ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

AUS vs ENG: 50 ರನ್‌ ಬಾರಿಸಿ ಒಡಿಐ ಕ್ರಿಕೆಟ್‌ನಲ್ಲಿ ನೂತನ ದಾಖಲೆ ಬರೆದ ಜೋ ರೂಟ್‌!

AUS vs ENG 2nd ODI: ಆಸ್ಟ್ರೇಲಿಯಾ ವಿರುದ್ಧ ಎರಡನೇ ಏಕದಿನ ಪಂದ್ಯದಲ್ಲಿ ಇಂಗ್ಲೆಂಡ್‌ ಹಿರಿಯ ಬ್ಯಾಟ್ಸ್‌ಮನ್‌ ಜೋ ರೂಟ್‌ ಅರ್ಧಶತಕವನ್ನು ಬಾರಿಸಿದ್ದಾರೆ. ಆ ಮೂಲಕ ತಮ್ಮ ಒಡಿಐ ವೃತ್ತಿ ಜೀವನದಲ್ಲಿ 50ನೇ ಅರ್ಧಶತಕವನ್ನು ಪೂರ್ಣಗೊಳಿಸಿದ್ದಾರೆ.

AUS vs NZ: ಅರ್ಧಶತಕ ಬಾರಿಸಿ ವಿಶೇಷ ದಾಖಲೆ ಬರೆದ ಜೋ ರೂಟ್‌!

ಒಡಿಐ ಕ್ರಿಕೆಟ್‌ನಲ್ಲಿ ನೂತನ ದಾಖಲೆ ಬರೆದ ಜೋ ರೂಟ್‌. -

Profile
Ramesh Kote Nov 15, 2026 5:25 PM

ನವದೆಹಲಿ: ಇಂಗ್ಲೆಂಡ್‌ನ ಅನುಭವಿ ಬ್ಯಾಟರ್ ಜೋ ರೂಟ್ (Joe Root), ಆಸ್ಟ್ರೇಲಿಯಾ ವಿರುದ್ಧದ ಎರಡನೇ ಏಕದಿನ ಪಂದ್ಯದಲ್ಲಿ (AUS vs ENG) ಮಹತ್ವದ ಸಾಧನೆಗೆ ಭಾಜನರಾಗಿದ್ದಾರೆ. ಭಾನುವಾರ (ನವೆಂಬರ್ 15) ನಡೆದಿದ್ದ ಈ ಪಂದ್ಯದಲ್ಲಿ ಆಸ್ಟ್ರೇಲಿಯಾ ನಾಯಕ ಮಿಚೆಲ್ ಮಾರ್ಷ್ ಟಾಸ್ ಗೆದ್ದು ಮೊದಲು ಬೌಲಿಂಗ್ ಆಯ್ಕೆ ಮಾಡಿಕೊಂಡರು. ಇದಕ್ಕೆ ಉತ್ತರವಾಗಿ ಬ್ಯಾಟಿಂಗ್ ಆರಂಭಿಸಿದ ಇಂಗ್ಲೆಂಡ್ ಪರ ಮೂರನೇ ಕ್ರಮಾಂಕದಲ್ಲಿ ಕಣಕ್ಕಿಳಿದ ಜೋ ರೂಟ್ 68 ಎಸೆತಗಳಲ್ಲಿ 62 ರನ್ ಗಳಿಸಿದರು. ಇಂಗ್ಲೆಂಡ್‌ನ ಪರ ಏಕದಿನ ಕ್ರಿಕೆಟ್‌ನಲ್ಲಿ ಅತಿ ಹೆಚ್ಚು ರನ್ ಗಳಿಸಿರುವ ರೂಟ್, ಪಂದ್ಯದ 22ನೇ ಓವರ್‌ನಲ್ಲಿ ತಮ್ಮ ಅರ್ಧಶತಕ ಪೂರೈಸಿದರು.

ಈ ಪಂದ್ಯದಲ್ಲಿ ಗಳಿಸಿದ ಅರ್ಧಶತಕ ರೂಟ್ ಪಾಲಿಗೆ ವಿಶೇಷವಾಗಿತ್ತು. ಏಕೆಂದರೆ ಇದು ಏಕದಿನ ಕ್ರಿಕೆಟ್‌ನಲ್ಲಿ ಅವರ 50ನೇ ಅರ್ಧಶತಕವಾಗಿತ್ತು. ಆ ಮೂಲಕ ಏಕದಿನ ಕ್ರಿಕೆಟ್‌ನಲ್ಲಿ 50 ಅರ್ಧಶತಕಗಳನ್ನು ಗಳಿಸಿದ ಇಂಗ್ಲೆಂಡ್‌ನ ಮೊದಲ ಆಟಗಾರ ಎಂಬ ಐತಿಹಾಸಿಕ ದಾಖಲೆ ನಿರ್ಮಿಸಿದರು.

