Babar Azam: ಬ್ಯಾಟ್‌ನಿಂದ ಸ್ಟಂಪ್‌ಗೆ ಹೊಡೆದ ಬಾಬರ್ ಅಜಂಗೆ ದಂಡದ ಬಿಸಿ ಮುಟ್ಟಿಸಿದ ಐಸಿಸಿ
ಟೆಸ್ಟ್ ಪಂದ್ಯಗಳಲ್ಲಿ ಬಾಬರ್ ಅವರ ಪ್ರದರ್ಶನವೂ ಕಳವಳಕಾರಿಯಾಗಿದೆ. 2023ರ ಆರಂಭದಿಂದ ಅವರು 15 ಟೆಸ್ಟ್‌ಗಳಲ್ಲಿ ಕೇವಲ 24.86ರ ಸರಾಸರಿಯನ್ನು ಹೊಂದಿದ್ದಾರೆ. ಸುಮಾರು 10 ತಿಂಗಳ ಕಾಲ ತಂಡದಿಂದ ಹೊರಗುಳಿದ ನಂತರ ಅವರನ್ನು ಟಿ20ಐ ತಂಡಕ್ಕೆ ಮರಳಿ ಕರೆಸಿಕೊಳ್ಳಲಾಗಿದೆ.
ಐಸಿಸಿ ನೀತಿ ಸಂಹಿತೆ ಉಲ್ಲಂಘಿಸಿದ ಬಾಬರ್ ಅಜಂಗೆ ದಂಡ -
ದುಬೈ: ರಾವಲ್ಪಿಂಡಿಯಲ್ಲಿ ಶ್ರೀಲಂಕಾ(Pakistan vs Sri Lanka) ವಿರುದ್ಧದ ಮೂರನೇ ಏಕದಿನ ಪಂದ್ಯದಲ್ಲಿ ನೀತಿ ಸಂಹಿತೆಯನ್ನು ಉಲ್ಲಂಘಿಸಿದ್ದಕ್ಕಾಗಿ ಪಾಕಿಸ್ತಾನದ ಮಾಜಿ ನಾಯಕ ಬಾಬರ್ ಅಜಂ(Babar Azam) ಅವರಿಗೆ ಐಸಿಸಿ(ICC) ದಂಡ ವಿಧಿಸಿದೆ. ಐಸಿಸಿ ನೀತಿ ಸಂಹಿತೆಯ ಆರ್ಟಿಕಲ್ 2.2 ಅನ್ನು ಉಲ್ಲಂಘಿಸಿದ್ದಕ್ಕಾಗಿ ಅವರಿಗೆ ಪಂದ್ಯ ಶುಲ್ಕದ ಶೇ. 10ರಷ್ಟು ದಂಡ ವಿಧಿಸಲಾಗಿದೆ. ಮೂರನೇ ಏಕದಿನ ಪಂದ್ಯದಲ್ಲಿ ಔಟಾದ ನಂತರ ಬ್ಯಾಟ್‌ನಿಂದ ಸ್ಟಂಪ್‌ಗಳನ್ನು ಹೊಡೆದಿದ್ದಕ್ಕಾಗಿ ಬಾಬರ್ ಅಜಂಗೆ ಈ ಶಿಕ್ಷೆ ವಿಧಿಸಲಾಗಿದೆ.
"ಅಂತರರಾಷ್ಟ್ರೀಯ ಪಂದ್ಯದ ಸಮಯದಲ್ಲಿ ಕ್ರಿಕೆಟ್ ಉಪಕರಣಗಳು ಅಥವಾ ಬಟ್ಟೆ, ನೆಲದ ಉಪಕರಣಗಳು ಅಥವಾ ಫಿಕ್ಸ್ಚರ್‌ಗಳು ಮತ್ತು ಫಿಟ್ಟಿಂಗ್‌ಗಳ ದುರುಪಯೋಗ" ಕ್ಕೆ ಸಂಬಂಧಿಸಿದೆ. ಅವರ ಶಿಸ್ತಿನ ದಾಖಲೆಗೆ ಒಂದು ಡಿಮೆರಿಟ್ ಪಾಯಿಂಟ್ ಅನ್ನು ಕೂಡ ಸೇರಿಸಲಾಗಿದೆ ಮತ್ತು ಇದು 24 ತಿಂಗಳಲ್ಲಿ ಬಾಬರ್ ಅವರ ಮೊದಲ ಅಪರಾಧವಾಗಿದೆ" ಎಂದು ಐಸಿಸಿ ತನ್ನ ಪ್ರಕಟನೆಯಲ್ಲಿ ತಿಳಿಸಿದೆ.
