ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ʻ3 ಗಂಟೆಗಳಲ್ಲಿ 1000 ಎಸೆತಗಳನ್ನು ಎದುರಿಸಿದ ಸ್ಕೈʼ: ಬಿಸಿಸಿಐಗೆ ಸೂರ್ಯಕುಮಾರ್‌ ಯಾದವ್‌ ಸಂದೇಶ!

ಭಾರತ ತಂಡದಲ್ಲಿ ತಮ್ಮ ಸ್ಥಾನವನ್ನು ಕಳೆದುಕೊಂಡಿರುವ ಮಾಜಿ ನಾಯಕ ಸೂರ್ಯಕುಮಾರ್‌ ಯಾದವ್‌ ಅವರು ಕಳೆದುಕೊಂಡಿರುವ ಫಾರ್ಮ್‌ ಅನ್ನು ಮತ್ತೆ ಪಡೆಯಲು ಪ್ರಯತ್ನ ನಡೆಸುತ್ತಿದ್ದಾರೆ. ಅದಕ್ಕಾಗಿ ಅವರು ನೆಟ್ಸ್‌ನಲ್ಲಿ ಪ್ರತಿ ದಿನ ಬೆವರು ಸುರಿಸುತ್ತಿದ್ದಾರೆ. ಇದಕ್ಕೆ ಸಂಬಂಧಿಸಿದಂತೆ ಸೂರ್ಯ ತಮ್ಮ ಸೋಶಿಯಲ್‌ ಮೀಡಿಯಾ ಖಾತೆಯಲ್ಲಿ ಪೋಸ್ಟ್‌ ಹಾಕಿದ್ದಾರೆ.

ಕೇವಲ 3 ಗಂಟೆಗಳಲ್ಲಿ  1000 ಎಸೆತಗಳನ್ನು ಎದುರಿಸಿದ ಸೂರ್ಯಕುಮಾರ್‌!

ಸೂರ್ಯಕುಮಾರ್‌ ಯಾದವ್‌ ಬ್ಯಾಟಿಂಗ್‌ ಅಭ್ಯಾಸ. -

Profile
Ramesh Kote Jul 28, 2026 9:12 PM

ನವದೆಹಲಿ: ಪ್ರಸ್ತುತ ಭಾರತ ತಂಡದ (Inian Cricket team) ಮಾಜಿ ನಾಯಕ ಸೂರ್ಯಕುಮಾರ್‌ ಯಾದವ್‌ (Suryakumar yadav) ಅವರು ಪ್ರಸ್ತುತ ತಮ್ಮ ವೃತ್ತಿ ಜೀವನದ ಕಠಿಣ ದಿನಗಳನ್ನು ಎದುರಿಸುತ್ತಿದ್ದಾರೆ. 2026ರ ಐಸಿಸಿ ಟಿ20 ವಿಶ್ವಕಪ್‌ ಟ್ರೋಫಿಯನ್ನು ಭಾರತ ತಂಡಕ್ಕೆ ತಂದುಕೊಟ್ಟ ಹೊರತಾಗಿಯೂ ಕಳಪೆ ಫಾರ್ಮ್‌ ಕಾರಣ ಅವರನ್ನು ಭಾರತ ತಂಡದಿಂದ ಕೈ ಬಿಡಲಾಗಿದೆ. ನಾಯಕತ್ವದಿಂದ ಮಾತ್ರವಲ್ಲದೆ, ತಂಡದಿಂದಲೂ ಬಲಗೈ ಬ್ಯಾಟ್ಸ್‌ಮನ್‌ಗಳನ್ನು ಹೊರಗಿಡಲಾಗಿದೆ. ಈದರ ಹೊರತಾಗಿಯೂ ಮುಂಬೈ ಇಂಡಿಯನ್ಸ್‌ ಹಿರಿಯ ಬ್ಯಾಟ್ಸ್‌ಮನ್‌ ಛಲ ಬಿಡದೆ ನೆಟ್ಸ್‌ನಲ್ಲಿ ಪ್ರತಿ ದಿನ ಕಠಿಣ ಪರಿಶ್ರಮ ಪಡುತ್ತಿದ್ದಾರೆ. ಆ ಮೂಲಕ ಭಾರತ ತಂಡಕ್ಕೆ ಮರಳಬೇಕೆಂಬ ಆಶಯವನ್ನು ಇನ್ನೂ ಇಟ್ಟುಕೊಂಡಿದ್ದಾರೆ.

