ಐಪಿಎಲ್‌ನಿಂದ ಹೊರಬಿದ್ದ ಬಳಿಕ ಪಾಕಿಸ್ತಾನ ಸೂಪರ್ ಲೀಗ್‌ನಲ್ಲಿ ಆಡಲಿರುವ ಮುಸ್ತಾಫಿಝುರ್ ರೆಹಮಾನ್!
ಇಂಡಿಯನ್ ಪ್ರೀಮಿಯರ್ ಲೀಗ್ ಹಾಗೂ ಐಸಿಸಿ ಟಿ20 ವಿಶ್ವಕಪ್ ಟೂರ್ನಿಯಿಂದ ಹೊರಬಿದ್ದ ಬಳಿಕ ಬಾಂಗ್ಲಾದೇಶ ತಂಡದ ಹಿರಿಯ ವೇಗಿ ಮುಸ್ತಾಫಿಝುರ್ ರೆಹಮಾನ್ ಅವರು, ಪಾಕಿಸ್ತಾನ ಸೂಪರ್ ಲೀಗ್ ಟೂರ್ನಿಯ ಲಾಹೋರ್ ಖಲಂದರ್ಸ್ ತಂಡಕ್ಕೆ ಸಹಿ ಮಾಡಿದ್ದಾರೆ. 6.44 ಕೋಟಿ ರು. ಗಳಿಗೆ ಅವರು ಖಲಂದರ್ಸ್ ತಂಡಕ್ಕೆ ಸೇರ್ಪಡೆಯಾಗಿದ್ದಾರೆ.
ಲಾಹೋರ್ ಖಲಂದರ್ಸ್ ಸೇರಿದ ಮುಸ್ತಾಫಿಝುರ್ ರೆಹಮಾನ್. -
ನವದೆಹಲಿ: ವಿಶ್ವದ ಅತ್ಯಂತ ಶ್ರೀಮಂತ ಫ್ರಾಂಚೈಸಿ ಲೀಗ್ ಎಂದೇ ಬಿಂಬಿಸಿಕೊಂಡಿರುವ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯಿಂದ ಹೊರಬಂದ ಬಳಿಕ ಬಾಂಗ್ಲಾದೇಶ ಕ್ರಿಕೆಟ್ ತಂಡದ ವೇಗದ ಬೌಲರ್ ಮುಸ್ತಾಫಿಝುರ್ ರೆಹಮಾನ್ (Mustafizur Rahman), ಇದೀಗ ಪಾಕಿಸ್ತಾನ ಸೂಪರ್ ಲೀಗ್ (PSL 2026) ಟೂರ್ನಿಯಲ್ಲಿ ಆಡಲಿದ್ದಾರೆ. ಪಿಎಸ್‌ಎಲ್ ಟೂರ್ನಿಯಲ್ಲಿ ಲಾಹೋರ್ ಖಲಂದರ್ಸ್ ತಂಡದ ಪರ ಆಡಲಿದ್ದಾರೆ. 2026ರ ಐಸಿಸಿ ಟಿ20 ವಿಶ್ವಕಪ್ (ICC T20 World Cup 2026) ಟೂರ್ನಿಯಲ್ಲಿ ಬಾಂಗ್ಲಾದೇಶ ತಂಡ ಬಾಯ್ಕಟ್ ಮಾಡಿದೆ. ಈ ಹಿನ್ನೆಲೆಯಲ್ಲಿ ಮುಸ್ತಾಫಿಝುರ್ ರೆಹಮಾನ್ ಅವರಿಗೆ ಬೇರೆ ಯಾವುದೇ ಟೂರ್ನಿ ಇಲ್ಲ. ಹಾಗಾಗಿ ಅವರು ಪಾಕಿಸ್ತಾನ ಟಿ20 ಲೀಗ್ ಆಡಲು ಸಜ್ಜಾಗುತ್ತಿದ್ದಾರೆ.
ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿಯು ಮುಸ್ತಾಫಿಝುರ್ ರೆಹಮಾನ್ ಅವರನ್ನು ಐಪಿಎಲ್ ಟೂರ್ನಿಯ ಕೋಲ್ಕತಾ ನೈಟ್ ರೈಡರ್ಸ್ ತಂಡದಿಂದ ಬಿಡುಗಡೆ ಮಾಡುವಂತೆ ಸೂಚನೆ ನೀಡಿತ್ತು. ಅದರಂತೆ ಕೋಲ್ಕತಾ ಫ್ರಾಂಚೈಸಿ ಅವರ ಒಪ್ಪಂಧವನ್ನು ರದ್ದು ಮಾಡಿತ್ತು. ಇದಾದ ಬಳಿಕ ಭಾರತ ಹಾಗೂ ಬಾಂಗ್ಲಾದೇಶ ನಡುವಣ ಕ್ರಿಕೆಟ್ ಚಟುವಟಿಕೆಗಳಲ್ಲಿ ಸಾಕಷ್ಟು ಬೆಳವಣಿಗೆಗಳು ನಡೆದಿವೆ. ಬಾಂಗ್ಲಾದೇಶ ತಂಡ, ಮುಂಬರುವ ಟಿ20 ವಿಶ್ವಕಪ್ ಟೂರ್ನಿಯಲ್ಲಿನ ಭಾರತದಲ್ಲಿ ನಡೆಯಲಿರುವ ಪಂದ್ಯಗಳನ್ನು ಶ್ರೀಲಂಕಕ್ಕೆ ಸ್ಥಳಾಂತರಿಸಬೇಕೆಂದು ಮನವಿ ಮಾಡಿತ್ತು. ಇದನ್ನು ಐಸಿಸಿ ನಿರಾಕರಿಸಿತ್ತು.
ಭಾರತದ ಪಂದ್ಯವನ್ನು ಬಾಯ್ಕಟ್ ಮಾಡಿರುವ ಪಾಕ್ ನಿಲುವಿನ ಬಗ್ಗೆ ಸೂರ್ಯಕುಮಾರ್ ಪ್ರತಿಕ್ರಿಯೆ!
ಇದರ ಪರಿಣಾಮ ಬಾಂಗ್ಲಾದೇಶ ತಂಡ, ಐಸಿಸಿ ಟಿ20 ವಿಶ್ವಕಪ್ ಟೂರ್ನಿಯನ್ನು ಬಾಯ್ಕಟ್ ಮಾಡಿದೆ. ಇದು ಭಾರತ ಹಾಗೂ ಪಾಕಿಸ್ತಾನ ನಡುವಣ ಟಿ20 ವಿಶ್ವಕಪ್ ಟೂರ್ನಿಯ ಪಂದ್ಯದ ಮೇಲೂ ಪರಿಣಾಮ ಬೀರಿದೆ. ಪಾಕಿಸ್ತಾನ ತಂಡ ಫೆಬ್ರವರಿ 15 ರಂದು ಭಾರತ ವಿರುದ್ಧದ ಪಂದ್ಯವನ್ನು ಬಹಿಷ್ಕರಿಸಿದೆ.
ಮುಸ್ತಾಫಿಝುರ್ ರೆಹಮಾನ್ ಪಿಎಸ್‌ಎಲ್‌ಗೆ ಪ್ರವೇಶ
ಲಾಹೋರ್ ಖಲಂದರ್ಸ್ ತಂಡವು ಬಾಂಗ್ಲಾದೇಶದ ಅನುಭವಿ ವೇಗದ ಬೌಲರ್ ಮುಸ್ತಾಫಿಝುರ್ ರೆಹಮಾನ್ ಅವರನ್ನು ಪಿಎಸ್‌ಎಲ್‌ನ ಮುಂಬರುವ ಋತುವಿಗಾಗಿ 'ನೇರ ಸಹಿ' ಎಂದು ಸೇರಿಸಿಕೊಂಡಿದೆ. ಖಲಂದರ್ಸ್ ತಂಡವು ಅವರನ್ನು 6.44 ಕೋಟಿ ಪಾಕಿಸ್ತಾನಿ ರೂಪಾಯಿಗಳ ಭಾರಿ ಒಪ್ಪಂದದೊಂದಿಗೆ 'ನೇರ ಸಹಿ' ಎಂದು ಸೇರಿಸಿಕೊಂಡಿದೆ. ಮುಸ್ತಾಫಿಝುರ್ ಫ್ರಾಂಚೈಸಿಯೊಂದಿಗೆ ದೀರ್ಘಕಾಲದ ಸಂಬಂಧವನ್ನು ಹೊಂದಿದ್ದಾರೆ, ಈ ಹಿಂದೆ ಎರಡು ಋತುಗಳಲ್ಲಿ ಇದೇ ತಂಡಕ್ಕಾಗಿ ಆಡಿದ್ದರು. ಭುಜದ ಗಾಯದಿಂದಾಗಿ ಅವರು 2016ರಲ್ಲಿ ಒಂದೇ ಒಂದು ಪಂದ್ಯವನ್ನು ತಪ್ಪಿಸಿಕೊಂಡರೂ, ಅವರು 2018 ರ ಋತುವಿನಲ್ಲಿ ಐದು ಪಂದ್ಯಗಳಲ್ಲಿ ಆಡಿದರು ಹಾಗೂ 6.43 ರ ಅತ್ಯುತ್ತಮ ಎಕಾನಮಿ ದರದಲ್ಲಿ ನಾಲ್ಕು ವಿಕೆಟ್‌ಗಳನ್ನು ಪಡೆದಿದ್ದರು.
