ಸಿರಾಜ್ ಜೆರ್ಸಿ ಧರಿಸಿ ಆಡಿದರೂ ಸಿಗದ ಅದೃಷ್ಟ, ಹ್ಯಾಟ್ರಿಕ್ ಶೂನ್ಯ ಸುತ್ತಿ ಅನಗತ್ಯ ದಾಖಲೆ ಬರೆದ ಅಭಿಷೇಕ್ ಶರ್ಮ
Abhishek Sharma: ಅಂತಾರಾಷ್ಟ್ರೀಯ ಟಿ20 ಕ್ಯಾಲೆಂಡರ್ ವರ್ಷವೊಂದರಲ್ಲಿ ಗರಿಷ್ಠ ಬಾರಿ ಶೂನ್ಯಕ್ಕೆ ಔಟಾದ ಬ್ಯಾಟ್ಸ್‌ಮನ್‌ಗಳ ಪಟ್ಟಿಯಲ್ಲಿ ಅಭಿಷೇಕ್ ಶರ್ಮ ಈಗ ಜಂಟಿ 2ನೇ ಸ್ಥಾನದಲ್ಲಿದ್ದಾರೆ. ಪಾಕಿಸ್ತಾನ ಸೈಮ್ ಅಯೂಬ್ 2025ರಲ್ಲಿ 6 ಬಾರಿ ಶೂನ್ಯಕ್ಕೆ ಔಟಾಗಿದ್ದು ವಿಶ್ವದಾಖಲೆ ಎನಿಸಿದೆ. ಅಭಿಷೇಕ್ ಶರ್ಮ ಹಾಲಿ ವರ್ಷದಲ್ಲಿ ಒಟ್ಟು 5 ಬಾರಿ ಟಿ20ಯಲ್ಲಿ ಸೊನ್ನೆ ಸುತ್ತಿದ್ದಾರೆ.
Abhishek Sharma Equals 'Most Ducks' Record -
ಅಹಮದಾಬಾದ್, ಫೆ.19: ಟಿ20 ವಿಶ್ವಕಪ್‌ನಲ್ಲಿ ತಮ್ಮ ಮೊದಲ ರನ್‌ಗಾಗಿ ಅಭಿಷೇಕ್ ಶರ್ಮಾ ಅವರ ಕಾಯುವಿಕೆ ಇನ್ನಷ್ಟು ದೀರ್ಘಗೊಂಡಿದೆ. ಯುಎಸ್‌ಎ, ಪಾಕಿಸ್ತಾನ ವಿರುದ್ಧದ ಪಂದ್ಯದಲ್ಲಿ ಡಕ್ ಔಟ್ ಆದ ನಂತರ, ವಿಶ್ವದ ನಂ. 1 ಟಿ20ಐ ಬ್ಯಾಟ್ಸ್‌ಮನ್ ಬುಧವಾರ ಅಹಮದಾಬಾದ್‌ನಲ್ಲಿ ನೆದರ್ಲ್ಯಾಂಡ್ಸ್ ವಿರುದ್ಧವೂ ಶೂನ್ಯಕ್ಕೆ ಔಟಾದರು. ಕುತೂಹಲಕಾರಿಯಾಗಿ, ಅಭಿಷೇಕ್ ಶರ್ಮಾ ಮೊಹಮ್ಮದ್ ಸಿರಾಜ್ ಅವರ ಜೆರ್ಸಿಯನ್ನು ಧರಿಸಿ ಆಡಲಿಳಿದರೂ ಅವರ ಅದೃಷ್ಟ ಮಾತ್ರ ಬದಲಾಗಲಿಲ್ಲ. ಹ್ಯಾಟ್ರಿಕ್ ಡಕ್ ಮೂಲಕ ಅಭಿಷೇಕ್ ಅನಗತ್ಯ ದಾಖಲೆಯನ್ನು ಬರೆದಿದ್ದಾರೆ.
ಮೂರನೇ ಬಾರಿಗೆ ಡಕ್ ಔಟ್ ಆಗುವ ಮೂಲಕ, ಅಭಿಷೇಕ್ ಈಗ ಟಿ20 ವಿಶ್ವಕಪ್‌ನಲ್ಲಿ ಭಾರತದ ಪರ ಅತಿ ಹೆಚ್ಚು ಡಕ್ ಔಟ್ ಆದ ಆಶಿಶ್ ನೆಹ್ರಾ ಅವರೊಂದಿಗೆ ಜಂಟಿ ಅಗ್ರಸ್ಥಾನ ಹಂಚಿಕೊಂಡಿದ್ದಾರೆ. ಮಾತ್ರವಲ್ಲದೆ ಒಂದೇ ಟಿ20 ವಿಶ್ವಕಪ್‌ನಲ್ಲಿ ಬ್ಯಾಟ್ಸ್‌ಮನ್‌ವೊಬ್ಬರ ಜಂಟಿ ಗರಿಷ್ಠ ಶೂನ್ಯದ ಕುಖ್ಯಾತಿ ಎನಿಸಿದೆ.
