿಎಸ್‌ಕೆ ತಂಡ ತಲಾ 14.20 ಕೋಟಿ ರು. ಕೊಟ್ಟು ಖರೀದಿಸಿದೆ. ಧೋನಿ ಅವರಿಗಿಂತಲೂ ಈ ಇಬ್ಬರ ಆಟಗಾರರ ಸಂಭಾವನೆ 10.20 ರು. ಹೆಚ್ಚಿದೆ. ಬಳಿಕ ಸ್ಪಿನ್ನರ್ ರಾಹುಲ್ ಚಹರ್ ಈ ಬಾರಿ 5.20 ಕೋಟಿಗೆ ಸಿಎಸ್‌ಕೆ ತಂಡದ ಪಾಲಾಗಿದ್ದು, ಧೋನಿ ಅವರಿಗಿಂತಲೂ 1.20 ಕೋಟಿ ಹೆಚ್ಚು ಸಂಭಾವನೆ ಪಡೆಯುವ ಆಟಗಾರರಾಗಿದ್ದಾರೆ.
ಸಿಎಸ್‌ಕೆ ತಂಡದಲ್ಲಿ ಹೆಚ್ಚು ಸಂಭಾವನೆ ಪಡೆಯುವ ಆಟಗಾರರು
ಸಂಜು ಸ್ಯಾಮ್ಸನ್8- 18 ಕೋಟಿ ರು.
ಋತುರಾಜ್ ಗಾಯಕ್ವಾಡ್- 18 ಕೋಟಿ ರು.
ಶಿವಂ ದುಬೆ- 12 ಕೋಟಿ ರು.
ಖಲೀಲ್ ಅಹ್ಮದ್- 4.80 ಕೋಟಿ ರು.
ರಾಹುಲ್ ಚಹರ್- 5.20 ಕೋಟಿ ರು.
ಪ್ರಶಾಂತ್ ವೀರ್- 14.20 ಕೋಟಿ ರು.
ಕಾರ್ತಿಕ್ ಶರ್ಮಾ- 14.20 ಕೋಟಿ ರು.
ನೂರ್ ಅಹ್ಮದ್- 10 ಕೋಟಿ ರು.
ಸಿಎಸ್‌ಕೆ ತಂಡ
ಆಯುಷ್ ಮ್ಹಾತ್ರೆ, ಡೆವಾಲ್ಡ್ ಬ್ರೆವಿಸ್, ರಾಮಕೃಷ್ಣ ಘೋಷ್, ಶಿವಂ ದುಬೆ, ಎಂ.ಎಸ್. ಧೋನಿ, ಉರ್ವಿಲ್ ಪಟೇಲ್, ಅನ್ಶುಲ್ ಕಾಂಬೋಜ್, ಖಲೀಲ್ ಅಹ್ಮದ್, ಮುಖೇಶ್ ಚೌಧರಿ, ನಾಥನ್ ಎಲ್ಲಿಸ್, ನೂರ್ ಅಹ್ಮದ್, ಆಂಡ್ರೆ ಸಿದ್ಧಾರ್ಥ್, ಶ್ರೇಯಸ್ ಗೋಪಾಲ್, ಸಂಜು ಸ್ಯಾಮ್ಸನ್,ಕಾರ್ತಿಕ್ ಶರ್ಮಾ, ಮ್ಯಾಥ್ಯೂ ಶಾರ್ಟ್, ಅಮನ್ ಖಾನ್, ರಾಹುಲ್ ಚಾಹರ್, ಸರ್ಫರಾಜ್ ಖಾನ್, ಝಾಕ್ ಫೌಲ್ಕ್ಸ್, ಪ್ರಶಾಂತ್ ವೀರ್.