ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ಕಿವೀಸ್‌ ವಿರುದ್ಧ ರೋಚಕ ಗೆಲುವಿನೊಂದಿಗೆ ಏಕದಿನ ಸರಣಿ ಗೆದ್ದ ಭಾರತ

New Zealand vs India 5th ODI: ನ್ಯೂಜಿಲೆಂಡ್‌ ಪರ ವೇಗಿ ಜೇಕಬ್ ಡಫಿ ಮತ್ತು ನಾಯಕ ಮಿಚೆಲ್‌ ಸ್ಯಾಂಟ್ನರ್‌ ತಲಾ ಮೂರು ವಿಕೆಟ್‌ ಕಿತ್ತರು. ಮ್ಯಾಥ್ಯೂ ಫಿಶರ್ 2 ವಿಕೆಟ್‌ ಪಡೆದರು. ಸರಣಿಯಲ್ಲಿ 9 ವಿಕೆಟ್‌ ಪಡೆದ ವೇಗಿ ಗುರ್ನೂರ್​ ಬ್ರಾರ್ ಸರಣಿ ಶ್ರೇಷ್ಠ ಪ್ರಶಸ್ತಿಗೆ ಭಾಜನರಾದರೆ, ಎಡಗೈ ವೇಗಿ ಅರ್ಶ್‌ದೀಪ್‌ ಸಿಂಗ್‌ ಪಂದ್ಯಶ್ರೇಷ್ಠ ಗೌರವ ಪಡೆದರು.

ಕಿವೀಸ್‌ ವಿರುದ್ಧ ರೋಚಕ ಗೆಲುವಿನೊಂದಿಗೆ ಏಕದಿನ ಸರಣಿ ಗೆದ್ದ ಭಾರತ

Yash Thakur -

Abhilash BC
Abhilash BC Nov 15, 2026 4:04 PM

ಮೌಂಟ್ ಮಾಂಗನೂಯಿ, ನ.15: ನ್ಯೂಜಿಲೆಂಡ್‌ ವಿರುದ್ಧದ 5ನೇ ಹಾಗೂ ಅಂತಿಮ ಏಕದಿನ ಪಂದ್ಯದಲ್ಲಿ ಭಾರತ ತಂಡ 22 ರನ್‌ ಅಂತರದ ರೋಚಕ ಗೆಲುವು ಸಾಧಿಸಿ ಸರಣಿ ಗೆಲುವಿನ ಸಂಭ್ರಮಾಚರಿಸಿತು. ನ್ಯೂಜಿಲೆಂಡ್​ 7 ವರ್ಷಗಳ ಬಳಿಕ ತವರಿನಲ್ಲಿ ಸರಣಿ ಸೋಲಿನ ಮುಖಭಂಗವನ್ನು ಎದುರಿಸಿತು.

ಭಾನುವಾರ ಇಲ್ಲಿನ ಬೇ ಓವಲ್ ಮೈದಾನದಲ್ಲಿ ನಡೆದ ಈ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್‌ ನಡೆಸಿದ ಭಾರತ 42.1 ಓವರ್‌ಗಳಲ್ಲಿ 209 ಸಾಧಾರಣ ಮೊತ್ತ ಕಲೆಹಾಕಿತು. ಸಣ್ಣ ಮೊತ್ತವನ್ನು ಬೆನ್ನಟ್ಟಿದ ನ್ಯೂಜಿಲೆಂಡ್‌ ಭಾರತೀಯ ಬೌಲರ್‌ಗಳ ಸಂಘಟಿತ ದಾಳಿಗೆ ತತ್ತರಿಸಿ 48.1 ಓವರ್‌ಗೆ 187 ರನ್‌ಗೆ ಸರ್ವಪತನ ಕಂಡಿತು.



ಚೇಸಿಂಗ್‌ ವೇಳೆ ಕಿವೀಸ್‌ಗೆ ಯಾವುದೇ ಹಂತದಲ್ಲಿಯೂ ಉತ್ತಮ ಜತೆಯಾಟ ಸಿಗಲಿಲ್ಲ. ಕಳೆದ ಪಂದ್ಯದ ಶತಕವೀರ ವಿಲ್‌ ಯಂಗ್‌ 22 ರನ್‌ ಗಳಿಸಿದರೆ, ಡೀನ್ ಫಾಕ್ಸ್‌ಕ್ರಾಫ್ಟ್ 31, ಮಿಚೆಲ್ ಸ್ಯಾಂಟ್ನರ್ ಮತ್ತು ನಿಕ್ ಕೆಲ್ಲಿ ತಲಾ 24 ರನ್‌ ಗಳಿಸಿದರು. ಭಾರತ ಪರ ಉತ್ತಮ ಬೌಲಿಂಗ್‌ ದಾಳಿ ನಡೆಸಿದ ಅರ್ಶ್‌ದೀಪ್‌ ಸಿಂಗ್‌ 30ಕ್ಕೆ 3 ವಿಕೆಟ್‌ ಕಿತ್ತರು.

