IPL 2025: ಐಪಿಎಲ್‌ನಲ್ಲಿ ವಿಶೇಷ ದಾಖಲೆ ಬರೆದ ಕುಲ್‌ದೀಪ್
ಪ್ಲೇ ಆಫ್ ಪ್ರವೇಶಕ್ಕೆ ಗೆಲ್ಲಲೇ ಬೇಕಾದ ಮತ್ವದಲ್ಲಿ ಪಂದ್ಯದಲ್ಲಿ ಡೆಲ್ಲಿ ತಂಡ ಮುಂಬೈ ವಿರುದ್ಧ 59 ರನ್ ಅಂತರದಿಂದ ಸೋತು ಟೂರ್ನಿಯಿಂದ ಹೊರಬಿದ್ದಿತು. ಗೆಲುವು ಸಾಧಿಸಿದ ಹಾರ್ದಿಕ್ ಪಾಂಡ್ಯ ಪಡೆ ನಾಲ್ಕನೇ ತಂಡವಾಗಿ ನಾಕೌಟ್ ಪ್ರವೇಶಿಸಿತು. ಈ ಮೂಲಕ ಮುಂಬೈ ತಂಡ 11 ನೇ ಬಾರಿಗೆ ಪ್ಲೇ ಆಫ್ ಪ್ರವೇಶಿಸಿದ ಸಾಧನೆ ಮಾಡಿತು.


ಮುಂಬಯಿ: ಡೆಲ್ಲಿ ಕ್ಯಾಪಿಟಲ್ಸ್(Delhi Capitals) ತಂಡದ ಎಡಗೈ ಸ್ಪಿನ್ನರ್ ಕುಲ್‌ದೀಪ್ ಯಾದವ್(Kuldeep Yadav) ಇಂಡಿಯನ್ ಪ್ರೀಮಿಯರ್ ಲೀಗ್‌ನಲ್ಲಿ(IPL 2025) 97 ಪಂದ್ಯಗಳಲ್ಲಿ 100 ವಿಕೆಟ್ ಕಿತ್ತ 4ನೇ ಸ್ಪಿನ್ ಬೌಲರ್ ಎನ್ನುವ ದಾಖಲೆ ಬರೆಯುವುದರ ಮೂಲಕ ತಮ್ಮ ಐಪಿಎಲ್ ಕ್ರಿಕೆಟ್ ವೃತ್ತಿ ಬದುಕಿನಲ್ಲಿ ಮತ್ತೊಂದು ಮೈಲಿಗಲ್ಲನ್ನು ಸ್ಥಾಪಿಸಿದ್ದಾರೆ. ಮುಂಬೈ ವಿರುದ್ಧದ ಪಂದ್ಯದಲ್ಲಿ ಕುಲ್‌ದೀಪ್ ಅವರು ಒಂದು ವಿಕೆಟ್ ಕೀಳುವ ಮೂಲಕ ಈ ಸಾಧನೆಗೈದರು. ಅಮಿತ್ ಮಿಶ್ರಾ, ರಶೀದ್, ವರುಣ್ ಚಕ್ರವರ್ತಿ 83 ಪಂದ್ಯಗಳಲ್ಲಿ ಈ ಸಾಧನೆ ಮಾಡಿದ್ದರು.
ಸೋತು ಹೊರಬಿದ್ದ ಡೆಲ್ಲಿ
ಪ್ಲೇ ಆಫ್ ಪ್ರವೇಶಕ್ಕೆ ಗೆಲ್ಲಲೇ ಬೇಕಾದ ಮತ್ವದಲ್ಲಿ ಪಂದ್ಯದಲ್ಲಿ ಡೆಲ್ಲಿ ತಂಡ ಮುಂಬೈ ವಿರುದ್ಧ 59 ರನ್ ಅಂತರದಿಂದ ಸೋತು ಟೂರ್ನಿಯಿಂದ ಹೊರಬಿದ್ದಿತು. ಗೆಲುವು ಸಾಧಿಸಿದ ಹಾರ್ದಿಕ್ ಪಾಂಡ್ಯ ಪಡೆ ನಾಲ್ಕನೇ ತಂಡವಾಗಿ ನಾಕೌಟ್ ಪ್ರವೇಶಿಸಿತು. ಈ ಮೂಲಕ ಮುಂಬೈ ತಂಡ 11 ನೇ ಬಾರಿಗೆ ಪ್ಲೇ ಆಫ್ ಪ್ರವೇಶಿಸಿದ ಸಾಧನೆ ಮಾಡಿತು. ದಾಖಲೆ ಚೆನ್ನೈ ಸೂಪರ್ ಕಿಂಗ್ಸ್ ತಂಡದ ಹೆಸರಿನಲ್ಲಿದೆ. ಒಟ್ಟು 12 ಬಾರಿ ಪ್ಲೇ ಆಫ್ ಪ್ರವೇಶಿಸಿದೆ.
ಅನಗತ್ಯ ದಾಖಲೆ ಬರೆದ ಡೆಲ್ಲಿ
ಡೆಲ್ಲಿ ಕ್ಯಾಪಿಟಲ್ಸ್ ಟೂರ್ನಿಯಿಂದ ಹೊರಬೀಳುವ ಮೂಲಕ ಅನಗತ್ಯ ದಾಖಲೆಯೊಂದನ್ನು ತನ್ನ ಹೆಸರಿಗೆ ಬರೆದಿದೆ. ಆರಂಭಿಕ 4 ಪಂದ್ಯಗಳಲ್ಲಿ ಗೆಲುವು ಸಾಧಿಸಿದರೂ ಪ್ಲೇ ಆಫ್‌ಗೇರದ ಮೊದಲ ತಂಡ ಎನಿಸಿತು.
ಇದನ್ನೂ ಓದಿ IPL 2025: ಮುಂಬೈಗೆ ಇನ್ನೂ ಇದೆ ಅಗ್ರ 2ರಲ್ಲಿ ಸ್ಥಾನ ಪಡೆಯುವ ಅವಕಾಶ; ಈ ಲೆಕ್ಕಾಚಾರ ಇಲ್ಲಿದೆ
ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ನಡೆಸಿದ ಮುಂಬೈ ತಂಡ ಸೂರ್ಯಕುಮಾರ್ ಯಾದವ್ ಅವರ ಬಿರುಸಿನ ಆಟದಿಂದಾಗಿ ನಿಗದಿತ 20 ಓವರ್‌ಗಳಲ್ಲಿ 5 ವಿಕೆಟಿಗೆ 180 ರನ್ನುಗಳ ಉತ್ತಮ ಮೊತ್ತ ಪೇರಿಸಿತು. ಗುರಿ ಬೆನ್ನಟ್ಟಿದ ಡೆಲ್ಲಿ ಆರಂಭದಲ್ಲೇ ಸತತ ವಿಕೆಟ್ ಕಳೆದುಕೊಂಡು 18.2 ಓವರ್‌ಗಳಲ್ಲಿ 121 ರನ್‌ಗೆ ಸರ್ವಪತನ ಕಂಡು ಹೀನಾಯ ಸೋಲಿಗೆ ತುತ್ತಾಯಿತು.