ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ಏಷ್ಯನ್‌ ಗೇಮ್ಸ್‌ ಕ್ರಿಕೆಟ್‌; ಪಾಕ್‌ ಸದೆಬಡಿದು ಚಿನ್ನ ಗೆದ್ದ ಟೀಮ್‌ ಇಂಡಿಯಾ

Pakistan vs India Asian Games Cricket: ಏಷ್ಯನ್‌ ಗೇಮ್ಸ್‌ ಕ್ರಿಕೆಟ್‌ನಲ್ಲಿಯೂ ಪಾಕಿಸ್ತಾನ ಎದುರು ಭಾರತ ತಂಡ ನೋ ಹ್ಯಾಂಡ್‌ಶೇಕ್ ಪಾಲಿಸಿ ಮುಂದುವರಿಸಿತು. ಕಳೆದ ಒಂದು ವರ್ಷದಿಂದ ಭಾರತ-ಪಾಕ್ ತಂಡಗಳು (ಕಿರಿಯರು-ಹಿರಿಯರು) ಪರಸ್ಪರ ಒಂಬತ್ತನೇ ಬಾರಿಗೆ ಎದುರಾದ ದೃಷ್ಟಾಂತ ಇದಾಗಿದ್ದು, ಎರಡೂ ತಂಡಗಳ ಕ್ರಿಕೆಟಿಗರು ಒಮ್ಮೆಯೂ ಹಸ್ತ ಲಾಘವ ಮಾಡಿಲ್ಲ.

ಏಷ್ಯನ್‌ ಗೇಮ್ಸ್‌; ಪಾಕ್‌ ಸದೆಬಡಿದು ಚಿನ್ನ ಗೆದ್ದ ಟೀಮ್‌ ಇಂಡಿಯಾ

Abhishek Sharma -

Abhilash BC
Abhilash BC Oct 3, 2026 1:35 PM

ನಗೋಯಾ, ಅ.3: ಸಾಂಪ್ರದಾಯಿಕ ಬದ್ಧ ಎದುರಾಳಿ ಪಾಕಿಸ್ತಾನವನ್ನು ಮಣಿಸಿದ ಟೀಮ್‌ ಇಂಡಿಯಾ ಏಷ್ಯನ್‌ ಗೇಮ್ಸ್‌ನಲ್ಲಿ ಚಿನ್ನದ ಪದಕವನ್ನು ತನ್ನಲೇ ಉಳಿಸಿಕೊಂಡಿದೆ. ಶನಿವಾರ ಇಲ್ಲಿ ನಡೆದ ಫೈನಲ್‌ ಪಂದ್ಯದಲ್ಲಿ ಶ್ರೇಯಸ್‌ ಅಯ್ಯರ್‌ ಸಾರಥ್ಯದ ಭಾರತ ತಂಡ 19 ರನ್‌ ಅಂತರದ ಗೆಲುವು ಸಾಧಿಸಿತು. ಸೋಲು ಕಂಡ ಪಾಕಿಸ್ತಾನ ಬೆಳ್ಳಿ ಪದಕಕ್ಕೆ ತೃಪ್ತಿಪಟ್ಟಿತು.

ಟಾಸ್‌ ಗೆದ್ದು ಬ್ಯಾಟಿಂಗ್‌ ಆಯ್ದುಕೊಂಡ ಭಾರತ ಬಿರುಸಿನ ಬ್ಯಾಟಿಂಗ್‌ ನಡೆಸಿ ನಿಗದಿತ 20 ಓವರ್‌ಗಳಲ್ಲಿ 6 ವಿಕೆಟ್‌ಗೆ 211 ರನ್‌ ಪೇರಿಸಿತು. ಸವಾಲಿನ ಮೊತ್ತವನ್ನು ಒಂದು ಹಂತದವರೆಗೆ ದಿಟ್ಟ ರೀತಿಯಲ್ಲಿ ಬೆನ್ನಟ್ಟಿಕೊಂಡು ಬಂದ ಪಾಕಿಸ್ತಾನ ಅಂತಿಮವಾಗಿ 6 ವಿಕೆಟ್‌ಗೆ 192 ರನ್‌ ಗಳಿಶಲಷ್ಟೇ ಶಕ್ತವಾಗಿ ಶರಣಾಯಿತು.

