ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

IND vs PAK: ಪಾಕಿಸ್ತಾನ ವಿರುದ್ಧದ ಸೂಪರ್‌-4ರ ಪಂದ್ಯಕ್ಕೆ ಭಾರತ ತಂಡದಲ್ಲಿ 2 ಬದಲಾವಣೆ ಸಾಧ್ಯತೆ!

India's Predicted Playing XI against Pakistan: ಭಾರತ ಹಾಗೂ ಪಾಕಿಸ್ತಾನ ತಂಡಗಳು ಭಾನುವಾರ ದುಬೈ ಇಂಟರ್‌ನ್ಯಾಷನಲ್‌ ಕ್ರೀಡಾಂಗಣದಲ್ಲಿ ನಡೆಯುವ ಏಷ್ಯಾ ಕಪ್‌ ಟೂರ್ನಿಯ ಸೂಪರ್‌-4ರ ಪಂದ್ಯದಲ್ಲಿ ಕಾದಾಟ ನಡೆಸಲಿವೆ. ಈ ಪಂದ್ಯಕ್ಕೆ ಭಾರತ ತಂಡದ ಪ್ಲೇಯಿಂಗ್‌ XIನಲ್ಲಿ ಎರಡು ಬದಲಾವಣೆಯನ್ನು ತರಬಹುದು.

ಪಾಕಿಸ್ತಾನ ಪಂದ್ಯಕ್ಕೆ ಭಾರತ ತಂಡದಲ್ಲಿ 2 ಬದಲಾವಣೆ ಸಾಧ್ಯತೆ!

ಭಾರತ ತಂಡದ ಪ್ಲೇಯಿಂಗ್‌ XIನಲ್ಲಿ ಎರಡು ಬದಲಾವಣೆ ಸಾಧ್ಯತೆ. -

Profile Ramesh Kote Sep 20, 2025 5:11 PM

ನವದೆಹಲಿ: ಸಾಂಪ್ರದಾಯಿಕ ಎದುರಾಳಿಗಳಾದ ಭಾರತ ಹಾಗೂ ಪಾಕಿಸ್ತಾನ (IND vs PAK) ತಂಡಗಳು ಪ್ರಸ್ತುತ ನಡೆಯುತ್ತಿರುವ 2025ರ ಏಷ್ಯಾ ಕಪ್‌ (Asia Cup 2025) ಟೂರ್ನಿಯಲ್ಲಿ ಮತ್ತೊಮ್ಮೆ ಕಾದಾಟ ನಡೆಸಲಿವೆ. ಭಾನುವಾರ ದುಬೈ ಇಂಟರ್‌ನ್ಯಾಷನಲ್‌ ಕ್ರೀಡಾಂಗಣದಲ್ಲಿ ನಡೆಯುವ ಸೂಪರ್‌-4ರ ಪಂದ್ಯದಲ್ಲಿ ಇಂಡೋ-ಪಾಕ್‌ ಸೆಣಸಲಿವೆ. ಈ ಹೈವೋಲ್ಟೇಜ್‌ ಪಂದ್ಯವನ್ನು ಕಣ್ತುಂಬಿಸಿಕೊಳ್ಳಲು ಅಭಿಮಾನಿಗಳು ಎದುರು ನೋಡುತ್ತಿದ್ದಾರೆ. ಇದಕ್ಕೂ ಮುನ್ನ ಲೀಗ್‌ ಹಂತದಲ್ಲಿ ಈ ಎರಡೂ ತಂಡಗಳು ಒಮ್ಮೆ ಕಾದಾಟ ನಡೆಸಿದ್ದವು. ಈ ಪಂದ್ಯದಲ್ಲಿ ಭಾರತ (India) ತಂಡ 7 ವಿಕೆಟ್‌ಗಳಿಂದ ಭರ್ಜರಿ ಗೆಲುವು ಪಡೆದಿತ್ತು. ಇದೀಗ ಸಲ್ಮಾನ್‌ ಅಘಾ ನಾಯಕತ್ವದ ಪಾಕಿಸ್ತಾನ, ಟೀಮ್‌ ಇಂಡಿಯಾ ಎದುರು ಸೇಡು ತೀರಿಸಿಕೊಳ್ಳಲು ಎದುರು ನೋಡುತ್ತಿದೆ.

