ಚರ್ಮದ ಕ್ಯಾನ್ಸರ್‌ನಿಂದ ಬಳಲುತ್ತಿರುವ ಆಸ್ಟ್ರೇಲಿಯಾ ಮಾಜಿ ನಾಯಕ ಮೈಕಲ್ ಕ್ಲಾರ್ಕ್!
ಕಳೆದ ಹಲವು ವರ್ಷಗಳಿಂದ ಆಸ್ಟ್ರೇಲಿಯಾ ಮಾಜಿ ನಾಯಕ ಮೈಕಲ್ ಕ್ಲಾರ್ಕ್ ಚರ್ಮದ ಕ್ಯಾನ್ಸರ್‌ನಿಂದ ಬಳಲುತ್ತಿದ್ದಾರೆ. ಇದೀಗ ತಮ್ಮ ಮುಖಕ್ಕೆ ಅಂಟಿಕೊಂಡಿದ್ದ ಚರ್ಮ ಕ್ಯಾನ್ಸರ್ ತೆಗೆಸಲು ಶಸ್ತ್ರ ಚಿಕಿತ್ಸೆಗೆ ಒಳಗಾಗಿರುವ ಸಂಗತಿಯೊಂದನ್ನು ಬಹಿರಂಗಪಡಿಸಿದ್ದಾರೆ. ಈ ಬಗ್ಗೆ ಇನ್ಸ್ಟಾಗ್ರಾಮ್‌ನಲ್ಲಿ ಪೋಸ್ಟ್ ಹಂಚಿಕೊಂಡು ಕ್ಯಾನ್ಸರ್ ನಿವಾರಣೆ ಮತ್ತು ಮುನ್ನೆಚ್ಚರಿಕೆ ಭಾಗವಾಗಿ ಸಮಾಜಕ್ಕೆ ಸಂದೇಶ ರವಾನಿಸಿದ್ದಾರೆ.

ಮೈಕಲ್ ಕ್ಲಾರ್ಕ್ ಚರ್ಮದ ಕ್ಯಾನ್ಸರ್ ವಿರುದ್ಧ ಹೋರಾಟ ನಡೆಸುತ್ತಿದ್ದಾರೆ.

ಕ್ಯಾನ್‌ಬೆರಾ: ಕಳೆದ ಹಲವು ವರ್ಷಗಳಿಂದ ಆಸ್ಟ್ರೇಲಿಯಾ(Australia) ಮಾಜಿ ನಾಯಕ ಮೈಕೆಲ್ ಕ್ಲಾರ್ಕ್ (Michael Clarke) ಚರ್ಮದ ಕ್ಯಾನ್ಸರ್‌ನಿಂದ (Skin Cancer) ಬಳಲುತ್ತಿದ್ದಾರೆ. ಇದೀಗ ತಮ್ಮ ಮುಖಕ್ಕೆ ಅಂಟಿಕೊಂಡಿದ್ದ ಚರ್ಮ ಕ್ಯಾನ್ಸರ್ ತೆಗೆಸಲು ಶಸ್ತ್ರ ಚಿಕಿತ್ಸೆಗೆ ಒಳಗಾಗಿರುವ ಸಂಗತಿಯೊಂದನ್ನು ಬಹಿರಂಗಪಡಿಸಿದ್ದಾರೆ. 44 ವರ್ಷದ ಕ್ಲಾರ್ಕ್ ಆಗಸ್ಟ್ 27ರಂದು ಈ ಬಗ್ಗೆ ತಮ್ಮ ಅಧಿಕೃತ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಅವರ ಲೇಟೆಸ್ಟ್ ಫೋಟೋ ಹಂಚಿಕೊಂಡಿದ್ದು, ಕ್ಯಾನ್ಸರ್ ತಡೆಗಟ್ಟುವ ಮತ್ತು ಆರಂಭಿಕ ಮುನ್ನೆಚ್ಛರಿಕೆ ಬಗ್ಗೆ ಮಹತ್ವದ ಸಂದೇಶವನ್ನು ಸಾರಿದ್ದಾರೆ. ಇದಕ್ಕೆ ತಮ್ಮ ಅಭಿಮಾನಿಗಳಿಂದ ವ್ಯಾಪಕ ಪ್ರತಿಕ್ರಿಯೆ ಬರುತ್ತಿದ್ದು, ಸಾಮಾಜಿಕ ಜಾಲತಾಣದಲ್ಲಿ ಆರೋಗ್ಯ ತಪಾಸಣೆಗೆ ಆದ್ಯತೆ ನೀಡಿ ಮತ್ತೆ ಸೂರ್ಯನ ಬೆಳಕಿನಿಂದ ಆದಷ್ಟೂ ದೂರ ಇರಿ ಎನ್ನುವ ಸ್ಟೋರಿಗಳು ಹರಿದಾಡುತ್ತಿವೆ.
