ಕನ್ವರ್ ಯಾತ್ರೆಯಲ್ಲಿ ಶಿವನ ವಾಹನ ನಂದಿ ಪ್ರತ್ಯಕ್ಷ! ವಿಡಿಯೊ ನೋಡಿದರೆ ನೀವೂ ಬೆರಗಾಗೋದು ಖಚಿತ
Viral Video: ಕನ್ವರ್ ತೀರ್ಥಯಾತ್ರೆಯ ಸಮಯದಲ್ಲಿ ಇಬ್ಬರು ಭಕ್ತರು ತಮ್ಮ ಬೈಕ್ ಅನ್ನು ವಿಶೇಷ ರೀತಿಯಲ್ಲಿ ಅಲಂಕರಿಸಿದ್ದು ಗಮನ ಸೆಳೆದಿದೆ. ಬೈಕ್‌ಗೆ ಶಿವನ ವಾಹನವಾದ ನಂದಿಯ ರೂಪ ಕೊಡಲಾಗಿದೆ. ನೈಜ ನಂದಿಯನ್ನು ಈ ಬೈಕ್ ಹೋಲುತ್ತಿದ್ದು, ಯುವಕರ ಕ್ರಿಯೇಟಿವಿಟಿಗೆ ನೆಟ್ಟಿಗರು ಫಿದಾ ಆಗಿದ್ದಾರೆ. ಹೆದ್ದಾರಿಯಲ್ಲಿ ಈ ನಂದಿ ಜುಂ ಎಂದು ಸಾಗಿದ್ದು ವಿಡಿಯೊ ವೈರಲ್ ಆಗಿದೆ.
ಉತ್ತರ ಪ್ರದೇಶದಲ್ಲಿ ಗಮನ ಸೆಳೆದ ನಂದಿ ರೂಪದ ಬೈಕ್ -
ಲಖನೌ, ಆ. 11: ಉತ್ತರ ಭಾರತದ ಪ್ರಸಿದ್ಧ ಧಾರ್ಮಿಕ ಕಾರ್ಯಕ್ರಮ ಕನ್ವರ್ ಯಾತ್ರೆಯ ಸಂದರ್ಭದಲ್ಲಿ ಯುವಕರಿಬ್ಬರ ಸೃಜನಶೀಲ ಐಡಿಯಾವೊಂದು ಭಾರಿ ವೈರಲ್ (Viral News) ಆಗಿದೆ. ತೀರ್ಥಯಾತ್ರೆಯ ಸಮಯದಲ್ಲಿ ಇಬ್ಬರು ಭಕ್ತರು ತಮ್ಮ ಬೈಕ್ ಅನ್ನು ವಿಶೇಷ ರೀತಿಯಲ್ಲಿ ಅಲಂಕರಿಸಿದ್ದಾರೆ. ಬೈಕ್‌ಗೆ ಶಿವನ ವಾಹನ ನಂದಿಯ ರೂಪ ಕೊಟ್ಟಿದ್ದಾರೆ. ಬೈಕ್ ಥೇಟ್ ನಂದಿಯಂತೆ ಕಾಣಿಸುತ್ತಿದ್ದು, ಅದನ್ನು ಅವರು ಹೆದ್ದಾರಿಯಲ್ಲಿ ಚಲಾಯಿಸಿಕೊಂಡು ಹೋಗಿದ್ದಾರೆ. ಯುವಕರ ಕ್ರಿಯೇಟಿವಿಟಿಗೆ ನೆಟ್ಟಿಗರು ಫಿದಾ ಆಗಿದ್ದು, ವಿಡಿಯೊ ವೈರಲ್ ಆಗಿದೆ.
