Indi News: ಶಿಕ್ಷಣ ಪ್ರವಾಹವಿದ್ದಂತೆ: ಗುರುಮಾತೆ ಚೆನ್ನಮ್ಮಾ ಝಳಕಿ ಅಭಿಮತ
ಭಾರತ ಹಳ್ಳಿಗಳ ದೇಶ ಭಾರತದ ದೇಶದ ಸಂಸ್ಕೃತಿ ,ಪರಂಪರೆ ಗ್ರಾಮೀಣ ಭಾಗಗಳಲ್ಲಿ ಸಿಗುತ್ತದೆ. ಗ್ರಾಮೀಣ ಬದಕಿನಲ್ಲಿ ಹಾಡು, ಕತೆ ,ಕವನ, ಜಾನಪದ , ಬಿಸುಕಲ್ಲಿನ ಹಾಡು, ಹಂತಿ ಹಾಡು, ಸೋಬಾನೆ ಇತ್ಯಾದಿ ಕಲೆಗಳು ಸಾಕಷ್ಟು, ಇಂತಹ ವಿಭಿನ್ನ ಸೊಗಡನ್ನು ಮಕ್ಕಳಿಂದ ಅರಳಿಸಬೇಕು . ಶಿಕ್ಷಣ ಎಂದರೆ ಮಗುವಿನಲ್ಲಿ ಅಡಗಿರುವ ಸುಪ್ತ ಶಕ್ತಿ ಹೊರ ತೆಗೆಯುವುದೇ ಶಿಕ್ಷಣ ಕಲಿಕಾ ಹಬ್ಬದ ಉದ್ದೇಶ ಕೂಡಾ ಮಗುವಿಗೆ ಪ್ರತಿ ಹಂತದಲ್ಲಿ ಒತ್ತಡಗಳನ್ನು ಕಡಿಮೆ ಮಾಡಿ ಬೇರೆ ಮಾರ್ಗದಲ್ಲಿ ತೊಡಗಿಸುವ ಕೌಶಲ್ಯವಾಗಿದೆ
-
ಇಂಡಿ: ಶಿಕ್ಷಣ ನಿಂತ ನಿರಲ್ಲ ಸದಾ ಹರಿಯುವ ಪ್ರವಾಹವಿದ್ದಂತೆ ಅದಕ್ಕಾಗಿ ಶಾಲೆಗಳಲ್ಲಿ ಪ್ರತಿ ಮಗುವಿಗೂ ಸೃಜನಾತ್ಮಕ ಚಟುವಟಿಕೆಗಳನ್ನು ಹಾಗೂ ಹೊಸತನವನ್ನು ಕಲಿಸಿ ಶಾಲೆಯಿಂದಲೆ ಉತ್ಪಾದಕ ವಿಧ್ಯಾರ್ಥಿಗಳಾಗಿ ನಿರ್ಮಿಸಬೇಕು ಎಂದು ಮುಖ್ಯ ಗುರುಮಾತೆ ಚೆನ್ನಮ್ಮಾ ಝಳಕಿ ಹೇಳಿದರು.
ತಡವಲಗಾ ಗ್ರಾಮದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ, ಬಸವೇಶ್ವರ ವಸತಿ ಶಾಲೆಯ ಆವರಣ ದಲ್ಲಿ ಹಮ್ಮಿಕೊಂಡ 2025-26ನೇ ಸಾಲಿನ ಕಲಿಕಾ ಹಬ್ಬ ಮಹೋತ್ಸವದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು ಮಕ್ಕಳಿಗೆ ಶಿಕ್ಷಣದ ಜೊತೆ ಜೊತೆಗೆ ಪಠ್ಯೇತರ ಚಟುವಳಿಕೆಗಳಿಗೂ ಆದ್ಯತೆ ನೀಡಬೇಕು.
ಭಾರತ ಹಳ್ಳಿಗಳ ದೇಶ ಭಾರತದ ದೇಶದ ಸಂಸ್ಕೃತಿ, ಪರಂಪರೆ ಗ್ರಾಮೀಣ ಭಾಗಗಳಲ್ಲಿ ಸಿಗುತ್ತದೆ. ಗ್ರಾಮೀಣ ಬದುಕಿನಲ್ಲಿ ಹಾಡು, ಕತೆ, ಕವನ, ಜಾನಪದ, ಬಿಸುಕಲ್ಲಿನ ಹಾಡು, ಹಂತಿ ಹಾಡು, ಸೋಬಾನೆ ಇತ್ಯಾದಿ ಕಲೆಗಳು ಸಾಕಷ್ಟು, ಇಂತಹ ವಿಭಿನ್ನ ಸೊಗಡನ್ನು ಮಕ್ಕಳಿಂದ ಅರಳಿಸಬೇಕು. ಶಿಕ್ಷಣ ಎಂದರೆ ಮಗುವಿನಲ್ಲಿ ಅಡಗಿರುವ ಸುಪ್ತ ಶಕ್ತಿ ಹೊರ ತೆಗೆಯುವುದೇ ಶಿಕ್ಷಣ ಕಲಿಕಾ ಹಬ್ಬದ ಉದ್ದೇಶ ಕೂಡಾ ಮಗುವಿಗೆ ಪ್ರತಿ ಹಂತದಲ್ಲಿ ಒತ್ತಡಗಳನ್ನು ಕಡಿಮೆ ಮಾಡಿ ಬೇರೆ ಮಾರ್ಗದಲ್ಲಿ ತೊಡಗಿಸುವ ಕೌಶಲ್ಯವಾಗಿದೆ ಎಂದರು.
