10ನೇ ತರಗತಿ ಪರೀಕ್ಷೆಯನ್ನು ತ್ಯಜಿಸಿ 2026ರ ಐಪಿಎಲ್‌ಗೆ ಸಜ್ಜಾಗುತ್ತಿರುವ ವೈಭವ್ ಸೂರ್ಯವಂಶಿ!
ಭಾರತೀಯ ಕ್ರಿಕೆಟ್‌ನ ಉದಯೋನ್ಮುಖ ಆಟಗಾರ ವೈಭವ್ ಸೂರ್ಯವಂಶಿ ಈ ವರ್ಷ ತನ್ನ 10ನೇ ತರಗತಿ ಪರೀಕ್ಷೆಗಳನ್ನು ತ್ಯಜಿಸಿದ್ದಾರೆ. ಅಂಡರ್-19 ವಿಶ್ವಕಪ್ ಟೂರ್ನಿಯಲ್ಲಿ ಅದ್ಭುತ ಪ್ರದರ್ಶನ ನೀಡಿದ ನಂತರ ಅವರು, 2026ರ ಐಪಿಎಲ್ ಟೂರ್ನಿಯ ಸಿದ್ಧತೆ ನಡೆಸಲು ರಾಜಸ್ಥಾನ್ ರಾಯಲ್ಸ್ ಕ್ಯಾಂಪ್‌ಗೆ ಸೇರ್ಪಡೆಯಾಗಿದ್ದಾರೆ.
10ನೇ ತರಗತಿಯ ಪರೀಕ್ಷೆಯನ್ನು ತ್ಯಜಿಸಿದ ವೈಭವ್ ಸೂರ್ಯವಂಶಿ. -
ನವದೆಹಲಿ: ಅಂಡರ್-19 ವಿಶ್ವಕಪ್ ಫೈನಲ್ ಪಂದ್ಯದಲ್ಲಿ ಇಂಗ್ಲೆಂಡ್ ವಿರುದ್ಧ ಸ್ಪೋಟಕ ಇನಿಂಗ್ಸ್ ಆಡಿದ್ದ ಭಾರತ ತಂಡದ ಸ್ಟಾರ್ ಬ್ಯಾಟ್ಸ್‌ಮನ್ ವೈಭವ್ ಸೂರ್ಯವಂಶಿ (Vaibhav Suryavanshi) ಈ ವರ್ಷ 10 ನೇ ತರಗತಿಯ ಬೋರ್ಡ್ ಪರೀಕ್ಷೆಗಳನ್ನು ತ್ಯಜಿಸಿದ್ದಾರೆ. ಬಿಹಾರದ ತಾಜ್‌ಪುರದ ನಿವಾಸಿಯಾದ ವೈಭವ್, ಫೆಬ್ರವರಿ 17 ರಿಂದ ಮಾರ್ಚ್ 11 ರವರೆಗೆ ಬಿಹಾರ ಬೋರ್ಡ್ ಪರೀಕ್ಷೆಗಳಿಗೆ ಹಾಜರಾಗಬೇಕಿತ್ತು, ಆದರೆ ಅಂತಾರಾಷ್ಟ್ರೀಯ ಪ್ರವಾಸಗಳು ಮತ್ತು ಮುಂಬರುವ ಇಂಡಿಯನ್ ಪ್ರೀಮಿಯರ್ ಲೀಗ್ (IPL 2026) ಟೂರ್ನಿಯಲ್ಲಿನ ತನ್ನ ಬದ್ಧತೆಯಿಂದಾಗಿ ತಯಾರಿ ನಡೆಸಲು ಯುವ ಆಟಗಾರನಿಗೆ ಸಮಯವಿಲ್ಲ. ವೈಭವ್ ಅವರ ತರಬೇತುದಾರ ಮನೀಷ್ ಓಜಾ ಸೋಮವಾರ ಇದನ್ನು ದೃಢಪಡಿಸಿದ್ದಾರೆ.
ಹಿಂದೂಸ್ತಾನ್ ಟೈಮ್ಸ್‌ಗೆ ನೀಡಿದ ಸಂದರ್ಶನದಲ್ಲಿ ವೈಭವ್ ಅವರ ತರಬೇತುದಾರ ಮನೀಷ್ ಓಜಾ ಮಾತನಾಡಿ, "ಅವರು 10ನೇ ತರಗತಿ ಪರೀಕ್ಷೆಗಳಿಗೆ ಹಾಜರಾಗುವುದಿಲ್ಲ. ಅವರು ಪ್ರಸ್ತುತ ನಾಗ್ಪುರದಲ್ಲಿ ಮುಂಬರುವ ಐಪಿಎಲ್‌ಗೆ ತಯಾರಿ ನಡೆಸುತ್ತಿದ್ದಾರೆ. ಅವರು ಪೂರ್ವ-ಋತುವಿನ ಶಿಬಿರಕ್ಕಾಗಿ ರಾಜಸ್ಥಾನ ರಾಯಲ್ಸ್‌ಗೆ ಸೇರಿದ್ದಾರೆ," ಎಂದು ಹೇಳಿದ್ದಾರೆ. 2026ರ ಐಪಿಎಲ್ ಮಾರ್ಚ್ 26 ರಂದು ಪ್ರಾರಂಭವಾಗಲಿದ್ದು, ವೈಭವ್ ಅವರನ್ನು ರಾಜಸ್ಥಾನ ರಾಯಲ್ಸ್ ತಂಡದಲ್ಲಿ ಪ್ರಮುಖ ಆಟಗಾರ ಎಂದು ಪರಿಗಣಿಸಲಾಗಿದೆ.