ಅಂಡರ್‌-19 ಏಷ್ಯಾಕಪ್‌; ಪಾಕ್‌ ವಿರುದ್ಧ ರೋಚಕ ಗೆಲುವು ಸಾಧಿಸಿ ಚಾಂಪಿಯನ್‌ ಪಟ್ಟ ಅಲಂಕರಿಸಿದ ಭಾರತ

ಉಳಿದಂತೆ ಸರಣಿಯಲ್ಲಿ ಮೊದಲ ಬಾರಿಗೆ ಆಡಲಿಳಿದ ಮೊಹಮ್ಮದ್‌ ಸಿರಾಜ್‌ 2 ವಿಕೆಟ್‌ ಪಡೆದರು. ಸಿರಾಜ್‌ಗಾಗಿ ಸ್ಪಿನ್ನರ್‌ ಕುಲ್‌ದೀಪ್‌ ಯಾದವ್‌ ಜಾಗಬಿಡಬೇಕಾಯಿತು. ಅಕ್ಷರ್‌ ಪಟೇಲ್‌ 2 ವಿಕೆಟ್‌ ಜತೆಗೆ ಬ್ಯಾಟಿಂಗ್‌ನಲ್ಲಿಯೂ 46 ರನ್‌ ಗಳಿಸಿ ಆಲ್‌ರೌಂಡರ್‌ ಪ್ರದರ್ಶನ ತೋರಿದರು.

ಕೊಹ್ಲಿ, ರೋಹಿತ್‌ ಮತ್ತೆ ವಿಫಲ

ಕಳೆದ ಪಂದ್ಯದಲ್ಲಿ ಶೂನ್ಯ ಸುತ್ತಿದ್ದ ಅನುಭವಿ ಹಾಗೂ ಹಿರಿಯ ಬ್ಯಾಟರ್‌ಗಳಾದ ರೋಹಿತ್‌ ಶರ್ಮ ಮತ್ತು ವಿರಾಟ್‌ ಕೊಹ್ಲಿ ಈ ಪಂದ್ಯದಲ್ಲಿಯೂ ಬ್ಯಾಟಿಂಗ್‌ ವೈಫಲು ಕಂಡರು. ರೋಹಿತ್‌ 7 ರನ್‌ ಗಳಿಸಿದರೆ, ಕೊಹ್ಲಿ 5ರನ್‌ಗೆ ಸೀಮಿತರಾದರು. ಋತುರಾಜ್‌ ಗಾಯಕ್ವಾಡ್‌(18), ನಾಯಕ ಶ್ರೇಯಸ್‌ ಅಯ್ಯರ್‌(22) ಸಣ್ಣ ಕೊಡುಗೆ ನೀಡಿದರು. ಇಶಾನ್‌ ಕಿಶನ್‌ 46 ರನ್‌ ಬಾರಿಸಿದರು.

ನ್ಯೂಜಿಲೆಂಡ್‌ ಪರ ವೇಗಿ ಜೇಕಬ್ ಡಫಿ ಮತ್ತು ನಾಯಕ ಮಿಚೆಲ್‌ ಸ್ಯಾಂಟ್ನರ್‌ ತಲಾ ಮೂರು ವಿಕೆಟ್‌ ಕಿತ್ತರು. ಮ್ಯಾಥ್ಯೂ ಫಿಶರ್ 2 ವಿಕೆಟ್‌ ಪಡೆದರು. ಸರಣಿಯಲ್ಲಿ 9 ವಿಕೆಟ್‌ ಪಡೆದ ವೇಗಿ ಗುರ್ನೂರ್​ ಬ್ರಾರ್ ಸರಣಿ ಶ್ರೇಷ್ಠ ಪ್ರಶಸ್ತಿಗೆ ಭಾಜನರಾದರೆ, ಎಡಗೈ ವೇಗಿ ಅರ್ಶ್‌ದೀಪ್‌ ಸಿಂಗ್‌ ಪಂದ್ಯಶ್ರೇಷ್ಠ ಗೌರವ ಪಡೆದರು.