ಎಸ್​ ಎಲ್​ ಭೈರಪ್ಪ ನಿಧನ ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Asia Cup 2025 final: ಇಂದು ಏಷ್ಯಾಕಪ್‌ ಫೈನಲ್‌; ಶತ್ರುಗಳ ವಿರುದ್ಧ ಗೆದ್ದು ಬಾ ಭಾರತ

India vs Pakistan: ಭಾರತ ತಂಡಕ್ಕೆ ಏಷ್ಯಾಕಪ್‌ನಲ್ಲಿ ಯುಎಇ ಅದೃಷ್ಟದ ತಾಣವೆನಿಸಿದೆ. ಯಾಕೆಂದರೆ ಈ ಹಿಂದೆ 4 ಬಾರಿ ಯುಎಇಯಲ್ಲಿ ನಡೆದ ಏಷ್ಯಾಕಪ್‌ಗಳಲ್ಲಿ 3ರಲ್ಲಿ(1984, 1995, 2018) ಭಾರತವೇ ಪ್ರಶಸ್ತಿ ಗೆದ್ದಿತ್ತು. ಈ ಲೆಕ್ಕಾಚಾರದಲ್ಲಿ ಈ ಬಾರಿಯೂ ಭಾರತಕ್ಕೆ ಪ್ರಶಸ್ತಿ ಒಲಿಯಲಿದೆ ಎಂಬುದು ಅಭಿಮಾನಿಗಳ ನಂಬಿಕೆ.

ಗೆದ್ದು ಬಾ ಭಾರತ; ಇಂದು ಪಾಕ್‌ ವಿರುದ್ಧ ಫೈನಲ್‌ ಫೈಟ್‌

-

Abhilash BC Abhilash BC Sep 28, 2025 7:53 AM

ದುಬೈ: ಇಂದು(ಸೆ.28) ನಡೆಯುವ ಏಷ್ಯಾಕಪ್‌ ಫೈನಲ್‌ ಪಂದ್ಯದಲ್ಲಿ, ಟೂರ್ನಿಯ ಇತಿಹಾಸದಲ್ಲೇ ಮೊದಲ ಬಾರಿಗೆ ಫೈನಲ್‌ನಲ್ಲಿ ಬದ್ಧವೈರಿ ಪಾಕಿಸ್ತಾನವನ್ನು ಎದುರಿಸಲಿರುವ ಭಾರತ, ಕಳೆದ 2 ವಾರಗಳಲ್ಲಿ ಸಾಧಿಸಿರುವ 2 ಗೆಲುವುಗಳಂತೆಯೇ ಮತ್ತೊಂದು ಜಯ ಸಾಧಿಸಿ ಪಾಕ್ ಗರ್ವಭಂಗ ಮಾಡಲು ಕಾತರಿಸುತ್ತಿದೆ. ‘ನೋ ಹ್ಯಾಂಡ್‌ ಶೇಕ್‌’ ಫೈನಲ್‌ನಲ್ಲಿಯೂ ಮುಂದುವರಿಯಲಿದೆ.

ಮತ್ತೊಂದೆಡೆ ಪಾಕಿಸ್ತಾನ ಕೂಡ ಭಾರತಕ್ಕೆ ದಿಟ್ಟ ಉತ್ತರ ನೀಡಲು ಕಾತರಿಸುತ್ತಿದೆ. ಬಾಂಗ್ಲಾದೇಶ ಹಾಗೂ ಶ್ರೀಲಂಕಾ ವಿರುದ್ಧ ಸುಧಾರಿತ ಆಟವಾಡಿದ ಪಾಕ್‌, ಫೈನಲ್‌ನಲ್ಲಿಯೂ ಉತ್ತಮ ಆಟವಾಡುವ ವಿಶ್ವಾಸದಲ್ಲಿದೆ. 1984ರಲ್ಲಿ ಆರಂಭಗೊಂಡ ಏಷ್ಯಾಕಪ್‌ನಲ್ಲಿ ಇದು 17ನೇ ಆವೃತ್ತಿ. ಹಿಂದಿನ 16 ಆವೃತ್ತಿಗಳಲ್ಲಿ ಭಾರತ 8 ಬಾರಿ, ಪಾಕಿಸ್ತಾನ 2 ಬಾರಿ ಚಾಂಪಿಯನ್‌ ಆಗಿವೆ. ಎರಡೂ ತಂಡಗಳು ಮತ್ತೊಮ್ಮೆ ಪ್ರಶಸ್ತಿ ಗೆಲ್ಲಲು ಎದುರು ನೋಡುತ್ತಿವೆ.

ಭಾರತಕ್ಕೆ ಅದೃಷ್ಟ!

ಭಾರತ ತಂಡಕ್ಕೆ ಏಷ್ಯಾಕಪ್‌ನಲ್ಲಿ ಯುಎಇ ಅದೃಷ್ಟದ ತಾಣವೆನಿಸಿದೆ. ಯಾಕೆಂದರೆ ಈ ಹಿಂದೆ 4 ಬಾರಿ ಯುಎಇಯಲ್ಲಿ ನಡೆದ ಏಷ್ಯಾಕಪ್‌ಗಳಲ್ಲಿ 3ರಲ್ಲಿ(1984, 1995, 2018) ಭಾರತವೇ ಪ್ರಶಸ್ತಿ ಗೆದ್ದಿತ್ತು. ಈ ಲೆಕ್ಕಾಚಾರದಲ್ಲಿ ಈ ಬಾರಿಯೂ ಭಾರತಕ್ಕೆ ಪ್ರಶಸ್ತಿ ಒಲಿಯಲಿದೆ ಎಂಬುದು ಅಭಿಮಾನಿಗಳ ನಂಬಿಕೆ.

ಮುಖಾಮುಖಿ

ಏಷ್ಯಾ ಕಪ್ ಇತಿಹಾಸದಲ್ಲಿ ಭಾರತ ಮತ್ತು ಪಾಕಿಸ್ತಾನ ತಂಡಗಳು ವಿವಿಧ ಮಾದರಿಗಳಲ್ಲಿ ಇದುವರೆಗೆ 21 ಬಾರಿ ಮುಖಾಮುಖಿಯಾಗಿವೆ. ಈ ಪೈಕಿ ಭಾರತ 12 ಬಾರಿ ಗೆದ್ದರೆ, ಪಾಕಿಸ್ತಾನ 6 ಪಂದ್ಯಗಳಲ್ಲಿ ಜಯ ಗಳಿಸಿವೆ. ಮೂರು ಪಂದ್ಯಗಳಲ್ಲಿ ಫಲಿತಾಂಶ ಬಂದಿಲ್ಲ. ಪಾಕಿಸ್ತಾನ ಮೊದಲ ಬಾರಿಗೆ ಭಾರತ ವಿರುದ್ದ ಗೆಲುವಿನ ಖಾತೆ ತೆರೆದದ್ದು 1995ರಲ್ಲಿ. ಇದಕ್ಕೂ ಮುನ್ನ ಆಡಿದ ಎರಡು ಆವೃತ್ತಿಯಲ್ಲಿ ಸೋಲು ಕಂಡಿತ್ತು.

ಇದನ್ನೂ ಓದಿ Asia Cup 2025: ಪಾಕಿಸ್ತಾನ ವಿರುದ್ಧ ಭಾರತ ಫೈನಲ್‌ ಗೆಲ್ಲಲಿದೆ ಎಂದ ವಸೀಮ್‌ ಅಕ್ರಮ್‌!