ಭಾರತ ತಂಡ, ಜಿಂಬಾಬ್ವೆ ಎದುರು 3-0 ಅಂತರದಲ್ಲಿ ಟಿ20ಐ ಸರಣಿಯನ್ನು ಕ್ಲೀನ್‌ ಸ್ವೀಪ್‌ ಮಾಡಿಕೊಂಡ ಕೆಲವೇ ಗಂಟೆಗಳಲ್ಲಿ ಸೂರ್ಯಕಮಾರ್‌ ಯಾದವ್‌ ಅವರು ವಾಸೋ ಪರಂಜಾಪೆ ಕ್ರಿಕೆಟ್‌ ಅಕಾಡೆಮಿಯಲ್ಲಿ ಬ್ಯಾಟಿಂಗ್‌ ಅಭ್ಯಾಸ ನಡೆಸುತ್ತಿರುವ ಹಾಗೂ ಓಡುತ್ತಿರುವ ವಿಡಿಯೊವನ್ನು ಜುಲೈ 26 ರಂದು ತಮ್ಮ ಎಕ್ಸ್‌ ಖಾತೆಯಲ್ಲಿ ಹಂಚಿಕೊಂಡಿದ್ದರು. "ಭಾನುವಾರ ಮೋಜಿನಿಂದ ಕೂಡಿತ್ತು. ತ್ವರಿತ ಓಟ. ಕೇವಲ ಮೂರು ಗಂಟೆಗಳಲ್ಲಿ 1000 ಎಸೆತಗಳಿಗೆ ಬ್ಯಾಟಿಂಗ್‌ ನಡೆಸಿದ್ದೇನೆ. ಒಳ್ಳೆಯ ಅನುಭವ," ಎಂದು ತಾವು ಹಂಚಿಕೊಂಡಿರುವ ವಿಡಿಯೊಗೆ ಬರೆದುಕೊಂಡಿದ್ದಾರೆ.

2027ರ ಐಸಿಸಿ ಏಕದಿನ ವಿಶ್ವಕಪ್‌ ಟೂರ್ನಿಗೆ ಭಾರತದ ಪ್ಲೇಯಿಂಗ್‌ XI ಆರಿಸಿದ ವಸೀಮ್‌ ಜಾಫರ್‌!

ಈ ವರ್ಷದ ಆರಂಭದಲ್ಲಿ ಸೂರ್ಯಕುಮಾರ್‌ ಯಾದವ್‌ ಅವರ ನಾಯಕತ್ವದಲ್ಲಿ ಭಾರತ ತಂಡ ಟಿ20 ವಿಶ್ವಕಪ್‌ ಅನ್ನು ಮುಡಿಗೇರಿಸಿಕೊಂಡಿತ್ತು. ಈ ಟೂರ್ನಿಯಲ್ಲಿ ಸೂರ್ಯ ತಂಡವನ್ನು ಉತ್ತಮವಾಗಿ ಮುನ್ನಡೆಸಿದರೂ ಅವರ ಬ್ಯಾಟಿಂಗ್‌ ಪ್ರದರ್ಶನ ಕುಸಿದಿತ್ತು. ಇದಾದ ಬಳಿಕ 2026ರ ಇಂಡಿಯನ್‌ ಪ್ರೀಮಿಯರ್‌ ಲೀಗ್‌ ಟೂರ್ನಿಯಲ್ಲಿಯೂ ಅವರು ತಮ್ಮ ಬ್ಯಾಟಿಂಗ್‌ನಲ್ಲಿ ಪ್ರಭಾವ ಬೀರುವಲ್ಲಿ ವಿಫಲರಾಗಿದ್ದರು. ಇದರ ಪರಿಣಾಮ ಅವರನ್ನು ರಾಷ್ಟ್ರೀಯ ತಂಡದಿಂದ ಕೈ ಬಿಡಲಾಗಿತ್ತು. ಇವರ ನಾಯಕತ್ವದ ಸ್ಥಾನಕ್ಕೆ ಶ್ರೇಯಸ್‌ ಅಯ್ಯರ್‌ ಅವರನ್ನು ಆಯ್ಕೆ ಮಾಡಲಾಗಿತ್ತು.