ಪಾಕಿಸ್ತಾನ ತಂಡದ ಬ್ಯಾಟಿಂಗ್ ಇನ್ನಿಂಗ್ಸ್‌ನ 21 ನೇ ಓವರ್‌ನಲ್ಲಿ 212 ರನ್‌ಗಳ ಸಾಧಾರಣ ಗುರಿಯನ್ನು ಬೆನ್ನಟ್ಟುತ್ತಿದ್ದಾಗ ಈ ಘಟನೆ ಸಂಭವಿಸಿತು. ಜೆಫ್ರಿ ವ್ಯಾಂಡರ್ಸೆ ಬಾಬರ್ ಅಜಂ ಅವರನ್ನು 34 ರನ್‌ಗಳಿಗೆ ಔಟ್ ಮಾಡಿದರು. ವೇಳೆ ಹತಾಶರಾದ ಬಾಬರ್ ಕ್ರೀಸ್ ಬಿಡುವ ಮೊದಲು, ತಮ್ಮ ಬ್ಯಾಟ್‌ನಿಂದ ಸ್ಟಂಪ್‌ಗಳನ್ನು ಹೊಡೆದರು. ಹೀಗಾಗಿ ಐಸಿಸಿ ನೀತಿ ಸಂಹಿತೆ ಉಲ್ಲಂಘಿಸಿದ್ದಕ್ಕಾಗಿ ಅವರನ್ನು ತಪ್ಪಿತಸ್ಥರೆಂದು ಪರಿಗಣಿಸಿದೆ.
ಇದನ್ನೂ ಓದಿ PAK vs SL: ಮೊದಲನೇ ಒಡಿಐನಲ್ಲಿಯೂ ವಿಫಲ, ವಿರಾಟ್ ಕೊಹ್ಲಿಯ ಅನಗತ್ಯ ದಾಖಲೆ ಸರಿಗಟ್ಟಿದ ಬಾಬರ್ ಆಝಮ್!
"ಆನ್-ಫೀಲ್ಡ್ ಅಂಪೈರ್‌ಗಳಾದ ಅಲೆಕ್ಸ್ ವಾರ್ಫ್ ಮತ್ತು ರಶೀದ್ ರಿಯಾಜ್, ಮೂರನೇ ಅಂಪೈರ್ ಶರ್ಫುದ್ದೌಲಾ ಇಬ್ನೆ ಶಾಹಿದ್ ಮತ್ತು ನಾಲ್ಕನೇ ಅಂಪೈರ್ ಫೈಸಲ್ ಅಫ್ರಿದಿ ಆರೋಪ ಹೊರಿಸಿದರು. ಎಮಿರೇಟ್ಸ್ ಐಸಿಸಿ ಇಂಟರ್ನ್ಯಾಷನಲ್ ಪ್ಯಾನಲ್ ಆಫ್ ಮ್ಯಾಚ್ ರೆಫರೀಸ್‌ನ ಅಲಿ ನಖ್ವಿ ಶಿಕ್ಷೆಯನ್ನು ಪ್ರಸ್ತಾಪಿಸಿದರು. ಪಾಕಿಸ್ತಾನದ ಬ್ಯಾಟ್ಸ್‌ಮನ್ ಅಪರಾಧವನ್ನು ಒಪ್ಪಿಕೊಂಡರು ಮತ್ತು ಶಿಕ್ಷೆಯನ್ನು ಸ್ವೀಕರಿಸಿದ ಕಾರಣ ಔಪಚಾರಿಕ ವಿಚಾರಣೆಯ ಅಗತ್ಯವನ್ನು ನಿರಾಕರಿಸಿದರು" ಎಂದು ಐಸಿಸಿ ತನ್ನ ಹೇಳಿಕೆಯಲ್ಲಿ ತಿಳಿಸಿದೆ.
ಎರಡನೇ ಪಂದ್ಯದಲ್ಲಿ ಬಾಬರ್ ಶತಕ ಬಾರಿಸುವ ಮೂಲಕ 83 ಇನಿಂಗ್ಸ್ ಬಳಿಕ ತಮ್ಮ ಶತಕದ ಬರ ನೀಗಿಸಿಕೊಂಡಿದ್ದರು. ಟೆಸ್ಟ್ ಪಂದ್ಯಗಳಲ್ಲಿ ಬಾಬರ್ ಅವರ ಪ್ರದರ್ಶನವೂ ಕಳವಳಕಾರಿಯಾಗಿದೆ. 2023ರ ಆರಂಭದಿಂದ ಅವರು 15 ಟೆಸ್ಟ್‌ಗಳಲ್ಲಿ ಕೇವಲ 24.86ರ ಸರಾಸರಿಯನ್ನು ಹೊಂದಿದ್ದಾರೆ. ಸುಮಾರು 10 ತಿಂಗಳ ಕಾಲ ತಂಡದಿಂದ ಹೊರಗುಳಿದ ನಂತರ ಅವರನ್ನು ಟಿ20ಐ ತಂಡಕ್ಕೆ ಮರಳಿ ಕರೆಸಿಕೊಳ್ಳಲಾಗಿದೆ.