ಫೆಹಲ್ಗಾಮ್‌ ದಾಳಿಯ ಬಳಿಕ ಭಾರತ ಹಾಗೂ ಪಾಕಿಸ್ತಾನ ರಾಷ್ಟ್ರಗಳ ನಡುವಣ ರಾಜಕೀಯ ಸನ್ನಿವೇಶ ಹದಗೆಟ್ಟಿತ್ತು. ಹಾಗಾಗಿ ಭಾರತ ತಂಡ, ಪಾಕಿಸ್ತಾನ ವಿರುದ್ಧ ಆಡಬಾರದೆಂದು ಆಗ್ರಹಗಳು ಕೇಳಿ ಬಂದಿದ್ದವು. ಆದರೂ ಭಾರತ ತಂಡ ಲೀಗ್‌ ಹಂತದಲ್ಲಿ ಪಾಕ್‌ ಎದುರು ಕಾದಾಟ ನಡೆಸಿತ್ತು ಹಾಗೂ 7 ವಿಕೆಟ್‌ಗಳಿಂದ ಗೆಲುವು ಪಡದಿತ್ತು. ಆದರೆ, ಈ ಪಂದ್ಯದಲ್ಲಿ ನಾಯಕ ಸೂರ್ಯಕುಮಾರ್‌ ಯಾದವ್‌ ಸೇರಿದಂತೆ ಟೀಮ್‌ ಇಂಡಿಯಾ ಆಟಗಾರರು ಪಾಕ್‌ ಆಟಗಾರರಿಗೆ ಹಸ್ತಲಾಘವ ನೀಡಿರಲಿಲ್ಲ. ಇದು ಹ್ಯಾಂಡ್‌ಶೇಕ್‌ ವಿವಾದಕ್ಕೆ ಕಾರಣವಾಗಿತ್ತು. ಪಾಕಿಸ್ತಾನ ಆಟಗಾರರು ಇದರ ಬಗ್ಗೆ ತೀವ್ರ ಅಸಮಾಧಾನವನ್ನು ವ್ಯಕ್ತಪಡಿಸಿದ್ದರು.

IND vs PAK: ಭಾರತಕ್ಕೆ ಮತ್ತೊಂದು ಗೆಲುವಿನ ತವಕ; ಪಾಕ್‌ಗೆ ಸೇಡಿನ ಕಾತರ

ಈ ಎಲ್ಲಾ ಸಂಗತಿಗಳ ನಡುವೆ ಭಾರತ ಹಾಗೂ ಪಾಕಿಸ್ತಾನ ತಂಡಗಳು ಸೂಪರ್‌-4ರ ಪಂದ್ಯದಲ್ಲಿ ಕಾದಾಟ ನಡೆಸಲಿವೆ. ಲೀಗ್‌ನಲ್ಲಿ ಸೋತಿರುವ ಪಾಕಿಸ್ತಾನ ತಂಡ, ಭಾರತದ ಎದುರು ಸೇಡು ತೀರಿಸಿಕೊಳ್ಳಲು ಎದುರು ನೋಡುತ್ತಿದೆ. ಆದರೆ, ಬಲಿಷ್ಠ ಭಾರತ ತಂಡವನ್ನು ಸೋಲಿಸುವುದು ಅಷ್ಟೊಂದು ಸುಲಭವಲ್ಲ. ಒಮಾನ್‌ ವಿರುದ್ದದ ಪಂದ್ಯಕ್ಕೆ ಭಾರತ ತಂಡ ತನ್ನ ಪ್ಲೇಯಿಂಗ್‌ XIನಲ್ಲಿ ಎರಡು ಬದಲಾವಣೆಯನ್ನು ಮಾಡಿಕೊಂಡಿತ್ತು. ಜಸ್‌ಪ್ರೀತ್‌ ಬುಮ್ರಾ ಹಾಗೂ ವರುಣ್‌ ಚಕ್ರವರ್ತಿ ಅವರ ಬದಲು ಕ್ರಮವಾಗಿ ಅರ್ಷದೀಪ್‌ ಸಿಂಗ್‌ ಹಾಗೂ ಹರ್ಷಿತ್‌ ರಾಣಾ ಆಡಿದ್ದರು.

ಭಾರತ ತಂಡದಲ್ಲಿ ಎರಡು ಬದಲಾವಣೆ ಸಾಧ್ಯತೆ

ಇದೀಗ ಪಾಕಿಸ್ತಾನ ವಿರುದ್ದದ ಪಂದ್ಯದಲ್ಲಿಯೂ ಭಾರತ ತಂಡ ಎರಡು ಬದಲಾವಣೆಯೊಂದಿಗೆ ಕಣಕ್ಕೆ ಇಳಿಯಬಹುದು. ಕಳೆದ ಪಂದ್ಯಕ್ಕೆ ವಿಶ್ರಾಂತಿ ಪಡೆದಿದ್ದ ಜಸ್‌ಪ್ರೀತ್‌ ಬುಮ್ರಾ ಅವರು ಪಾಕ್‌ ಎದುರು ಆಡಲಿದ್ದಾರೆ. ಹಾಗಾಗಿ ಅರ್ಷದೀಪ್‌ ಸಿಂಗ್‌ ಮತ್ತೊಮ್ಮೆ ಬೆಂಚ್‌ ಕಾಯಬಹುದು. ಇನ್ನು ಸ್ಪಿನ್ನರ್‌ ವರುಣ್‌ ಚಕ್ರವರ್ತಿ ಕೂಡ ತಂಡದ ಪ್ಲೇಯಿಂಗ್‌ XIಗೆ ಮರಳಲಿದ್ದು, ಹರ್ಷಿತ್‌ ರಾಣಾ ಅವರು ಹೊರಗುಳಿಯಬಹುದು. ಅಂದ ಹಾಗೆ ಕಳೆದ ಪಂದ್ಯದಲ್ಲಿ ಮಧ್ಯಮ ಕ್ರಮಾಂಕದಿಂದ ಮೂರನೇ ಕ್ರಮಾಂಕಕ್ಕೆ ಬಡ್ತಿ ಪಡೆದು ಬ್ಯಾಟ್‌ ಬೀಸಿದ್ದ ಸಂಜು ಸ್ಯಾಮ್ಸನ್‌ ಮೂರನೇ ಕ್ರಮಾಂಕದಲ್ಲಿಯೇ ಮುಂದುವರಿಯಲಿದ್ದಾರಾ? ಎಂದು ಕಾದು ನೋಡಬೇಕಾಗಿದೆ.

