ಕೊಹ್ಲಿ, ರೋಹಿತ್ ಕಮ್‌ಬ್ಯಾಕ್, ಗಿಲ್‌ಗೆ ನಾಯಕತ್ವದ ಸವಾಲ್; ನಾಳೆ ಭಾರತ-ಆಸೀಸ್ ಮೊದಲ ಏಕದಿನ
Ro-Ko's comeback: ಕಾರ್ಯದೊತ್ತಡ ಕಾರಣಕ್ಕೆ ವೇಗಿ ಬೂಮ್ರಾಗೆ ವಿಶ್ರಾಂತಿ ನೀಡಲಾಗಿದೆ. ಹೀಗಾಗಿ ಹರ್ಷಿತ್ ರಾಣಾ, ಮೊಹಮ್ಮದ್ ಸಿರಾಜ್, ಅರ್ಶ್‌ದೀಪ್ ಸಿಂಗ್ ವೇಗವ ಬೌಲಿಂಗ್ ವಿಭಾಗವನ್ನು ಮುನ್ನಡೆಸಬೇಕಿದೆ. ರವೀಂದ್ರ ಜಡೇಜಾ ಇಲ್ಲದಿರುವ ಕಾರಣ ಆಲ್‌ರೌಂಡರ್ ಕೋಟಾ ವಾಷಿಂಗ್ಟನ್ ಸುಂದರ್‌ಗೆ ಲಭಿಸಲಿದೆ. ನಿತೀಶ್ ಕುಮಾರ್ ರೆಡ್ಡಿಗೂ ಅವಕಾಶ ನಿರೀಕ್ಷಿಸಲಾಗಿದೆ.

-

ಪರ್ತ್: ಭಾರತ ಮತ್ತು ಆಸ್ಟ್ರೇಲಿಯಾ ( AUS vs IND 1st ODI ) ನಡುವಿನ ಮೂರು ಪಂದ್ಯಗಳ ಏಕದಿನ ಸರಣಿ ಭಾನುವಾರ (ಅ. 19) ದಿಂದ ಆರಂಭವಾಗಲಿದೆ. ಮೊದಲ ಪಂದ್ಯ ಪರ್ತ್ನಲ್ಲಿ ನಡೆಯಲಿದೆ. ಪಂದ್ಯಕ್ಕೆ ಮಳೇ ಭೀತಿಯೂ ಎದುರಾಗಿದೆ. ಅಂ.ರಾ. ಟಿ20 ಹಾಗೂ ಟೆಸ್ಟ್‌ಗೆ ನಿವೃತ್ತಿ ಘೋಷಿಸಿದ್ದರಿಂದ ಕೆಲ ಸಮಯದಿಂದ ಕ್ರಿಕೆಟ್‌ನಿಂದಲೇ ದೂರ ಉಳಿದಿರುವ ರೋಹಿತ್(Rohit Sharma) ಹಾಗೂ ವಿರಾಟ್ ಕೊಹ್ಲಿ(Virat Kohli) ತಂಡಕ್ಕೆ ಮರಳುತ್ತಿರುವುದು ಈ ಸರಣಿಯ ವಿಶೇಷತೆಗಳಲ್ಲಿ ಒಂದಾಗಿದೆ. 2027ರ ಐಸಿಸಿ ಏಕದಿನ ವಿಶ್ವಕಪ್ ನಿಟ್ಟಿನಲ್ಲಿ ನೂತನ ನಾಯಕ ಶುಭಮನ್ ಗಿಲ್(Shubman Gill )ಗೂ ಈ ಸರಣಿ ಮಹತ್ವದಾಗಿದೆ.
ಗಾಯದ ಸಮಸ್ಯೆಯಿಂದ ಖಾಯಂ ನಾಯಕ ಪ್ಯಾಟ್ ಕಮ್ಮಿನ್ಸ್, ಸ್ಟಾರ್ ಆಲ್‌ರೌಂಡರ್ ಕ್ಯಾಮರೂನ್ ಗ್ರೀನ್, ಆಡಂ ಜಂಫಾ ಸೇರ ಹಲವು ಅನುಭವಿಗಳ ಗೈರಿನಲ್ಲಿ ಆಸ್ಟ್ರೇಲಿಯಾ ಕಣಕ್ಕಿಳಿಯಲಿದೆ. ತಂಡವನ್ನು ಮಿಚೆಲ್ ಮಾರ್ಷ್ ಮುನ್ನಡೆಸಲಿದ್ದಾರೆ.
