Asia Cup 2025: ಬಿಸಿಲಿನ ತಾಪ ಹೆಚ್ಚಳ; ಏಷ್ಯಾಕಪ್ ಪಂದ್ಯಗಳ ಸಮಯದಲ್ಲಿ ಬದಲಾವಣೆ
ಸೆಪ್ಟೆಂಬರ್‌ನಲ್ಲಿ ಪಂದ್ಯಾವಳಿ ನಡೆಯುವ ಸಮಯದಲ್ಲಿ ಹಗಲಿನ ತಾಪಮಾನವು 40 ಡಿಗ್ರಿಗಳ (ಡಿಗ್ರಿ) ಆರಂಭಕ್ಕೆ ಏರುವ ನಿರೀಕ್ಷೆಯಿದೆ. ಮತ್ತು ತಡರಾತ್ರಿಯವರೆಗೆ ಹಾಗೆಯೇ ಇರುತ್ತದೆ. ಇಂತಹ ಸುಡುವ ಶಾಖದಲ್ಲಿ ಆಡುವುದನ್ನು ತಪ್ಪಿಸಲು, ಕ್ರಿಕೆಟ್ ಮಂಡಳಿಗಳು ಪಂದ್ಯಗಳನ್ನು ಸ್ವಲ್ಪ ಮುಂದೂಡಲು ಪ್ರಸಾರಕರಿಗೆ ವಿನಂತಿಯನ್ನು ಮಾಡಲಾಯಿತು. ಬದಲಾವಣೆಗಳಿಗೆ ಪ್ರಸಾರಕರೂ ಕೂಡ ಒಪ್ಪಿಗೆ ಸೂಚಿಸಿದ್ದಾರೆ ಎನ್ನಲಾಗಿದೆ.

-

ದುಬೈ: ಯುಎಇಯಲ್ಲಿ ಬಿಸಿಲಿನ ತಾಪ ಹೆಚ್ಚಾಗಿರುವ ಕಾರಣ ಮುಂದಿನ ತಿಂಗಳು ನಡೆಯಲಿರುವ ಏಷ್ಯಾಕಪ್‌ನ(Asia Cup 2025) ಪಂದ್ಯದ ಸಮಯದಲ್ಲಿ ಬದಲಾವಣೆಯನ್ನು ಮಾಡಲು ಏಷ್ಯನ್ ಕ್ರಿಕೆಟ್ ಕೌನ್ಸಿಲ್ (ACC) ನಿರ್ಧರಿಸಿದೆ ಎಂದು ವರದಿಯಾಗಿದೆ. ಫೈನಲ್ ಸೇರಿ ಒಟ್ಟು 19 ಪಂದ್ಯಗಳು ದುಬೈ (Dubai) ಮತ್ತು ಅಬುಧಾಬಿ (Abu Dhabi)ಯಲ್ಲಿ ನಿಗದಿಯಾಗಿದೆ. ಪಂದ್ಯಾವಳಿ ಸೆ.9 ರಿಂದ ಆರಂಭವಾಗಲಿದೆ.
ಮೂಲ ವೇಳಾಪಟ್ಟಿಯಂತೆ ಯುಎಇ ಸಮಯ ಸಂಜೆ 6 ಗಂಟೆಗೆ ಪ್ರಾರಂಭವಾಗುವ ಪಂದ್ಯಗಳು ಭಾರತದಲ್ಲಿ ಸಂಜೆ 7:30 ಕ್ಕೆ ಆರಂಭವಾಗ ಬೇಕಿತ್ತು. ಆದರೆ ಇದೀಗ ಪಂದ್ಯವನ್ನು ಅರ್ಧ ಗಂಟೆ ತಡವಾಗಿ, ಅಂದರೆ 6.30 ಕ್ಕೆ ಪಂದ್ಯ ಆರಂಭಿಸುವ ಸಾಧ್ಯತೆ ಇದೆ. ಆಗ ಭಾರತೀಯ ಕಾಲ ಮಾನದಂತೆ 7:30ರ ಬದಲಾಗಿ ರಾತ್ರಿ 8 ಗಂಟೆಗೆ ಪಂದ್ಯ ಆರಂಭವಾಗಲಿದೆ.
ಸೆಪ್ಟೆಂಬರ್‌ನಲ್ಲಿ ಪಂದ್ಯಾವಳಿ ನಡೆಯುವ ಸಮಯದಲ್ಲಿ ಹಗಲಿನ ತಾಪಮಾನವು 40 ಡಿಗ್ರಿಗಳ (ಡಿಗ್ರಿ) ಆರಂಭಕ್ಕೆ ಏರುವ ನಿರೀಕ್ಷೆಯಿದೆ. ಮತ್ತು ತಡರಾತ್ರಿಯವರೆಗೆ ಹಾಗೆಯೇ ಇರುತ್ತದೆ. ಇಂತಹ ಸುಡುವ ಶಾಖದಲ್ಲಿ ಆಡುವುದನ್ನು ತಪ್ಪಿಸಲು, ಕ್ರಿಕೆಟ್ ಮಂಡಳಿಗಳು ಪಂದ್ಯಗಳನ್ನು ಸ್ವಲ್ಪ ಮುಂದೂಡಲು ಪ್ರಸಾರಕರಿಗೆ ವಿನಂತಿಯನ್ನು ಮಾಡಲಾಯಿತು. ಬದಲಾವಣೆಗಳಿಗೆ ಪ್ರಸಾರಕರೂ ಕೂಡ ಒಪ್ಪಿಗೆ ಸೂಚಿಸಿದ್ದಾರೆ ಎನ್ನಲಾಗಿದೆ.
19 ಪಂದ್ಯಗಳ ಪೈಕಿ ಸೆಪ್ಟೆಂಬರ್ 15 ರಂದು ಅಬುಧಾಬಿಯ ಜಾಯೆದ್ ಕ್ರಿಕೆಟ್ ಕ್ರೀಡಾಂಗಣದಲ್ಲಿ ನಡೆಯುವ ಯುಎಇ ಮತ್ತು ಓಮನ್ ನಡುವಿನ ಏಕೈಕ ಪಂದ್ಯಕ್ಕೆ ಯಾವುದೇ ಪರಿಣಾಮ ಬೀರುವುದಿಲ್ಲ. ಈ ಪಂದ್ಯ ಮೂಲ ನಿಗದಿ ಸಮಯದಲ್ಲೇ ಆರಂಭವಾಗಲಿದೆ.
ಇದನ್ನೂ ಓದಿ Asia Cup 2025: ಏಷ್ಯಾಕಪ್‌ಗೆ ಪ್ರತ್ಯೇಕವಾಗಿ ಪ್ರಯಾಣ ಬೇಳೆಸಲಿರುವ ಭಾರತೀಯ ಆಟಗಾರರು
8 ತಂಡಗಳನ್ನು ಎರಡು ಗುಂಪುಗಳಾಗಿ ವಿಂಗಡಿಸಲಾಗಿದೆ. 'ಎ' ಗುಂಪಿನಲ್ಲಿ ಭಾರತ, ಪಾಕಿಸ್ತಾನ, ಯುಎಇ, ಮತ್ತು ಒಮಾನ್ ತಂಡಗಳಿದ್ದರೆ, 'ಬಿ' ಗುಂಪಿನಲ್ಲಿ ಶ್ರೀಲಂಕಾ, ಬಾಂಗ್ಲಾದೇಶ, ಅಫ್ಘಾನಿಸ್ತಾನ, ಮತ್ತು ಹಾಂಗ್ ಕಾಂಗ್ ಕಾಣಿಸಿಕೊಂಡಿದೆ.