ಈ ಬಗ್ಗೆ ತನ್ನ ಅಧಿಕೃತ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಪೋಸ್ಟ್ ಹಂಚಿಕೊಂಡಿರುವ ಕ್ಲಾರ್ಕ್, "ಚರ್ಮದ ಕ್ಯಾನ್ಸರ್ ನಿಜ! ವಿಶೇಷವಾಗಿ ಆಸ್ಟ್ರೇಲಿಯಾದಲ್ಲಿ. ಇಂದು ನನ್ನ ಮೂಗಿನಿಂದ ಇನ್ನೊಂದು ಕತ್ತರಿಸಲ್ಪಟ್ಟಿದೆ. ನಿಮ್ಮ ಚರ್ಮವನ್ನು ಪರೀಕ್ಷಿಸಿಕೊಳ್ಳಲು ಒಂದು ಸ್ನೇಹಪರ ಜ್ಞಾಪನೆ. ಚಿಕಿತ್ಸೆಗಿಂತ ತಡೆಗಟ್ಟುವಿಕೆ ಉತ್ತಮ ಆದರೆ ನನ್ನ ವಿಷಯದಲ್ಲಿ, ನಿಯಮಿತ ತಪಾಸಣೆ ಮತ್ತು ಆರಂಭಿಕ ಪತ್ತೆ ಮುಖ್ಯವಾಗಿದೆ. ಅದನ್ನು ಮೊದಲೇ ಪಡೆದುಕೊಂಡಿದ್ದಕ್ಕಾಗಿ ಡಾ. ಬಿಷ್‌ಸೋಲಿಮನ್‌ಗೆ ತುಂಬಾ ಕೃತಜ್ಞರಾಗಿರುತ್ತೇನೆ," ಎಂದು ಬರೆದಿದ್ದಾರೆ.
Asia Cup 2025: ʻಭಾರತದ ವಿರುದ್ಧ ಪಾಕಿಸ್ತಾನ ಗೆಲ್ಲಲಿದೆʼ-ಹ್ಯಾರಿಸ್ ರೌಫ್ ಎಚ್ಚರಿಕೆ!
ಈ ಹಿಂದೆಯೂ ಚಿಕಿತ್ಸೆಗೊಳಗಾಗಿದ್ದ ಕ್ಲಾರ್ಕ್
ಈ ಕಾಯಿಲೆಯೊಂದಿಗೆ ಕ್ಲಾರ್ಕ್ ಹೋರಾಡುತ್ತಿರುವುದು ಇದೇ ಮೊದಲೇನು ಅಲ್ಲ. ಅಲ್ಲಿನ ಸುದ್ದಿ ಮಾಧ್ಯಮದ ವರದಿಯೊಂದರ ಪ್ರಕಾರ 2006 ರಿಂದ ಇವರು ಕ್ಯಾನ್ಸರ್‌ನಿಂದ ಬಳಲುತ್ತಿದ್ದಾರೆ ಎನ್ನಲಾಗಿದೆ ಮತ್ತು ದೇಹದ ಹನ್ನೆರಡು ಕಡೆ ಕ್ಯಾನ್ಸರ್ ಪೀಡಿತ ಭಾಗವನ್ನು ತೆಗೆದು ಹಾಕಲಾಗಿದೆ. ಕಳೆದ ವರ್ಷ ಅವರು ಶಸ್ತ್ರ ಚಿಕಿತ್ಸೆಗೆ ಓಳಗಾಗಿದ್ದರು. 2023 ರಲ್ಲಿ ಹಣೆ ಮತ್ತು ಮುಖದಿಂದ ಕ್ಯಾನ್ಸರ್ ತೆಗೆಯಲು ಹೆಚ್ಚಿನ ತಪಾಸಣೆಗಳಾಗಿದ್ದವು. ಇದರ ಮಧ್ಯೆಯೂ ಕ್ಲಾರ್ಕ್ ಆಸ್ಟ್ರೇಲಿಯನ್ ಸ್ಕಿನ್ ಕ್ಯಾನ್ಸರ್ ಫೌಂಡೇಶನ್ ಜೊತೆಗೂಡಿ ಜಾಗೃತಿ ಮೂಡಿಸಿದ್ದಾರೆ. ವರ್ಷಕ್ಕೆ ಎರಡು ಬಾರಿ ಚರ್ಮದ ತಪಾಸಣೆ ಮಾಡಿಸಿಕೊಳ್ಳಲು ಸೂಚಿಸಿದ್ದಾರೆ. ಆಸ್ಟ್ರೇಲಿಯಾ ಜಾಗತಿಕವಾಗಿ ಅತೀ ಹೆಚ್ಚು ಚರ್ಮದ ಕ್ಯಾನ್ಸರ್‌ಗೆ ತುತ್ತಾಗುತ್ತಿದೆ. ಇನ್ನೂ ಮತ್ತೊಂದು ವರದಿಯನ್ನು ಗಮನಿಸಿದರೆ ಕ್ಲಾರ್ಕ್ 30ರ ವಯಸ್ಸಿನಿಂದಲೇ ಚರ್ಮದ ಕ್ಯಾನ್ಸರ್‌ನಿಂದ ಬಳಲುತ್ತಿದ್ದರು ಎನ್ನಲಾಗಿದೆ.