ಕಾರ್ಯದೊತ್ತಡ ಕಾರಣಕ್ಕೆ ವೇಗಿ ಬೂಮ್ರಾಗೆ ವಿಶ್ರಾಂತಿ ನೀಡಲಾಗಿದೆ. ಹೀಗಾಗಿ ಹರ್ಷಿತ್ ರಾಣಾ, ಮೊಹಮ್ಮದ್ ಸಿರಾಜ್, ಅರ್ಶ್‌ದೀಪ್ ಸಿಂಗ್ ವೇಗವ ಬೌಲಿಂಗ್ ವಿಭಾಗವನ್ನು ಮುನ್ನಡೆಸಬೇಕಿದೆ. ರವೀಂದ್ರ ಜಡೇಜಾ ಇಲ್ಲದಿರುವ ಕಾರಣ ಆಲ್‌ರೌಂಡರ್ ಕೋಟಾ ವಾಷಿಂಗ್ಟನ್ ಸುಂದರ್‌ಗೆ ಲಭಿಸಲಿದೆ. ನಿತೀಶ್ ಕುಮಾರ್ ರೆಡ್ಡಿಗೂ ಅವಕಾಶ ನಿರೀಕ್ಷಿಸಲಾಗಿದೆ. ಕನ್ನಡಿಗ ಕೆ.ಎಲ್ ರಾಹುಲ್ ವಿಕೆಟ್ ಕೀಪಿಂಗ್ ಜತೆಗೆ ಮಧ್ಯಮ ಕ್ರಮಾಂಕದ ಬ್ಯಾಟಿಂಗ್ ಹೊಣೆ ನಿಭಾಯಿಸಲಿದ್ದಾರೆ. ಗಿಲ್ ಮತ್ತು ರೋಹಿತ್ ಇನಿಂಗ್ಸ್ ಆರಂಭಿಸುವ ಕಾರಣ ಜೈಸ್ವಾಲ್‌ಗೆ ಅವಕಾಶ ಕಷ್ಟ.
ಇದನ್ನೂ ಓದಿ AUS vs IND 1st ODI: ಭಾರತ-ಆಸೀಸ್ ಮೊದಲ ಪಂದ್ಯದ ಪಿಚ್ ರಿಪೋರ್ಟ್, ಹವಾಮಾನ ವರದಿ ಹೇಗಿದೆ?
ಕೊಹ್ಲಿ-ರೋಹಿತ್ ಭವಿಷ್ಯದ ಸರಣಿ
ರೋಹಿತ್ ಹಾಗೂ ವಿರಾಟ್ ಆಸ್ಟ್ರೇಲಿಯಾ ಸರಣಿ ಆಡಲಿದ್ದಾರೆ. ಆದರೆ ಅವರು 2027ರ ವಿಶ್ವಕಪ್‌ವರೆಗೂ ತಂಡದಲ್ಲಿರುತ್ತಾರೊ ಇಲ್ಲವೊ ಎಂಬುದು ಯಕ್ಷ ಪ್ರಶ್ನೆ. ವರದಿಗಳ ಪ್ರಕಾರ, ರೋಹಿತ್, ವಿರಾಟ್‌ಗೆ ಆಸ್ಟ್ರೇಲಿಯಾ ಪ್ರವಾಸವೇ ಕೊನೆ ಸರಣಿ ಆಗಲೂಬಹುದು.
ಗಿಲ್‌ಗೆ ಮೊದಲ ಪರೀಕ್ಷೆ
ಈವರೆಗೂ ಭಾರತ ರೋಹಿತ್ ನಾಯಕತ್ವದಲ್ಲಿ ಆಡಿದ 56 ಏಕದಿನದಲ್ಲಿ 42ರಲ್ಲಿ ಗೆದ್ದಿದೆ. 2 ಬಾರಿ ಏಷ್ಯಾಕಪ್, 1 ಬಾರಿ ಚಾಂಪಿಯನ್ಸ್ ಟ್ರೋಫಿಯನ್ನೂ ಗೆಲ್ಲಿಸಿಕೊಟ್ಟಿದ್ದಾರೆ. ಅವರ ನಾಯಕತ್ವದ ದಾಖಲೆ ಉತ್ತಮವಾಗಿದ್ದರೂ, 2027ರ ಏಕದಿನ ವಿಶ್ವಕಪ್ ದೃಷ್ಟಿಯಲ್ಲಿಟ್ಟುಕೊಂಡು ಈಗಲೇ ಗಿಲ್‌ಗೆ ಹೊಣೆಗಾರಿಕೆ ನೀಡಲಾಗಿದೆ. ಟೆಸ್ಟ್ ನಾಯಕತ್ವದಲ್ಲಿ ಸೈ ಎನಿಸಿಕೊಂಡಿರುವ ಗಿಲ್ ಇದೀಗ ಹಿರಿಯ ಆಟಗಾರರನ್ನು ತಂಡದಲ್ಲಿ ನಿಭಾಯಿಸುವ ಮೂಲಕ ಏಕದಿನದಲ್ಲೂ ನಾಯತ್ವದ ಸಾಮರ್ಥ ತೋರ್ಪಡಿಸಬೇಕಿದೆ. ಸರಣಿ ಗೆದ್ದರೆ ಮುಂದಿನ ವಿಶ್ವಕಪ್ ಗಿಲ್ ನಾಯಕತ್ವದಲ್ಲೇ ಆಡುವುದು ಖಚಿತ.