ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

15 ವರ್ಷಗಳ ಮಮತಾ ಬ್ಯಾನರ್ಜಿ ಸರ್ಕಾರ ಪತನಕ್ಕೆ ಮೆಸ್ಸಿ ಕಾರಣವಂತೆ!

Bengal elections: ಸತತ 2 ವರ್ಷಗಳಿಂದ, ಬಂಗಾಳ ಗೆಲ್ಲಲು ಬಿಜೆಪಿಯ ಚುನಾವಣಾ ರಣತಂತ್ರಗಾರ ಅಮಿತ್‌ ಶಾ ಹೆಣೆದ ಕಾರ್ಯತಂತ್ರ, ಬಿಜೆಪಿಯ ತಳಮಟ್ಟದ ಕಾರ್ಯಕರ್ತರು ಕಳೆದ 2 ತಿಂಗಳಲ್ಲಿ ರಾಜ್ಯವ್ಯಾಪಿ 1.50 ಲಕ್ಷಕ್ಕೂ ಹೆಚ್ಚು ಸಮುದಾಯ ಸಭೆ ನಡೆಸಿ ಮಮತಾ ಸರ್ಕಾರದ ವೈಫಲ್ಯ, ಬಾಂಗ್ಲಾದೇಶದಲ್ಲಿನ ಹಿಂದೂಗಳ ಮೇಲಿನ ದಾಳಿ ಪ್ರಸ್ತಾಪಿಸಿ, ಹಿಂದೂಗಳನ್ನು ಬಡಿದೆಬ್ಬಿಸಿದ್ದು, ಮಮತಾ ಸರ್ಕಾರದ ಓಲೈಕೆ ರಾಜಕಾರಣದ ಬಗ್ಗೆ ಗಮನ ಸೆಳೆದಿದ್ದು ಬಿಜೆಪಿ ಗೆಲುವಿಗೆ ದೊಡ್ಡ ಮಟ್ಟದಲ್ಲಿ ನೆರವು ನೀಡಿದೆ.

15 ವರ್ಷಗಳ ಮಮತಾ ಬ್ಯಾನರ್ಜಿ ಸರ್ಕಾರ ಪತನಕ್ಕೆ ಮೆಸ್ಸಿ ಕಾರಣವಂತೆ!

Lionel Messi -

Abhilash BC
Abhilash BC May 5, 2026 9:08 AM

ಕೋಲ್ಕತಾ, ಮೇ 5: 15 ವರ್ಷಗಳಿಂದ ಪಶ್ಚಿಮ ಬಂಗಾಳ(Bengal elections)ವನ್ನು ಅಕ್ಷರಶಃ ಆಳಿದ್ದ ಟಿಎಂಸಿ ನಾಯಕಿ ಮಮತಾ ಬ್ಯಾನರ್ಜಿ(Mamata Banerjee) ಅಧಿಪತ್ಯ ಕೊನೆಗೊಂಡಿದೆ. ಸಾರಸ್ಯವೆಂದರೆ ಮಮತಾರ ಈ ಅಧಿಪತನಕ್ಕೆ ಅರ್ಜೆಂಟೀನಾದ ಫುಟ್‌ಬಾಲ್ ತಾರೆ ಲಯೊನೆಲ್ ಮೆಸ್ಸಿ(Lionel Messi) ಕಾರಣ ಎಂದು ನೆಟ್ಟಿಗರು ಹೇಳಿದ್ದಾರೆ.