2019ರ ಏಕದಿನ ವಿಶ್ವಕಪ್ ವಿಜೇತ ಇಂಗ್ಲೆಂಡ್ ತಂಡದ ಪ್ರಮುಖ ಆಟಗಾರರಾಗಿರುವ ರೂಟ್, ಏಕದಿನ ಕ್ರಿಕೆಟ್‌ನಲ್ಲಿ ಈವರೆಗೆ 20 ಶತಕ ಹಾಗೂ 50 ಅರ್ಧಶತಕಗಳನ್ನು ಸಿಡಿಸಿದ್ದಾರೆ. ಇಂಗ್ಲೆಂಡ್ ಪರ ಏಕದಿನ ಕ್ರಿಕೆಟ್‌ನಲ್ಲಿ ಅತಿ ಹೆಚ್ಚು ಶತಕ, ಅರ್ಧಶತಕ ಹಾಗೂ 50ಕ್ಕೂ ಅಧಿಕ ರನ್ ಗಳಿಸಿದ ಆಟಗಾರರ ಪಟ್ಟಿಯಲ್ಲಿ ರೂಟ್ ಅಗ್ರಸ್ಥಾನದಲ್ಲಿದ್ದಾರೆ.

IND vs NZ: 5 ರನ್‌ಗೆ ಔಟ್‌ ಆಗಿ ಅನಗತ್ಯ ದಾಖಲೆ ಹೆಗಲೇರಿಸಿಕೊಂಡ ವಿರಾಟ್‌ ಕೊಹ್ಲಿ!

ಇಂಗ್ಲೆಂಡ್ ಪರ ಏಕದಿನ ಕ್ರಿಕೆಟ್‌ನಲ್ಲಿ ಅತಿ ಹೆಚ್ಚು ಅರ್ಧಶತಕ ಗಳಿಸಿದ ಆಟಗಾರರು

ಜೋ ರೂಟ್: 50 (201 ಪಂದ್ಯಗಳು)

ಇಯಾನ್ ಮಾರ್ಗನ್: 42 (225 ಪಂದ್ಯಗಳು)

ಇಯಾನ್ ಬೆಲ್: 35 (161 ಪಂದ್ಯಗಳು)

ಜೋಸ್ ಬಟ್ಲರ್: 30 (204 ಪಂದ್ಯಗಳು)

ಅಲೆಕ್ ಸ್ಟೀವರ್ಟ್: 28 (170 ಪಂದ್ಯಗಳು)

ಏಕದಿನ ಕ್ರಿಕೆಟ್‌ನಲ್ಲಿ ಅತಿ ಹೆಚ್ಚು ಅರ್ಧಶತಕ ಗಳಿಸಿದ ಆಟಗಾರರು

ಏಕದಿನ ಕ್ರಿಕೆಟ್ ಇತಿಹಾಸದಲ್ಲಿ ಅತಿ ಹೆಚ್ಚು ಅರ್ಧಶತಕಗಳನ್ನು ಗಳಿಸಿದ ವಿಶ್ವದಾಖಲೆ ಭಾರತದ ದಿಗ್ಗಜ ಬ್ಯಾಟರ್ ಸಚಿನ್ ತೆಂಡೂಲ್ಕರ್ ಹೆಸರಿನಲ್ಲಿದೆ. 1989ರಿಂದ 2012ರವರೆಗೆ ಒಟ್ಟು 463 ಏಕದಿನ ಪಂದ್ಯಗಳನ್ನು ಆಡಿರುವ ಸಚಿನ್, 49 ಶತಕ ಹಾಗೂ 96 ಅರ್ಧಶತಕಗಳನ್ನು ತಮ್ಮ ಹೆಸರಿಗೆ ದಾಖಲಿಸಿದ್ದಾರೆ. ಈ ಪಟ್ಟಿಯಲ್ಲಿ ಜಾಕ್ ಕಾಲಿಸ್ (86) ಹಾಗೂ ಕುಮಾರ್ ಸಂಗಕ್ಕಾರ (93) ಕ್ರಮವಾಗಿ ನಂತರದ ಸ್ಥಾನಗಳಲ್ಲಿದ್ದಾರೆ.



ಸಚಿನ್ ತೆಂಡೂಲ್ಕರ್: 96 (463 ಪಂದ್ಯಗಳು)

ಕುಮಾರ್ ಸಂಗಕ್ಕಾರ: 93 (404 ಪಂದ್ಯಗಳು)

ಜಾಕ್ ಕಾಲಿಸ್: 86 (328 ಪಂದ್ಯಗಳು)

ರಾಹುಲ್ ದ್ರಾವಿಡ್: 83 (344 ಪಂದ್ಯಗಳು)

ಇಂಜಮಾಮ್ ಉಲ್ ಹಕ್: 83 (378 ಪಂದ್ಯಗಳು)

ರಿಕಿ ಪಾಂಟಿಂಗ್: 82 (375 ಪಂದ್ಯಗಳು)

ವಿರಾಟ್ ಕೊಹ್ಲಿ: 80 (322 ಪಂದ್ಯಗಳು)