ಪಾಂಟಿಂಗ್, ಸ್ಟೀವ್ ವಾ ಹಿಂದಿಕ್ಕಿ ಸಚಿನ್ ಸಾರ್ವಕಾಲಿಕ ದಾಖಲೆ ಸನಿಹ ಬಂದ ಜೋ ರೂಟ್
ENG vs PAK 3rd Test: ರೂಟ್ ಪ್ರಸ್ತುತ ಇಂಗ್ಲೆಂಡ್ ನಾಯಕನಾಗಿ ಎರಡನೇ ಬಾರಿಗೆ ಅಧಿಕಾರ ವಹಿಸಿಕೊಂಡಿದ್ದಾರೆ. ಈ ಹಿಂದೆ 2017 ಮತ್ತು 2022 ರ ನಡುವೆ ತಂಡವನ್ನು ಮುನ್ನಡೆಸಿದ್ದರು. 2026 ರಲ್ಲಿ ಮತ್ತೆ ನಾಯಕತ್ವ ವಹಿಸಿಕೊಂಡರು. ಪಾಕಿಸ್ತಾನ ವಿರುದ್ಧದ ಮೊದಲ ಎರಡು ಟೆಸ್ಟ್‌ಗಳಲ್ಲಿ ಅವರು ಒಂದು ಅರ್ಧಶತಕ ದಾಖಲಿಸಿದ್ದರು.
Joe Root -
ಎಡ್ಜ್‌ಬಾಸ್ಟನ್, ಸೆ.10: ಪಾಕಿಸ್ತಾನ ವಿರುದ್ಧದ ಮೂರನೇ ಟೆಸ್ಟ್ ಪಂದ್ಯದಲ್ಲಿ ಇಂಗ್ಲೆಂಡ್ ಪರ ಕಣಕ್ಕಿಳಿದ ನಂತರ ಜೋ ರೂಟ್ ಟೆಸ್ಟ್ ಕ್ರಿಕೆಟ್‌ನಲ್ಲಿ ಅತಿ ಹೆಚ್ಚು ಪಂದ್ಯಗಳನ್ನಾಡಿರುವ ಆಟಗಾರರ ಪಟ್ಟಿಯಲ್ಲಿ ಮೂರನೇ ಸ್ಥಾನಕ್ಕೆ ಏರಿದರು. ಈ ಮೂಲಕ ರೂಟ್ ಆಸ್ಟ್ರೇಲಿಯಾದ ಮಾಜಿ ನಾಯಕರಾದ ರಿಕಿ ಪಾಂಟಿಂಗ್ ಮತ್ತು ಸ್ಟೀವ್ ವಾ ಅವರ ದಾಖಲೆ ಹಿಂದಿಕ್ಕಿದರು.
ಎಡ್ಜ್‌ಬಾಸ್ಟನ್ ಟೆಸ್ಟ್‌ಗೆ ಪ್ರವೇಶಿಸುವ ಮೊದಲು, ಇಂಗ್ಲೆಂಡ್‌ನ ತಾರೆ ರೂಟ್ 168 ಪಂದ್ಯಗಳಿಂದ 50.38 ಸರಾಸರಿಯಲ್ಲಿ 14,208 ರನ್ ಗಳಿಸಿದ್ದರು. ಅವರ ಒಟ್ಟು ಮೊತ್ತ 41 ಶತಕಗಳು ಮತ್ತು 68 ಅರ್ಧಶತಕಗಳು ಒಳಗೊಂಡಿದೆ. ಗರಿಷ್ಠ ಸ್ಕೋರ್ 262.
ಟೆಸ್ಟ್‌ನಲ್ಲಿ ಅತಿ ಹೆಚ್ಚು ರನ್ ಗಳಿಸಿದವರ ಪಟ್ಟಿಯಲ್ಲಿ ರೂಟ್ ಈಗಾಗಲೇ ಎರಡನೇ ಸ್ಥಾನದಲ್ಲಿದ್ದಾರೆ. ಸಚಿನ್ ತೆಂಡೂಲ್ಕರ್ ಮುಂದಿದ್ದಾರೆ. ಬ್ಯಾಟಿಂಗ್‌ನಲ್ಲಿ ಉತ್ತಮ ಪ್ರದರ್ಶನ ನೀಡುವುದರ ಜೊತೆಗೆ, ರೂಟ್ ತಮ್ಮ ಅರೆಕಾಲಿಕ ಬೌಲಿಂಗ್ ಮೂಲಕ 74 ವಿಕೆಟ್‌ಗಳನ್ನು ಕಬಳಿಸಿದ್ದಾರೆ.
