IND vs AFG 2026: ಸೆಪ್ಟಂಬರ್ 13 ರಿಂದ 17ರವರೆಗೆ ಭಾರತ vs ಅಫ್ಘಾನಿಸ್ತಾನ ನಡುವೆ ಟಿ20ಐ ಸರಣಿ!
ಭಾರತ ಹಾಗೂ ಅಫ್ಘಾನಿಸ್ತಾನ ನಡುವಣ ಮೂರು ಪಂದ್ಯಗಳ ಟಿ20ಐ ಸರಣಿಯ ದಿನಾಂಕಗಳನ್ನು ಆಫ್ಘನ್ ಕ್ರಿಕೆಟ್ ಮಂಡಳಿ ಖಚಿತಪಡಿಸಿದೆ. ಸೆಪ್ಟಂಬರ್ 13, 15 ಹಾಗೂ 17 ರಂದು ದೆಹಲಿಯ ಅರುಣ್ ಜೇಟ್ಲಿ ಕ್ರೀಡಾಂಗಣದಲ್ಲಿ ಮೂರೂ ಪಂದ್ಯಗಳು ನಡೆಯಲಿವೆ. ಈ ಸರಣಿಗೆ ಬಿಸಿಸಿಐನಿಂದ ಒಪ್ಪಿಗೆ ಸಿಕ್ಕಿದೆ ಎಂದು ಎಸಿಬಿ ತಿಳಿಸಿದೆ.
ಭಾರತ vs ಅಫ್ಘಾನಿಸ್ತಾನ ಟಿ20ಐ ಸರಣಿಯ ದಿನಾಂಕ ಪ್ರಕಟ. -
ನವದೆಹಲಿ: ಭಾರತ ಮತ್ತು ಅಫ್ಘಾನಿಸ್ತಾನ (IND vs AFG) ನಡುವಿನ ಮೂರು ಪಂದ್ಯಗಳ ಟಿ20ಐ ಸರಣಿ ದೆಹಲಿಯ ಅರುಣ್ ಜೇಟ್ಲಿ ಕ್ರೀಡಾಂಗಣದಲ್ಲಿ ನಡೆಯಲಿದೆ ಎಂದು ಅಫ್ಘಾನಿಸ್ತಾನ ಕ್ರಿಕೆಟ್ ಮಂಡಳಿ (ACB) ಅಧಿಕೃತವಾಗಿ ಖಚಿತಪಡಿಸಿದೆ. ಮೂರು ಪಂದ್ಯಗಳು 2026ರ ಸೆಪ್ಟೆಂಬರ್ 13, 15 ಮತ್ತು 17ರಂದು ನಡೆಯಲಿವೆ. ಸರಣಿಯ ಎಲ್ಲಾ ಪಂದ್ಯಗಳ ತಾಣಗಳನ್ನು ಅಂತಿಮಗೊಳಿಸಲಾಗಿದ್ದು, ದಿನಾಂಕಗಳಿಗೆ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (BCCI) ಜೊತೆ ಒಪ್ಪಿಗೆ ದೊರೆತಿದೆ ಎಂದು ಎಸಿಬಿ ತಿಳಿಸಿದೆ.
ಎಸಿಬಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ನಸೀಬ್ ಖಾನ್ ಅವರು ಆಗಸ್ಟ್ 10ರಂದು ಸೋಮವಾರ ಮಂಡಳಿಯ ವಾಣಿಜ್ಯ ಪಾಲುದಾರರಿಗೆ ಅಧಿಕೃತ ಪತ್ರ ಬರೆದಿದ್ದು, ಭಾರತ–ಅಫ್ಘಾನಿಸ್ತಾನ 2026ರ ಪ್ರವಾಸದ ವೇಳಾಪಟ್ಟಿಯನ್ನು ದೃಢಪಡಿಸಿದ್ದಾರೆ.
