ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ಯುವರಾಜ್‌ ಸಿಂಗ್‌ ಸಿಕ್ಸರ್‌ ದಾಖಲೆ ಸರಿಗಟ್ಟಿ ಕೊಹ್ಲಿಯನ್ನು ಹಿಂದಿಕ್ಕಿದ ಅಭಿಷೇಕ್‌ ಶರ್ಮಾ

2026ರ ಕ್ಯಾಲೆಂಡರ್‌ ವರ್ಷದಲ್ಲಿ ಅಭಿಷೇಕ್ ಅವರ ಟಿ20 ಕ್ರಿಕೆಟ್‌ನ ಗಮನಾರ್ಹ ಸಿಕ್ಸರ್-ಬಾರಿಸುವ ದಾಖಲೆಗೆ ಮತ್ತಷ್ಟು ಕೊಡುಗೆ ನೀಡಿದೆ. ಅವರು ಈಗ 2026ರಲ್ಲಿ ಟಿ20 ಕ್ರಿಕೆಟ್‌ನಲ್ಲಿ 104 ಸಿಕ್ಸರ್‌ಗಳನ್ನು ಬಾರಿಸಿದ್ದು, ಇದು ಒಂದು ಕ್ಯಾಲೆಂಡರ್ ವರ್ಷದಲ್ಲಿ ಭಾರತೀಯ ಬ್ಯಾಟರ್ ಒಬ್ಬರು ಬಾರಿಸಿದ ಅತಿ ಹೆಚ್ಚು ಸಿಕ್ಸರ್‌ಗಳಾಗಿವೆ.

ವಿರಾಟ್‌ ಕೊಹ್ಲಿಯ ಸಿಕ್ಸರ್‌ ದಾಖಲೆ ಮುರಿದ ಅಭಿಷೇಕ್‌ ಶರ್ಮಾ

Abhishek Sharma -

Abhilash BC
Abhilash BC Oct 3, 2026 12:55 PM

ನಗೋಯಾ, ಅ.3: ಜಪಾನ್‌ನ ಐಚಿ-ನಗೋಯಾದ ಕೊರೋಗಿ ಅಥ್ಲೆಟಿಕ್ ಪಾರ್ಕ್‌ನಲ್ಲಿ ಶನಿವಾರ ನಡೆದ ಏಷ್ಯನ್ ಗೇಮ್ಸ್‌ ಚಿನ್ನದ ಪದಕದ ಪಂದ್ಯದಲ್ಲಿ ಪಾಕಿಸ್ತಾನದ ವಿರುದ್ಧ ಬಿರುಸಿನ ಬ್ಯಾಟಿಂಗ್‌ ನಡೆಸಿ ಅರ್ಧಶತಕ ಸಿಡಿಸಿದ ಭಾರತದ ಎಡಗೈ ಬ್ಯಾಟರ್‌ ಅಭಿಷೇಕ್ ಶರ್ಮಾ ದಾಖಲೆಯೊಂದನ್ನು ಬರೆದಿದ್ದಾರೆ.

ಭಾರತ-ಪಾಕಿಸ್ತಾನ ಟಿ20 ಅಂತಾರಾಷ್ಟ್ರೀಯ ಪಂದ್ಯವೊಂದರ ಇನಿಂಗ್ಸ್‌ನಲ್ಲಿ ಭಾರತೀಯ ಬ್ಯಾಟರ್‌ವೊಬ್ಬರು ಸಿಡಿಸಿದ ಗರಿಷ್ಠ ಸಿಕ್ಸರ್‌ಗಳ ದಾಖಲೆಯಲ್ಲಿ ಅಭಿಷೇಕ್ ಸಿಡಿಸಿದ ಏಳು ಸಿಕ್ಸರ್‌ಗಳು ಅವರನ್ನು ಮಾಜಿ ಆಟಗಾರ ಯುವರಾಜ್‌ ಸಿಂಗ್‌ ಜತೆ ಜಂಟಿ ಅಗ್ರಸ್ಥಾನಕ್ಕೇರಿಸಿತು. ಈ ಹಾದಿಯಲ್ಲಿ ಅವರು ವಿರಾಟ್ ಕೊಹ್ಲಿ(11 ಸಿಕ್ಸರ್‌) ದಾಖಲೆಯನ್ನು ಹಿಂದಿಕ್ಕಿದರು.

