Bharat Arun: ಲಕ್ನೋ ಸೂಪರ್ ಜೈಂಟ್ಸ್ ತಂಡಕ್ಕೆ ಬೌಲಿಂಗ್ ಕೋಚ್ ಆಗಿ ಭರತ್ ಅರುಣ್ ನೇಮಕ
ಐಪಿಎಲ್ 18ನೇ ಆವೃತ್ತಿಯಲ್ಲಿ ಎಲ್‌ಎಸ್‌ಜಿ ತಂಡವು ಏಳನೇ ಸ್ಥಾನ ಪಡೆದಿತ್ತು. ಅದರಲ್ಲೂ ತಂಡದ ಬೌಲಿಂಗ್ ವಿಭಾಗವು ನೀರಸ ಪ್ರದರ್ಶನ ತೋರಿಸಿತ್ತು. ಹಾಗಾಗಿ ಅನುಭವಿ ಭರತ್ ಅರುಣ್ ಅವರನ್ನು ತಂಡಕ್ಕೆ ಸೇರಿಸಿಕೊಳ್ಳಲಾಗಿದೆ ಎಂದು ಮೂಲಗಳು ಪಿಟಿಐಗೆ ತಿಳಿಸಿವೆ.


ಲಕ್ನೋ: ಮುಂದಿನ 19ನೇ ಆವೃತ್ತಿಯ ಐಪಿಎಲ್(IPL 2026) ಟೂರ್ನಿಗೆ ಎಲ್ಲ ಫ್ರಾಂಚೈಸಿಗಳು ತಮ್ಮ ತಂಡದ ಕೋಚಿಂಗ್ ವಿಭಾಗದಲ್ಲಿ ಮಹತ್ವ ಬದಲಾವಣೆ ಮಾಡಲು ಆರಂಭಿಸಿದ್ದು, ಎರಡು ದಿನಗಳ ಹಿಂದಷ್ಟೇ ಕೆಕೆಆರ್(KKR) ತಂಡದಿಂದ ಕೈಬಿಡಲಾಗಿದ್ದ ಭರತ್ ಅರುಣ್(Bharat Arun) ಅವರು ಲಕ್ನೋ ಸೂಪರ್ ಜೈಂಟ್ಸ್(Lucknow Super Giants) ತಂಡದ ನೂತನ ಬೌಲಿಂಗ್ ಕೋಚ್ ಆಗಿ ನೇಮಕಗೊಂಡಿದ್ದಾರೆ.
ಭರತ್ ಅರುಣ್ ಅವರು ಐಪಿಎಲ್‌ನ ನಾಲ್ಕು ಆವೃತ್ತಿಗಳಲ್ಲಿ ಕೆಕೆಆರ್ ತಂಡಕ್ಕೆ ಬೌಲಿಂಗ್ ಕೋಚ್ ಆಗಿ ಕಾರ್ಯನಿರ್ವಹಿಸಿದ್ದರು. ಇದಕ್ಕೂ ಮುನ್ನ ಟೀಮ್ ಇಂಡಿಯಾದ ಬೌಲಿಂಗ್ ಕೋಚ್ ಆಗಿ ಕಾರ್ಯ ನಿರ್ವಹಿಸಿದ್ದರು.
ಐಪಿಎಲ್ 18ನೇ ಆವೃತ್ತಿಯಲ್ಲಿ ಎಲ್‌ಎಸ್‌ಜಿ ತಂಡವು ಏಳನೇ ಸ್ಥಾನ ಪಡೆದಿತ್ತು. ಅದರಲ್ಲೂ ತಂಡದ ಬೌಲಿಂಗ್ ವಿಭಾಗವು ನೀರಸ ಪ್ರದರ್ಶನ ತೋರಿಸಿತ್ತು. ಹಾಗಾಗಿ ಅನುಭವಿ ಭರತ್ ಅರುಣ್ ಅವರನ್ನು ತಂಡಕ್ಕೆ ಸೇರಿಸಿಕೊಳ್ಳಲಾಗಿದೆ ಎಂದು ಮೂಲಗಳು ಪಿಟಿಐಗೆ ತಿಳಿಸಿವೆ.