“ಭಾರತದ ಅಫ್ಘಾನಿಸ್ತಾನ ಪ್ರವಾಸ 2026 ಸೆಪ್ಟೆಂಬರ್ 13ರಿಂದ ಸೆಪ್ಟೆಂಬರ್ 17ರವರೆಗೆ ನಡೆಯಲಿದೆ. ಈ ಕಾರ್ಯಕ್ರಮದ ದಿನಾಂಕಗಳನ್ನು ಬಿಸಿಸಿಐ ಜೊತೆ ಅಂತಿಮಗೊಳಿಸಿ ಒಪ್ಪಿಕೊಳ್ಳಲಾಗಿದೆ. ನಿಗದಿತ ಪಂದ್ಯಗಳ ಕ್ರೀಡಾಂಗಣಗಳನ್ನೂ ಅಂತಿಮಗೊಳಿಸಲಾಗಿದೆ,” ಎಂದು ನಸೀಬ್ ಖಾನ್ ಪತ್ರದಲ್ಲಿ ತಿಳಿಸಿದ್ದಾರೆ.
ಭಾರತೀಯ ಕ್ರಿಕೆಟ್‌ನ ಸಾರ್ವಕಾಲಿಕ ಶ್ರೇಷ್ಠ ಮೂವರು ಸ್ಪಿನ್ನರ್‌ಗಳನ್ನು ಹೆಸರಿಸಿದ ವಾಸೀಮ್ ಜಾಫರ್!
ಇದೇ ಮೊದಲ ಬಾರಿ ಅಫ್ಘಾನಿಸ್ತಾನ, ಭಾರತ ತಂಡಕ್ಕೆ ಈ ದ್ವಿಪಕ್ಷೀಯ ಟಿ20ಐ ಸರಣಿಯಲ್ಲಿ ಅಧಿಕೃತವಾಗಿ ಆತಿಥ್ಯ ವಹಿಸುತ್ತಿದೆ. ಆದರೆ ತಟಸ್ಥ ತಾಣದ ವ್ಯವಸ್ಥೆಯಿಂದಾಗಿ ಮೂರು ಪಂದ್ಯಗಳೂ ಭಾರತದ ನೆಲದಲ್ಲೇ, ದೆಹಲಿಯ ಅರುಣ್ ಜೇಟ್ಲಿ ಕ್ರೀಡಾಂಗಣದಲ್ಲಿ ನಡೆಯಲಿವೆ.
ಮಾಧ್ಯಮ ಹಕ್ಕುದಾರರಿಗೆ ಎಸಿಬಿ ಹೇಳಿದ್ದೇನು?
ಎಸಿಬಿ ಸಿಇಓ ನಸೀಬ್ ಖಾನ್ ಅವರ ಪತ್ರವನ್ನು ವಿಶೇಷವಾಗಿ ಸರಣಿಯ ಮಾಧ್ಯಮ ಹಕ್ಕುದಾರರಿಗೆ ಕಳುಹಿಸಲಾಗಿದ್ದು, ಪ್ರಸಾರ ಮತ್ತು ನಿರ್ಮಾಣದ ಸಿದ್ಧತೆಗಳನ್ನು ಮುಂಚಿತವಾಗಿಯೇ ಆರಂಭಿಸಲು ಸೂಚಿಸಲಾಗಿದೆ. ITW Universe ಸರಣಿಯ ಮಾಧ್ಯಮ ಹಕ್ಕುಗಳನ್ನು ಹೊಂದಿದೆ. ಇದೇ ವೇಳೆ, ಟಿವಿ ಪ್ರಸಾರ ಹಕ್ಕುಗಳಿಗಾಗಿ ಜಿಯೊ ಸ್ಟಾರ್, ಸೋನಿ ಸ್ಪೋರ್ಟ್ಸ್ ಮತ್ತು ಝೀ ಯುನೈಟ್8 ಜೊತೆ ಎಸಿಬಿ ಮಾತುಕತೆ ನಡೆಸುತ್ತಿದೆ. ಡಿಜಿಟಲ್ ಪ್ರಸಾರ ಹಕ್ಕುಗಳು ಫ್ಯಾನ್‌ಕೋಡ್ ಬಳಿ ಇವೆ.
ಪತ್ರ ಬರೆಯುವ ವೇಳೆಗೆ ಸರಣಿಯ ಅಧಿಕೃತ ಸಾರ್ವಜನಿಕ ಘೋಷಣೆ ಇನ್ನೂ ಬಾಕಿಯಿತ್ತು ಎಂದು ಎಸಿಬಿ ತಿಳಿಸಿದೆ. ಆದರೆ ಮಾಧ್ಯಮ ಹಕ್ಕುದಾರರು ಯಾವುದೇ ವಿಳಂಬವಿಲ್ಲದೆ ಸಿದ್ಧತೆಗಳನ್ನು ಆರಂಭಿಸಬಹುದು ಎಂದು ಸ್ಪಷ್ಟಪಡಿಸಿದೆ.