ನಂದಿಯ ನೋಟವನ್ನು ನೀಡಲು ಬೈಕ್‌ಗೆ ವಿಶೇಷವಾದ ಆಲಂಕಾರಿಕ ವಸ್ತುಗಳನ್ನು ಬಳಸಲಾಗಿದೆ. ಸಾಮಾನ್ಯ ಬೈಕ್ ಅನ್ನು ಸಂಪೂರ್ಣವಾಗಿ ಬಿಳಿ ಬಣ್ಣದ ಮೃದುವಾದ ವಸ್ತುವಿನಿಂದ ಕವರ್ ಮಾಡಲಾಗಿತ್ತು. ಬೈಕ್‌ನ ಮೇಲ್ಭಾಗದಲ್ಲಿ ನಂದಿಯ ಮುಖದಂತೆ ಕಾಣಲು ಕಲಾಕೃತಿಯನ್ನು ಜೋಡಿಸಲಾಗಿದೆ. ಒಟ್ಟಿನಲ್ಲಿ ಬೈಕ್ ನೈಜ ನಂದಿಯಂತೆ ಕಂಡು ಬಂದಿದೆ.
ವಿಡಿಯೊ ನೋಡಿ:
India is not for beginners...!😂😂 pic.twitter.com/2md3MxMhan
— MS....🍁 (@SadhotraMeenu) August 10, 2026
ತೀರ್ಥಯಾತ್ರೆಯ ಸಮಯದಲ್ಲಿ ಅಲಂಕರಿಸಲ್ಪಟ್ಟ ಬೈಕ್ ಅನ್ನು ಇಬ್ಬರು ಭಕ್ತರು ಸವಾರಿ ಮಾಡಿದ್ದು, ಹಲವರ ಗಮನ ಸೆಳೆದಿದೆ. ಬೈಕ್ ಸಂಪೂರ್ಣವಾಗಿ ಶಿವನ ವಾಹನವಾದ ನಂದಿಯ ರೂಪ ತಾಳಿದ್ದು, ನೆಟ್ಟಿಗರು ಅದೇ ರೀತಿ ಸ್ಥಳೀಯರನ್ನು ಆಕರ್ಷಿಸಿದೆ. ''ಭಾರತ ಹೊಸಬರಿಗಾಗಿ ಅಲ್ಲ'' ಎಂಬ ಕ್ಯಾಪ್ಷನ್ ನೀಡಿ ಎಕ್ಸ್‌ನಲ್ಲಿ ಈ ವಿಡಿಯೊ ಶೇರ್ ಮಾಡಲಾಗಿದೆ.
"ಭಾರತದಲ್ಲಿ ಮಾತ್ರ ಇದು ಸಾಧ್ಯ"; ಉಚಿತ ರಕ್ತ ಪರೀಕ್ಷೆ ಸೇವೆಗೆ ಅಮೆರಿಕದ ಮಹಿಳೆ ಮೆಚ್ಚುಗೆ
ನೆಟ್ಟಿಗರೊಬ್ಬರು ʼʼಇದು ಈ ಯಾತ್ರೆಯ ಪ್ರಮುಖ ಆಕರ್ಷಣೆʼʼ ಎಂದು ಬರೆದಿದ್ದಾರೆ. ಮತ್ತೊಬ್ಬರು, ʼʼಯುವಕರ ಸೃಜನಶೀಲತೆ ಅದ್ಬುತʼʼ ಎಂದು ಕಾಮೆಂಟ್ ಮಾಡಿದ್ದಾರೆ. ಕನ್ವರ್ ಯಾತ್ರೆಯು ಶಿವನಿಗೆ ಅರ್ಪಿತವಾದ ಹಿಂದೂ ತೀರ್ಥಯಾತ್ರೆ. ಪ್ರಯಾಣದ ಸಮಯದಲ್ಲಿ, ಭಕ್ತರು ಪವಿತ್ರ ಸ್ಥಳಗಳಿಗೆ, ವಿಶೇಷವಾಗಿ ಗಂಗಾ ನದಿಯ ಬಳಿಗೆ ಪವಿತ್ರ ನೀರನ್ನು ಸಂಗ್ರಹಿಸಲು ಪ್ರಯಾಣಿಸುತ್ತಾರೆ. ನಂತರ ನೀರನ್ನು ಶಿವ ದೇವಾಲಯಗಳಿಗೆ ತಂದು ಅಭಿಷೇಕ ಮಾಡುತ್ತಾರೆ. ವಿಶೇಷವಾಗಿ ಪವಿತ್ರ ಶ್ರಾವಣ ಮಾಸದಲ್ಲಿ ಇದು ನಡೆಯುತ್ತದೆ.