ಹೌದು ಕಳೆದ ವರ್ಷ ಲಯೊನೆಲ್ ಮೆಸ್ಸಿ ನಾಲ್ಕು ದಿನಗಳ ಭಾರತ ಪ್ರವಾಸವನ್ನು ಕೈಗೊಂಡಿದ್ದರು. ಈ ವೇಳೆ ಅವರು ಕೋಲ್ಕತಾಗೂ ಭೇಟಿ ನೀಡಿದ್ದರು. ಇದು ಮೆಸ್ಸಿ ಅವರ ಎರಡನೇ ಭೇಟಿಯಾಗಿತ್ತು. 2011ರಲ್ಲಿ ಮೆಸ್ಸಿ ಮೊದಲ ಬಾರಿಗೆ ಕೊಲ್ಕತಾಗೆ ಭೇಟಿ ನೀಡಿದಾಗ ಪಶ್ಚಿಮ ಬಂಗಾಳದಲ್ಲಿ ಬಹುಕಾಲ ಆಡಳಿತ ನಡೆಸಿದ್ದ ಸಿಪಿಎಂ ಅಧಿಕಾರ ಪತನಗೊಂಡು ಮಮತಾ ಬ್ಯಾನರ್ಜಿಯ ಟಿಎಂಸಿ ಸರ್ಕಾರ ಆಡಳಿತಕ್ಕೆ ಬಂದಿತು. ಇದಾದ ಬಳಿಕ ಟಿಎಂಸಿ ಸತತವಾಗಿ ಅಧಿಕಾರ ನಡೆಸುತ್ತಲೇ ಬಂದಿತ್ತು. ಇದೀಗ ಮೆಸ್ಸಿ ಎರಡನೇ ಭೇಟಿ ವೇಳೆ ಮತ್ತೊಂದು ಹೊಸ ಸರ್ಕಾರ ಅಧಿಕಾರಕ್ಕೆ ಬಂದಿದೆ. ಬಿಜೆಪಿ, ರಾಜ್ಯದಲ್ಲಿ ಮೊದಲ ಸಲ ಅಧಿಕಾರದ ಗದ್ದುಗೆ ಏರಿದೆ. ಈ ಕಾಕತಾಳಿಯ ಘಟನೆಯನ್ನು ಹೋಲಿಕೆ ಮಾಡಿ ನೆಟ್ಟಿಗರು ಮಮತಾ ಸೋಲಿಗೆ ಮೆಸ್ಸಿ ಕಾರಣ ಎಂದು ಹೇಳಿದ್ದಾರೆ.

ಬಂಗಾಳ ರಾಜ್ಯ ವಿಧಾನಸಭೆಯ 294 ಸ್ಥಾನಗಳ ಪೈಕಿ 293 ಸ್ಥಾನಗಳಿಗೆ ಚುನಾವಣೆ ನಡೆದಿದ್ದು, ಭರ್ಜರಿ ಬಹುಮತದೊಂದಿಗೆ ಬಿಜೆಪಿ ಅಧಿಕಾರಕ್ಕೆ ಬಂದಿದೆ. ಬಾಂಗ್ಲನ್ನರ ಅಕ್ರಮ ಒಳನುಸುಳುವಿಕೆ, ಹಿಂದೂಗಳ ಮೇಲಿನ ದೌರ್ಜನ್ಯ ತಡೆಯುವಲ್ಲಿ ಮಮತಾ ವಿಫಲ ಎಂಬ ಆರೋಪ, ಆಡಳಿತದಲ್ಲಿನ ಭ್ರಷ್ಟಾಚಾರದ ಆರೋಪ, ಅತಿಯಾದ ಓಲೈಕೆ ರಾಜಕಾರಣ, ವೈದ್ಯಕೀಯ ವಿದ್ಯಾರ್ಥಿನಿಯ ಮೇಲಿನ ಅತ್ಯಾಚಾರ ಪ್ರಕರಣದಲ್ಲಿ ಟಿಎಂಸಿ ನಾಯಕರ ಕೀಳು ಹೇಳಿಕೆ, ಅಭಿವೃದ್ಧಿಯಲ್ಲಿ ಕುಂಠಿತ, ಸತತ 15 ವರ್ಷಗಳ ಆಡಳಿತ ವಿರೋಧಿ ಅಲೆಗೆ ಸಿಕ್ಕ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅಧಿಕಾರ ಕಳೆದುಕೊಂಡಿದ್ದಾರೆ.

