Gold Price Today on November 5th, 2026: ಹಬ್ಬದ ಖುಷಿಯಲ್ಲಿದ್ದ ಗ್ರಾಹಕರಿಗೆ ಶಾಕ್; ಚಿನ್ನದ ಬೆಲೆಯಲ್ಲಿಂದು ಭಾರೀ ಏರಿಕೆ
Gold Price Today on November 5th: ದೀಪಾವಳಿ ಹಬ್ಬಕ್ಕೆ ಇನ್ನೇನು ಕೆಲವೇ ದಿನಗಳು ಇರುವಾಗ ಚಿನ್ನದ ಬೆಲೆಯಲ್ಲಿ ಮತ್ತೆ ಏರಿಕೆ ಕಂಡು ಬಂದಿದೆ. ಬೆಂಗಳೂರಿನಲ್ಲಿ 22 ಕ್ಯಾರಟ್‌ನ 1 ಗ್ರಾಂ ಚಿನ್ನದ ದರದಲ್ಲಿ ಬರೋಬ್ಬರಿ 295 ರೂ. ಏರಿಕೆ ಕಂಡು 13,385 ರೂ. ಆಗಿದೆ.
ಚಿನ್ನದ ದರದಲ್ಲಿಂದು ಏರಿಕೆ (ಸಂಗ್ರಹ ಚಿತ್ರ) -
Vishakha Bhat Heggar
Nov 5, 2026 2:24 PM
ಬೆಂಗಳೂರು: ದೀಪಾವಳಿ ಹಬ್ಬಕ್ಕೆ ಇನ್ನೇನು ಕೆಲವೇ ದಿನಗಳು ಇರುವಾಗ ಚಿನ್ನದ ಬೆಲೆಯಲ್ಲಿ ಮತ್ತೆ ಏರಿಕೆ ಕಂಡು ಬಂದಿದೆ. (Gold Price Today on November 5th) ಬೆಂಗಳೂರಿನಲ್ಲಿ 22 ಕ್ಯಾರಟ್‌ನ 1 ಗ್ರಾಂ ಚಿನ್ನದ ದರದಲ್ಲಿ ಬರೋಬ್ಬರಿ 295 ರೂ. ಏರಿಕೆ ಕಂಡು 13,385 ರೂ. ಆಗಿದ್ದರೆ, 24 ಕ್ಯಾರಟ್‌ನ 1 ಗ್ರಾಂ ಚಿನ್ನದ ದರದಲ್ಲಿ 322 ರೂ. ಏರಿಕೆ ಕಂಡು ಬಂದಿದ್ದು, 14,602 ರೂ. ಆಗಿದೆ. 24 ಕ್ಯಾರಟ್ 8 ಗ್ರಾಂಗೆ 1,16,816 ರೂ. ಇದ್ದರೆ, 10 ಗ್ರಾಂಗೆ ಚಿನ್ನಕ್ಕೆ 1,46,020 ರೂ. ಮತ್ತು 100 ಗ್ರಾಂ ಚಿನ್ನಕ್ಕೆ ನೀವು 14,60,200 ರೂ. ಪಾವತಿ ಮಾಡಬೇಕಾಗುತ್ತದೆ.
ವಿವಿಧ ನಗರಗಳಲ್ಲಿನ ಚಿನ್ನದ ಬೆಲೆ
| ನಗರ | 22 ಕ್ಯಾರಟ್ (1 ಗ್ರಾಂ) | 24 ಕ್ಯಾರಟ್ (1 ಗ್ರಾಂ) |
|---|---|---|
| ಚೆನ್ನೈ | 12,825 ರೂಪಾಯಿ | 13,991 ರೂಪಾಯಿ |
| ಮುಂಬೈ | 12,825 ರೂಪಾಯಿ | 13,991 ರೂಪಾಯಿ |
| ದೆಹಲಿ | 12,840 ರೂಪಾಯಿ | 14,006 ರೂಪಾಯಿ |
| ಕೋಲ್ಕತಾ | 12,825 ರೂಪಾಯಿ | 13,991 ರೂಪಾಯಿ |
| ಹೈದರಾಬಾದ್ | 12,825 ರೂಪಾಯಿ | 13,991 ರೂಪಾಯಿ |
ಇತ್ತ ಬೆಳ್ಳಿ ದರದಲ್ಲಿಯೂ ಏರಿಕೆ ಕಂಡು ಬಂದಿದೆ. ಬೆಂಗಳೂರಿನಲ್ಲಿ 1 ಗ್ರಾಂ ಬೆಳ್ಳಿಗೆ 210 ರೂಪಾಯಿ ಇದೆ. 10 ಗ್ರಾಂಗೆ 2,100 ರೂಪಾಯಿ ಮತ್ತು 1 ಕೆಜಿಗೆ 2,10,000 ರೂಪಾಯಿ ಇದೆ.