ಸ್ವಾತಂತ್ರ್ಯೋತ್ಸವ ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

ಹಾಕಿ ಏಷ್ಯಾ ಕಪ್ ವೇಳಾಪಟ್ಟಿ ಪ್ರಕಟ; ಭಾರತಕ್ಕೆ ಚೀನಾ ಮೊದಲ ಎದುರಾಳಿ

Asia Cup hockey schedule: ಭಾರತ ಮತ್ತು ಪಾಕಿಸ್ತಾನ ತಂಡಗಳು ಈ ಟೂರ್ನಿಯಲ್ಲಿ ತಲಾ ಮೂರು ಬಾರಿ ಪ್ರಶಸ್ತಿ ಗೆದ್ದಿವೆ. ಭಾರತ ಕೊನೆಯ ಬಾರಿ 2017ರಲ್ಲಿ ಢಾಕಾದಲ್ಲಿ 2–1 ರಿಂದ ಮಲೇಷ್ಯಾ ತಂಡವನ್ನು ಸೋಲಿಸಿ ಚಾಂಪಿಯನ್ ಆಗಿತ್ತು. ಕೊರಿಯಾ ಈ ಟೂರ್ನಿಯ ಯಶಸ್ವಿ ತಂಡ. ಐದು ಬಾರಿ ಚಾಂಪಿಯನ್ ಆಗಿದೆ.

Asia Cup hockey: ಭಾರತಕ್ಕೆ ಚೀನಾ ಮೊದಲ ಎದುರಾಳಿ

Abhilash BC Abhilash BC Aug 20, 2025 11:43 AM

ನವದೆಹಲಿ: ಬಹುನಿರೀಕ್ಷಿತ ಹಾಕಿ ಏಷ್ಯಾಕಪ್‌(Asia Cup hockey)ಗೆ ಒಂದು ವಾರ ಬಾಕಿ ಇರುವಾಗ, ಪಾಕಿಸ್ತಾನದ ಅಧಿಕೃತ ನಿರಾಕರಣೆ ಮತ್ತು ಒಮಾನ್ ಪಂದ್ಯಾವಳಿಯಿಂದ ಹಿಂದೆ ಸರಿದ ನಂತರ ಏಷ್ಯನ್ ಹಾಕಿ ಫೆಡರೇಶನ್ ಅಂತಿಮವಾಗಿ ಸ್ಪರ್ಧೆಯ ವೇಳಾಪಟ್ಟಿಯನ್ನು(Asia Cup hockey schedule) ಪ್ರಕಟಿಸಿದೆ. ಪಾಕಿಸ್ತಾನ ಮತ್ತು ಒಮನ್ ತಂಡಗಳ ಸ್ಥಾನದಲ್ಲಿ ಬಾಂಗ್ಲಾದೇಶ ಮತ್ತು ಕಜಕಿಸ್ತಾನ ತಂಡಗಳು ಆಡಲಿವೆ.

ಟೂರ್ನಿಯು ನಿಗದಿಯಂತೆ ಇದೇ 29 ರಿಂದ ಸೆಪ್ಟೆಂಬರ್‌ 7ರತನಕ ನಡೆಯಲಿದೆ. ಆತಿಥೇಯ ಭಾರತವು, ಚೀನಾ, ಜಪಾನ್ ಮತ್ತು ಕಜಕಿಸ್ತಾನ ತಂಡಗಳೊಂದಿಗೆ ‘ಎ’ ಗುಂಪಿನಲ್ಲಿದೆ. ಹಾಲಿ ಚಾಂಪಿಯನ್ ಕೊರಿಯಾ, ಮಲೇಷ್ಯಾ, ಚೀನಾ ತೈಪಿ ಮತ್ತು ಬಾಂಗ್ಲಾದೇಶ ತಂಡಗಳು ‘ಬಿ’ ಗುಂಪಿನಲ್ಲಿವೆ. ಭಾರತ ತಂಡ ಚೀನಾ ವಿರುದ್ಧ ಆಡುವ ಮೂಲಕ ತನ್ನ ಅಭಿಯಾನ ಆರಂಭಿಸಲಿದೆ.

8 ತಂಡಗಳ ಈ ಟೂರ್ನಿಯಲ್ಲಿ ಪ್ರಶಸ್ತಿ ಗೆಲ್ಲುವ ತಂಡವು, ಬೆಲ್ಜಿಯಂ ಮತ್ತು ನೆದರ್ಲೆಂಡ್ಸ್‌ನಲ್ಲಿ ನಡೆಯಲಿರುವ 2026ರ ವಿಶ್ವಕಪ್‌ನಲ್ಲಿ ಆಡುವ ಅರ್ಹತೆ ಪಡೆಯಲಿದೆ. ಗುಂಪು ಹಂತದ ಪಂದ್ಯಗಳ ನಂತರ ಸೆ. 3 ರಿಂದ 6ರವರೆಗೆ ಸೂಪರ್‌-4 ಹಂತದ ಪಂದ್ಯಗಳು ನಡೆಯಲಿವೆ. ಇದರಲ್ಲಿ ಮೊದಲ ಎರಡು ಸ್ಥಾನ ಪಡೆಯುವ ತಂಡಗಳು ಫೈನಲ್ ಆಡಲಿವೆ.

ಫೈನಲ್ ಪಂದ್ಯ ಸೆ. 7ರಂದು ನಿಗದಿಯಾಗಿದೆ. ಸೂಪರ್-4ನಲ್ಲಿ ಮೂರು ಮತ್ತು ನಾಲ್ಕನೇ ಸ್ಥಾನ ಪಡೆಯುವ ತಂಡಗಳ ನಡುವಣ ಪಂದ್ಯ ಮತ್ತು 5 ಮತ್ತು 6ನೇ ಸ್ಥಾನಕ್ಕೆ ಕ್ಲಾಸಿಫಿಕೇಷನ್ ಪಂದ್ಯವೂ ಅಂದೇ ನಡೆಯಲಿದೆ.

ಭಾರತ ಮತ್ತು ಪಾಕಿಸ್ತಾನ ತಂಡಗಳು ಈ ಟೂರ್ನಿಯಲ್ಲಿ ತಲಾ ಮೂರು ಬಾರಿ ಪ್ರಶಸ್ತಿ ಗೆದ್ದಿವೆ. ಭಾರತ ಕೊನೆಯ ಬಾರಿ 2017ರಲ್ಲಿ ಢಾಕಾದಲ್ಲಿ 2–1 ರಿಂದ ಮಲೇಷ್ಯಾ ತಂಡವನ್ನು ಸೋಲಿಸಿ ಚಾಂಪಿಯನ್ ಆಗಿತ್ತು. ಕೊರಿಯಾ ಈ ಟೂರ್ನಿಯ ಯಶಸ್ವಿ ತಂಡ. ಐದು ಬಾರಿ ಚಾಂಪಿಯನ್ ಆಗಿದೆ.

ಇದನ್ನೂ ಓದಿ Hockey Asia Cup 2025: ಹಾಕಿ ಏಷ್ಯಾಕಪ್‌ನಿಂದ ಹಿಂದೆ ಸರಿದ ಪಾಕ್‌