ಕ್ಯಾನ್ಸರ್ ಮಧ್ಯೆಯೂ ಕ್ಲಾರ್ಕ್ ಪ್ರದರ್ಶನ
ಆರೋಗ್ಯ ಸಮಸ್ಯೆಗಳ ಹೊರತಾಗಿಯೂ ಅವರು ಅಸೀಸ್ ಕ್ರಿಕೆಟ್‌ನಲ್ಲಿ ಸಕ್ರಿಯವಾಗಿ ತೊಡಗಿಕೊಂಡರು. 2003 ರಿಂದ 2015ರ ತನಕ 115 ಟೆಸ್ಟ್‌ಗಳು, 245 ಏಕದಿನ ಅಂತಾರಾಷ್ಟ್ರೀಯ ಪಂದ್ಯಗಳು, 34 ಟಿ20ಐ ಪಂದ್ಯಗಳನ್ನು ಆಡಿದ್ದಾರೆ. ಟೆಸ್ಟ್‌ನಲ್ಲಿ 8643 ರನ್, ಓಡಿಐನಲ್ಲಿ 7981 ರನ್ ಕಲೆಹಾಕಿದರು. ಇತ್ತ ಬೌಲಿಂಗ್‌ನಲ್ಲೂ ಕೂಡ ಎಲ್ಲಾ ಸ್ವರೂಪದ ಕ್ರಿಕೆಟ್‌ನಲ್ಲೂ ಓಟ್ಟಾಗಿ 94 ವಿಕೆಟ್ ಕಬಳಿಸಿದ್ದಾರೆ. ಕ್ಲಾರ್ಕ್ ಆಸೀಸ್‌ನ 74 ಟೆಸ್ಟ್ ಮತ್ತು 139 ಏಕದಿನ ಪಂದ್ಯಗಳ ನಾಯಕತ್ವ ವಹಿಸಿ ತಂಡವನ್ನು ಮುನ್ನಡೆಸಿದ್ದರು.
Asia Cup 2025: ʻಜಸ್‌ಪ್ರೀತ್ ಬುಮ್ರಾ ಎಲ್ಲಾ ಪಂದ್ಯಗಳನ್ನು ಆಡಲ್ಲʼ-ಎಬಿಡಿ ಅಚ್ಚರಿ ಹೇಳಿಕೆ!
2013-14 ರಲ್ಲಿ ಆಸ್ಟ್ರೇಲಿಯಾ ತಂಡವನ್ನು 5-0 ವೈಟ್‌ವಾಶ್ ಮತ್ತು 2015ರ ವಿಶ್ವಕಪ್ ಚಾಂಪಿಯನ್ಸ್ ಆಗಿ ಹೊರಹೊಮ್ಮುವಲ್ಲಿ ಬಹುಮುಖ್ಯ ಪಾತ್ರ ವಹಿಸಿದರು. ಇಲ್ಲಿ ಅವರ ವೈಯಕ್ತಿಕ ಪ್ರದರ್ಶನ, ನಾಯಕತ್ವ, ಸೃಜನಶೀಲತೆಯನ್ನು ಗುರುತಿಸಿ ಐಸಿಸಿ 2013ನೇ ಸಾಲಿನ ಅದ್ಭುತ ಟೆಸ್ಟ್ ಕ್ರಿಕೆಟಿಗನೆಂಬ ಗೌರವನ್ನು ನೀಡಿತ್ತು. ಕ್ಯಾನ್ಸರ್ ಹೊರತಾಗಿಯೂ ಅಮೋಘ ಪ್ರದರ್ಶನ ನೀಡಿದ ಕ್ಲಾರ್ಕ್ ಅವರ ಕ್ರಿಕೆಟ್ ಸೇವೆ ಶ್ಲಾಘನೀಯ. ಇನ್ನೂ ಇತ್ತೀಚಿಗೆ ಅವರ ಆರೋಗ್ಯದಲ್ಲಿ ಸುಧಾರಣೆ ಕಾಣುತ್ತಿದ್ದು, ಕ್ಯಾನ್ಸರ್‌ನಿಂದ ವಿಮುಖರಾಗುವುದು ಕಂಡುಬರುತ್ತಿದೆ. ನಿಯಮಿತ ವೈದ್ಯಕೀಯ ತಪಾಸಣೆಗಳು ಆದಷ್ಟೂ ಬೇಗ ಅವರಿಗೆ ಕ್ಯಾನ್ಸರ್‌ನಿಂದ ಮುಕ್ತಿ ಕೊಡಿಸಲಿದೆ ಎನ್ನುವ ವಿಶ್ವಾಸವಿದೆ.