Raghava Sharma Nidle Column: ದೀದಿಗೆ ಗುಡ್‌ಬೈ , ಮೋದಿಗೆ ಹಾಯ್ ಹಾಯ್..!

ಸತತ 2 ವರ್ಷಗಳಿಂದ, ಬಂಗಾಳ ಗೆಲ್ಲಲು ಬಿಜೆಪಿಯ ಚುನಾವಣಾ ರಣತಂತ್ರಗಾರ ಅಮಿತ್‌ ಶಾ ಹೆಣೆದ ಕಾರ್ಯತಂತ್ರ, ಬಿಜೆಪಿಯ ತಳಮಟ್ಟದ ಕಾರ್ಯಕರ್ತರು ಕಳೆದ 2 ತಿಂಗಳಲ್ಲಿ ರಾಜ್ಯವ್ಯಾಪಿ 1.50 ಲಕ್ಷಕ್ಕೂ ಹೆಚ್ಚು ಸಮುದಾಯ ಸಭೆ ನಡೆಸಿ ಮಮತಾ ಸರ್ಕಾರದ ವೈಫಲ್ಯ, ಬಾಂಗ್ಲಾದೇಶದಲ್ಲಿನ ಹಿಂದೂಗಳ ಮೇಲಿನ ದಾಳಿ ಪ್ರಸ್ತಾಪಿಸಿ, ಹಿಂದೂಗಳನ್ನು ಬಡಿದೆಬ್ಬಿಸಿದ್ದು, ಮಮತಾ ಸರ್ಕಾರದ ಓಲೈಕೆ ರಾಜಕಾರಣದ ಬಗ್ಗೆ ಗಮನ ಸೆಳೆದಿದ್ದು ಬಿಜೆಪಿ ಗೆಲುವಿಗೆ ದೊಡ್ಡ ಮಟ್ಟದಲ್ಲಿ ನೆರವು ನೀಡಿದೆ.



ಟಿಎಂಸಿಯ ಮಾಜಿ ನಾಯಕ ಹಾಗೂ ಮಮತಾ ಅವರ ಆಪ್ತ ಸಹಾಯಕನಾಗಿದ್ದ ಸುವೇಂದು ಅಧಿಕಾರಿ ಬಂಗಾಳದಲ್ಲಿ ಬಿಜೆಪಿಯನ್ನು ಅಧಿಕಾರಕ್ಕೆ ತರಲು ಶ್ರಮಿಸಿದವರಲ್ಲಿ ಪ್ರಮುಖರು. , ಸುವೇಂದು ಅವರು ತಳಮಟ್ಟದ ಸಂಪರ್ಕ ಹೊಂದಿದ್ದು, ಈ ಬಾರಿ ಮಮತಾ ಭದ್ರಕೋಟೆ ಎನಿಸಿಕೊಂಡಿದ್ದ ಭವಾನಿಪುರದಲ್ಲಿಯೇ ಅವರಿಗೆ ಸೋಲುಣಿಸಿದ್ದಾರೆ. ಮುಖ್ಯಮಂತ್ರಿ ಸ್ಥಾನದ ಮೇಲೆ ಕಣ್ಣಿಟ್ಟಿರುವ ಸುವೇಂದು 2021 ರಲ್ಲಿ ಲಂಚ ಪ್ರಕರಣವೊಂದರದಲ್ಲಿ ಸಿಲುಕಿದ್ದರು. ಹೀಗಾಗಿ ಬಿಜೆಪಿ ಇವರನ್ನು ಮುಖ್ಯಮಂತ್ರಿಯಾಗಿ ನೇಮಕ ಮಾಡುವುದು ಕೊಂಚ ಅನುಮಾನ ಎನ್ನಲಾಗುತ್ತಿದೆ.