ಅಭಿಷೇಕ್ ಔಟ್?, ಸ್ಯಾಮ್ಸನ್ ಇನ್?: ನಮೀಬಿಯಾ ಪಂದ್ಯಕ್ಕೆ ಭಾರತ ಸಂಭಾವ್ಯ ತಂಡ ಹೀಗಿದೆ
India vs Namibia: ವಾಷಿಂಗ್ಟನ್ ಸುಂದರ್ ಅವರ ಮರಳುವಿಕೆ ರಿಂಕು ಸಿಂಗ್ ಮತ್ತು ಶಿವಂ ದುಬೆ ಅವರ ಮೇಲೆ ಒತ್ತಡ ಹೇರಬಹುದು ಆದರೆ ತಮಿಳುನಾಡಿನ ಆಟಗಾರ ತಂಡದ ನಿರ್ವಹಣೆಗೆ ತಮ್ಮ ಫಿಟ್ನೆಸ್ ಅನ್ನು ಸಾಬೀತುಪಡಿಸಬೇಕಿರುವ ಕಾರಣ ಇಬ್ಬರೂ ಕನಿಷ್ಠ ಇನ್ನೊಂದು ಪಂದ್ಯಕ್ಕಾದರೂ ಮುಂದುವರಿಯಬೇಕು.
Abhishek and Samson -
ನವದೆಹಲಿ, ಫೆ.11: 2026ರ ಟಿ20 ವಿಶ್ವಕಪ್(T20 WC)ನ ಉದ್ಘಾಟನಾ ಪಂದ್ಯದಲ್ಲಿ ಅಮೆರಿಕವನ್ನು 28 ರನ್‌ಗಳಿಂದ ಸೋಲಿಸಿದ ನಂತರ, ಭಾರತ ಈಗ ಫೆಬ್ರವರಿ 12 ರಂದು ನವದೆಹಲಿಯ ಅರುಣ್ ಜೇಟ್ಲಿ ಕ್ರೀಡಾಂಗಣದಲ್ಲಿ ನಮೀಬಿಯಾ(India vs Namibia)ವನ್ನು ಎದುರಿಸಲಿದೆ. ಈ ಪಂದ್ಯದಲ್ಲಿ ಕೇರಳದ ಸ್ಟಂಪರ್ ಸಂಜು ಸ್ಯಾಮ್ಸನ್ ಆಡುವ ಸಾಧ್ಯತೆ ಇದೆ.
ತೀವ್ರ ಹೊಟ್ಟೆಯ ಸೋಂಕಿನಿಂದ ಬಳಲುತ್ತಿರುವ ಆರಂಭಿಕ ಆಟಗಾರ ಅಭಿಷೇಕ್ ಶರ್ಮಾ ದೆಹಲಿಯಲ್ಲಿ ಆಸ್ಪತ್ರೆಗೆ ದಾಖಲಾಗಿದ್ದಾರೆ. ಅವರ ಆರೋಗ್ಯದ ಬಗ್ಗೆ ಇನ್ನೂ ಅಧಿಕೃತ ಮಾಹಿತಿ ಲಭ್ಯವಿಲ್ಲ. ತಂಡದ ಸಹಾಯಕ ಕೋಚ್ ರಯಾನ್ ಟೆನ್ ಡೋಸ್ಚೇಟ್, ಅಭಿಷೇಕ್ ಶರ್ಮಾ ಮಂಗಳವಾರ (ಫೆಬ್ರವರಿ 10) ರವರೆಗೆ ಇನ್ನೂ ಅನಾರೋಗ್ಯದಿಂದ ಬಳಲುತ್ತಿದ್ದಾರೆ ಮತ್ತು ಬುಮ್ರಾ ಕೂಡ ಬೌಲಿಂಗ್ ಮಾಡಿಲ್ಲ ಎಂದು ಹೇಳಿದ್ದರು. ಹೀಗಾಗಿ ಅಭಿಷೇಕ್‌ಗೆ ವಿಶ್ರಾಂತಿ ನೀಡಿ ಅವರ ಸ್ಥಾನದಲ್ಲಿ ಸಂಜು ಆಡಿಸುವ ಸಾಧ್ಯತೆ ಹೆಚ್ಚಿದೆ.
