IND vs PAK: ಭಾರತ ವಿರುದ್ಧದ ಪಂದ್ಯಕ್ಕೂ ಮುನ್ನ ಸುದ್ದಿಗೋಷ್ಠಿಯನ್ನು ರದ್ದುಗೊಳಿಸಿದ ಪಾಕಿಸ್ತಾನ!
2025ರ ಏಷ್ಯಾ ಕಪ್ ಟೂರ್ನಿಯ ಗುಂಪು ಹಂತದಲ್ಲಿ ಪಾಕಿಸ್ತಾನ ತಂಡ, ಸಾಂಪ್ರದಾಯಿಕ ಎದುರಾಳಿ ಭಾರತದ ವಿರುದ್ಧ ಹೀನಾಯ ಸೋಲು ಅನುಭವಿಸಿತ್ತು. ಇದೀಗ ಸೆಪ್ಟಂಬರ್ 21 ರಂದು ಸೂಪರ್-4ರ ಹಂತದ ಪಂದ್ಯದಲ್ಲಿ ಭಾರತ ತಂಡವನ್ನು ಎದುರಿಸಲಿದೆ. ಆದರೆ, ಈ ಪಂದ್ಯಕ್ಕೂ ಮುನ್ನ ಪಾಕಿಸ್ತಾನ ಸುದ್ದಿಗೋಷ್ಠಿಯನ್ನು ರದ್ದುಗೊಳಿಸಿದೆ.

ಭಾರತ ವಿರುದ್ಧದ ಪಂದ್ಯಕ್ಕೂ ಮುನ್ನ ಸುದ್ದಿಗೋಷ್ಠಿಯನ್ನು ರದ್ದುಗೊಳಿಸಿದ ಪಾಕಿಸ್ತಾನ ತಂಡ. -

ದುಬೈ: ಪ್ರಸ್ತುತ ನಡೆಯುತ್ತಿರುವ 2025ರ ಏಷ್ಯಾ ಕಪ್ (Asia Cup 2205) ಟೂರ್ನಿಯಲ್ಲಿ ಭಾರತ ತಂಡದ ವಿರುದ್ಧದ ಸೂಪರ್-4ರ ಪಂದ್ಯಕ್ಕೂ (IND vs PAK) ಮುನ್ನ ಪಾಕಿಸ್ತಾನ ಕ್ರಿಕೆಟ್ ತಂಡ ಮತ್ತೊಮ್ಮೆ ವಿವಾದಕ್ಕೆ ಸಿಲುಕಿದೆ. ತಂಡದೊಳಗಿನ ಆಂತರಿಕ ಒತ್ತಡವನ್ನು ಪ್ರತಿಬಿಂಬಿಸುವ ಮೂಲಕ ಸೆಪ್ಟೆಂಬರ್ 21 ರಂದು ನಡೆಯಬೇಕಿದ್ದ ತನ್ನ ಪಂದ್ಯ ಪೂರ್ವ ಪತ್ರಿಕಾಗೋಷ್ಠಿಯನ್ನು ಪಾಕಿಸ್ತಾನ (Pakistan) ರದ್ದುಗೊಳಿಸಿದೆ. ಇದಕ್ಕೂ ಮುನ್ನ ಯುಎಇ ವಿರುದ್ಧದ ಲೀಗ್ ಹಂತದ ತನ್ನ ಕೊನೆಯ ಪಂದ್ಯಕ್ಕೂ ಮುನ್ನ ಪಾಕಿಸ್ತಾನ ತಂಡ ತನ್ನ ಸುದ್ದಿಗೋಷ್ಠಿಯನ್ನು ಕೂಡ ರದ್ದುಗೊಳಿಸಿತ್ತು.