ಪಾಕಿಸ್ತಾನದ ಶಾಹಿದ್ ಅಫ್ರಿದಿ ಮತ್ತು ಶ್ರೀಲಂಕಾದ ತಿಲಕರತ್ನೆ ದಿಲ್ಶಾನ್ ತಲಾ ಐದು ಡಕ್ ಔಟ್ ಮಾಡುವ ಮೂಲಕ ಒಟ್ಟಾರೆ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದ್ದಾರೆ. ಅಫ್ರಿದಿ 34 ಟಿ20 ವಿಶ್ವಕಪ್ ಪಂದ್ಯಗಳನ್ನು ಆಡಿದ್ದರೆ, ದಿಲ್ಶಾನ್ 35 ಪಂದ್ಯಗಳಲ್ಲಿ ಆಡಿದ್ದಾರೆ.
3 ducks in row! 🦆🦆🦆
— ꜱᴘᴏʀᴛꜱ ᴡᴏʀʟᴅ 🌎 (@_mkverma) February 19, 2026
0(1) 🆚 🇺🇸
0(4) 🆚 🇵🇰
0(3) 🆚 🇳🇱
Abhishek Sharma has not had a particularly impressive in the #T20WorldCup2026 so far! 😞
📸 ICC pic.twitter.com/B1g5hOyy5d
ಅಂತಾರಾಷ್ಟ್ರೀಯ ಟಿ20 ಕ್ಯಾಲೆಂಡರ್ ವರ್ಷವೊಂದರಲ್ಲಿ ಗರಿಷ್ಠ ಬಾರಿ ಶೂನ್ಯಕ್ಕೆ ಔಟಾದ ಬ್ಯಾಟ್ಸ್‌ಮನ್‌ಗಳ ಪಟ್ಟಿಯಲ್ಲಿ ಅಭಿಷೇಕ್ ಶರ್ಮ ಈಗ ಜಂಟಿ 2ನೇ ಸ್ಥಾನದಲ್ಲಿದ್ದಾರೆ. ಪಾಕಿಸ್ತಾನ ಸೈಮ್ ಅಯೂಬ್ 2025ರಲ್ಲಿ 6 ಬಾರಿ ಶೂನ್ಯಕ್ಕೆ ಔಟಾಗಿದ್ದು ವಿಶ್ವದಾಖಲೆ ಎನಿಸಿದೆ. ಅಭಿಷೇಕ್ ಶರ್ಮ ಹಾಲಿ ವರ್ಷದಲ್ಲಿ ಒಟ್ಟು 5 ಬಾರಿ ಟಿ20ಯಲ್ಲಿ ಸೊನ್ನೆ ಸುತ್ತಿದ್ದಾರೆ. ಉಳಿದಂತೆ ಚಲೋಮ್‌ವಾಂಗ್ ಚಾಟ್‌ಫೈಸನ್ (ಥೈಲ್ಯಾಂಡ್, 2024), ಕುಶಾಲ್ ಭುರ್ಟೆಲ್ (ನೇಪಾಳ, 2024), ಧರ್ಮ ಕೇಸುಮಾ (ಇಂಡೋನೇಷಿಯಾ, 2025) ಹಾಗೂ ಪರ್ವೇಜ್ ಹೊಸೈನ್ ಎಮನ್ (ಬಾಂಗ್ಲಾದೇಶ, 2025) ಕೂಡ ತಲಾ 5 ಬಾರಿ ಒಂದೇ ವರ್ಷದಲ್ಲಿ ಶೂನ್ಯಕ್ಕೆ ಔಟಾಗಿದ್ದಾರೆ.
ಪಂದ್ಯಕ್ಕೂ ಮುನ್ನ, ಭಾರತದ ಮಾಜಿ ನಾಯಕ ಸುನಿಲ್ ಗವಾಸ್ಕರ್, ರನ್ ಬರಗಾಲವನ್ನು ಕೊನೆಗೊಳಿಸಲು ಅಭಿಷೇಕ್‌ಗೆ ಒಂದು ಸರಳ ಸಲಹೆಯನ್ನು ನೀಡಿದ್ದರು. ಮೊದಲ ಸಿಂಗಲ್ ಅನ್ನು ತೆಗೆದುಕೊಳ್ಳಿ ಎಂದು ಹೇಳಿದ್ದರು.
2028ರ ಟಿ20 ವಿಶ್ವಕಪ್‌ಗೆ ನೇರ ಅರ್ಹತೆ ಪಡೆದ 12 ತಂಡಗಳ ಪಟ್ಟಿ ಪ್ರಕಟಿಸಿದ ಐಸಿಸಿ
"ಅಭಿಷೇಕ್ ಶರ್ಮಾಗೆ ನನ್ನ ಸಲಹೆಯೆಂದರೆ, ಮೊದಲು ಒಂದು ಸಿಂಗಲ್ ಹೊಡೆಯಿರಿ. ನಂತರ ನೀವು ಬ್ಯಾಟಿಂಗ್ ಪ್ರಾರಂಭಿಸಬಹುದು. ನಿಮ್ಮ ಕಾಲುಗಳು ವೇಗವಾಗಿ ಚಲಿಸುವಂತೆ ತ್ವರಿತ ಸಿಂಗಲ್ ತೆಗೆದುಕೊಂಡು ನಂತರ ಮುಂದುವರಿಯಿರಿ" ಎಂದು ಗವಾಸ್ಕರ್ ಸ್ಪೋರ್ಟ್ಸ್ ಟುಡೇ ಮೂಲಕ ಸಲಹೆ ನೀಡಿದ್ದರು.