"ಪ್ರತಿಯೊಂದು ಹಂತದಲ್ಲೂ ವೃತ್ತಿಪರತೆ, ಮಹತ್ವಾಕಾಂಕ್ಷೆ ಮತ್ತು ದೃಷ್ಟಿಕೋನವನ್ನು ಪ್ರತಿಬಿಂಬಿಸುವ ಫ್ರಾಂಚೈಸಿಯಾದ ಲಕ್ನೋ ಸೂಪರ್ ಜೈಂಟ್ಸ್‌ಗೆ ಸೇರುವುದು ಗೌರವದ ಸಂಗತಿ" ಎಂದು ಅರುಣ್ ಹೇಳಿಕೆಯಲ್ಲಿ ತಿಳಿಸಿದ್ದಾರೆ. "ಡಾ. ಸಂಜೀವ್ ಗೋಯೆಂಕಾ ಮತ್ತು ಆಡಳಿತ ಮಂಡಳಿಯೊಂದಿಗಿನ ನನ್ನ ಸಂಭಾಷಣೆಗಳು ನಂಬಲಾಗದಷ್ಟು ಚೈತನ್ಯದಾಯಕವಾಗಿದ್ದವು - ಯುವ ಭಾರತೀಯ ಪ್ರತಿಭೆಗಳಲ್ಲಿ ಹೂಡಿಕೆ ಮಾಡುವ ಮತ್ತು ದೀರ್ಘಕಾಲೀನ ಪರಂಪರೆಯನ್ನು ನಿರ್ಮಿಸುವ ಸ್ಪಷ್ಟ ಉದ್ದೇಶವಿದೆ.
"ಎಲ್‌ಎಸ್‌ಜಿ ಯುವ, ಪ್ರತಿಭಾನ್ವಿತ ಮತ್ತು ಕ್ರಿಯಾಶೀಲ ಭಾರತೀಯ ವೇಗದ ಬೌಲರ್‌ಗಳಾದ ಆಕಾಶ್ ದೀಪ್, ಆವೇಶ್ ಖಾನ್, ಮಾಯಾಂಕ್ ಯಾದವ್, ಪ್ರಿನ್ಸ್ ಯಾದವ್, ಮೊಹ್ಸಿನ್ ಖಾನ್ ಮತ್ತು ಆಕಾಶ್ ಸಿಂಗ್ ಪ್ರತಿಯೊಬ್ಬರಲ್ಲೂ ನಾನು ಅಪಾರ ಸಾಮರ್ಥ್ಯವನ್ನು ಕಾಣುತ್ತೇನೆ. ವಿಶ್ವದ ಅತ್ಯುತ್ತಮ ಬ್ಯಾಟಿಂಗ್ ಲೈನ್‌ಅಪ್‌ಗಳನ್ನು ಸವಾಲು ಮಾಡಬಲ್ಲ ಒಗ್ಗಟ್ಟಿನ, ನಿರ್ಭೀತ ಮತ್ತು ಯುದ್ಧತಂತ್ರದ ತೀಕ್ಷ್ಣವಾದ ವೇಗದ ಘಟಕವಾಗಿ ಅವರನ್ನು ರೂಪಿಸಲು ಸಹಾಯ ಮಾಡುವುದು ನನ್ನ ಧ್ಯೇಯವಾಗಿದೆ" ಎಂದು ಅರುಣ್ ತಿಳಿಸಿದ್ದಾರೆ.
ಇದನ್ನೂ ಓದಿ IPL 2026: ಕೋಲ್ಕತಾ ನೈಟ್ ರೈಡರ್ಸ್ ಹೆಡ್ ಕೋಚ್ ಹುದ್ದೆಯಿಂದ ಹೊರಬಿದ್ದ ಚಂದ್ರಕಾಂತ್ ಪಂಡಿತ್!