ಗುಂಪು ಹಂತದಲ್ಲಿ ಭಾರತ ವಿರುದ್ಧದ ಹೀನಾಯ ಸೋಲಿನ ನಂತರ ಈ ವಿವಾದಗಳು ಪ್ರಾರಂಭವಾಗಿವೆ. ಭಾರತ ತಂಡ ತನ್ನ ಲೀಗ್ ಹಂತದಲ್ಲಿ ಪಾಕಿಸ್ತಾನ ತಂಡವನ್ನು ಏಳು ವಿಕೆಟ್‌ಗಳಿಂದ ಹೀನಾಯವಾಗಿ ಸೋಲಿಸಿತ್ತು. ಈ ಪಂದ್ಯದ ಬಳಿಕ ಟೀಮ್ ಇಂಡಿಯಾ ಆಟಗಾರರು, ಪಾಕಿಸ್ತಾನಿ ಆಟಗಾರರೊಂದಿಗೆ ಕೈಕುಲುಕಲು ನಿರಾಕರಿಸಿದ್ದರು. ಇದು ಪಾಕಿಸ್ತಾನ ತಂಡದ ನೈತಿಕತೆಯನ್ನು ಗಮನಾರ್ಹವಾಗಿ ಕುಗ್ಗಿಸಿತ್ತು. ಆಟಗಾರರ ನೈತಿಕತೆ ಹಾಗೂ ಆತ್ಮ ವಿಶ್ವಾಸವನ್ನು ಹೆಚ್ಚಿಸಲು ಟೀಮ್ ಮ್ಯಾನೇಜ್‌ಮೆಂಟ್, ಪ್ರೇರಕ ಭಾಷಣಕಾರ ಡಾ ರಹೀಲ್ ಅವರನ್ನು ಸಹ ಕರೆಸಿದೆ. ತಂಡದ ಪರಿಸ್ಥಿತಿ ತುಂಬಾ ಹದಗೆಟ್ಟಿದ್ದು, ಟೂರ್ನಿಯ ಮಧ್ಯದಲ್ಲಿ ಅವರಿಗೆ ಪ್ರೇರಕ ಭಾಷಣಕಾರರ ಅಗತ್ಯವಿತ್ತು.
Asia Cup: ಒಮಾನ್ ವಿರುದ್ದ ಅರ್ಧಶತಕ ಬಾರಿಸಿ ವಿಶೇಷ ದಾಖಲೆ ಬರೆದ ಸಂಜು ಸ್ಯಾಮ್ಸನ್!
ಪಾಕಿಸ್ತಾನ ಕ್ರಿಕೆಟ್‌ನಲ್ಲಿ ಪ್ರಕ್ಷುಬ್ಧತೆ ಮುಂದುವರೆದಿದೆ. ಮೈದಾನದ ಹೊರಗೆ ವಿವಾದಗಳ ಪಟ್ಟಿಯೂ ಉದ್ದವಾಗಿದೆ. ಭಾರತ-ಪಾಕಿಸ್ತಾನ ಗಡಿಯಲ್ಲಿನ ಉದ್ವಿಗ್ನತೆಯಿಂದಾಗಿ ಪಂದ್ಯದ ನಂತರ ಭಾರತೀಯ ಆಟಗಾರರು ಪಾಕಿಸ್ತಾನಿ ಆಟಗಾರರೊಂದಿಗೆ ಕೈಕುಲುಕಲು ನಿರಾಕರಿಸಿದ್ದರು. ಇದು ಪಾಕಿಸ್ತಾನ ತಂಡವನ್ನು ಕೆರಳಿಸಿತು ಮತ್ತು ಪಂದ್ಯದ ನಂತರದ ಪ್ರಸ್ತುತಿಯನ್ನು ಅವರು ತಪ್ಪಿಸುವಂತೆ ಮಾಡಿತು. ಇದಾದ ಬಳಿಕ ಪಾಕಿಸ್ತಾನ ಕ್ರಿಕೆಟ್ ಮಂಡಳಿ (ಪಿಸಿಬಿ) ಭಾರತೀಯ ತಂಡದ ವಿರುದ್ಧ ಕ್ರಮ ಕೈಗೊಳ್ಳಲು ವಿಫಲವಾದ ಮ್ಯಾಚ್ ರೆಫರಿ ಆಂಡಿ ಪೈಕ್ರಾಫ್ಟ್ ವಿರುದ್ಧ ದೂರು ದಾಖಲಿಸಿತು. ಪಿಸಿಬಿ ತಮ್ಮ ಬೇಡಿಕೆಗಳನ್ನು ಈಡೇರಿಸದಿದ್ದರೆ ಟೂರ್ನಿಯಿಂದ ಹಿಂದೆ ಸರಿಯುವುದಾಗಿ ಬೆದರಿಕೆ ಹಾಕಿತ್ತು ಮತ್ತು ಯುಎಇ ವಿರುದ್ಧದ ತಮ್ಮ ಮೂರನೇ ಪಂದ್ಯದ ಆರಂಭವನ್ನು ವಿಳಂಬಗೊಳಿಸಿತ್ತು.