2026ರ ಕ್ಯಾಲೆಂಡರ್‌ ವರ್ಷದಲ್ಲಿ ಅಭಿಷೇಕ್ ಅವರ ಟಿ20 ಕ್ರಿಕೆಟ್‌ನ ಗಮನಾರ್ಹ ಸಿಕ್ಸರ್-ಬಾರಿಸುವ ದಾಖಲೆಗೆ ಮತ್ತಷ್ಟು ಕೊಡುಗೆ ನೀಡಿದೆ. ಅವರು ಈಗ 2026ರಲ್ಲಿ ಟಿ20 ಕ್ರಿಕೆಟ್‌ನಲ್ಲಿ 104 ಸಿಕ್ಸರ್‌ಗಳನ್ನು ಬಾರಿಸಿದ್ದು, ಇದು ಒಂದು ಕ್ಯಾಲೆಂಡರ್ ವರ್ಷದಲ್ಲಿ ಭಾರತೀಯ ಬ್ಯಾಟರ್ ಒಬ್ಬರು ಬಾರಿಸಿದ ಅತಿ ಹೆಚ್ಚು ಸಿಕ್ಸರ್‌ಗಳಾಗಿವೆ. ಇನ್ನು 5 ಸಿಕ್ಸರ್‌ ಬಾರಿಸಿದರೆ ತನ್ನದ ದಾಖಲೆಯನ್ನು ಮುರಿಯಲಿದ್ದಾರೆ. 2025ರಲ್ಲಿ ಅವರು 108 ಸಿಕ್ಸರ್‌ ಬಾರಿಸಿದ್ದರು.

ಏಷ್ಯನ್ ಗೇಮ್ಸ್‌ ಗಾಲ್ಫ್‌ನಲ್ಲಿ ಐತಿಹಾಸಿಕ ಚಿನ್ನ ಗೆದ್ದ ಕನ್ನಡತಿ ಪ್ರಣವಿ ಯಾರು?

ಪವರ್‌ಪ್ಲೇ ಅವಧಿಯಲ್ಲಿ ಭಾರತ ಹೊಸ ದಾಖಲೆಯನ್ನೂ ನಿರ್ಮಿಸಿತು. ತಂಡವು ಮೊದಲ ಆರು ಓವರ್‌ಗಳಲ್ಲಿ 81/2 ರನ್ ಗಳಿಸಿತು. ಇದು ಟಿ20 ಅಂತಾರಾಷ್ಟ್ರೀಯ ಪಂದ್ಯಗಳಲ್ಲಿ ಪಾಕಿಸ್ತಾನದ ವಿರುದ್ಧ ಭಾರತದ ಅತ್ಯಧಿಕ ಪವರ್‌ಪ್ಲೇ ಸ್ಕೋರ್ ಆಗಿದೆ.

ದುಬೈನಲ್ಲಿ ನಡೆದ ಏಷ್ಯಾ ಕಪ್ 2025ರ 'ಸೂಪರ್ ಫೋರ್ಸ್' ಪಂದ್ಯದಲ್ಲಿ ಗಳಿಸಿದ್ದ 69/0 ಭಾರತದ ಹಿಂದಿನ ಅತ್ಯುತ್ತಮ ಸ್ಕೋರ್ ಆಗಿತ್ತು. ಆ ಪವರ್‌ಪ್ಲೇನಲ್ಲೂ ಅಭಿಷೇಕ್ ಅವರದ್ದೇ ಪ್ರಮುಖ ಪಾತ್ರವಿತ್ತು. ಆ ಪಂದ್ಯದಲ್ಲಿ ಅವರು 24 ಎಸೆತಗಳಲ್ಲಿ 50 ರನ್ ಗಳಿಸಿದ್ದರು. ಇದು ಆ ಸಮಯದಲ್ಲಿ ಟಿ20 ಅಂತಾರಾಷ್ಟ್ರೀಯ ಪಂದ್ಯಗಳಲ್ಲಿ ಪಾಕಿಸ್ತಾನದ ವಿರುದ್ಧ ಭಾರತದ ಪರವಾಗಿ ಅತಿ ವೇಗದ ಅರ್ಧಶತಕವಾಗಿತ್ತು.