ಗುರಿ ಬೆನ್ನಟ್ಟಿದ ಪಾಕಿಸ್ತಾನ ಉತ್ತಮ ಆರಂಭವನ್ನೇ ಪಡೆಯಿತು. ಓವರ್‌ಗೆ 10ರಂತೆ ರನ್‌ ಗಳಿಸಿ ಮುನ್ನುಗಿತು. ಈ ವೇಳೆ ವಾಷಿಂಗ್ಟನ್‌ ಸುಂದರ್‌ ನಾಯಕ ಸಾಹಿಬ್‌ಜಾದಾ ಫರ್ಹಾನ್(10) ವಿಕೆಟ್‌ ಕಿತ್ತು ಕಡಿವಾಣ ಹಾಕಿದರು. ಈ ವಿಕೆಟ್‌ ಪತನದ ಬಳಿಕ ಪಾಕ್‌ ದಿಢೀರ್‌ ಕುಸಿತ ಕಂಡಿತು. 6 ರನ್‌ ಅಂತರದಲ್ಲಿ ಪ್ರಮುಖ ಮೂರು ವಿಕೆಟ್‌ ಕಳೆದುಕೊಂಡಿತು. ಕೆಳ ಕ್ರಮಾಂಕದಲ್ಲಿ ಮತ್ತೆ ಪುಡಿದೆದ್ದ ಪಾಕ್‌ ಆಕ್ರಮಣಕಾರಿ ಬ್ಯಾಟಿಂಗ್‌ ನಡೆಸಿ ಚೇತರಿಕೆ ಕಂಡಿತು. ಹಸನ್ ನವಾಜ್ ಮತ್ತು ಸೈಮ್ ಅಯೂಬ್ ಸೇರಿಕೊಂಡು 87 ರನ್‌ಗಳ ಜತೆಯಾಟ ನಡೆಸಿದರು.



ಶಕ್ತಿ ಮೀರಿ ಬ್ಯಾಟಿಂಗ್‌ ನಡೆಸಿದ ನವಾಜ್‌ 7 ಸಿಕ್ಸರ್‌ ಮತ್ತು 5 ಬೌಂಡರಿ ನೆರವಿನಿಂದ 96 ರನ್‌ ಗಳಿಸಿದರು. ಆದರೆ ತಂಡವನ್ನು ಗುರಿ ತಲುಪಿಸಲು ಸಾಧ್ಯವಾಗಲಿಲ್ಲ. ಭಾರತ ಪರ ಅನುಭವಿ ಬೌಲರ್‌ ಜಸ್‌ಪ್ರೀತ್‌ ಬುಮ್ರಾ 33 ರನ್‌ ಬಿಟ್ಟುಕೊಟ್ಟು ಒಂದೂ ವಿಕೆಟ್‌ ಕೀಳಲು ವಿಫಲರಾದರು. ಅಕ್ಷರ್‌ ಪಟೇಲ್‌, ವಾಷಿಂಗ್ಟನ್‌ ಸುಂದರ್‌ ಮತ್ತು ಶಿವಂ ದುಬೆ ತಲಾ ಎರಡು ವಿಕೆಟ್‌ ಪಡೆದರು.

ಇದಕ್ಕೂ ಮುನ್ನ ಬ್ಯಾಟಿಂಗ್‌ ನಡೆಸಿದ ಭಾರತ ತಂಡವು ಚುರುಕಿನ ಆರಂಭವನ್ನು ಪಡೆಯಿತು. ಅಭಿಷೇಕ್ ಶರ್ಮಾ ಅವರೊಂದಿಗೆ ಇನ್ನಿಂಗ್ಸ್ ಆರಂಭಿಸಿದ್ದ 15 ವರ್ಷದ ವೈಭವ್ ಸೂರ್ಯವಂಶಿ ಕೇವಲ ಒಂಬತ್ತು ಎಸೆತಗಳನ್ನು ಎದುರಿಸುವಷ್ಟರಲ್ಲಿ ಎರಡು ಸಿಕ್ಸರ್‌ಗಳನ್ನು ಸಿಡಿಸಿದರು. ಆದರೆ ಪಾಕಿಸ್ತಾನದ ಆಲ್‌ರೌಂಡರ್ ಸೈಮ್ ಅಯೂಬ್ ಬೌಲಿಂಗ್‌ನಲ್ಲಿ 'ರಿವರ್ಸ್-ಸ್ವೀಪ್' ಮಾಡಲು ಪ್ರಯತ್ನಿಸಿ ಕೀಪರ್‌ ಕ್ಯಾಚ್‌ನೊಂದಿಗೆ ವಿಕೆಟ್‌ ಕಳೆದುಕೊಂಡರು. ಈ ವೇಳೆ ಅಯೂಬ್, ಮಗುವನ್ನು ತೊಟ್ಟಿಲಲ್ಲಿ ತೂಗುವಂತೆ ಕೈಗಳನ್ನು ಹಿಡಿದು ಸಂಭ್ರಮಿಸಿದ ಘಟನೆಯೂ ನಡೆಯಿತು.

