ಏಷ್ಯನ್ ಪ್ಯಾರಾ ಗೇಮ್ಸ್; 166 ಕ್ರೀಡಾಪಟುಗಳ ಭಾರತೀಯ ತಂಡ ಪ್ರಕಟ
Asian Para Games 2026: ವಿವಾದದ ಕೇಂದ್ರಬಿಂದುವಾಗಿರುವ 13 ಸದಸ್ಯರ ಶೂಟಿಂಗ್ ತಂಡದಲ್ಲಿ, ಪ್ಯಾರಾಲಿಂಪಿಕ್ ಚಿನ್ನದ ಪದಕ ವಿಜೇತೆ ಅವನಿ ಲೇಖರಾ ಮತ್ತು ಮೋನಾ ಅಗರ್ವಾಲ್ ಸೇರಿದಂತೆ ಇತರರು ಇದ್ದಾರೆ. ಅಗರ್ವಾಲ್ ಇತ್ತೀಚೆಗೆ ಕೊರಿಯಾದಲ್ಲಿ ನಡೆದ ವಿಶ್ವ ಚಾಂಪಿಯನ್‌ಶಿಪ್‌ನಲ್ಲಿ ಬೆಳ್ಳಿ ಪದಕವನ್ನು ಗೆದ್ದುಕೊಂಡಿದ್ದು, ಇದರೊಂದಿಗೆ 2028ರ ಲಾಸ್ ಏಂಜಲೀಸ್ ಪ್ಯಾರಾಲಿಂಪಿಕ್ಸ್‌ನಲ್ಲಿ ಭಾರತಕ್ಕೆ ಕೋಟಾ ಸ್ಥಾನವನ್ನು ಗಳಿಸಿಕೊಟ್ಟಿದ್ದಾರೆ.
Asian Para Games squad -
ನವದೆಹಲಿ, ಅ.13: ಶೂಟರ್‌ಗಳು ಮತ್ತು ಸೈಕ್ಲಿಸ್ಟ್‌ಗಳ ಪ್ರತಿಭಟನೆಗೆ ಕಾರಣವಾದ ವಿವಾದಾತ್ಮಕ ಆಯ್ಕೆ ಪ್ರಕ್ರಿಯೆಯ ನಡುವೆಯೇ, ಜಪಾನ್‌ನ ಐಚಿ-ನಗೋಯಾದಲ್ಲಿ ನಡೆಯಲಿರುವ ಏಷ್ಯನ್ ಪ್ಯಾರಾ ಗೇಮ್ಸ್ 2026ಕ್ಕಾಗಿ 166 ಕ್ರೀಡಾಪಟುಗಳ ತಂಡಕ್ಕೆ ಕ್ರೀಡಾ ಸಚಿವಾಲಯ ಅನುಮೋದನೆ ನೀಡಿದೆ. ಇದೇ ವೇಳೆ, ಟೀಕೆಗಳಿಗೆ ಗುರಿಯಾಗಿದ್ದ ಪ್ಯಾರಾ-ಶೂಟಿಂಗ್ ಕೋಚ್ ಜೈ ಪ್ರಕಾಶ್ ನೌಟಿಯಾಲ್ ಅವರನ್ನು ಭಾರತದ ತಂಡದಿಂದ ಕೈಬಿಡಲಾಗಿದೆ.
ಈ ಕ್ರೀಡಾಕೂಟವು ಅಕ್ಟೋಬರ್ 18 ರಂದು ಆರಂಭವಾಗಲಿದ್ದು, ಭಾರತವು 10 ವಿಭಾಗಗಳಲ್ಲಿ ಸ್ಪರ್ಧಿಸಲಿದೆ. ಆಯ್ಕೆ ಪ್ರಕ್ರಿಯೆಯಲ್ಲಿ ಅವ್ಯವಹಾರದ ಆರೋಪಗಳು ಕೇಳಿಬಂದ ಹಿನ್ನೆಲೆಯಲ್ಲಿ, ತಂಡದಲ್ಲಿ ನೌತಿಯಾಲ್ ಅವರ ಬದಲಿಗೆ ದೀರ್ಘಕಾಲದಿಂದ ರಾಷ್ಟ್ರೀಯ ತರಬೇತುದಾರರಾಗಿರುವ ಜೀವನ್ ಎಲ್. ರೈ ಅವರನ್ನು ನೇಮಿಸಲಾಗಿದೆ.
