ಏಷ್ಯನ್ ಗೇಮ್ಸ್; ಸಾತ್ವಿಕ್-ಚಿರಾಗ್ ಜೋಡಿಗೆ ಆಘಾತಕಾರಿ ಸೋಲು; ಮಿಶ್ರ ಟಿಟಿಯಲ್ಲಿ ಕಂಚು
Asian Games: ಮಿಶ್ರ ಡಬಲ್ಸ್ ಸೆಮಿಫೈನಲ್‌ನಲ್ಲಿ ಮನುಷ್ ಶಾ ಮತ್ತು ದಿಯಾ ಚಿಟಲೆ ಅವರು ಚೀನಾದ ವಾಂಗ್ ಚುಕಿನ್ ಮತ್ತು ಸುನ್ ಯಿಂಗ್‌ಶಾ ವಿರುದ್ಧ 8-11, 5-11, 8-11, 2-11 ಅಂತರದಲ್ಲಿ ಸೋಲನುಭವಿಸಿದರು. ಈ ಸೋಲಿನೊಂದಿಗೆ ಭಾರತೀಯ ಜೋಡಿಯು ಕಂಚಿನ ಪದಕಕ್ಕೆ ತೃಪ್ತಿಪಟ್ಟಿತು.
Satwik-Chirag -
ನಗೋಯಾ, ಸೆ.25: ಏಷ್ಯನ್ ಗೇಮ್ಸ್ 2026ರ ಪುರುಷರ ಬ್ಯಾಡ್ಮಿಂಟನ್ ಡಬಲ್ಸ್ ವಿಭಾಗದಲ್ಲಿ ಹಾಲಿ ಚಾಂಪಿಯನ್, ಭಾರತದ ಸಾತ್ವಿಕ್‌ಸಾಯಿರಾಜ್ ರಾಂಕಿರೆಡ್ಡಿ ಮತ್ತು ಚಿರಾಗ್ ಶೆಟ್ಟಿ ಆಘಾತಕಾರಿ ಸೋಲು ಕಂಡು ಮೊದಲ ಸುತ್ತಿನಲ್ಲೇ ನಿರ್ಗಮಿಸಿದರು. ಇದರೊಂದಿಗೆ ಭಾರತದ ಪದಕ ಭರವಸೆಯೊಂದು ಹುಸಿ ಗೊಂಡಿತು.
ಶುಕ್ರವಾರ ನಡೆದ ಆರಂಭಿಕ ಸುತ್ತಿನಲ್ಲಿ ಭಾರತೀಯ ಜೋಡಿ ಥಾಯ್ಲೆಂಡ್‌ನ ವಿಶ್ವದ 36ನೇ ಶ್ರೇಯಾಂಕದ ಜೋಡಿಯಾದ ಪಕ್ಕಪೋನ್ ಟೀರಾರತ್‌ಸಕುಲ್ ಮತ್ತು ಪೀರಾಚೈ ಸುಖ್‌ಫುನ್ ವಿರುದ್ಧ 21-12, 19-21, 14-21 ಅಂತರದಲ್ಲಿ ಸೋಲು ಕಂಡರು. ಈ ಸೋಲಿನೊಂದಿಗೆ, ಏಷ್ಯನ್ ಗೇಮ್ಸ್‌ನ ಹಿಂದಿನ ಆವೃತ್ತಿಯಲ್ಲಿ ಗೆದ್ದಿದ್ದ ಚಿನ್ನದ ಪದಕವನ್ನು ಉಳಿಸಿಕೊಳ್ಳುವ ಸಾತ್ವಿಕ್ ಮತ್ತು ಚಿರಾಗ್ ಅವರ ಪ್ರಯತ್ನಕ್ಕೆ ತೆರೆಬಿದ್ದಿತು.
ಹಿಂದಿನ ಸಾಧನೆಗಳನ್ನು ಗಮನಿಸಿದಾಗ, ಈ ಸೋಲು ವಿಶೇಷವಾಗಿ ಆಘಾತಕಾರಿಯಾಗಿತ್ತು. ಈ ವಾರದ ಆರಂಭದಲ್ಲಿ ಚೀನಾ ವಿರುದ್ಧದ ಸೆಮಿಫೈನಲ್ ಪಂದ್ಯದಲ್ಲಿ, ಹಾಲಿ ವಿಶ್ವ ಚಾಂಪಿಯನ್‌ಗಳಾದ ಲಿಯಾಂಗ್ ವೈ ಕೆಂಗ್ ಮತ್ತು ವಾಂಗ್ ಚಾಂಗ್ ಅವರನ್ನು 21-11, 22-20 ಅಂತರದಲ್ಲಿ ಸೋಲಿಸುವ ಮೂಲಕ ಸಾತ್ವಿಕ್ ಮತ್ತು ಚಿರಾಗ್ ಪುರುಷರ ತಂಡದ ವಿಭಾಗದಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿದ್ದರು.
ಭಾರತ vs ವೆಸ್ಟ್ ಇಂಡೀಸ್ ಏಕದಿನ ಪಂದ್ಯಗಳ ದಾಖಲೆಗಳು
ವಿಶ್ವ ಚಾಂಪಿಯನ್‌ಶಿಪ್‌ನ ಕ್ವಾರ್ಟರ್-ಫೈನಲ್ ಹಂತದಲ್ಲಿ ಹೊರಬಿದ್ದ ನಂತರ ಬಲವಾಗಿ ಪುಟಿದೆದ್ದ ಅವರು, 'ಚೀನಾ ಮಾಸ್ಟರ್ಸ್' ಪ್ರಶಸ್ತಿಯನ್ನೂ ಗೆದ್ದುಕೊಂಡಿದ್ದರು. ಏಷ್ಯನ್ ಗೇಮ್ಸ್‌ನಲ್ಲಿಯೂ ಪದಕ ಗೆಲ್ಲುವ ನೆಚ್ಚಿನ ಆಟಗಾರರಾಗಿದ್ದರು. ತಂಡ ವಿಭಾಗದಲ್ಲಿ ಉತ್ತಮ ಪ್ರದರ್ಶನ ತೋರಿದ್ದರು.
ಮಿಶ್ರ ಟಿಟಿಯಲ್ಲಿ ಕಂಚು
ಮಿಶ್ರ ಡಬಲ್ಸ್ ಸೆಮಿಫೈನಲ್‌ನಲ್ಲಿ ಮನುಷ್ ಶಾ ಮತ್ತು ದಿಯಾ ಚಿಟಲೆ ಅವರು ಚೀನಾದ ವಾಂಗ್ ಚುಕಿನ್ ಮತ್ತು ಸುನ್ ಯಿಂಗ್‌ಶಾ ವಿರುದ್ಧ 8-11, 5-11, 8-11, 2-11 ಅಂತರದಲ್ಲಿ ಸೋಲನುಭವಿಸಿದರು. ಈ ಸೋಲಿನೊಂದಿಗೆ ಭಾರತೀಯ ಜೋಡಿಯು ಕಂಚಿನ ಪದಕಕ್ಕೆ ತೃಪ್ತಿಪಟ್ಟಿತು. ಇದರೊಂದಿಗೆ ಸದ್ಯ ಭಾರತದ ಪದಕಗಳ ಸಂಖ್ಯೆ 20ಕ್ಕೆ ಏರಿಕೆಯಾಗಿದೆ. ಇದರಲ್ಲಿ 2 ಚಿನ್ನ, 8 ಬೆಳ್ಳಿ ಮತ್ತು 10 ಕಂಚಿನ ಪದಕಗಳು ಸೇರಿವೆ.