ವಿರಾಟ್ ಕೊಹ್ಲಿ ಅಲ್ಲ; 2021ರಲ್ಲಿ ತನ್ನ ವೃತ್ತಿ ಜೀವನವನ್ನು ಕಾಪಾಡಿದ್ದ ದಿಗ್ಗಜನ್ನು ಸ್ಮರಿಸಿದ ಅಕ್ಷರ್ ಪಟೇಲ್!
Axar Patel on MS Dhoni Advice: ನ್ಯೂಜಿಲೆಂಡ್ ವಿರುದ್ಧದ ಐದು ಪಂದ್ಯಗಳ ಟಿ20Y ಸರಣಿಯನ್ನು ಆಡಲು ಎದುರು ನೋಡುತ್ತಿರುವ ಸ್ಪಿನ್ ಆಲ್‌ರೌಂಡರ್ ಅಕ್ಷರ್ ಪಟೇಲ್, 2021ರಲ್ಲಿ ಎಂಎಸ್ ಧೋನಿ ತಮ್ಮ ವೃತ್ತಿ ಜೀವನವನ್ನು ಉಳಿಸಿದ್ದರು ಎಂದು ಬಹಿರಂಗಪಡಿಸಿದ್ದಾರೆ. ಭಾರತ ಹಾಗೂ ನ್ಯೂಜಿಲೆಂಡ್ ನಡುವಣ ಮೊದಲನೇ ಏಕದಿನ ಪಂದ್ಯ ಜನವರಿ 11 ರಂದು ವಡೋದರದಲ್ಲಿ ನಡೆಯಲಿದೆ.
ಎಂಎಸ್ ಧೋನಿ ಸಲಹೆಯನ್ನು ನೆನೆದ ಅಕ್ಷರ್ ಪಟೇಲ್. -
ನವದೆಹಲಿ: ನ್ಯೂಜಿಲೆಂಡ್ ವಿರುದ್ಧ ಐದು ಪಂದ್ಯಗಳ ಟಿ20ಐ ಸರಣಿಯನ್ನು (IND vs NZ) ಆಡಲು ಎದುರು ನೋಡುತ್ತಿರುವ ಭಾರತದ ಸ್ಪಿನ್ ಆಲ್‌ರೌಂಡರ್ ಅಕ್ಷರ್ ಪಟೇಲ್ (Axar Patel), ಟೀಮ್ ಇಂಡಿಯಾ ಮಾಜಿ ನಾಯಕ ಎಂಎಸ್ ಧೋನಿಯ ಸಹಾಯವನ್ನು ಸ್ಮರಿಸಿಕೊಂಡಿದ್ದಾರೆ. 2026ರ ಐಸಿಸಿ ಟಿ20 ವಿಶ್ವಕಪ್ (ICC T20 World Cup 2026) ಟೂರ್ನಿಯ ನಿಮಿತ್ತ ಟೈಮ್ ಆಫ್ ಇಂಡಿಯಾ ಜೊತೆ ಮಾತನಾಡಿದ ಅವರು, ತನ್ನ ಅಂತಾರಾಷ್ಟ್ರೀಯ ಕ್ರಿಕೆಟ್ ವೃತ್ತಿ ಜೀವನದ ಕಠಿಣ ಸನ್ನಿವೇಶದಲ್ಲಿ ಎಂಎಸ್ ಧೋನಿ ನೆರವು ನೀಡಿದ್ದರು ಎಂದು ಹೇಳಿಕೊಂಡಿದ್ದಾರೆ. ಕಿವೀಸ್ ಎದುರು ಮುಂದಿನ ಟಿ20ಐ ಸರಣಿಯಲ್ಲಿ ಅಕ್ಷರ್ ಪಟೇಲ್ ಆಡಲಿದ್ದಾರೆ.
2015ರ ಐಸಿಸಿ ಟಿ20 ವಿಶ್ವಕಪ್ ಟೂರ್ನಿಯ ವೇಳೆ ಅಕ್ಷರ್ ಪಟೇಲ್ ಅವರು ಟಿ20ಐ ಕ್ರಿಕೆಟ್‌ಗೆ ಪದಾರ್ಪಣೆ ಮಾಡಿದ್ದರು. ಇದಾದ ಮುಂದಿನ ಮೂರು ವರ್ಷಗಳಲ್ಲಿ ಕೇವಲ 11 ಪಂದ್ಯಗಳನ್ನು ಆಡಿದ ಬಳಿಕ ರಾಷ್ಟ್ರೀಯ ತಂಡದಲ್ಲಿ ಸ್ಥಾನವನ್ನು ಕಳೆದುಕೊಂಡಿದ್ದರು. ಇದಾದ ಬಳಿಕ 2021ರಲ್ಲಿ ಅವರು ಭಾರತ ಟಿ20ಐ ತಂಡಕ್ಕೆ ಕಮ್‌ಬ್ಯಾಕ್ ಮಾಡಿದ್ದರು. ನಂತರ 2021ರ ಐಸಿಸಿ ಟಿ20 ವಿಶ್ವಕಪ್ ಭಾರತ ತಂಡದಲ್ಲಿಯೂ ಆಡಿದ್ದರು. ಆದರೆ, ಇಲ್ಲಿ ಅವರು ಉತ್ತಮ ಪ್ರದರ್ಶನ ತೋರುವಲ್ಲಿ ವಿಫಲರಾಗಿದ್ದರು.