World Legends Pro T20 League: ಪುಣೆ ಪ್ಯಾಂಥರ್ಸ್ ಮಣಿಸಿ ಪ್ರಶಸ್ತಿ ಮುಡಿಗೇರಿಸಿಕೊಂಡ ದುಬೈ ರಾಯಲ್ಸ್!
ಮುಸ್ತಾಫಿಜುರ್ ರೆಹಮಾನ್ ಸುತ್ತ ವಿವಾದವಿತ್ತು
ಇತ್ತೀಚೆಗೆ ಕ್ರಿಕೆಟ್ ಜಗತ್ತಿನಲ್ಲಿ ಮುಸ್ತಾಫಿಝುರ್ ರೆಹಮಾನ್ ಬಗ್ಗೆ ಒಂದು ದೊಡ್ಡ ವಿವಾದ ಭುಗಿಲೆದ್ದಿತು. ಕೆಕೆಆರ್, ಬಾಂಗ್ಲಾ ವೇಗಿಯನ್ನು ಕೈ ಬಿಟ್ಟ ಬಳಿಕ ಬಾಂಗ್ಲಾದೇಶ ಕ್ರಿಕೆಟ್ ಮಂಡಳಿ (ಬಿಸಿಬಿ) ಇದರ ಬಗ್ಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿತು ಮತ್ತು ಅಂತಿಮವಾಗಿ ಭದ್ರತಾ ಕಾಳಜಿಯನ್ನು ಉಲ್ಲೇಖಿಸಿ ಭಾರತದಲ್ಲಿ ನಡೆಯಲಿರುವ ಟಿ20 ವಿಶ್ವಕಪ್ ಟೂರ್ನಿಯಲ್ಲಿ ಭಾಗವಹಿಸದಿರಲು ನಿರ್ಧರಿಸಿತು. ಈ ಕಠಿಣ ನಿರ್ಧಾರದ ನಂತರ, ಐಸಿಸಿ ಬಾಂಗ್ಲಾದೇಶವನ್ನು ಟೂರ್ನಿಯಿಂದ ತೆಗೆದುಹಾಕಿ ಸ್ಕಾಟ್ಲೆಂಡ್ ಅನ್ನು ಅವರ ಸ್ಥಾನದಲ್ಲಿ ಸೇರಿಸಿಕೊಂಡಿತು.
ಬಾಂಗ್ಲಾದೇಶ ವಿಶ್ವಕಪ್‌ನಿಂದ ಹೊರಬಿದ್ದ ನಂತರ, ಪಾಕಿಸ್ತಾನ ಕೂಡ ಬಲವಾದ ನಿಲುವನ್ನು ತೆಗೆದುಕೊಂಡಿದೆ. ಫೆಬ್ರವರಿ 15 ರಂದು ಕೊಲಂಬೊದಲ್ಲಿ ನಡೆಯಲಿರುವ ಭಾರತ ವಿರುದ್ಧದ ಹೈ ಪ್ರೊಫೈಲ್ ಪಂದ್ಯವನ್ನು ಬಹಿಷ್ಕರಿಸಲು ಪಾಕಿಸ್ತಾನ ಈಗ ಯೋಜಿಸುತ್ತಿದೆ. ಪ್ರಧಾನಿ ಶಹಬಾಜ್ ಷರೀಫ್ ಈ ಬಗ್ಗೆ ತಮ್ಮ ಸಂಪುಟಕ್ಕೆ ಮಾಹಿತಿ ನೀಡಿದ್ದಾರೆ, ಆದರೆ ಕುತೂಹಲಕಾರಿಯಾಗಿ, ಪಾಕಿಸ್ತಾನ ಕ್ರಿಕೆಟ್ ಮಂಡಳಿ (ಪಿಸಿಬಿ) ಈ ಬಹಿಷ್ಕಾರದ ಬಗ್ಗೆ ಐಸಿಸಿಗೆ ಇನ್ನೂ ಅಧಿಕೃತವಾಗಿ ತಿಳಿಸಿಲ್ಲ.