ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

IND vs ENG: ಬೆನ್‌ ಡಕೆಟ್‌ ಭುಜದ ಮೇಲೆ ಕೈ ಹಾಕಿ ಪೆವಿಲಿಯನ್‌ಗೆ ಕಳುಹಿಸಿಕೊಟ್ಟ ಆಕಾಶ್‌ ದೀಪ್‌!

ಭಾರತ ಹಾಗೂ ಇಂಗ್ಲೆಂಡ್‌ ತಂಡಗಳ ನಡುವಣ ಐದನೇ ಟೆಸ್ಟ್‌ ಪಂದ್ಯದ ಎರಡನೇ ದಿನ ಬೆನ್‌ ಡಕೆಟ್‌ ಅವರನ್ನು ಪ್ರವಾಸಿ ವೇಗಿ ಆಕಾಶ್‌ ದೀಪ್‌ ಕೆಣಕಿದ್ದಾರೆ. ಔಟ್‌ ಆಗಿ ಪೆವಿಲಿಯನ್‌ಗೆ ಮರಳುತ್ತಿದ್ದ ಬೆನ್‌ ಡಕೆಟ್‌ ಅವರ ಭುಜಕ್ಕೆ ಕೈ ಹಾಕಿದ ಆಕಾಶ್‌ ದೀಪ್‌ ನಗು ಮುಖದಲ್ಲಿ ಮಾತನಾಡುತ್ತಿದ್ದರು. ಈ ವಿಡಿಯೊ ವೈರಲ್‌ ಆಗಿದೆ.

ಬೆನ್‌ ಡಕೆಟ್‌ ಭುಜಕ್ಕೆ ಕೈಹಾಕಿದ ಆಕಾಶ್‌ ದೀಪ್!

ಲಂಡನ್‌: ಭಾರತ ಮತ್ತು ಇಂಗ್ಲೆಂಡ್ (IND vs ENG) ನಡುವಿನ ಐದನೇ ಟೆಸ್ಟ್ ಪಂದ್ಯ ಇಲ್ಲಿನ ಕೆನಿಂಗ್ಟನ್‌ ಓವಲ್‌ ಕ್ರೀಡಾಂಗಣದಲ್ಲಿ ನಡೆಯುತ್ತಿದೆ. ಈ ಪಂದ್ಯದ ಎರಡನೇ ದಿನ ಬೆನ್ ಡಕೆಟ್ (Ben Duckett) ಮತ್ತು ಆಕಾಶ್ ದೀಪ್ (Akash Deep) ನಡುವೆ ಅಚ್ಚರಿ ಘಟನೆಯೊಂದು ಘಟನೆ ನಡೆದಿದೆ. ಈ ಬಗ್ಗೆ ಪ್ರಸ್ತುತ ಸೋಶಿಯಲ್‌ ಮೀಡಿಯಾದಲ್ಲಿ ಚರ್ಚೆಗಳು ನಡೆಯುತ್ತಿವೆ. ಬೆನ್‌ ಡಕೆಟ್‌ ಅವರನ್ನು ಔಟ್‌ ಮಾಡಿದ ಬಳಿಕ ಆಕಾಶ್‌ ದೀಪ್‌, ಪೆವಿಲಿಯನ್‌ಗೆ ಮರಳುತ್ತಿದ್ದ ಇಂಗ್ಲೆಂಡ್‌ ಆರಂಭಿಕ ಬ್ಯಾಟ್ಸ್‌ಮನ್‌ ಅನ್ನು ಕೆಣಕಿದರು. ನಂತರ ಆಕಾಶ್ ದೀಪ್, ಡಕೆಟ್‌ಗೆ ಏನೋ ಹೇಳುತ್ತಿದ್ದರು. ಈ ವಿಡಿಯೊ ಸೋಶಿಯಲ್‌ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್‌ ಆಗಿದೆ.

ಪಂದ್ಯದ ಎರಡನೇ ದಿನದಂದು ಆಕಾಶ್ ದೀಪ್ ಬೆನ್ ಡಕೆಟ್‌ಗೆ ಚೆಂಡನ್ನು ಎಸೆದರು. ನಂತರ ಅವರು ಡಕೆಟ್‌ ಬಳಿಗೆ ಹೋಗಿ ಏನೋ ಹೇಳಲು ಪ್ರಾರಂಭಿಸಿದರು. ಹಾಗಾಗಿ ಇವರಿಬ್ಬರ ನಡುವೆ ಯಾವ ಸಂಭಾಷಣೆ ನಡೆಯಿತು ಎಂಬುದು ತಿಳಿದಿಲ್ಲ. ಆದರೆ, ಮುಂದಿನ ಎಸೆತದಲ್ಲಿ ಬೆನ್ ಡಕೆಟ್ ಸೇಡು ತೀರಿಸಿಕೊಂಡರು. ಆಕಾಶ್ ದೀಪ್ ಎಸೆತದಲ್ಲಿ ರಿವರ್ಸ್ ಸ್ವೀಪ್ ಮೂಲಕ ಬೆನ್‌ ಡಕೆಟ್‌ ಅದ್ಭುತ ಸಿಕ್ಸ್ ಬಾರಿಸಿದರು. ಇದರಿಂದ ಆಕಾಶ್‌ ದೀಪ್‌ ಆಕ್ರೋಶಗೊಂಡರು. ಹೇಗಾದರೂ ಮಾಡಿ ಅವರನ್ನು ಔಟ್‌ ಮಾಡಬೇಕೆಂದು ಅಂದುಕೊಂಡರು.