IND vs PAK: ಸೂಪರ್‌-4ನಲ್ಲೂ ಇಂಡೋ-ಪಾಕ್‌ ಶೇಕ್‌ಹ್ಯಾಂಡ್‌ ಸಂಘರ್ಷ?

ಸಂಜು ಸ್ಯಾಮ್ಸನ್‌ ಓಪನಿಂಗ್‌ ಸ್ಥಾನ?

ಮತ್ತೊಂದು ಕಡೆ ಉಪ ನಾಯಕ ಶುಭಮನ್‌ ಗಿಲ್‌ ಅವರು ಕಳೆದ ಮೂರೂ ಇನಿಂಗ್ಸ್‌ಗಳಲ್ಲಿ ವೈಫಲ್ಯ ಅನುಭವಿಸಿದ್ದಾರೆ. ಹಾಗಾಗಿ ಅವರನ್ನು ಕೈ ಬಿಟ್ಟು ಸಂಜು ಸ್ಯಾಮ್ಸನ್‌ಗೆ ಆರಂಭಿಕ ಸ್ಥಾನ ನೀಡಿದರೂ ಅಚ್ಚರಿ ಇಲ್ಲ. ಇಲ್ಲವಾದಲ್ಲಿ ಗಿಲ್‌ಗೆ ಮೂರನೇ ಕ್ರಮಾಂಕದಲ್ಲಿ ಆಡಿಸಬಹುದು. ಆ ಮೂಲಕ ಸಂಜು ಸ್ಯಾಮ್ಸನ್‌ಗೆ ಮರಳಿ ಓಪನಿಂಗ್‌ ಬ್ಯಾಟಿಂಗ್‌ ಕ್ರಮಾಂಕ ನೀಡಬಹುದು. ಆದರೆ, ಈ ವಿಷಯದ ಬಗ್ಗೆ ಗೌತಮ್‌ ಗಂಭೀರ್‌ ಮಾರ್ಗದರ್ಶನದ ಟೀಮ್‌ ಮ್ಯಾನೇಜ್‌ಮೆಂಟ್‌ಗೆ ತಲೆ ನೋವಾಗಿದೆ.

ಪಾಕಿಸ್ತಾನ ವಿರುದ್ಧದ ಸೂಪರ್‌-4ರ ಪಂದ್ಯಕ್ಕೆ ಭಾರತದ ಪ್ಲೇಯಿಂಗ್‌ XI

  1. ಅಭಿಷೇಕ್‌ ಶರ್ಮಾ (ಓಪನರ್‌)
  2. ಶುಭಮನ್‌ ಗಿಲ್‌ (ಓಪನರ್‌)
  3. ಸೂರ್ಯಕುಮಾರ್‌ ಯಾದವ್‌ (ನಾಯಕ, ಬ್ಯಾಟ್ಸ್‌ಮನ್‌)
  4. ತಿಲಕ್‌ ವರ್ಮಾ (ಬ್ಯಾಟ್ಸ್‌ಮನ್‌)
  5. ಸಂಜು ಸ್ಯಾಮ್ಸನ್‌ (ವಿಕೆಟ್‌ ಕೀಪರ್‌-ಬ್ಯಾಟ್ಸ್‌ಮನ್‌)
  6. ಶಿವಂ ದುಬೆ (ಆಲ್‌ರೌಂಡರ್‌)
  7. ಹಾರ್ದಿಕ್‌ ಪಾಂಡ್ಯ (ಆಲ್‌ರೌಂಡರ್‌)
  8. ಅಕ್ಷರ್‌ ಪಟೇಲ್‌ (ಆಲ್‌ರೌಂಡರ್‌)
  9. ಕುಲ್ದೀಪ್‌ ಯಾದವ್‌ (ಸ್ಪಿನ್ನರ್‌)
  10. ಜಸ್‌ಪ್ರೀತ್‌ ಬುಮ್ರಾ (ವೇಗದ ಬೌಲರ್‌)
  11. ವರುಣ್‌ ಚಕ್ರವರ್ತಿ (ಸ್ಪಿನ್ನರ್‌)