ಅಭಿಷೇಕ್‌ ಶರ್ಮ ಎಂದಿನಂತೆ ಸ್ಫೋಟಕ ಬ್ಯಾಟಿಂಗ್‌ ನಡೆಸಿ ಅರ್ಧಶತಕ ಬಾರಿಸಿದರು. 28 ಎಸೆತಗಳಿಂದ ಬರೋಬ್ಬರಿ 7 ಸಿಕ್ಸರ್‌ ಮತ್ತು 3 ಬೌಂಡರಿ ಸಿಡಿಸಿ 61 ರನ್‌ ಗಳಿಸಿದರು. ಇದಾದ ಬಳಿಕ ಕೆಲ ಕ್ರಮಾಂಕದಲ್ಲಿ ಸಿಡಿದು ನಿಂತ ತಿಲಕ್‌ ವರ್ಮಾ ಅಜೇಯ ಅರ್ಧಶತಕ ಸಿಡಿಸಿ ತಂಡದ ಮೊತ್ತವನ್ನು 200ರ ಗಡಿ ದಾಟಿಸಿದರು. 22 ಎಸೆತ ಎದುರಿಸಿದ ತಿಲಕ್‌ 4 ಸಿಕ್ಸರ್‌ ಮತ್ತು 3 ಬೌಂಡರಿ ಬಾರಿಸಿದರು.

ಸಂಜು ಸ್ಯಾಮ್ಸನ್‌(2) ಈ ಪಂದ್ಯದಲ್ಲಿಯೂ ಬ್ಯಾಟಿಂಗ್‌ ವೈಫಲ್ಯ ಕಂಡರು. ಉಳಿದಂತೆ ನಾಯಕ ಶ್ರೇಯಸ್‌ ಅಯ್ಯರ್‌(21), ಇಶಾನ್‌ ಕಿಶನ್‌(20) ಮತ್ತು ಶಿವಂ ದುಬೆ(27) ರನ್‌ ಗಳಿಸಿದರು. ಪಾಕಿಸ್ತಾನ ಪರ ಅಹ್ಮದ್ ದನಿಯಾಲ್ ಮತ್ತು ಅರಾಫತ್ ಮಿನ್ಹಾಸ್ ತಲಾ ಎರಡು ವಿಕೆಟ್‌ ಕಿತ್ತರು.

ಏಷ್ಯನ್ ಗೇಮ್ಸ್‌ ಗಾಲ್ಫ್‌ನಲ್ಲಿ ಐತಿಹಾಸಿಕ ಚಿನ್ನ ಗೆದ್ದ ಕನ್ನಡತಿ ಪ್ರಣವಿ ಯಾರು?

ಮುಂದುವರಿದ ನೋ ಹ್ಯಾಂಡ್‌ಶೇಕ್

ಏಷ್ಯನ್‌ ಗೇಮ್ಸ್‌ ಕ್ರಿಕೆಟ್‌ನಲ್ಲಿಯೂ ಪಾಕಿಸ್ತಾನ ಎದುರು ಭಾರತ ತಂಡ ನೋ ಹ್ಯಾಂಡ್‌ಶೇಕ್ ಪಾಲಿಸಿ ಮುಂದುವರಿಸಿತು. ಕಳೆದ ಒಂದು ವರ್ಷದಿಂದ ಭಾರತ-ಪಾಕ್ ತಂಡಗಳು (ಕಿರಿಯರು-ಹಿರಿಯರು) ಪರಸ್ಪರ ಒಂಬತ್ತನೇ ಬಾರಿಗೆ ಎದುರಾದ ದೃಷ್ಟಾಂತ ಇದಾಗಿದ್ದು, ಎರಡೂ ತಂಡಗಳ ಕ್ರಿಕೆಟಿಗರು ಒಮ್ಮೆಯೂ ಹಸ್ತ ಲಾಘವ ಮಾಡಿಲ್ಲ. ಆದರೆ ಏಷ್ಯನ್ ಗೇಮ್ಸ್‌ನ ಇತರ ಕ್ರೀಡೆಗಳಲ್ಲಿ ಪರಿಸ್ಥಿತಿ ಭಿನ್ನವಾಗಿತ್ತು. ಹಾಕಿ, ಸ್ಕ್ವಾಷ್‌, ಟೇಬಲ್ ಟೆನಿಸ್‌ ಸೇರಿ ಕೆಲವು ಕ್ರೀಡೆಯಲ್ಲಿ ಉಭಯ ತಂಡಗಳ ಆಟಗಾರರು ಪಂದ್ಯದ ಮೊದಲು ಮತ್ತು ನಂತರ ಹ್ಯಾಂಡ್‌ಶೇಕ್ ಮಾಡಿ ಸಾಂಪ್ರದಾಯಿಕ ಶಿಷ್ಟಾಚಾರಗಳನ್ನು ಪಾಲಿಸಿದರು.