ಫೋಟೋ ಗ್ಯಾಲರಿ ಆಪರೇಷನ್​ ಸಿಂಧೂರ ಐಪಿಎಲ್​ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

RCB Pickleball Match: ಆರ್‌ಸಿಬಿ ಆಟಗಾರರ ವಿರುದ್ಧ ಪಿಕಲ್ ಬಾಲ್ ಆಡಿದ ಕೊಹ್ಲಿ-ಅನುಷ್ಕಾ

ಫಿಲ್‌ ಸಾಲ್ಟ್‌ ಸಾರಥ್ಯದಲ್ಲಿ ನಡೆದ ಈ ಪಿಕಲ್‌ಬಾಲ್ ಟೂರ್ನಿಯಲ್ಲಿ ಮಯಾಂಕ್‌ ಅಗರ್ವಾಲ್‌, ಜಿತೇಶ್‌ ಶರ್ಮ, ಕೋಚ್‌ ಕೋಚ್‌ ಆ್ಯಂಡಿ ಫ್ಲವರ್‌, ದಿನೇಶ್‌ ಕಾರ್ತಿಕ್‌ ಮತ್ತು ಅವರ ಪತ್ನಿ ದೀಪಿಕಾ ಪಳ್ಳಿಕಲ್‌ ಸೇರಿ ಹಲವರು ಇಬ್ಬರು ಆಟಗಾರರ ತಂಡವಾಗಿ ಪಂದ್ಯಗಳನ್ನು ಆಡಿದರು.

ಆರ್‌ಸಿಬಿ ಆಟಗಾರರ ವಿರುದ್ಧ ಪಿಕಲ್ ಬಾಲ್ ಆಡಿದ ಕೊಹ್ಲಿ-ಅನುಷ್ಕಾ

Profile Abhilash BC May 22, 2025 4:54 PM

ಬೆಂಗಳೂರು: ಪ್ಲೇ ಆಫ್‌ ಪ್ರವೇಶಿಸಿರಯವ ಜೋಶ್‌ನಲ್ಲಿರುವ ಆರ್‌ಸಿಬಿ(RCB) ತಂಡದ ಆಟಗಾರರು ತಂಡದ ಬಾಂಡಿಂಗ್ ಕಾರ್ಯಕ್ರಮದಲ್ಲಿ ಪಿಕಲ್‌ಬಾಲ್ ಟೂರ್ನಿಯೊಂದನ್ನು(RCB Pickleball Match) ಆಡಿದ್ದಾರೆ. ಕಾರ್ಯಕ್ರಮದಲ್ಲಿ ಆಟಗಾರರು ತಮ್ಮ ಸಹಾಯಕ ಸಿಬ್ಬಂದಿ ಮತ್ತು ಕುಟುಂಬಗಳೊಂದಿಗೆ ಪಿಕಲ್‌ಬಾಲ್‌ ಆಡಿ ಸಂಭ್ರಮಿಸಿದ್ದಾರೆ. ವಿರಾಟ್ ಕೊಹ್ಲಿ(Virat Kohli) ಮತ್ತು ಅನುಷ್ಕಾ ಶರ್ಮಾ(Anushka Sharma) ಕೂಡ ಜತೆಯಾಗಿ ಪಿಕಲ್‌ಬಾಲ್ ಆಡಿ ಗಮನಸೆಳೆದರು. ಈ ವಿಡಿಯೊವನ್ನು ಆರ್‌ಸಿಬಿ ಫ್ರಾಂಚೈಸಿ ತನ್ನ ಅಧಿಕೃತ ಇನ್‌ಸ್ಟಾಗ್ರಾಮ್‌ ಖಾತೆಯಲ್ಲಿ ಹಂಚಿಕೊಂಡಿದೆ.

