IPL 2026: ಆರ್‌ಸಿಬಿ ಪರ ಐಪಿಎಲ್‌ಗೆ ಪದಾರ್ಪಣೆ ಮಾಡಿದ ಅಭಿನಂದನ್ ಸಿಂಗ್ ಯಾರು!
Who is Abhinandan Singh? ಸನ್‌ರೈಸರ್ಸ್ ಹೈದರಾಬಾದ್ ವಿರುದ್ಧದ 2026ರ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯ ಆರಂಭಿಕ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಪರ ಅಭಿನಂದನ್ ಸಿಂಗ್, ಐಪಿಎಲ್ ವೃತ್ತಿ ಜೀವನಕ್ಕೆ ಪದಾರ್ಪಣೆ ಮಾಡಿದ್ದಾರೆ. ಅಂದ ಹಾಗೆ ಅಭಿನಂದನ್ ಸಿಂಗ್ ಯಾರು ಎಂಬ ಬಗ್ಗೆ ಇಲ್ಲಿ ಸಂಪೂರ್ಣವಾಗಿ ವಿವರಿಸಲಾಗಿದೆ.
ಆರ್‌ಸಿಬಿ ಪರ ಆಡುತ್ತಿರುವ ಅಭಿನಂದನ್ ಸಿಂಗ್ ಯಾರು? -
ಬೆಂಗಳೂರು: ಸನ್‌ರೈಸರ್ಸ್ ಹೈದಾರಾಬಾದ್ ವಿರುದ್ಧದ 2026ರ ಇಂಡಿಯನ್ ಪ್ರೀಮಿಯರ್ ಲೀಗ್ (IPL 2026) ಟೂರ್ನಿಯ ಮೊದಲನೇ ಪಂದ್ಯಕ್ಕೆ (RCB vs SRH) ಹಾಲಿ ಚಾಂಪಿಯನ್ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ, ತನ್ನ ಪ್ಲೇಯಿಂಗ್ XIನಲ್ಲಿ ಎರಡು ಬದಲಾವಣೆಯನ್ನು ಮಾಡಿಕೊಂಡಿದೆ. ಅದರಲ್ಲಿಯೂ ವಿಶೇಷವಾಗಿ ಅನ್‌ಕ್ಯಾಪ್ಡ್ ಆಟಗಾರನಿಗೆ ತನ್ನ ಆಡುವ ಬಳಗದಲ್ಲಿ ಅವಕಾಶವನ್ನು ನೀಡಿ ಆರ್‌ಸಿಬಿ ಟೀಮ್ ಮ್ಯಾನೇಜ್‌ಮೆಂಟ್ ಅಚ್ಚರಿ ಮೂಡಿಸಿದೆ. ಜೇಕಬ್ ಡಫಿ ಹಾಗೂ ಅಭಿನಂದನ್ ಸಿಂಗ್‌ಗೆ ಅವಕಾಶವನ್ನು ನೀಡಿದೆ. ಅಂದ ಹಾಗೆ ಅಭಿನಂದನ್ ಸಿಂಗ್ ಯಾರು? ಅವರ ಹಿನ್ನೆಲೆ ಏನು? ಎಬಿತ್ಯಾದಿ ಮಾಹಿತಿಗಳ್ನು ಈ ಅಂಕಣಲ್ಲಿ ವಿವರಿಸಲಾಗಿದೆ.
ಶನಿವಾರ ಇಲ್ಲಿನ ಎಂ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಟಾಸ್ ಗೆದ್ದ ಆರ್‌ಸಿಬಿ ನಾಯಕ ರಜತ್ ಪಾಟಿದಾರ್, ನಾವು ಮೊದಲು ಬೌಲ್ ಮಾಡುತ್ತೇವೆಂದು ತಿಳಿಸಿದರು ಹಾಗೂ ತಮ್ಮ ತಂಡದ ಪ್ಲೇಯಿಂಗ್ XIನಲ್ಲಿ ಇಬ್ಬರು ಹೊಸ ಆಟಗಾರರಾದ ಜೇಕಬ್ ಡಫಿ ಮತ್ತು ಅಭಿನಂದನ್ ಸಿಂಗ್‌ಗೆ ಅವಕಾಶ ನೀಡಲಾಗಿದೆ ಎಂದು ಹೇಳಿದರು.
RCB vs SRH: ಟಾಸ್ ಗೆದ್ದು ಬೌಲಿಂಗ್ ಆಯ್ದುಕೊಂಡ ರಾಯಲ್ ಚಾಲೆಂಜರ್ಸ್ ಬೆಂಗಳೂರು!