ಕಳೆದ ನ್ಯೂಜಿಲ್ಯಾಂಡ್ ಟಿ20 ಸರಣಿಯಲ್ಲಿ ಸಂಜು ಸಂಪೂರ್ಣ ವಿಫಲರಾಗಿದ್ದರು. ಇದೇ ಕಾರಣಕ್ಕೆ ಅವರ ಜಾಗದಲ್ಲಿ ಇಶಾನ್ ಇಶನ್‌ಗೆ ಅವಕಾಶ ನೀಡಲಾಗಿದೆ. ಇನ್ನೊಂದೆಡೆ ವಾಷಿಂಗ್ಟನ್ ಸುಂದರ್ ಅವರ ಮರಳುವಿಕೆ ರಿಂಕು ಸಿಂಗ್ ಮತ್ತು ಶಿವಂ ದುಬೆ ಅವರ ಮೇಲೆ ಒತ್ತಡ ಹೇರಬಹುದು ಆದರೆ ತಮಿಳುನಾಡಿನ ಆಟಗಾರ ತಂಡದ ನಿರ್ವಹಣೆಗೆ ತಮ್ಮ ಫಿಟ್ನೆಸ್ ಅನ್ನು ಸಾಬೀತುಪಡಿಸಬೇಕಿರುವ ಕಾರಣ ಇಬ್ಬರೂ ಕನಿಷ್ಠ ಇನ್ನೊಂದು ಪಂದ್ಯಕ್ಕಾದರೂ ಮುಂದುವರಿಯಬೇಕು.
ಭಾರತದ ವಿರುದ್ಧ ಆಡಲು 3 ಷರತ್ತು ವಿಧಿಸಿದ ಪಾಕಿಸ್ತಾನ! ಫೆ. 15 ಕ್ಕೆ ನಡೆಯುತ್ತಾ ಹೈವೋಲ್ಟೇಜ್ ಮ್ಯಾಚ್ ?
ತೀವ್ರ ಜ್ವರದ ಕಾರಣ ಅಮೆರಿಕ ವಿರುದ್ಧ ಪಂದ್ಯ ಆಡದ ಜಸ್‌ಪ್ರೀತ್ ಬುಮ್ರಾ ದ್ವಿತೀಯ ಪಂದ್ಯದಲ್ಲಿ ಆಡಲಿದ್ದಾರಾ ಎಂದು ಕಾದು ನೋಡಬೇಕಿದೆ. ಒಂದೊಮ್ಮೆ ಜಸ್‌ಪ್ರೀತ್ ಆಡಿದರೆ ಅವರಿಗಾಗಿ ಅರ್ಶ್‌ದೀಪ್ ಸಿಂಗ್ ಜಾಗ ಬಿಡಬೇಕಾಗಬಹುದು. ಏಕೆಂದರೆ ಹರ್ಷಿತ್ ರಾಣಾ ಬದಲು ತಂಡ ಸೇರಿರುವ ಮೊಹಮ್ಮದ್ ಸಿರಾಜ್ ಅಮೆರಿಕ ವಿರುದ್ಧ ಅತ್ಯಮೋಘ ಬೌಲಿಂಗ್ ಪ್ರದರ್ಶನ ತೋರುವ ಮೂಲಕ ಮಿಂಚಿದ್ದರು. ಜಸ್‌ಪ್ರೀತ್ ಬುಮ್ರಾ ಈ ಪಂದ್ಯದಿಂದಲೂ ಹೊರಗುಳಿದರೆ ಎಡಗೈ ವೇಗಿ ಅರ್ಶ್‌ದೀಪ್ ಸಿಂಗ್ ಆಡುವ ಬಳಗದಲ್ಲಿ ಸ್ಥಾನ ಉಳಿಸಿಕೊಳ್ಳಬಹುದು.
ನಮೀಬಿಯಾ ಪಂದ್ಯಕ್ಕೆ ಭಾರತ ಸಂಭಾವ್ಯ ತಂಡ
ಸಂಜು ಸ್ಯಾಮ್ಸನ್(ವಿ.ಕೀ.), ಇಶಾನ್ ಕಿಶನ್, ತಿಲಕ್ ವರ್ಮಾ, ಸೂರ್ಯಕುಮಾರ್ ಯಾದವ್ (ನಾಯಕ), ಅಕ್ಸರ್ ಪಟೇಲ್, ರಿಂಕು ಸಿಂಗ್, ಶಿವಂ ದುಬೆ, ಹಾರ್ದಿಕ್ ಪಾಂಡ್ಯ, ಅರ್ಷದೀಪ್ ಸಿಂಗ್, ವರುಣ್ ಚಕ್ರವರ್ತಿ ಮತ್ತು ಮೊಹಮ್ಮದ್ ಸಿರಾಜ್.