WPL 2026: ಯುಪಿ ವಾರಿಯರ್ಸ್ ಎದುರು ಗುಜರಾತ್ ಜಯಂಟ್ಸ್ ತಂಡಕ್ಕೆ 10 ರನ್ ರೋಚಕ ಜಯ!
2021ರ ಐಸಿಸಿ ಟಿ20 ವಿಶ್ವಕಪ್ ಟೂರ್ನಿಯ ವೇಳೆ ಎಂಎಸ್ ಧೋನಿ ಜೊತೆ ಕೆಲಸ ಮಾಡಿದ ಅನುಭವನ್ನು ಬಹಿರಂಗಪಡಿಸಿದ್ದಾರೆ. ಈ ವೇಳೆ ಭಾರತ ತಂಡಕ್ಕೆ ಎಂಎಸ್ ಧೋನಿ ಮೆಂಟರ್ ಆಗಿದ್ದರು. ಇದರಿಂದ ತನ್ನ ವೃತ್ತಿ ಜೀವನಕ್ಕೆ ಟರ್ನಿಂಗ್ ಪಾಯಿಂಟ್ ಸಿಕ್ಕಿತು. ನಾನು ಹೆಚ್ಚು ಯೋಚನೆ ಮಾಡುತ್ತಿದ್ದನ್ನು ನಾನು ಇಲ್ಲಿ ನಿಲ್ಲಿಸಿದ್ದೆ ಹಾಗೂ ಇದದಿಂದ ನನ್ನ ಪ್ರದರ್ಶನದಲ್ಲಿ ಸುಧಾರಣೆಯಾಗಿದೆ ಎಂದು ತಿಳಿಸಿದ್ದಾರೆ.
ಎಂಎಸ್ ಧೋನಿ ನೀಡಿದ್ದ ಸಲಹೆಯನ್ನು ನೆನೆದ ಅಕ್ಷರ್ ಪಟೇಲ್
"ನಾನು ನನ್ನ ವೃತ್ತಿ ಜೀವನವನ್ನು ಬ್ಯಾಟ್ಸ್‌ಮನ್ ಆಗಿ ಆರಂಭಸಿದ್ದೆ ಆದರೆ, ಎನ್‌ಸಿಎಗೆ ತಲುಪಿದ ಬಳಿಕ ಪೂರ್ಣ ಪ್ರಮಾಣದ ಸ್ಪಿನ್ನರ್ ಆಗಿ ಪರಿವರ್ತನೆಯಾದೆ. ನನ್ನ ಆರಂಭಿಕ ದಿನಗಳಲ್ಲಿ ಬ್ಯಾಟಿಂಗ್‌ನಲ್ಲಿ ಉತ್ತಮ ಪ್ರದರ್ಶನ ತೋರುವಲ್ಲಿ ವಿಫಲನಾಗಿದ್ದೆ ಹಾಗೂ ನನ್ನ ಸಾಮರ್ಥ್ಯದ ಮೇಲೆ ನನಗೆ ಅನುಮಾನ ಮೂಡಿತ್ತು. 2018ರಲ್ಲಿ ಭಾರತ ತಂಡದಿಂದ ಹೊರ ಬಿದ್ದ ಬಳಿಕ ಬ್ಯಾಟಿಂಗ್ ಮೇಲೆ ತುಂಬಾ ಕಠಿಣ ಪರಿಶ್ರಮ ಪಟ್ಟಿದ್ದೇನೆ. 2021ರ ಟಿ20 ವಿಶ್ವಕಪ್ ಭಾರತ ತಂಡಕ್ಕೆ ಎಂಎಸ್ ಧೋನಿ ಮೆಂಟರ್ ಆಗಿದ್ದರು. ಇವರ ಅಡಿಯಲ್ಲಿ ನಾನು ಅಂತಾರಾಷ್ಟ್ರೀಯ ಕ್ರಿಕೆಟ್ ವತ್ತಿ ಜೀವನ ಆರಂಭಿಸಿದ್ದೆ. ನಾನು ಆರಂಭದಲ್ಲಿ ಎಲ್ಲಾ ಪಂದ್ಯಗಳಲ್ಲಿ ಉತ್ತಮ ಪ್ರದರ್ಶನವನ್ನು ತೋರಬೇಕೆಂದು ನನ್ನ ಮೇಲೆ ನಾನೇ ಒತ್ತಡ ಹಾಕಿಕೊಳ್ಳುತ್ತಿದ್ದೆ ಎಂಬ ಅಂಶವನ್ನು ಧೋನಿ ನನಗೆ ಹೇಳಿದ್ದರು. ಇದರ ಬದಲು ನನ್ನ ಮೇಲೆ ನಂಬಿಕೆ ಇಟ್ಟು ಆಡಬೇಕೆಂದು ಅವರು ತಿಳಿಸಿದ್ದರು. ಅಂದಿನಿಂದ ಮಾಹಿ ಭಾಯ್ ಹೇಳಿದ್ದ ಅಂಶಗಳನ್ನು ಅಳವಡಿಸಿಕೊಳ್ಳಲು ಪ್ರಾರಂಭಸಿದೆ," ಎಂದು ಅಕ್ಷರ್ ಪಟೇಲ್ ಸ್ಮರಿಸಿಕೊಂಡಿದ್ದಾರೆ.