ಡೆಬ್ಯೂಟಂಟ್ ಅಭಿನಂದನ್ ಸಿಂಗ್ ಯಾರು?
ಅಭಿನಂದನ್ ಸಿಂಗ್ ಅವರು ಬಲಗೈ ಮಧ್ಯಮ ವೇಗದ ಬೌಲರ್ ಆಗಿದ್ದು, ಹೊಸ ಚೆಂಡಿನಲ್ಲಿ ನಿಯಮಿತವಾಗಿ ಲೈನ್ ಹಾಕುವ ಸಾಮರ್ಥ್ಯವನ್ನು ಹೊಂದಿದ್ದಾರೆ. 2024ರ ಐಪಿಎಲ್ ಟೂರ್ನಿಯಲ್ಲಿ ಕೋಲ್ಕತಾ ನೈಟ್ ರೈಡರ್ಸ್ ತಂಡಕ್ಕೆ ನೆಟ್ ಬೌಲರ್ ಆಗಿ ಆಡಿದ್ದರು ಹಾಗೂ ಈ ಸೀಸನ್‌ನಲ್ಲಿ ಕೆಕೆಆರ್ ಮೂರನೇ ಬಾರಿ ಚಾಂಪಿಯನ್ ಆಗಿತ್ತು. 2025ರ ಐಪಿಎಲ್ ಮೆಗಾ ಹರಾಜಿನಲ್ಲಿ ಅಭಿನಂದನ್ ಸಿಂಗ್ ಅವರನ್ನು 30 ಲಕ್ಷ ರು ಮೂಲ ಬೆಲೆಗೆ ಬೆಂಗಳೂರು ಫ್ರಾಂಚೈಸಿ ಖರೀದಿಸಿತ್ತು ಹಾಗೂ 2026ರ ಟೂರ್ನಿಗೂ ಕೂಡ ಅವರನ್ನು ಉಳಿಸಿಕೊಂಡಿದೆ.
Deadly Duffy and Abhinandan Singh are ready to steam in and leave their mark in Bengaluru, for Bengaluru. ❤️🔥
— Royal Challengers Bengaluru (@RCBTweets) March 28, 2026
Drop a ⚡️ to wish our speedsters all the best for the game. 🤩#PlayBold #ನಮ್ಮRCB #IPL2026 #RCBvSRH pic.twitter.com/K0NGvgK29w
ಎಸ್‌ಆರ್‌ಎಚ್ ಪರ ಅಲೀಲ್ ಅರೋರಾ ಪದಾರ್ಪಣೆ
ಸನ್‌ರೈಸರ್ಸ್ ಹೈದರಾಬಾದ್ ತಂಡವು 23 ವರ್ಷದ ವಿಕೆಟ್‌ಕೀಪರ್-ಬ್ಯಾಟರ್ ಸಲಿಲ್ ಅರೋರಾ ಅವರಿಗೆ ಐಪಿಎಲ್ ಟೂರ್ನಿಯಲ್ಲಿ ಡೆಬ್ಯೂ ಮಾಡಲು ಅವಕಾಶ ನೀಡಿದೆ. ಪಂಜಾಬ್ ಪರ ದೇಶಿ ಕ್ರಿಕೆಟ್‌ನಲ್ಲಿ ಗಮನಾರ್ಹ ಪ್ರದರ್ಶನ ನೀಡಿದ ನಂತರ ಅವರು ಐಪಿಎಲ್‌ಗೆ ಬಂದಿದ್ದಾರೆ. ಡೈನಾಮಿಕ್ ಮಧ್ಯಕ್ರಮದ ಬ್ಯಾಟರ್ ಆಗಿರುವ ಅರೋರಾ, 2025/26ರ ಸೈಯದ್ ಮುಷ್ತಾಕ್ ಅಲಿ ಟ್ರೋಫಿ ಟೂರ್ನಿಯಲ್ಲಿ ಪಂಜಾಬ್ ತಂಡದ ಪರ ಅತ್ಯಧಿಕ ರನ್‌ಗಳಿಸಿದ ಆಟಗಾರರಾಗಿದ್ದು, 198.88ರ ಭರ್ಜರಿ ಸ್ಟ್ರೈಕ್ ರೇಟ್‌ನೊಂದಿಗೆ 358 ರನ್‌ಗಳನ್ನು ಬಾರಿಸಿದ್ದರು.