ರೂಟ್ ಪ್ರಸ್ತುತ ಇಂಗ್ಲೆಂಡ್ ನಾಯಕನಾಗಿ ಎರಡನೇ ಬಾರಿಗೆ ಅಧಿಕಾರ ವಹಿಸಿಕೊಂಡಿದ್ದಾರೆ. ಈ ಹಿಂದೆ 2017 ಮತ್ತು 2022 ರ ನಡುವೆ ತಂಡವನ್ನು ಮುನ್ನಡೆಸಿದ್ದರು. 2026 ರಲ್ಲಿ ಮತ್ತೆ ನಾಯಕತ್ವ ವಹಿಸಿಕೊಂಡರು. ಪಾಕಿಸ್ತಾನ ವಿರುದ್ಧದ ಮೊದಲ ಎರಡು ಟೆಸ್ಟ್‌ಗಳಲ್ಲಿ ಅವರು ಒಂದು ಅರ್ಧಶತಕ ದಾಖಲಿಸಿದ್ದರು.
ಫಿಟ್ನೆಸ್ ಪಾಸಾದ ನಿತೀಶ್ ರೆಡ್ಡಿ; ಅಫ್ಘಾನಿಸ್ತಾನ ಟಿ20 ಸರಣಿಗೆ ಲಭ್ಯ
1989 ರಿಂದ 2013 ರವರೆಗಿನ ಅಂತರರಾಷ್ಟ್ರೀಯ ವೃತ್ತಿಜೀವನದಲ್ಲಿ ಭಾರತವನ್ನು ಪ್ರತಿನಿಧಿಸಿದ ಸಚಿನ್ ದಾಖಲೆಯ 200 ಟೆಸ್ಟ್ ಪಂದ್ಯಗಳನ್ನಾಡಿ ಅತಿ ಹೆಚ್ಚು ಟೆಸ್ಟ್ ಪಂದ್ಯಗಳಲ್ಲಿ ಆಡಿದವರ ಪಟ್ಟಿಯಲ್ಲಿ ಅವರು ಅಗ್ರಸ್ಥಾನದಲ್ಲಿದ್ದಾರೆ. ಬೇರೆ ಯಾವುದೇ ಕ್ರಿಕೆಟಿಗ 200 ಟೆಸ್ಟ್‌ಗಳ ಗಡಿಯನ್ನು ದಾಟಿಲ್ಲ. ಇಂಗ್ಲೆಂಡ್ ಮಾಜಿ ಆಟಗಾರ ಜೇಮ್ಸ್ ಆ್ಯಂಡರ್ಸನ್(188) ಎರಡನೇ ಸ್ಥಾನದಲ್ಲಿದ್ದಾರೆ. ಜೋ ರೂಟ್(169*) ಟೆಸ್ಟ್ ಆಡಿ ಮೂರನೇ ಸ್ಥಾನದಲ್ಲಿದ್ದಾರೆ. ಸಚಿನ್ ಅವರ ಸಾರ್ವಕಾಲಿಕ ದಾಖಲೆ ಮುರಿಯಲು ಅವರು ಇನ್ನೂ 31 ಟೆಸ್ಟ್ ಪಂದ್ಯವಾಡಬೇಕಿದೆ.
ಅತಿ ಹೆಚ್ಚು ಟೆಸ್ಟ್ ಪಂದ್ಯ ಆಡಿದವರು
ಸಚಿನ್ ತೆಂಡೂಲ್ಕರ್- 200 ಟೆಸ್ಟ್‌ಗಳು(1989–2013)
ಜೇಮ್ಸ್ ಆಂಡರ್ಸನ್-88 ಟೆಸ್ಟ್‌ಗಳು(2024)
ಜೋ ರೂಟ್-169* ಟೆಸ್ಟ್‌ಗಳು
ರಿಕಿ ಪಾಂಟಿಂಗ್- 68 ಟೆಸ್ಟ್‌ಗಳು (1995–2012)
ಸ್ಟೀವ್ ವಾ-168 ಟೆಸ್ಟ್‌ಗಳು (1985–2004)