ಫೋಟೋ ಗ್ಯಾಲರಿ ಬಿಗ್​ಬಾಸ್ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

ಹಾಡುತ್ತ, ಕುಣಿಯುತ್ತ ಭೋಪಾಲ್ ಮೆಟ್ರೋ ಸ್ವಾಗತಿಸಿದ ಹಿರಿಯ ನಾಗರಿಕರು; ವಿಡಿಯೊ ವೈರಲ್‌

Bhopal Metro: ಮಧ್ಯ ಪ್ರದೇಶದ ರಾಜಧಾನಿ ಭೋಪಾಲ್‌ನಲ್ಲೂ ಮೆಟ್ರೋ ತನ್ನ ಸಂಚಾರವನ್ನು ಅಧಿಕೃತವಾಗಿ ಆರಂಭಿಸಿದ್ದು, ನಗರವಾಸಿಗಲ ಬಹು ದಿನಗಳ ಕನಸು ನನಸಾಗಿದೆ. ಮೊದಲ ದಿನವೇ ಮೆಟ್ರೋ ಸಂಚಾರಕ್ಕೆ ಸಾವಿರಾರು ಜನರು ಮುಗಿಬಿದ್ದಿದ್ದು, ಹಿರಿಯ ನಾಗರಿಕರು ಡ್ಯಾನ್ಸ್‌, ಮಾಡಿ ಹಾಡು ಹಾಡಿ ಖುಷಿ ಪಟ್ಟಿದ್ದಾರೆ. ಸದ್ಯ ಈ ವಿಡಿಯೊ ವೈರಲ್‌ ಆಗಿದೆ.

ಜನಸಂದಣಿಯಿಂದ ತುಂಬಿದ ಭೋಪಾಲ್ ಮೆಟ್ರೋ ನಿಲ್ದಾಣ

ಜನಸಂದಣಿಯಿಂದ ತುಂಬಿದ ಭೋಪಾಲ್ ಮೆಟ್ರೋ -

Profile
Pushpa Kumari Dec 22, 2025 6:21 PM

ಭೋಪಾಲ್, ಡಿ. 22: ಇತ್ತೀಚಿನ ದಿನಗಳಲ್ಲಿ ರೈಲು ಪ್ರಯಾಣಕ್ಕೆ ಆದ್ಯತೆ ಸಿಗುತ್ತಿದೆ. ಆರಾಮದಾಯಕ ಮಾತ್ರವಲ್ಲ ಟ್ರಾಫಿಕ್‌ ಕಿರಿಕಿರಿ ಇಲ್ಲದಿರುವುದು ಇದಕ್ಕೆ ಕಾರಣ. ವಾಸ್ತವವಾಗಿ ಜನರು ರೈಲು ಪ್ರಯಾಣವನ್ನು ಆನಂದಿಸುತ್ತಾರೆ. ಅದರಲ್ಲಿಯೂ ಮೆಟ್ರೋ ಸೇವೆಯಿಂದ ನಗರಗಳಲ್ಲಿ ಸಾಕಷ್ಟು ಅನುಕೂಲವಾಗಿದೆ. ಇತ್ತೀಚೆಗೆ ರೈಲ್ವೆ ಇಲಾಖೆ ತನ್ನ ಸೇವೆಯನ್ನು ಹೆಚ್ಚಿನ ಕಡೆಗೆ ವಿಸ್ತರಿಸುತ್ತಿದೆ.‌ ಇದೀಗ ಮಧ್ಯ ಪ್ರದೇಶದ ರಾಜಧಾನಿ ಭೋಪಾಲ್‌ನಲ್ಲೂ ಮೆಟ್ರೋ ತನ್ನ ಸಂಚಾರವನ್ನು ಅಧಿಕೃತವಾಗಿ ಆರಂಭಿಸಿದೆ. ಸದ್ಯ ನಗರದ ನಿವಾಸಿಗಳು ಈ ಅನುಭವವನ್ನು ಖುಷಿ ಪಟ್ಟಿದ್ದು ಮೊದಲ ದಿನವೇ ಮೆಟ್ರೋ ಸಂಚಾರಕ್ಕೆ ಸಾವಿರಾರು ಜನರು ಮುಗಿ ಬಿದ್ದಿದ್ದಾರೆ. ಸದ್ಯ ಈ ವಿಡಿಯೊ ಸೋಶಿಯಲ್ ಮೀಡಿಯಾದಲ್ಲಿ ಭಾರಿ ವೈರಲ್ (Viral Video) ಆಗಿದೆ.