ಫಿಲ್‌ ಸಾಲ್ಟ್‌ ಸಾರಥ್ಯದಲ್ಲಿ ನಡೆದ ಈ ಪಿಕಲ್‌ಬಾಲ್ ಟೂರ್ನಿಯಲ್ಲಿ ಮಯಾಂಕ್‌ ಅಗರ್ವಾಲ್‌, ಜಿತೇಶ್‌ ಶರ್ಮ, ಕೋಚ್‌ ಕೋಚ್‌ ಆ್ಯಂಡಿ ಫ್ಲವರ್‌, ದಿನೇಶ್‌ ಕಾರ್ತಿಕ್‌ ಮತ್ತು ಅವರ ಪತ್ನಿ ದೀಪಿಕಾ ಪಳ್ಳಿಕಲ್‌ ಸೇರಿ ಹಲವರು ಇಬ್ಬರು ಆಟಗಾರರ ತಂಡವಾಗಿ ಪಂದ್ಯಗಳನ್ನು ಆಡಿದರು. ಕೊಹ್ಲಿ ಮತ್ತು ಅನುಷ್ಕಾ ಜೋಡಿ ಲೀಗ್‌ ಹಂತದಲ್ಲೇ ಸೋತರು. ಆ್ಯಂಡಿ ಫ್ಲವರ್‌ ಮತ್ತು ದೀಪಿಕಾ ಪಳ್ಳಿಕಲ್‌ ಜೋಡಿ ಪಂದ್ಯದಲ್ಲಿ ಚಾಂಪಿಯನ್‌ ಆದರು. ವಿಜೇತರಿಗೆ ಟಿವಿಯನ್ನು ನೀಡಲಾಯಿತು.

ಲೀಗ್‌ನಲ್ಲಿ 12 ಪಂದ್ಯಗಳಲ್ಲಿ 8 ಗೆಲುವು ಸಾಧಿಸಿ ಒಟ್ಟು 17 ಅಂಕಗಳನ್ನು ಗಳಿಸಿರುವ ಆರ್‌ಸಿಬಿ, ಸದ್ಯ ಪಾಯಿಂಟ್‌ ಪಟ್ಟಿಯಲ್ಲಿ ದ್ವಿತೀಯ ಸ್ಥಾನದಲ್ಲಿದೆ. ಅಗ್ರ ಎರಡು ಸ್ಥಾನದಲ್ಲಿ ಕಾಣಿಸಿಕೊಳ್ಳಬೇಕಿದ್ದರೆ ಆರ್‌ಸಿಬಿಗೆ ನಾಳೆ ನಡೆಯುವ ಹೈದರಾಬಾದ್‌ ವಿರುದ್ಧದ ಪಂದ್ಯದಲ್ಲಿ ಗೆಲುವು ಅತ್ಯಗತ್ಯ. ಕಳೆದ ಶನಿವಾರ ಕೆಕೆಆರ್‌ ವಿರುದ್ಧ ಚಿನ್ನಸ್ವಾಮಿ ಕ್ರಿಕೆಟ್‌ ಸ್ಟೇಡಿಯಂನಲ್ಲಿ ನಡೆಯಬೇಕಿದ್ದ ಪಂದ್ಯ ಮಳೆಯಿಂದ ಒಂದೂ ಎಸೆತ ಕಾಣದೆ ರದ್ದು ಗೊಂಡಿತ್ತು.

ಇದನ್ನೂ ಓದಿ IPL 2025: ಐಪಿಎಲ್‌ನಲ್ಲಿ ವಿಶೇಷ ದಾಖಲೆ ಬರೆದ ಕುಲ್‌ದೀಪ್‌

ಸದ್ಯ ಇದುವರೆಗೆ ಆರ್‌ಸಿಬಿ ಆಡಿದ ಎಲ್ಲ ಪಂದ್ಯಗಳಲ್ಲಿಯೂ ಸಮರ್ಥ ಪ್ರದರ್ಶನ ತೋರಿದೆ. ವಿರಾಟ್‌ ಕೊಹ್ಲಿ, ಫಿಲ್‌ ಸಾಲ್ಟ್‌, ಟಿಮ್‌ ಡೇವಿಡ್‌, ಜಿತೇಶ್‌ ಶರ್ಮ, ನಾಯಕ ಪಾಟೀದಾರ್‌ ಉತ್ತಮ ಬ್ಯಾಟಿಂಗ್‌ ನಡೆಸಿದ್ದಾರೆ. ಬೌಲರ್‌ಗಳಾದ ಯಶ್‌ ದಯಾಳ್‌, ಭುವನೇಶ್ವರ್‌ ಕುಮಾರ್‌, ಹ್ಯಾಜಲ್‌ವುಡ್‌ ಕೂಡ ನಿರೀಕ್ಷಿತ ಪ್ರದರ್ಶನ ತೋರಿದ್ದಾರೆ. ಇದೇ ಪ್ರದರ್ಶನವನ್ನು ಕೂಡ ಪ್ಲೇ ಆಫ್‌ನಲ್ಲಿ ತೋರಿದರೆ ಆರ್‌ಸಿಬಿ ಚೊಚ್ಚಕ ಕಪ್‌ ಎಂದು ದೊರಕುದರಲ್ಲಿ ಯಾವುದೇ ಅನುಮಾನವಿಲ್ಲ.