IND vs SL: ಮೊದಲನೇ ಟೆಸ್ಟ್‌ಗೂ ಮುನ್ನ ರಿಷಭ್ ಪಂತ್‌ಗೆ ದೀಪ್ ದಾಸ್‌ಗುಪ್ತಾ ಮಹತ್ವದ ಸಲಹೆ!
“ಕಾರ್ಯಕ್ರಮದ ಕುರಿತು ಸಂಬಂಧಿತ ಅಧಿಕಾರಿಗಳಿಂದ ಅಧಿಕೃತ ಸಾರ್ವಜನಿಕ ಘೋಷಣೆ ಇನ್ನೂ ಹೊರಬಂದಿಲ್ಲ. ಆದರೂ, ಅಫ್ಘಾನಿಸ್ತಾನ–ಭಾರತ 2026ರ ಪ್ರವಾಸದ ನಿಗದಿತ ದಿನಾಂಕಗಳು ಮತ್ತು ತಾಣಗಳನ್ನು ಎಸಿಬಿ ಅಧಿಕೃತವಾಗಿ ದೃಢಪಡಿಸುತ್ತಿದೆ. ಹೀಗಾಗಿ ಎಲ್ಲಾ ಮಾಧ್ಯಮ ಹಕ್ಕುದಾರರು ಪ್ರಸಾರ ಯೋಜನೆ, ವೇಳಾಪಟ್ಟಿ, ನಿರ್ಮಾಣ ವ್ಯವಸ್ಥೆ, ಸಿಬ್ಬಂದಿ ಹಂಚಿಕೆ, ಪ್ರಚಾರ ಚಟುವಟಿಕೆಗಳು ಹಾಗೂ ಇತರ ಸಂಬಂಧಿತ ಸಿದ್ಧತೆಗಳನ್ನು ಮೇಲಿನ ವೇಳಾಪಟ್ಟಿಯ ಆಧಾರದ ಮೇಲೆ ತಕ್ಷಣವೇ ಆರಂಭಿಸಬಹುದು,” ಎಂದು ಪತ್ರದಲ್ಲಿ ತಿಳಿಸಲಾಗಿದೆ.
ಇದೇ ವೇಳೆ, ಸರಣಿಯ ಒಂದು ಪಂದ್ಯವನ್ನು ಸೆಪ್ಟೆಂಬರ್ 14ಕ್ಕೆ ಬದಲಾಯಿಸುವ ಕುರಿತು ಅಫ್ಘಾನಿಸ್ತಾನ ಕ್ರಿಕೆಟ್ ಮಂಡಳಿ, ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ ಜೊತೆ ಮಾತುಕತೆ ಆರಂಭಿಸಿದೆ. ಸೆಪ್ಟೆಂಬರ್ 14ರಂದು ಗಣೇಶ ಚತುರ್ಥಿ ಇರುವ ಹಿನ್ನೆಲೆಯಲ್ಲಿ ಸರಣಿಗೆ ಹಬ್ಬದ ಮೆರುಗು ನೀಡುವ ಉದ್ದೇಶದಿಂದ ಈ ಬದಲಾವಣೆಯನ್ನು ಪ್ರಸ್ತಾಪಿಸಲಾಗಿದೆ. ಆದರೆ ಪಂದ್ಯ ದಿನಾಂಕ ಬದಲಾವಣೆಗೆ ಸಂಬಂಧಿಸಿದಂತೆ ಇನ್ನೂ ಯಾವುದೇ ಅಧಿಕೃತ ದೃಢೀಕರಣ ಹೊರಬಂದಿಲ್ಲ. ಆದ್ದರಿಂದ ಅಂತಿಮ ವೇಳಾಪಟ್ಟಿ ಬದಲಾಗುತ್ತದೆಯೇ ಎಂಬುದು ಸದ್ಯಕ್ಕೆ ಸ್ಪಷ್ಟವಾಗಿಲ್ಲ.