T20 World Cup 2026: ಅಭಿಷೇಕ್ ಶರ್ಮಾ ವೈಫಲ್ಯದ ಬಗ್ಗೆ ದೊಡ್ಡ ಹೇಳಿಕೆ ನೀಡಿದ ಹರ್ಭಜನ್ ಸಿಂಗ್!
ಶಾಲಾ ಆಡಳಿತ ಮಂಡಳಿಯ ಪ್ರಕಾರ, ವೈಭವ್ ಅವರ ಪರೀಕ್ಷಾ ನಮೂನೆಗಳನ್ನು ಭರ್ತಿ ಮಾಡಲಾಗಿದೆ ಮತ್ತು ಪ್ರವೇಶ ಪತ್ರವನ್ನು ನೀಡಲಾಗಿದೆ. ಅರ ಪರೀಕ್ಷಾ ಕೇಂದ್ರವನ್ನು ಪೊದ್ದಾರ್ ಅಂತಾರಾಷ್ಟ್ರೀಯ ಶಾಲೆಗೆ ನಿಯೋಜಿಸಲಾಗಿತ್ತು. ವೈಭವ್‌ನ ತಂದೆ ಸಂಜೀವ್ ಸೂರ್ಯವಂಶಿ ಕೂಡ ಈ ನಿರ್ಧಾರವನ್ನು ದೃಢಪಡಿಸಿದರು, ತಮ್ಮ ಮಗನ ಸಂಪೂರ್ಣ ಗಮನ ಪ್ರಸ್ತುತ ಕ್ರಿಕೆಟ್‌ನ ಮೇಲಿದೆ ಎಂದು ಹೇಳಿದರು.
ಅವರು ಈಟಿವಿ ಭಾರತ್ ಜೊತೆ ಮಾತನಾಡಿ, "ಸದ್ಯಕ್ಕೆ, ವೈಭವ್ ಕ್ರಿಕೆಟ್‌ನತ್ತ ಸಂಪೂರ್ಣವಾಗಿ ಗಮನಹರಿಸಿದ್ದಾರೆ. ಅವರು ತರಬೇತಿಯಲ್ಲಿ ನಿರತರಾಗಿದ್ದಾರೆ ಮತ್ತು ಫೆಬ್ರವರಿ 17 ರಿಂದ ಪ್ರಾರಂಭವಾಗುವ ಪರೀಕ್ಷೆಗಳಿಗೆ ಹಾಜರಾಗುವುದಿಲ್ಲ. ಅವರು ಮುಂದಿನ ವರ್ಷ ಬೋರ್ಡ್ ಪರೀಕ್ಷೆಗಳಿಗೆ ಹಾಜರಾಗುತ್ತಾರೆ," ಎಂದು ತಿಳಿಸಿದ್ದಾರೆ.
T20 World Cup 2026: ಟಿ20 ಕ್ರಿಕೆಟ್‌ನಲ್ಲಿ 700 ವಿಕೆಟ್ ಕಿತ್ತು ಇತಿಹಾಸ ಬರೆದ ರಶೀದ್ ಖಾನ್!
ರಾಜಸ್ಥಾನ್ ರಾಯಲ್ಸ್‌ಗೆ ಕೀ ಆಟಗಾರ ವೈಭವ್
ಕಳೆದ ವರ್ಷ ರಾಜಸ್ಥಾನ್ ರಾಯಲ್ಸ್ ತಂಡಕ್ಕೆ ಸೇರ್ಪಡೆಯಾದಾಗಿನಿಂದ ವೈಭವ್ ಸೂರ್ಯವಂಶಿ ಭಾರತೀಯ ಕ್ರಿಕೆಟ್‌ನಲ್ಲಿ ಎಲ್ಲರ ಗಮನವನ್ನು ಸೆಳೆದಿದ್ದಾರೆ. ಗುಜರಾತ್ ಟೈಟನ್ಸ್ ವಿರುದ್ಧ ಕೇವಲ 35 ಎಸೆತಗಳಲ್ಲಿ ಶತಕ ಗಳಿಸುವ ಮೂಲಕ ಅವರು ಐಪಿಎಲ್ ಇತಿಹಾಸದಲ್ಲಿ ಅತಿ ವೇಗದ ಶತಕ ಮತ್ತು ಅತ್ಯಂತ ಕಿರಿಯ ಆಟಗಾರ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದರು.
ಇತ್ತೀಚೆಗೆ ಮುಕ್ತಾಯಗೊಂಡಿದ್ದ 2026ರ ಐಸಿಸಿ ಅಂಡರ್-19 ವಿಶ್ವಕಪ್ ಫೈನಲ್ ಪಂದ್ಯದಲ್ಲಿ ವೈಭವ್ ಇಂಗ್ಲೆಂಡ್ ವಿರುದ್ಧ ಕೇವಲ 80 ಎಸೆತಗಳಲ್ಲಿ 175 ರನ್ ಗಳಿಸಿ ದಾಖಲೆ ಬರೆದಿದ್ದರು. ಇದರಲ್ಲಿ ಅವರು 15 ಬೌಂಡರಿಗಳು ಮತ್ತು 15 ಸಿಕ್ಸರ್‌ಗಳನ್ನು ಬಾರಿಸಿದ್ದರು. ಇವರ ಬ್ಯಾಟಿಂಗ್ ಬಲದಿಂದ ಭಾರತ ಕಿರಿಯರ ತಂಡ 411 ರನ್‌ಗಳ ಬೃಹತ್ ಮೊತ್ತವನ್ನು ಕಲೆ ಹಾಕಿತ್ತು. ಬಳಿಕ ಪಂದ್ಯವನ್ನು ಗೆದ್ದು ಅಂಡರ್-19 ವಿಶ್ವಕಪ್ ಅನ್ನು ಮುಡಿಗೇರಿಸಿಕೊಂಡಿತ್ತು.