ಇದನ್ನೂ ಓದಿ: Vijayapura news: ಎಡದಂಡೆ ಕಾಲುವೆಯಲ್ಲಿ ಒಂದೇ ಕುಟುಂಬದ ಮೂವರು ನೀರುಪಾಲು
ಕಲಿಕಾ ಹಬ್ಬ ಮಕ್ಕಳನ್ನು ಕಲಿಕೆಯ ಪ್ರಕ್ರೀಯಯಲ್ಲಿ ಸಕ್ರಿಯ ತೊಡಗಿಸುವ ಮೂಲಕ ಸರ್ವತೋ ಮುಖ ಬೆಳವಣಿಗೆಗೆ ಸಹಕಾರಿಯಾಗಿದೆ ಎಂದು ಗ್ರಾ.ಪಂ ಅಧ್ಯಕ್ಷೆ ಸುನಂದಾ ವಾಲೀಕಾರ ಹೇಳಿದರು.
ಶಿಕ್ಷಕ ಡಾ.ಕಾಂತು ಇಂಡಿ ಮಾತನಾಡಿ, ಕಲಿಕಾ ಹಬ್ಬ ಕಲಿಕೆಯ ಹಬ್ಬವಾಗಬೇಕು. ಈ ಹಬ್ಬವು ಮಕ್ಕಳಲ್ಲಿ ಆಸಕ್ತಿ ಹೆಚ್ಚಿಸುವ ಹಬ್ಬವಾಗಿದೆ. ಸಂವಾದ ಕಲೆ, ಕರಕುಶಲತೆ, ಸೃಜನಾತ್ಮ ಚಟುವಟಿಕೆ ಒತ್ತು ನೀಡಬೇಕು ಇದರಿಂದ್ದ ಮಕ್ಕಳ ಮೇಲೆ ಒತ್ತಡ ಕಡಿಮೆಯಾಗುತ್ತದೆ ಎಂದರು.
ಎಸ್ಡಿ.ಎಂ.ಸಿ ಅಧ್ಯಕ್ಷ ಬಸವರಾಜ ಪಂತೋಜಿ ಮಾತನಾಡಿ ಪಾಲಕ ಶಿಕ್ಷಕ, ಮಗು ಶಿಕ್ಷಣದಲ್ಲಿ ಪ್ರಮುಖ ಸ್ಥಾನ ಪಡೆದುಕೊಂಡಿದ್ದಾರೆ . ಕೇವಲ ಶಿಕ್ಷಣದಲ್ಲಿ ಶಿಕ್ಷಕರಷ್ಟೆ ಪ್ರಮುಖರಾಗಿರದೆ ಪಾಲ ಕರ ಕರ್ತವ್ಯ ಕೂಡಾ ಇರುತ್ತದೆ.ಶಾಲೆಯಿಂದ ಮಗು ಬಂದ ನಂತರ ಪಾಲಕರು ನಿಗಾ ವಹಿಸಬೇಕು ಎಂದರು.
ಸಿಆರ್.ಪಿ ಪ್ರಕಾಶ ಚವ್ಹಾಣ, ಮಂಜುನಾಥ ತೇಲಿ, ಶಿಕ್ಷಕ ಎನ್ ಎಸ್ ಚವ್ಹಾಣ, ಎಚ್.ಆರ್ ಮುತ್ತಗಿ, ವಿ ಆಯ್ ಜಾಡರ್, ಎ.ಡಿ ರೇವಶೆಟ್ಟಿ, ರಾಜು ತಳಕೇರಿ, ಎಸ್.ಎಂ ವಂದಾಲ, ಲಕ್ಷ್ಮಣ ಕೊಕಣಿ, ಎಸ್.ಎಂ ಲಾಳಸಂಗಿ, ಎಸ್.ಆರ್ ಝಳಕಿ, ಸಂದೀಪ ಬಿರಾದಾರ, ಪ್ರೇಮಾ ಹಬ್ಬಳ್ಳಿ, ಶ್ರೀದೇವಿ ಹಿಳ್ಳಿ, ರೇಣುಕಾ ಗುಂದಗಿ, ಕವಿತಾ ಪಾಟೀಲ, ಸೇರಿದಂತೆ ವಿದ್ಯಾರ್ಥಿ, ವಿದ್ಯಾರ್ಥಿನಿಯವರು ಇದ್ದರು.
ಶಿಕ್ಷಕ ಎನ್.ಜಿ ರೋಳಿ ಸ್ವಾಗತಿಸಿ ಎಸ್.ಆರ್ ಗಿಡಗಂಟಿ, ನಿರೂಪಿಸಿ, ಎಸ್ ಜಿ.ಅಂಗಡಿ ವಂದಿಸಿದರು.