IND vs NZ: ಒಡಿಐ ಕ್ರಿಕೆಟ್‌ನಲ್ಲಿ ವಿಶೇಷ ದಾಖಲೆ ಬರೆಯುವ ಸನಿಹದಲ್ಲಿ ಶ್ರೇಯಸ್ ಅಯ್ಯರ್!
ಅಂದಿನಿಂದ ಎಂಎಸ್ ಧೋನಿ ಭಾರತ ತಂಡದಲ್ಲಿ ಸ್ಪಿನ್ನರ್ ಜೊತೆಗೆ ಮೌಲ್ಯಯುತ ಮಧ್ಯಮ ಕ್ರಮಾಂಕದ ಬ್ಯಾಟ್ಸ್‌ಮನ್ ಆಗಿ ಪರಿವರ್ತನೆಯಾಗಿದ್ದಾರೆ. ಭಾರತ ತಂಡದ ಮೂರೂ ಸ್ವರೂಪಗಳಲ್ಲಿ 3 ಅಥವಾ 4ನೇ ಕ್ರಮಾಂಕದಲ್ಲಿ ಅವರು ಆಡಿದ್ದಾರೆ. ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ತಂಡ ಕೂಡ ಅಕ್ಷರ್‌ಮೇಲೆ ನಂಬಿಕೆಯನ್ನು ಇಟ್ಟು ನಾಯಕತ್ವವನ್ನು ನೀಡಿದೆ.
"ನನ್ನನ್ನು ಮೇಲಿನ ಕ್ರಮಾಂಕದಲ್ಲಿ ಕಳುಹಿಸಿದ್ದರೆ, ತಂಡವು ನನ್ನನ್ನು ನಂಬುತ್ತದೆ ಮತ್ತು ಆ ಪಾತ್ರವನ್ನು ನಿರ್ವಹಿಸಲು ನನ್ನಲ್ಲಿ ಪ್ರತಿಭೆ ಇದೆ ಎಂದು ನಂಬುತ್ತದೆ ಎಂದರ್ಥ. ನಾನು ಬ್ಯಾಟ್ ಮಾಡಲು ಹೋದಾಗ, ನಾನು ನನ್ನನ್ನು ಫ್ಲೋಟರ್ ಎಂದು ಭಾವಿಸುವುದಿಲ್ಲ. ಸ್ಕೋರಿಂಗ್ ಅನ್ನು ಕುರುಡಾಗಿ ವೇಗಗೊಳಿಸಲು, ಕಠಿಣ ಸ್ಪೆಲ್ ಆಡಲು ಅಥವಾ ನಿರ್ದಿಷ್ಟ ಸ್ಪಿನ್ನರ್ ಅನ್ನು ಗುರಿಯಾಗಿಸಲು ನನ್ನನ್ನು ಕಳುಹಿಸಲಾಗಿಲ್ಲ ಎಂದು ಟೀಮ್ ಮ್ಯಾನೇಜ್‌ಮೆಂಟ್ ಹೇಳುತ್ತದೆ. ಇತರ ಪೂರ್ಣ ಪ್ರಮಾಣದ ಬ್ಯಾಟರ್‌ನಂತೆ ನನಗೂ ಒಂದು ಪಾತ್ರವನ್ನು ನೀಡಲಾಗಿದೆ," ಎಂದು ಅಕ್ಷರ್ ಪಟೇಲ್ ತಿಳಿಸಿದ್ದಾರೆ.