ಪಿಟಿಐ ವರದಿಯ ಪ್ರಕಾರ, ಶೂಟರ್‌ಗಳ ಆಯ್ಕೆಗೆ ಸಂಬಂಧಿಸಿದ ನಿಗದಿತ ಮಾನದಂಡಗಳನ್ನು ಪಾಲಿಸದಿರುವುದು ಹಾಗೂ ಆಯ್ಕೆಯ ಬದಲಾಗಿ ಲಂಚಕ್ಕೆ ಬೇಡಿಕೆ ಇಟ್ಟಿರುವ ಆರೋಪಗಳನ್ನು ನೌಟಿಯಾಲ್ ಎದುರಿಸಿದ್ದರು. ಅವರನ್ನು ಹುದ್ದೆಯಿಂದ ತೆಗೆದುಹಾಕಬೇಕು ಮತ್ತು ಈ ಆರೋಪಗಳ ಕುರಿತು ತನಿಖೆ ನಡೆಸಬೇಕು ಎಂದು ಆಗ್ರಹಿಸಿ, ಭಾರತೀಯ ಕ್ರೀಡಾ ಪ್ರಾಧಿಕಾರದ (SAI) ಪ್ರಧಾನ ಕಚೇರಿಯ ಹೊರಗೆ ಹಲವಾರು ಕ್ರೀಡಾಪಟುಗಳು ಪ್ರತಿಭಟನೆ ನಡೆಸಿದರು.
ಅನುಮೋದನೆಗೊಂಡಿರುವ 166 ಕ್ರೀಡಾಪಟುಗಳೊಂದಿಗೆ, ಭಾರತದ ಒಟ್ಟು ನಿಯೋಗವು 275 ಸದಸ್ಯರನ್ನು ಒಳಗೊಂಡಿರಲಿದೆ. ಇದರಲ್ಲಿ 94 ತಂಡದ ಅಧಿಕಾರಿಗಳು ಹಾಗೂ ಸಹಾಯಕ ಸಿಬ್ಬಂದಿ ಮತ್ತು 15 ನಿಯೋಗದ ಸಿಬ್ಬಂದಿ ಸದಸ್ಯರು ಸೇರಿದ್ದಾರೆ.
ವಿವಾದದ ಕೇಂದ್ರಬಿಂದುವಾಗಿರುವ 13 ಸದಸ್ಯರ ಶೂಟಿಂಗ್ ತಂಡದಲ್ಲಿ, ಪ್ಯಾರಾಲಿಂಪಿಕ್ ಚಿನ್ನದ ಪದಕ ವಿಜೇತೆ ಅವನಿ ಲೇಖರಾ ಮತ್ತು ಮೋನಾ ಅಗರ್ವಾಲ್ ಸೇರಿದಂತೆ ಇತರರು ಇದ್ದಾರೆ. ಅಗರ್ವಾಲ್ ಇತ್ತೀಚೆಗೆ ಕೊರಿಯಾದಲ್ಲಿ ನಡೆದ ವಿಶ್ವ ಚಾಂಪಿಯನ್‌ಶಿಪ್‌ನಲ್ಲಿ ಬೆಳ್ಳಿ ಪದಕವನ್ನು ಗೆದ್ದುಕೊಂಡಿದ್ದು, ಇದರೊಂದಿಗೆ 2028ರ ಲಾಸ್ ಏಂಜಲೀಸ್ ಪ್ಯಾರಾಲಿಂಪಿಕ್ಸ್‌ನಲ್ಲಿ ಭಾರತಕ್ಕೆ ಕೋಟಾ ಸ್ಥಾನವನ್ನು ಗಳಿಸಿಕೊಟ್ಟಿದ್ದಾರೆ.
ಚೆನ್ನೈ ಸಂಚಾರ ಪೊಲೀಸರಿಗೆ 63 ಬೈಕ್ ದೇಣಿಗೆ ನೀಡಿದ ಸಿಎಸ್‌ಕೆ
ಆಯ್ಕೆಯಾಗದ ಕ್ರೀಡಾಪಟುಗಳ ಪ್ರತಿಭಟನೆಯ ಹೊರತಾಗಿಯೂ, ಸೈಕ್ಲಿಂಗ್ ತಂಡಕ್ಕೆ ಕೊನೆಯ ಕ್ಷಣದಲ್ಲಿ ಹೊಸ ಸದಸ್ಯರನ್ನು ಸೇರಿಸುವ ಕುರಿತಾದ ಒತ್ತಡಕ್ಕೆ ಸಚಿವಾಲಯವು ಮಣಿದಿಲ್ಲ. ಆಯ್ಕೆ ಮಾನದಂಡಗಳನ್ನು ಸುಲಭವಾಗಿ ಪೂರೈಸಿದ್ದ ಪ್ಯಾರಾಲಿಂಪಿಯನ್ ಅರ್ಶದ್ ಶೇಖ್ ಅವರಿಗೆ ಮಾತ್ರ ಅಂತಿಮವಾಗಿ ಅನುಮೋದನೆ ನೀಡಲಾಗಿದೆ.