ಸೂರ್ಯಕುಮಾರ್ ಯಾದವ್ ಬಗ್ಗೆ ಅಜಿತ್ ಅಗರ್ಕರ್ ಸ್ಪಷ್ಟನೆ

ಬಿಸಿಸಿಐ ಆಯ್ಕೆ ಸಮಿತಿಯ ಅಧ್ಯಕ್ಷ ಅಜಿತ್ ಅಗರ್ಕರ್, ಸೂರ್ಯಕುಮಾರ್ ಯಾದವ್ ಅವರನ್ನು ತಂಡದಿಂದ ಕೈಬಿಡುವ ನಿರ್ಧಾರವು ಅವರ ಇತ್ತೀಚಿನ ಫಾರ್ಮ್ ಮತ್ತು ಮುಂದಿನ ಎರಡು ವರ್ಷಗಳ ಯೋಜನೆಯನ್ನು ಗಮನದಲ್ಲಿಟ್ಟುಕೊಂಡು ತೆಗೆದುಕೊಳ್ಳಲಾಗಿದೆ ಎಂದು ತಿಳಿಸಿದ್ದರು. ಮುಂದಿನ ಟಿ20 ವಿಶ್ವಕಪ್ ಹಾಗೂ 128 ವರ್ಷಗಳ ಬಳಿಕ ಒಲಿಂಪಿಕ್ಸ್‌ಗೆ ಮರಳಲಿರುವ ಕ್ರಿಕೆಟ್ ಸ್ಪರ್ಧೆಯನ್ನು ಗಮನದಲ್ಲಿಟ್ಟುಕೊಂಡು ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಅವರು ಹೇಳಿದ್ದರು.

2027ರ ಐಸಿಸಿ ಏಕದಿನ ವಿಶ್ವಕಪ್‌ ಟೂರ್ನಿಗೆ ಭಾರತದ ಪ್ಲೇಯಿಂಗ್‌ XI ಆರಿಸಿದ ವಸೀಮ್‌ ಜಾಫರ್‌!

"ಸೂರ್ಯಕುಮಾರ್ ವಿಚಾರದಲ್ಲಿ ಇದು ನಿಜಕ್ಕೂ ಕಠಿಣ ನಿರ್ಧಾರ. ಇತ್ತೀಚೆಗಷ್ಟೇ ಅವರು ತಂಡವನ್ನು ಮುನ್ನಡೆಸಿ ವಿಶ್ವಕಪ್ ಗೆದ್ದಿದ್ದರು. ಆದರೆ ಪ್ರತಿ ವಿಶ್ವಕಪ್ ಬಳಿಕ ಮುಂದಿನ ಹಾದಿ ಹೇಗಿರಬೇಕು ಎಂಬುದನ್ನು ನಾವು ಮರುಪರಿಶೀಲಿಸುತ್ತೇವೆ," ಎಂದು ಅಗರ್ಕರ್ ಸುದ್ದಿಗಾರರಿಗೆ ತಿಳಿಸಿದ್ದರು.

"ಒಂದು ಕಡೆ ಅವರ ವೈಯಕ್ತಿಕ ಫಾರ್ಮ್ ಇದ್ದರೆ, ಮತ್ತೊಂದು ಕಡೆ ಮುಂದಿನ ಎರಡು ವರ್ಷಗಳಿಗಿಂತ ಸ್ವಲ್ಪ ಹೆಚ್ಚಿನ ಅವಧಿಯ ಯೋಜನೆಯೂ ನಮ್ಮ ಮುಂದಿತ್ತು. ಮುಂದಿನ ಟಿ20 ವಿಶ್ವಕಪ್‌ವರೆಗೆ ತಂಡವನ್ನು ಹೇಗೆ ರೂಪಿಸಬೇಕು ಎಂಬುದನ್ನು ಪರಿಗಣಿಸಿ, ಇದೇ ಸೂಕ್ತ ಮಾರ್ಗ ಎಂದು ನಾವು ಭಾವಿಸಿದ್ದೇವೆ. ವಿಶ್ವಕಪ್‌ನಲ್ಲಿ ತಂಡವನ್ನು ಮುನ್ನಡೆಸಿದ ನಾಯಕನ ಬಗ್ಗೆ ಇಂತಹ ನಿರ್ಧಾರ ತೆಗೆದುಕೊಳ್ಳುವುದು ಸುಲಭವಲ್ಲ. ಆದರೆ ವಿಶ್ವಕಪ್ ಬಳಿಕ ನಾವು ಯಾವುದೇ ಅಂತಾರಾಷ್ಟ್ರೀಯ ಪಂದ್ಯಗಳನ್ನು ಆಡಿಲ್ಲ. ಹೀಗಾಗಿ ಅವರ ಫಾರ್ಮ್ ಜೊತೆಗೆ ಭವಿಷ್ಯದ ಯೋಜನೆಯನ್ನೂ ಗಮನದಲ್ಲಿಟ್ಟುಕೊಂಡೇ ಈ ತೀರ್ಮಾನ ಕೈಗೊಂಡಿದ್ದೇವೆ," ಎಂದು ಅಗರ್ಕರ್ ವಿವರಿಸಿದ್ದರು.