A 𝐅𝐈𝐄𝐑𝐘 name added to our 𝐅𝐈𝐑𝐄 𝐒𝐓𝐎𝐑𝐘 ✒️🔥
— SunRisers Hyderabad (@SunRisers) March 28, 2026
Go well, Salil 🧡 pic.twitter.com/9dAEFsFC5j
ಸಲೀಲ್ ಅರೋರಾ ಅವರು ಜಾರ್ಖಂಡ್ ವಿರುದ್ಧ ಕೇವಲ 45 ಎಸೆತಗಳಲ್ಲಿ ಅಜೇಯ 125 ರನ್‌ಗಳನ್ನು ಬಾರಿಸಿ ಶತಕ ಸಿಡಿಸಿದ್ದರು. ಈ ಇನಿಂಗ್ಸ್‌ನಲ್ಲಿ ಅವರು ಒಂಬತ್ತು ಬೌಂಡರಿಗಳು ಮತ್ತು 11 ಸಿಕ್ಸರ್‌ಗಳನ್ನು ಬಾರಿಸಿದ್ದರು, ಇದರಲ್ಲಿ 102 ರನ್‌ಗಳು ಕೇವಲ ಬೌಂಡರಿಗಳಿಂದಲೇ ಬಂದಿದ್ದವು. ಈ ಟೂರ್ನಿಯಲ್ಲಿ ಇಶಾನ್ ಕಿಶನ್ ಅವರಿಗಿಂತ ಹೆಚ್ಚು ಸಿಕ್ಸರ್‌ಗಳನ್ನು ಬಾರಿಸಿದ್ದರು. ಅವರ ಪವರ್-ಹಿಟಿಂಗ್ ಸಾಮರ್ಥ್ಯವನ್ನು ಗುರುತಿಸಿದ ಹೈದರಾಬಾದ್ ಫ್ರಾಂಚೈಸಿ 2026ರ ಹರಾಜಿನಲ್ಲಿ 1.5 ಕೋಟಿ ರು. ಗಳಿಗೆ ಅವರನ್ನು ಖರೀದಿಸಿ, ಮಧ್ಯಮ ಕ್ರಮಾಂಕಕ್ಕೆ ಮತ್ತೊಂದು ಆಕ್ರಮಣಕಾರಿ ಆಯ್ಕೆಯನ್ನು ಸೇರಿಸಿಕೊಂಡಿದೆ.
IPL 2026: ರೋಹಿತ್ ಶರ್ಮಾ ರನ್ ಗಳಿಸುವ ಬಗ್ಗೆ ಡೇಲ್ ಸ್ಟೇನ್ ದೊಡ್ಡ ಹೇಳಿಕೆ!
ರಾಯಲ್ ಚಾಲೆಂಜರ್ಸ್ ಬೆಂಗಳುರು ಪ್ಲೇಯಿಂಗ್ XI: ವಿರಾಟ್ ಕೊಹ್ಲಿ, ಫಿಲಿಪ್ ಸಾಲ್ಟ್, ರಜತ್ ಪಾಟಿದಾರ್ (ನಾಯಕ), ಜಿತೇಶ್ ಶರ್ಮಾ (ವಿಕೆಟ್ ಕೀಪರ್), ಟಿಮ್ ಡೇವಿಡ್, ರೊಮಾರಿಯೋ ಶೆಫರ್ಡ್, ಕೃಣಾಲ್ ಪಾಂಡ್ಯ, ಭುವನೇಶ್ವರ್ ಕುಮಾರ್, ಅಭಿನಂದನ್ ಸಿಂಗ್, ಜಾಕೋಬ್ ಡಫಿ, ಸುಯಾಶ್ ಶರ್ಮಾ
ಸನ್‌ರೈಸರ್ಸ್ ಹೈದರಾಬಾದ್ ಪ್ಲೇಯಿಂಗ್ XI: ಅಭಿಷೇಕ್ ಶರ್ಮಾ, ಟ್ರಾವಿಸ್ ಹೆಡ್, ಇಶಾನ್ ಕಿಶನ್ (ನಾಯಕ, ವಿಕೆಟ್ ಕೀಪರ್), ಹೆನ್ರಿಚ್ ಕ್ಲಾಸೆನ್, ಅನಿಕೇತ್ ವರ್ಮಾ, ನಿತೀಶ್ ಕುಮಾರ್ ರೆಡ್ಡಿ, ಸಲೀಲ್ ಅರೋರಾ, ಹರ್ಷ್ ದುಬೆ, ಹರ್ಷಲ್ ಪಟೇಲ್, ಜಯದೇವ್ ಉನಾದ್ಕತ್, ಇಶಾನ್ ಮಾಲಿಂಗ