ಸೈಕ್ಲಿಂಗ್ ಫೆಡರೇಶನ್ ಆಫ್ ಇಂಡಿಯಾ ಮತ್ತು ಪ್ಯಾರಾಲಿಂಪಿಕ್ ಕಮಿಟಿ ಆಫ್ ಇಂಡಿಯಾ (PCI) ಇತರ ಆರು ಸೈಕ್ಲಿಸ್ಟ್‌ಗಳನ್ನು ಆಯ್ಕೆ ಮಾಡಿದ್ದವು, ಆದರೆ ನಿಗದಿತ ಮಾನದಂಡಗಳನ್ನು ಪೂರೈಸಲು ವಿಫಲವಾದ ಕಾರಣ ಅವರನ್ನು ನಂತರ ಕೈಬಿಡಲಾಯಿತು.
ಭಾರತದ ಕ್ರೀಡಾಪಟುಗಳ ತಂಡದಲ್ಲಿ ಪ್ಯಾರಾ-ಅಥ್ಲೆಟಿಕ್ಸ್ ಅತಿ ದೊಡ್ಡ ಭಾಗವಾಗಿದ್ದು, ಇದರಲ್ಲಿ 46 ಪುರುಷರು ಸೇರಿದಂತೆ ಒಟ್ಟು 62 ಕ್ರೀಡಾಪಟುಗಳು ಹಾಗೂ 36 ಮಂದಿಯ ಸಹಾಯಕ ಸಿಬ್ಬಂದಿ ಇದ್ದಾರೆ. ದೃಷ್ಟಿಹೀನ ಓಟಗಾರ್ತಿ ಮತ್ತು ವಿಶ್ವ ಚಾಂಪಿಯನ್‌ಶಿಪ್ ಪದಕ ವಿಜೇತೆ ಸಿಮ್ರಾನ್ ಕೂಡ ಈ ತಂಡದ ಭಾಗವಾಗಿದ್ದಾರೆ.
IND vs WI 4th T20I: ಸಂಭಾವ್ಯ ಪ್ಲೇಯಿಂಗ್ XI, ಪಿಚ್ ರಿಪೋರ್ಟ್, ಮುಖಾಮುಖಿ ದಾಖಲೆ ವಿವರ!
ಭಾರತದ ಇತರ ಪದಕದ ನಿರೀಕ್ಷೆಗಳಲ್ಲಿ ಟೇಬಲ್ ಟೆನಿಸ್‌ನಲ್ಲಿ ಪ್ಯಾರಾಲಿಂಪಿಕ್ ಬೆಳ್ಳಿ ಪದಕ ವಿಜೇತೆ ಭಾವಿನಾ ಪಟೇಲ್ ಹಾಗೂ 17 ಪುರುಷರು ಮತ್ತು 11 ಮಹಿಳೆಯರನ್ನು ಒಳಗೊಂಡ 28 ಆಟಗಾರರ ಬಲಿಷ್ಠ ಬ್ಯಾಡ್ಮಿಂಟನ್ ತಂಡವೂ ಸೇರಿವೆ.
ಮಾಜಿ ವಿಶ್ವದ ನಂ. 1 ಹಾಗೂ ಟೋಕಿಯೊ ಪ್ಯಾರಾಲಿಂಪಿಕ್ ಚಿನ್ನದ ಪದಕ ವಿಜೇತ ಪ್ರಮೋದ್ ಭಗತ್ ಮತ್ತು ಮಾಜಿ ಪ್ಯಾರಾಲಿಂಪಿಕ್ ಬೆಳ್ಳಿ ಪದಕ ವಿಜೇತ ಸುಹಾಸ್ ಯತಿರಾಜ್ ಅವರು ಬ್ಯಾಡ್ಮಿಂಟನ್ ತಂಡದ ಪ್ರಮುಖ ಆಕರ್ಷಣೆಯಾಗಿದ್ದಾರೆ.
ಬಿಲ್ಲುಗಾರಿಕೆಯಲ್ಲಿ, ಕಳೆದ ಪ್ಯಾರಾ ಏಷ್ಯನ್ ಕ್ರೀಡಾಕೂಟದಲ್ಲಿ ಎರಡು ಚಿನ್ನದ ಪದಕಗಳನ್ನು ಗೆದ್ದಿರುವ 19 ವರ್ಷದ ಶೀತಲ್ ದೇವಿ ಅವರು ಭಾರತದ ಪ್ರಮುಖ ಸ್ಪರ್ಧಿಗಳಲ್ಲಿ ಒಬ್ಬರಾಗಿರಲಿದ್ದಾರೆ. ಈ ವಿಶ್ವ ಚಾಂಪಿಯನ್ ಜೊತೆಗೆ 18 ವರ್ಷದ ಪಾಯಲ್ ನಾಗ್ ಕೂಡ ಇರಲಿದ್ದಾರೆ.