ಭೋಪಾಲ್ ಮೆಟ್ರೋ ಭಾನುವಾರ (ಡಿಸೆಂಬರ್‌ 21) ತನ್ನ ಕಾರ್ಯಾಚರಣೆಯನ್ನು ಪ್ರಾರಂಭಿಸಿದೆ. ಇದು ಅಲ್ಲಿನ ನಿವಾಸಿಗಳ ಉತ್ಸಾಹವನ್ನು ಇಮ್ಮಡಿಗೊಳಿಸಿದೆ. ಸೇವೆಯು ಬೆಳಗ್ಗೆ 9 ಗಂಟೆಗೆ AIIMS ನಿಲ್ದಾಣದಿಂದ ಪ್ರಾರಂಭವಾಗಿದ್ದು ಒಟ್ಟು 17 ಟ್ರಿಪ್‌ಗಳನ್ನು ಓಡಿಸಲಾಗಿದೆ. ಸುಮಾರು 6,000 ಪ್ರಯಾಣಿಕರು ಮೊದಲ ದಿನವೇ ಆಗಮಿಸಿದ್ದು ಪ್ರಯಾಣಿಕರು ಪರಸ್ಪರ ಸಿಹಿ ಹಂಚಿ, ಘೋಷಣೆ ಹಾಕುತ್ತ ಸಂಭ್ರಮಿಸಿದ್ದಾರೆ.

ವಿಡಿಯೊ ನೋಡಿ:

ಎಐಐಎಂಎಸ್‌ನಿಂದ ಸುಭಾಷ್ ನಗರದವರೆಗೆ ಒಟ್ಟು 17 ಟ್ರಿಪ್‌ಗಳನ್ನು ಮಾಡಲಾಗಿದ್ದು, 9 ಟ್ರಿಪ್‌ಗಳು ಎಐಐಎಂಎಸ್‌ನಿಂದ ಮತ್ತು 8 ಟ್ರಿಪ್‌ಗಳು ಸುಭಾಷ್ ನಗರದಿಂದ ನಿರ್ವಹಿಸಲಾಗಿತ್ತು. ವಿಶೇಷವಾಗಿ ಮೆಟ್ರೋದಲ್ಲಿ ಹಿರಿಯ ನಾಗರಿಕರೇ ಆಗಮಿಸಿದ್ದು ಹಾಡುಗಳನ್ನು ಹಾಡುತ್ತಾ, ಕುಣಿದು ಕುಪ್ಪಳಿಸುತ್ತಿರುವ ದೃಶ್ಯಗಳು ಕಂಡುಬಂದಿದೆ.‌ ನಗರಕ್ಕೆ ಆಧುನಿಕ ಸಾರಿಗೆ ವ್ಯವಸ್ಥೆ ಬಂದಿದ್ದಕ್ಕೆ ಹಿರಿಯ ನಾಗರಿಕರು ಕೂಡ ತೋರಿದ ಈ ಉತ್ಸಾಹ ಎಲ್ಲರ ಗಮನ ಸೆಳೆಯಿತು.

ಬ್ಯಾಂಕ್‍ನಲ್ಲಿ ಹಣವಿಟ್ಟರೆ ಸುರಕ್ಷಿತ ಅಂದುಕೊಂಡಿದ್ದೀರಾ? ಗ್ರಾಹಕರ ದುಡ್ಡನ್ನೇ ಕದ್ದ ಕ್ಯಾಶಿಯರ್

ಮತ್ತೊಂದು ವಿಡಿಯೊದಲ್ಲಿ ಮೆಟ್ರೋ ನಿಲ್ದಾಣದಲ್ಲಿ ಭಾರೀ ಜನ ಸಮೂಹವಿದ್ದು, ಮೊದಲ ರೈಲು ಪ್ರಯಾಣಕ್ಕೆ ಉತ್ಸುಕರಾಗಿರುವುದು ಕಂಡು ಬಂದಿದೆ. ಸದ್ಯ ಈ ವಿಡಿಯೊ ವೈರಲ್ ಆಗುತ್ತಿದ್ದಂತೆ ನೆಟ್ಟಿಗರು ನಾನಾ ಬಗೆಯ ಪ್ರತಿಕ್ರಿಯೆ ನೀಡಿದ್ದಾರೆ. ಬಳಕೆದಾರರೊಬ್ಬರು ಪ್ರಯಾಣ ಮಾಡಲು ರೈಲು ಸಂಚಾರವೇ ಉತ್ತಮ ಆಯ್ಕೆ ಎಂದು ಬರೆದುಕೊಂಡಿದ್ದಾರೆ. ಮತ್ತೊಬ್ಬರು ರೈಲು ಪ್ರಯಾಣ ಇನ್ನಷ್ಟು ಪ್ರದೇಶದಲ್ಲಿ ವಿಸ್ತರಿಸಿದರೆ ಜನರಿಗೆ ಅನುಕೂಲವಾಗುತ್ತದೆ ಎಂದು ಬರೆದುಕೊಂಡಿದ್ದಾರೆ.