IND vs PAK: ಪಾಕಿಸ್ತಾನ ವಿರುದ್ಧದ ಸೂಪರ್-4ರ ಪಂದ್ಯಕ್ಕೆ ಭಾರತ ತಂಡದಲ್ಲಿ 2 ಬದಲಾವಣೆ ಸಾಧ್ಯತೆ!
ಯುಎಇ ವಿರುದ್ದದ ಪಂದ್ಯಕ್ಕೂ ಮುನ್ನ ಪಾಕಿಸ್ತಾನ ತಂಡ ಹಠಮಾರಿತನವನ್ನು ತೋರಿತ್ತು. ಹ್ಯಾಂಡ್‌ಶೇಕ್ ವಿವಾದ ಹಾಗೂ ಆಂಡಿ ಪೈಕ್ರಾಫ್ಟ್ ಅವರ ಏಕಪಕ್ಷೀಯ ಧೋರಣೆಯ ವಿರುದ್ಧ ಪಾಕಿಸ್ತಾನ ತಂಡ ಸಿಡಿದಿತ್ತು. ಪೈಕ್ರಾಫ್ಟ್ ಅವರು ನಮ್ಮ ಪಂದ್ಯದಲ್ಲಿ ಕಾರ್ಯನಿರ್ವಹಿಸಬಾರದು. ಒಂದು ವೇಳೆ ಅವರು ಕಾರ್ಯನಿರ್ವಹಿಸಿದರೆ ನಾವು ಏಷ್ಯಾ ಕಪ್ ಟೂರ್ನಿಯನ್ನು ತೊರೆಯುತ್ತೇವೆಂದು ಎಚ್ಚರಿಕೆಯನ್ನು ನೀಡಿತ್ತು. ಆದರೆ, ಯುಎಇ ವಿರುದ್ದದ ಪಂದ್ಯಕ್ಕೂ ಮುನ್ನ ಮ್ಯಾಚ್ ರೆಫರಿ ಆಂಡಿ ಪೈಕ್ರಾಫ್ಟ್ ಅವರು ಪಾಕಿಸ್ತಾನ ತಂಡದ ಅಧಿಕಾರಿಗಳ ಜೊತೆ ಕಾಣಿಸಿಕೊಂಡಿದ್ದರು. ಇದರ ವಿಡಿಯೊವನ್ನು ಪಾಕಿಸ್ತಾನ ಹಂಚಿಕೊಂಡಿತ್ತು ಹಾಗೂ ಪೈಕ್ರಾಫ್ಟ್ ಪಾಕ್ ಆಟಗಾರರ ಎದುರು ಕ್ಷಮೆಯನ್ನು ಹೇಳಿದ್ದಾರೆಂದು ತಿಳಿಸಿತ್ತು. ಅಂತಿಮವಾಗಿ ಪಾಕಿಸ್ತಾನ ಹಾಗೂ ಯುಎಇ ಪಂದ್ಯ ಒಂದು ಗಂಟೆ ತಡವಾಗಿ ಆರಂಭವಾಗಿತ್ತು.