IND vs ENG: ಐದನೇ ಟೆಸ್ಟ್‌ ಆಡದ ಜಸ್‌ಪ್ರೀತ್‌ ಬುಮ್ರಾ ವಿರುದ್ದ ಬಿಸಿಸಿಐ ಅಸಮಾಧಾನ!

ಕೊನೆಗೂ ಬೆನ್ ಡಕೆಟ್ ಅವರನ್ನು ಔಟ್ ಮಾಡಿದ ಆಕಾಶ್‌ ದೀಪ್‌

13ನೇ ಓವರ್ ಅನ್ನು ಭಾರತದ ಆಕಾಶ್ ದೀಪ್ ಎಸೆದರು. ಬೆನ್ ಡಕೆಟ್ ತಮ್ಮ ಓವರ್‌ನ ಐದನೇ ಎಸೆತದಲ್ಲಿ ಸ್ಟ್ರೈಕ್‌ನಲ್ಲಿದ್ದರು. ಬೆನ್ ಡಕೆಟ್ ರಿವರ್ಸ್ ಸ್ವೀಪ್ ಮೂಲಕ ಮತ್ತೊಂದು ದೊಡ್ಡ ಶಾಟ್ ಆಡಲು ಬಯಸಿದ್ದರು. ಆದರೆ, ಅವರು ಚೆಂಡನ್ನು ಸಮಯಕ್ಕೆ ಸರಿಯಾಗಿ ಹೊಡೆಯಲು ಸಾಧ್ಯವಾಗಲಿಲ್ಲ ಮತ್ತು ಚೆಂಡು ಅವರ ಬ್ಯಾಟ್‌ನ ಅಂಚನ್ನು ತೆಗೆದುಕೊಂಡು ವಿಕೆಟ್ ಕೀಪರ್ ಧ್ರುವ್ ಜುರೆಲ್ ಅವರ ಕೈಗೆ ಸೇರಿತು. ಈ ರೀತಿಯಾಗಿ ಡಕೆಟ್ 43 ರನ್ ಗಳಿಸಿದ ನಂತರ ಔಟಾದರು. ಅವರು ತಮ್ಮ ಇನಿಂಗ್ಸ್‌ನಲ್ಲಿ 5 ಬೌಂಡರಿ ಮತ್ತು 2 ಸಿಕ್ಸರ್‌ಗಳನ್ನು ಬಾರಿಸಿದ್ದಾರೆ.



ಬೆನ್‌ ಡಕೆಟ್‌ ಔಟ್‌ ಆದ ಬಳಿಕ ಪೆವಿಲಿಯನ್‌ ಕಡೆಗೆ ಹೆಜ್ಜೆ ಹಾಕುತ್ತಿದ್ದರು. ಈ ವೇಳೆ ಆಕಾಶ್‌ ದೀಪ್‌ ಆಕ್ರಮಣಕಾರಿಯಾಗಿ ಸಂಭ್ರಮಿಸಿದರು. ಅಲ್ಲದೆ ಬೆನ್‌ ಡಕೆಟ್‌ ಅವರ ಬಳಿ ತೆರಳಿ, ಅವರ ಭುಜದ ಮೇಲೆ ಕೈ ಹಾಕಿ ನಗು ಮುಖದಲ್ಲಿ ಏನೋ ಹೇಳಿದರು. ಪಕ್ಕದಲ್ಲೇ ಇದ್ದ ಕೆಎಲ್‌ ರಾಹುಲ್‌, ತಮ್ಮ ಸಹ ಆಟಗಾರ ಆಕಾಶ್‌ ದೀಪ್‌ ಅವರನ್ನು ಪಕ್ಕಕ್ಕೆ ಎಳೆದರು.

IND vs ENG 5th Test: ಪಂದ್ಯ ಆರಂಭಗೊಂಡ ಅರ್ಧ ಗಂಟೆಯಲ್ಲೇ ಭಾರತ ಆಲೌಟ್‌

ಭಾರತ ತಂಡ ಪ್ರಥಮ ಇನಿಂಗ್ಸ್‌ನಲ್ಲಿ 224 ರನ್‌ಗೆ ಆಲೌಟ್

ಇಂಗ್ಲೆಂಡ್‌ನ ತಾತ್ಕಾಲಿಕ ನಾಯಕ ಒಲ್ಲಿ ಪೋಪ್ ಟಾಸ್ ಗೆದ್ದು ಮೊದಲು ಬೌಲಿಂಗ್ ಮಾಡಲು ನಿರ್ಧರಿಸಿದರು. ಹಾಗಾಗಿ ಶುಭಮನ್‌ ಗಿಲ್‌ ನಾಯಕತ್ವದ ಭಾರತ ತಂಡ ಪ್ರಥಮ ಇನಿಂಗ್ಸ್‌ನಲ್ಲಿ ಕೇವಲ 224 ರನ್‌ಗಳಿಗೆ ಆಲ್‌ಔಟ್‌ ಆಯಿತು. ಕನ್ನಡಿಗ ಕರುಣ್ ನಾಯರ್ (57 ರನ್‌) ಟೀಮ್ ಇಂಡಿಯಾ ಪರ ಅತಿ ಹೆಚ್ಚು ರನ್ ಗಳಿಸಿದರೆ, ಗಸ್ ಅಟ್ಕಿನ್ಸನ್ ಇಂಗ್ಲೆಂಡ್ ಪರ 5 ವಿಕೆಟ್‌ ಸಾಧನೆ ಮಾಡಿದ್ದಾರೆ.